ಅಂಕದ ಜೊತೆ ಬಾಂಧವ್ಯಕ್ಕೂ ಮಹತ್ವ ಕೊಡಿ – ಜಿ ಎಸ್ ನಟೇಶ್|gfgc

ಅಂಕದ ಜೊತೆ ಬಾಂಧವ್ಯಕ್ಕೂ ಮಹತ್ವ ಕೊಡಿ – ಜಿ ಎಸ್ ನಟೇಶ್

ರಿಪ್ಪನ್‌ಪೇಟೆ : ವಿದ್ಯಾರ್ಥಿಗಳು ಉತ್ತಮ ಅಂಕ ಮತ್ತು ಉದ್ಯೊಗ ಗಳಿಕೆಯಷ್ಟೇ ಜೀವನ ಎಂದು ಭಾವಿಸಬಾರದು.ಸಂಬಂಧ, ಬಾಂಧವ್ಯಗಳಿಗೆ ಮಹತ್ವ ನೀಡಬೇಕು ಎಂದು ಶಿವಮೊಗ್ಗದ ನಿವೃತ್ತ ಉಪನ್ಯಾಸಕ ಜಿ.ಎಸ್. ನಟೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ಸಮಾರೋಪ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಆತ್ಮೀಯರಂತೆ ಇರಬೇಕಾದ ಅನಿವಾರ್ಯತೆ ಇದೆ. ನಾಡು ನುಡಿ ಕಟ್ಟುವಲ್ಲಿ ಪ್ರತಿಯೊಬ್ಬರು ನಿರಂತರ ಶ್ರಮ ಪಡಬೇಕು. ತಮ್ಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ವಿಧಿ ಲಿಖಿತವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲಎಂದು ಮಂಕುತಿಮ್ಮನ ಕಗ್ಗದಲ್ಲಿಡಿವಿಜಿ ಸಾರಿದ್ದಾರೆ.ನಾವು ಜಗತ್ತಿಗೆ ಬರುವಾಗಲೆ ನಮ್ಮ ಗ್ರಹಗತಿ ನಿರ್ಧಾರವಾಗಿರುತ್ತದೆ. ಅದನ್ನು ಬದಲಿಸಲು ಯಾವುದೆ ಜೋತಿಷಿಗೆ ಸಾಧ್ಯವಿಲ್ಲ. ಅದರಂತೆ ಬದುಕುವ ಸಹನ ಶಕ್ತಿ ನೀಡು ಎಂದು ಮಾತ್ರ ದೇವರಲ್ಲಿಪ್ರಾರ್ಥಿಸಬೇಕು. ಅದನ್ನು ಹೊರತು ಪಡಿಸಿ, ಐಶ್ವರ್ಯ, ಆಯಸ್ಸು, ಬಲ, ತೇಜಸ್ಸು, ಆರೋಗ್ಯ ಕೊಡು ಎಂದು ಬೇಡಿ ಫಲವಿಲ್ಲ. ಎಂದು ಕಗ್ಗ ಸಾರುತ್ತದೆ ಎಂದ ಅವರು ಇಂದಿನ ವೇಗದ ಯುಗದಲ್ಲಿಸಾಹಿತ್ಯದ ಓದು ಮಾಯವಾಗಿ ಮೊಬೈಲ್‌ ಗ್ರಹಿಕೆ ಹೆಚ್ಚಿದ್ದು, ಜನರ ಬುದ್ದಿಗೆ ತುಕ್ಕು ಹಿಡಿದಿದೆ ಎಂದರು.ಅವರು ಕಗ್ಗದ ಹಲವಾರು ಕವನ ವಾಚಿಸಿದರು.

ಅತಿಹೆಚ್ಚು ಅಂಕಗಳಿಸಿದ ಹಾಗೂ ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಧನಲಕ್ಷ್ಮಿ ಪೋಷಕರ ಕನಸನ್ನು ನನಸು ಮಾಡಿ ಉತ್ತಮ ಪ್ರಜೆಗಳಾಗಿ ನಾಡಿಗೆ ಕೊಡುಗೆ ನೀಡುವಂತೆ ಹಾರೈಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಚಂದ್ರಶೇಖರ್ ವಹಿಸಿದ್ದರು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ , ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಹಾಲಸ್ವಾಮಿ ಗೌಡ ,ಸದಸ್ಯರಾದ
ಶ್ರೀನಿವಾಸ್ ಆಚಾರ್ , ರಮೇಶ್ ಫ್ಯಾನ್ಸಿ,ವಿಜೇಂದ್ರ ಗ್ರಾಪಂ ಸದಸ್ಯ ಗಣಪತಿ,ಹಿರಿಯ ಉಪನ್ಯಾಸಕ ಹೆಚ್ ಎಸ್ ವಿರೂಪಾಕ್ಷ ಹಾಗೂ ಇನ್ನಿತರರಿದ್ದರು.

ಉಪನ್ಯಾಸಕಿ ಶಿಲ್ಪಾ ಪಾಟೀಲ್ ಸ್ವಾಗತಿಸಿ, ನರೇಂದ್ರ ಕುಳಗಟ್ಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರತ್ನಾಕರ ಸಿ ಕುನುಗೋಡು ವಂದಿಸಿದರು. ನವ್ಯಾ, ತೇಜಸ್ವಿನಿ, ತೇಜಶ್ರೀ, ರಚನಾ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಲ್ಲಾ ಬೋಧಕ ಮತ್ತು ಬೋಧಕೇತರ ವೃಂದ, ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



Leave a Reply

Your email address will not be published. Required fields are marked *