ಜಿಲ್ಲಾ ಸುದ್ದಿ:
ಗಂಡು ಕರುಗಳನ್ನು ನಡು ರಸ್ತೆಯಲ್ಲಿ ಬಿಟ್ಟು ಪರಾರಿಯಾದ ಅಪರಿಚಿತರು|bull calf
ಸಾಗರ : ಮಿಶ್ರ ತಳಿ ದನಗಳ ಒಟ್ಟು ನಾಲ್ಕು ಎಳೆಯ ಗಂಡು ಕರುಗಳನ್ನು ಯಾರಿಗೂ ಗೊತ್ತಾಗದಂತೆ ರಸ್ತೆ ಮಧ್ಯೆ ಅನಾಥವಾಗಿ ಬಿಟ್ಟು ಪರಾರಿಯಾದ ಘಟನೆ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಿನಸರದ ಬನ್ನಿಕಟ್ಟೆ ವೃತ್ತದ ಬಳಿ ನಡೆದಿದೆ. ಪಶುಸಂಗೋಪನೆಯಲ್ಲಿ ಲಾಭದಾಯಕವಲ್ಲದ ಹೋರಿ ಕರುಗಳು ಒಂದು ವರ್ಷದೊಳಗಿನ ಪ್ರಾಯದಾಗಿದ್ದು, ಇವುಗಳಿಂದ ಯಾವುದೇ ಫಲವಿಲ್ಲ ಎಂಬ ಕಾರಣಕ್ಕೆ ಹೀಗೆ ಬಿಟ್ಟುಹೋಗಲಾಗಿದೆ ಎಂದು ಭಾವಿಸಲಾಗಿದೆ. ಈ ಹಂತದಲ್ಲಿ ಮಾಹಿತಿ ತಿಳಿದ ಸ್ಥಳೀಯ ಯುವಕರು ಸ್ಥಳಕ್ಕೆ ಆಗಮಿಸಿ, ಕರುಗಳಿಗೆ ನೀರು, ತಿಂಡಿ ಒದಗಿಸಿದರು….
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ|kimmane
ಶಿವಮೊಗ್ಗ : ಕಾಂಗ್ರೆಸ್ ಗ್ಯಾರೆಂಟಿಯ ಬಗ್ಗೆ ಮಾತನಾಡುವ ಮತ್ತು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ಕೇಂದ್ರದಲ್ಲಿ ಮೋದಿಯವರು ಅಧಿಕಾರ ಹಿಡಿಯುವಾಗ ನೀಡಿದ್ದ ಭರವಸೆಯಲ್ಲಿ 15 ಲಕ್ಷ ರೂ ಜನರ ಅಕೌಂಟ್ ಗೆ ಹಾಕುವುದಾಗಿ ಹೇಳಿಕೆ ನೀಡಿದ್ದರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆಯನ್ನ ನೀಡಿದ್ದರು. ಆದರೆ 9 ವರ್ಷದಿಂದ ಇದ್ಯಾವುದನ್ನು ಈಡೇರಿಸಿಲ್ಲ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದರು. ಕೇಂದ್ರದ ಮೋದಿ ಸರ್ಕಾರವನ್ನು ವಿರೋಧಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಗರದ ಗಾಂಧಿ ಪಾರ್ಕ್ ನಲ್ಲಿ ಗಾಂಧಿ ಪ್ರತಿಮೆಯ…
ರಿಪ್ಪನ್‌ಪೇಟೆ: ಚಲಿಸುತಿದ್ದ ಬೈಕ್ ಗೆ ನರಿ ಅಡ್ಡ ಬಂದು ಅಪಘಾತ – ಗಾಯಾಳು ಮೆಗ್ಗಾನ್ ದಾಖಲು | ಜೀವನ್ಮರಣ ಹೋರಾಟದಲ್ಲಿದ್ದ ನರಿಗೆ ಸ್ಪಂದಿಸಿದ ಅರಣ್ಯ ಇಲಾಖೆ|Accident
ರಿಪ್ಪನ್‌ಪೇಟೆ : ಚಲಿಸುತಿದ್ದ ಬೈಕ್ ಗೆ ನರಿ ಅಡ್ಡ ಬಂದು ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಪಟ್ಟಣದ ಸಮೀಪದ ವರಾನಹೊಂಡದ ಮುಖ್ಯರಸ್ತೆಯಲ್ಲಿ ರಿಪ್ಪನ್‌ಪೇಟೆ ಕಡೆಯಿಂದ ಮೂಗೂಡ್ತಿ ಕಡೆಗೆ ತೆರಳುತಿದ್ದ ಹೀರೋ ಹೊಂಡ ಸ್ಪ್ಲೆಂಡರ್ ಬೈಕ್ ಗೆ ನರಿ ಅಡ್ಡ ಬಂದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ತೀರ್ಥಹಳ್ಳಿ ರಸ್ತೆಯ ಕುವೆಂಪು ನಗರದ ನಿವಾಸಿ ಉಪನ್ಯಾಸಕ ಶ್ರೀಧರ್(50) ರವರಿಗೆ ತಲೆ ಹಾಗೂ ಕೈ ಗೆ ಗಂಭೀರ ಗಾಯಗಳಾಗಿದ್ದು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ…
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸಲು ಎನ್ಎಸ್ಎಸ್ ಶಿಬಿರ ಸಹಕಾರಿ|NSS
