ಪ್ರವಾಸಿಗರ ಸ್ವರ್ಗ ಕೊಡಚಾದ್ರಿ ತಾಣಕ್ಕೆ ವಿಧಿಸಿದ್ದ ಪ್ರವೇಶ ನಿರ್ಬಂಧ ತೆರವು
ಹೊಸನಗರ: ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರ ಸುರಕ್ಷತೆ ದೃಷ್ಟಿಯಿಂದ ಕಳೆದ 15 ದಿನಗಳಿಂದ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಕ್ಕೆ ವಿಧಿಸಿದ ನಿರ್ಬಂಧ ವನ್ನು ಇಂದಿನಿಂದ (ಭಾನುವಾರ) ತೆರವುಗೊಳಿಸಲಾಗಿದೆ.
ಕೇವಲ ವಾಹನಗಳಲ್ಲಿ ತೆರಳಲು ಮಾತ್ರ ಅವಕಾಶ ನೀಡಲಾಗಿದ್ದು, ಚಾರಣ ಮಾಡಲು ಇನ್ನೂ ಅನುಮತಿ ನೀಡಿಲ್ಲ ಎಂದು ವನ್ಯಜೀವಿ ಇಲಾಖೆ ತಿಳಿಸಿದೆ.
ಕೊಡಚಾದ್ರಿಗೆ ತೆರಳುವ ರಸ್ತೆ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ವಳಪಟ್ಟಿದ್ದು, ರಸ್ತೆ ಸಂಚಾರ ಮಾಡಲು ಸಾಧ್ಯವಾಗದಷ್ಟು ದುಸ್ತರವಾಗಿದೆ. ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಇಲಾಖೆಯ ನಿಯಮ ಅಡ್ಡಿಪಡಿಸುತ್ತಿದೆ.
ಇದರಿಂದ ಇಲ್ಲಿ ಸಂಚಾರ ಮಾಡುವವರಿಗೆ ಸುರಕ್ಷತೆ ಇಲ್ಲವಾಗಿದೆ. ಇಲಾಖೆ ಜೊತೆ ಸರಕಾರ ಮಾತುಕತೆ ನಡೆಸಿ ಕೊಡಚಾದ್ರಿ ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕಾಗಿ ಸಾರ್ವಜನಿಕರು ಅಗ್ರಹಿಸಿದ್ದಾರೆ.