ರಿಪ್ಪನ್‌ಪೇಟೆ : ಇಂದಿನ ಯುವ ಸಮೂಹ ಹಲವು ದುಶ್ಚಟಗಳಿಗೆ ಮಾರುಹೋಗಿ ತಮ್ಮ ಅಮೂಲ್ಯವಾದ ಶೈಕ್ಷಣಿಕ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಬಹು ಮುಖ್ಯವಾಗಿದೆ ಎಂದು ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಯುವ ಪೀಳಿಗೆ ಪೊಲೀಸ್ ಇಲಾಖೆಯ ನಿಯಮಾವಳಿಗಳನ್ನು ಪಾಲಿಸಿದರೆ ಸಮಾಜದಲ್ಲಿನ ತಪುö್ಪಗಳನ್ನ ತಿದ್ದಲು ಸಾಧ್ಯ ಹಾಗಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಮಾತನಾಡಿದ ಅವರು
ಇಂದಿನ ವಿದ್ಯಾರ್ಥಿಗಳು ತಮ್ಮ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳುವ ಸಮಯದಲ್ಲಿ ಮಾದಕ ವಸ್ತುಗಳ ಮೊರೆ ಹೋಗಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು ಇದರಿಂದ ಪೋಷಕರು ಹಾಗೂ ಆರಕ್ಷಕ ಇಲಾಖೆಗೂ ಸಹ ದೊಡ್ಡ ಸಮಸ್ಯೆ ತಂದೊಡ್ಡಿದ್ದು ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಇಂದಿನ ಯುವ ಪೀಳಿಗೆ ಜಾಗೃತರಾಗಿರಬೇಕು ಇಂತಹ ದುಷ್ಕ್ರುತ್ಯಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಅಂತಹ ಅಪರಾಧ ಕೃತ್ಯಗಳನ್ನು ತಡೆಯಲು ಪೊಲೀಸ್ ಇಲಾಖೆ ಸದಾ ಸಿದ್ದ ಎಂದರು.
ಇನ್ನು ಜಿಲ್ಲೆಯನ್ನು ಪೊಲೀಸ್ ಇಲಾಖೆ ಡ್ರಗ್ಸ್ ಮುಕ್ತ ಜಿಲ್ಲೆಮಾಡಲು ಪಣ ತೊಟ್ಟಿದ್ದು ಅದರಂತೆ ಡ್ರಗ್ಸ್ ತಡೆಯಲು ಯುವ ಸಮೂಹ ಸಹಕಾರಿ ಆಗಬೇಕು ಎಂದ ಅವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ರಸ್ತೆ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸಬೇಕು , ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಎ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಪಿಎಸ್ ಐ ಪ್ರವೀಣ್ ಎಸ್ ಪಿ ,ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಗೋಪಾಲಕೃಷ್ಣ ಜಿ ಆರ್ ,ಅಭಿವೃದ್ದಿ ಸಮಿತಿ ಸದಸ್ಯ ರಫ಼ಿ ರಿಪ್ಪನ್‌ಪೇಟೆ, ರಕ್ಷಣೆ ಇಲಾಖೆಯ ಮಧುಸೂದನ್, ಸಂತೋಷ್, ಉಮೇಶ್,ಉಪಸ್ಥಿತರಿದ್ದರು.
ಉಪನ್ಯಾಸಕರಾದ ಜನಾರ್ದನ್ ಬಿ ನಾಯಕ್ ಸ್ವಾಗತಿಸಿ, ಈಶ್ವರಪ್ಪ ನಿರೂಪಿಸಿ, ಸೀಮಾ ವಂದಿಸಿದರು.