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸಲು ಎನ್ಎಸ್ಎಸ್ ಸಹಕಾರಿ ರಿಪ್ಪನ್‌ಪೇಟೆ;-ವಿದ್ಯಾರ್ಥಿ ಜೀವನ ಅತ್ಯುತ್ತಮವಾಗಿದ್ದು ತಮ್ಮ ವ್ಯಾಸಂಗದ ಜೊತೆ ಗ್ರಾಮದಲ್ಲಿನ ಸ್ವಚ್ಚತೆ ಹಾಗೂ ಪರಿಸರ ರಕ್ಷಣೆಯೊಂದಿಗೆ ಗ್ರಾಮೀಣ ಭಾಗದ ಮೂಲಭುತ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಸೇವಾ ಶಿಬಿರಗಳು ಪೂರಕವಾಗಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು. ಸಮೀಪದ ಕಲ್ಲುಹಳ್ಳ ಮಲೆನಾಡು ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಅವರಣದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ವತಿಯಿಂದ ಅಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷೀಕ…
ಆರೋಗ್ಯದಾಯಕ ಸಮಾಜ ನಿರ್ಮಾಣಕ್ಕಾಗಿ ಜೈನ ಧರ್ಮ – ಹೊಂಬುಜ ಶ್ರೀ | ಕೆನಡಾದಲ್ಲಿ ನಡೆದ 24 ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ
ಹೊಂಬುಜ : ಕೆನಡಾದ ಟೊರೆಂಟೋ ನಗರದಲ್ಲಿ ಜೈನ ಮಂದಿರದಲ್ಲಿ ಇಪ್ಪತ್ತನಾಲ್ಕು ತೀರ್ಥಂಕರರ ವಿಗ್ರಹಗಳಿಗೆ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪಿಸಲಾಯಿತು. ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸಾನಿಧ್ಯ ವಹಿಸಿ “ಜೈನ ಧರ್ಮ ಅನಾದಿ ಕಾಲದಿಂದಲೂ ಅಹಿಂಸೆ, ಸತ್ಯ, ಅಚೌರ್ಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯೆ ಆಚರಣೆಯ ಮಹತ್ವವನ್ನು ಆರೋಗ್ಯದಾಯಕ ಸಮಾಜದ ನಿರ್ಮಾಣಕ್ಕಾಗಿ ಉಪದೇಶಿಸಲ್ಪಟ್ಟಿದೆ” ಎಂದು ವಿವರಿಸಿದರು. ಜೀವನದಲ್ಲಿ ಯಶಸ್ಸನ್ನು ಗಳಿಸಬೇಕೆಂದರೆ ಬದುಕುವ ಮಾರ್ಗವನ್ನು ಬದಲಿಸಿಕೊಳ್ಳ ಬೇಕಾಗುತ್ತದೆ. ಮನುಷ್ಯನು ಜೀವನದಲ್ಲಿ ಎಲ್ಲಾ ರೀತಿಯ ಪ್ರಗತಿಯನ್ನು…
ರಸ್ತೆಗೆ ವಾಲಿದ ವಿದ್ಯುತ್ ಕಂಬ : ಆತಂಕದಲ್ಲಿ ಸಾರ್ವಜನಿಕರು|mescom
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ತಳಲೆ ಗ್ರಾಮದ ಬಾಳೆಕೊಡ್ಲು ಬಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬಾಗಿದ್ದು, ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಬಳಿಯ ಬೆಳ್ಳೂರು ಸಂಪರ್ಕ ರಸ್ತೆಯಲ್ಲಿ 11 ಕೆ ವಿ ವಿದ್ಯುತ್ ಕಂಬ ಅಪಾಯದ ಸ್ಥಿತಿಯಲ್ಲಿ ಇದ್ದರು ಸಹ ಮೆಸ್ಕಾಂ ಇಲಾಖೆ ಜಾಣ ಕುರುಡು ನೀತಿ ಅನುಸರಿಸುತ್ತಿದೆ. ಈ 11 ಕೆ ವಿ ವಿದ್ಯುತ್ ಕಂಬವು ಶಿಥಿಲಗೊಂಡು ರಸ್ತೆಗೆ ಬಾಗಿದ್ದು, ಜೋರಾಗಿ ಗಾಳಿ ಬೀಸಿದಲ್ಲಿ ಮುರಿದು ಬೀಳಲಿದೆ….
