77 ನೇ ಸ್ವಾತಂತ್ರ್ಯೋತ್ಸವದಂದು ನಿವೃತ್ತ ಯೋಧನಿಗೆ ಸನ್ಮಾನ
ರಿಪ್ಪನ್‌ಪೇಟೆ;-ಸಮೀಪದ ಕೋಡೂರು ಬ್ಲಾಸಂ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಚಿಕ್ಕಜೇನಿ ಗ್ರಾಮದ ಶೇಷ ಆಚಾರ್ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬ್ಲಾಸಂ ಇಂಗ್ಲಿಸ್ ಮೀಡಿಯಂ ಸ್ಕೂಲ್‌ನ ಸಂಸ್ಥಾಪಕ ಅಧ್ಯಕ್ಷ ಬಿ.ಜೆ.ಚಂದ್ರುಮೌಳಿಗೌಡರು ಆಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಯೋಧ ಚಿಕ್ಕಜೇನಿ ಶೇಷ ಆಚಾರ್ ಇವರನ್ನು 77 ನೇ ಸ್ವಾತಂತ್ರೊö್ಯತ್ಸವದ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಜೈಪ್ರಕಾಶಶೆಟ್ಟಿ, ಸಂಸ್ಥೆಯ ನಿರ್ದೇಶಕರಾದ ದಿವಾಕರಶೆಟ್ಟರು ಕಾಡುವಳ್ಳಿ ವಿನಯ್,ಗುರುರಾಜಭಟ್ಟರು, ಪುಪ್ಪಾವತಿ ಮಮಜಪ್ಪ,ಸಂಸ್ಥೆಯ ಮುಖ್ಯಸ್ಥರಾದ ಸುಧಾಕರ್, ಮುಖ್ಯೋಪಾಧ್ಯಾಯ ಪ್ರಕಾಶ್ ಇನ್ನಿತರರು ಪಾಲ್ಗೊಂಡಿದ್ದರು.