ಅಗಸ್ಟ್ 21 ರಂದು ಮಳಲಿಮಠದಲ್ಲಿ ನಾಗರಪಂಚಮಿ ವಿಶೇಷ ಪೂಜಾ ಕಾರ್ಯಕ್ರಮ
ರಿಪ್ಪನ್‌ಪೇಟೆ : ಇದೇ ಅಗಸ್ಟ್ 21 ರಂದು ನಾಗರ ಪಂಚಮಿ ಹಬ್ಬದ ಆಂಗವಾಗಿ ಇತಿಹಾಸ ಪ್ರಸಿದ್ದ ಮಳಲಿಮಠದಲ್ಲಿ ಗುರುನಾರ್ಗಾನ ಸ್ವಾಮಿಗೆ ಮಳಲಿಮಠದ ಪಟ್ಯಾಧ್ಯಕ್ಷರಾದ ಶ್ರೀ ಷ.ಬ್ರ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿಯವರ ದಿವ್ಯಸಾನಿಧ್ಯವದಲ್ಲಿ ಮಹಾರುದ್ರಾಭಿಷೇಕ ಆಭಿಷೇಕ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿದೆ.
ಈ ವಿಶೇಷ ನಾಗರಪಂಚಮಿಯ ಅಂಗವಾಗಿ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದ್ದು ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನಾಶೀರ್ವಾದ ಪಡೆದುಕೊಳ್ಳುವಂತೆ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.