ಗೋವಿನ ಚರ್ಮ ಸಾಗಾಟ ತಡೆದಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಪೊಲೀಸ್ ಠಾಣೆ ಎದುರು ಹಲ್ಲೆ|assault
ಗೋವಿನ ಚರ್ಮ ಸಾಗಾಟ ತಡೆದ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಪೊಲೀಸ್ ಠಾಣೆ ಎದುರೇ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ. ಅಕ್ರಮವಾಗಿ ಗೋವುಗಳಚರ್ಮ ಸಾಗಿಸುತ್ತಿದ್ದ ವಿಚಾರ ತಿಳಿದ ಗುಂಪೊಂದು ಅದನ್ನು ತಡೆದು ಪೊಲೀಸ್ ಠಾಣೆಗೆ ಒಪ್ಪಿಸಿದೆ. ಈ ವಿಚಾರವಾಗಿ ಯುವಕರ ಮತ್ತೊಂದು ತಂಡ ಪೊಲೀಸರ ಎದುರೇ ಹಲ್ಲೆ ನಡೆಸಿದೆ. ಬಕ್ರಿದ್ ಹಬ್ಬದ ಪ್ರಯುಕ್ತ ಗೋವನ್ನು ಹತ್ಯೆ ಮಾಡಿ ಅದರ ಚರ್ಮವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಗುಂಪೊಂದು ಅದನ್ನು ತಡೆದು ಶಿಕಾರಿಪುರ…
ತಂದೆಯ ಸಾವಿನ ನೋವಲ್ಲೂ ಹಸೆಮಣೆ ಏರಿದ ಪುತ್ರಿಯರು|ವರನ ಕುಟುಂಬದ ನಡೆಗೆ ಶ್ಲಾಘನೆ|ANP
ತಂದೆಯ ಸಾವಿನ ನೋವಲ್ಲೂ ಹಸೆಮಣೆ ಏರಿದ ಪುತ್ರಿಯರು ತಂದೆಯನ್ನು ಕಳೆದುಕೊಂಡ ನೋವಿನ ಮಧ್ಯೆ ಸಹೋದರಿಯರು ಹಸೆಮಣಿ ಏರಿದರು.ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ ಬುಧವಾರ ತಬ್ಬಲಿಗಳಾದ ಪಲ್ಲವಿ ಮತ್ತು ಪೂಜಾ ಅವರ ವಿವಾಹ ನೆರವೇರಿಸಿ ಸಂಬಂಧಿಗಳು ಮಾದರಿಯಾದರು. ಬನವಾಸಿಯ ಮಂಜುನಾಥ್ ರವರ ಪುತ್ರಿಯರಾದ ಪಲ್ಲವಿ ಮತ್ತು ಪೂಜಾ ಅವರ ವಿವಾಹ ನಿಶ್ಚಯವಾಗಿ ಸಕಲ ಸಿದ್ಧತೆ ಮುಗಿದಿತ್ತು. ಇದಕ್ಕಾಗಿ ಇಬ್ಬರು ಹೆಣ್ಣು ಮಕ್ಕಳು ತಂದೆಯೊಂದಿಗೆ ತಮ್ಮ ತಾಯಿಯ ತವರು ಮನೆಯಾದ ಚೆನ್ನಕೊಪ್ಪದ…
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ – ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ 2014 ಮತ್ತು 2019 ರಲ್ಲಿ ರಾಷ್ಟ್ರದ ಜನತೆಗೆ ಮೋದಿ ಅವರ ಮೇಲಿದ್ದ ಅಭಿಮಾನ ಈ ಬಾರಿಯ ಚುನಾವಣೆಯಲ್ಲಿ ದುಪ್ಪಟ್ಟಾಗಿದ್ದು ಮೋದಿಯನ್ನು ಗೆಲ್ಲಿಸಲೇಬೇಕೆಂದು ಜನಸಾಮಾನ್ಯರೇ ಪಣ ತೊಟ್ಟಿದ್ದಾರೆ ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಅನಾಯಸವಾಗಿ ಗೆಲ್ಲುವ ವಿಶ್ವಾಸವಿದೆ ಎಂದರು. ಪಕ್ಷದ ಆಂತರಿಕ ವಿಷಯ ಬಹಿರಂಗ ಚರ್ಚೆ…
ವಿವಿಧೆಡೆ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ|Bakrid
ಹೊಸನಗರ ತಾಲೂಕಿನ ವಿವಿಧೆಡೆ ಪವಿತ್ರ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು. ರಿಪ್ಪನ್‌ಪೇಟೆ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು. ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫೀ ಮಾತನಾಡಿ, ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು…