w
Headlines
N69069267717641749504705d0370d0a69d4f3603d1047f9018cea1b455454bfbbf955ffe16ab4c39b306ba

ಅಧಿಕಾರಕ್ಕಾಗಿ ರಾಜ್ಯ ಸರ್ಕಾರ ಶಾಸಕರ ಖರೀದಿ ಕೇಂದ್ರ ಆರಂಭಿಸಿದೆ : ಹರತಾಳು ಹಾಲಪ್ಪ ವ್ಯಂಗ್ಯ

ಅಧಿಕಾರಕ್ಕಾಗಿ ರಾಜ್ಯ ಸರ್ಕಾರ ಶಾಸಕರ ಖರೀದಿ ಕೇಂದ್ರ ಆರಂಭಿಸಿದೆ : ಹರತಾಳು ಹಾಲಪ್ಪ ವ್ಯಂಗ್ಯ ಸಾಗರ: “ಅಧಿಕಾರ ಉಳಿಸಿಕೊಳ್ಳಲು ಸರ್ಕಾರ ಶಾಸಕರ ಖರೀದಿ ಕೇಂದ್ರ ಪ್ರಾರಂಭಿಸಿದೆ. ಆದರೆ ರೈತರಿಗಾಗಿ ಮೆಕ್ಕೆಜೋಳ–ಭತ್ತ ಖರೀದಿ ಕೇಂದ್ರ ಆರಂಭಿಸಲು ಮಾತ್ರ ಸಮಯವಿಲ್ಲ,” ಎಂದು ಮಾಜಿ ಸಚಿವ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಬಲಬೆಲೆಗೆ ಭತ್ತ ಮತ್ತು ಮೆಕ್ಕೆಜೋಳ ಖರೀದಿಯನ್ನು ತಕ್ಷಣ ಆರಂಭಿಸಬೇಕೆಂದು ಸರ್ಕಾರವನ್ನು…

Read Full News
GridArt 20251125

ಅಂಧ ಮಹಿಳೆಯರ T20 ಚಾಂಪಿಯನ್ ತಂಡದ ರಿಪ್ಪನ್ ಪೇಟೆಯ ಕಾವ್ಯಾಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

ಅಂಧ ಮಹಿಳೆಯರ T20 ಚಾಂಪಿಯನ್ ತಂಡದ ರಿಪ್ಪನ್ ಪೇಟೆಯ ಕಾವ್ಯಾಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ ಟಿ20 ಅಂಧರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ಅಂದರ ತಂಡವು ಗೆಲುವು ಸಾಧಿಸಿತ್ತು. ಈ ಗೆಲುವಿಗೆ ಹರ್ಷವನ್ನು ರಿಪ್ಪನ್ ಪೇಟೆಯ ಕಾವ್ಯಾ.ವಿ ಕೂಡ ಕಾರಣ ಎಂಬ ವಿಷಯ ತಿಳಿದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವಂತ ಅವರು, ಭಾರತದ ಅಂಧರ ಮಹಿಳಾ…

Read Full News
GridArt 20251125

RIPPONPETE | ಆನೆ ಹಾವಳಿಗೆ ತತ್ತರಿಸಿದ ರೈತ ; ತತ್ತಕ್ಷಣ ಆನೆ ಸ್ಥಳಾಂತರ – ಪರಿಹಾರಕ್ಕೆ ಒತ್ತಾಯಿಸಿ ಅರಣ್ಯ ಕಛೇರಿ‌ ಮುಂಭಾಗ ನ.27ಕ್ಕೆ ಪ್ರತಿಭಟನೆ

RIPPONPETE | ಆನೆ ಹಾವಳಿಗೆ ತತ್ತರಿಸಿದ ರೈತ – ತತ್ತಕ್ಷಣ ಆನೆ ಸ್ಥಳಾಂತರ – ಪರಿಹಾರಕ್ಕೆ ಒತ್ತಾಯಿಸಿ ಅರಣ್ಯ ಕಛೇರಿ‌ ಮುಂಭಾಗ ನ.27ಕ್ಕೆ ಪ್ರತಿಭಟನೆ ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಆನೆ ಹಾವಳಿ ತೀವ್ರಗೊಂಡಿದ್ದು, ರೈತರ ಬೆಳೆಗಳಿಗೆ ಅಪಾರ ನಷ್ಟ ಉಂಟಾಗಿರುವುದಲ್ಲದೆ, ಮಾನವ ಜೀವಕ್ಕೂ ಅಪಾಯ ಎದುರಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಆನೆಗಳ ದಾಳಿಯಿಂದ ರೈತರ ಪ್ರಾಣ ಬಲಿಯಾದ ಘಟನೆಗಳು ಸಂಭವಿಸಿದ್ದು, ಜನರು ಜೀವಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ…

Read Full News
GridArt 20251125

ರಿಪ್ಪನ್‌ಪೇಟೆ ರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು : ಕಸ್ತೂರಿ ಕನ್ನಡ ಸಂಘ ಆಯೋಜಿಸಿರುವ ಎರಡು ದಿನಗಳ ಉತ್ಸವಕ್ಕೆ ಇಂದು ಚಾಲನೆ

ರಿಪ್ಪನ್‌ಪೇಟೆ ರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು : ಕಸ್ತೂರಿ ಕನ್ನಡ ಸಂಘ ಆಯೋಜಿಸಿರುವ ಎರಡು ದಿನಗಳ ಉತ್ಸವಕ್ಕೆ ಇಂದು ಚಾಲನೆ ಇಂದು ನಗೆ ಹಬ್ಬ , ನಾಳೆ ಮೂರು ಮುತ್ತು ತಂಡದಿಂದ ಹಾಸ್ಯ ನಾಟಕ ರಿಪ್ಪನ್‌ಪೇಟೆ : ಪಟ್ಟಣದ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್‌ರಾಜ್ ಅಭಿಮಾನಿ ಬಳಗ ವತಿಯಿಂದ ಆಯೋಜಿಸಿರುವ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭ ಈ ಬಾರಿ ಎರಡು ದಿನಗಳ ವೈವಿಧ್ಯಮಯ ಸಾಂಸ್ಕೃತಿಕ – ಮನರಂಜನಾ ಕಾರ್ಯಕ್ರಮಗಳೊಂದಿಗೆ ಭರ್ಜರಿಯಾಗಿ ನಡೆಯಲಿದೆ ಎಂದು ಕಸ್ತೂರಿ…

Read Full News
IMG 20251123 WA0018

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಶ್ರೀಕಾಂತ್ ರಿಂದ ‘ಸಹಕಾರಿ ರತ್ನ’ ಪುರಸ್ಕೃತ ಎಂ ಎಂ ಪರಮೇಶ್ ಗೆ ಸನ್ಮಾನ

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಶ್ರೀಕಾಂತ್ ರಿಂದ ‘ಸಹಕಾರಿ ರತ್ನ’ ಪುರಸ್ಕೃತ ಎಂ ಎಂ ಪರಮೇಶ್ ಗೆ ಸನ್ಮಾನ ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ (ಡಿಸಿಸಿ ಬ್ಯಾಂಕ್) ನೂತನ ನಿರ್ದೇಶಕರಾದ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರಾದ  ಶ್ರೀಕಾಂತ್ ರವರು ಇಂದು ರಿಪ್ಪನ್ ಪೇಟೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ವಿಶೇಷ ಭೇಟಿ ನೀಡಿದರು. ಪ್ರದೇಶದ ಸಹಕಾರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ವ್ಯಕ್ತಿತ್ವಗಳನ್ನು ಗುರುತಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದಲ್ಲಿ,…

Read Full News
GridArt 20251123

ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳು: ಶಾಸಕ ಆರಗ ಜ್ಞಾನೇಂದ್ರ

ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳು: ಶಾಸಕ ಆರಗ ಜ್ಞಾನೇಂದ್ರ “ಗಾಂಧೀಜಿಯನ್ನು ಕೊಂದವರೂ ವಿದ್ಯಾವಂತರು’” — ಕಿಮ್ಮನೆ ರತ್ನಾಕರ್ ಅಮೃತದಲ್ಲಿ ಗುರುವಂದನೆ : ಹಿರಿಯ ಶಿಕ್ಷಕರು–ಸಾಧಕರಿಗೆ ಸನ್ಮಾನ ರಿಪ್ಪನ್ ಪೇಟೆ : ಮಕ್ಕಳಿಗೆ ಶಿಕ್ಷಣದ ಜೊತೆಗೆ ಸುಸಂಸ್ಕೃತರನ್ನಾಗಿ ಮಾಡುವ ಮೂಲಕ ಸನ್ಮಾರ್ಗದಲ್ಲಿ ಸಾಗಲು ಶಿಕ್ಷಕರು ಬೋಧನೆ ಮಾಡಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಗರ್ತಿಕೆರೆಯಲ್ಲಿ ನಡೆದ ಅಮೃತ ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಣ ವ್ಯಕ್ತಿತ್ವ ನಿರ್ಮಾಣದೊಂದಿಗೆ ವ್ಯಕ್ತಿ ನಿರ್ಮಾಣ ಮಾಡುತ್ತದೆ. ನೌಕರಿಗಾಗಿ ಶಿಕ್ಷಣವಾಗದೆ ಬದುಕಿಗೆ ಮಾರ್ಗದರ್ಶನವಾಗಬೇಕು. ಇಂದು ಸಮಾಜಘಾತುಕ…

Read Full News
IMG 20251121 WA0043

ಟಾಂ ಟಾಂ ಶಾಸಕರು ಸಮಾಧಾನದಿಂದ ವರ್ತಿಸಲಿ – ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಮನವಿ

ಟಾಂ ಟಾಂ ಶಾಸಕರು ಸಮಾಧಾನದಿಂದ ವರ್ತಿಸಲಿ – ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್  ಮನವಿ ಶಿವಮೊಗ್ಗ:  ಧರ್ಮಕ್ಕಿಂತ ಕಾನೂನೇ ಮುಖ್ಯ. ಶಾಂತಿಗಾಗಿ ಹೋರಾಟ ಮಾಡಬೇಕೆ ಹೊರತು ನಗರ ವಾಸಿಗಳ  ಮನವನ್ನು ಕದಡುವ ಕೆಲಸವನ್ನಲ್ಲ. ಆರ್ ಎಂಲ್ ನಗರದಲ್ಲಿ ನಡೆದ ಹಲ್ಲೆಯನ್ನು ಕೋಮುಬಣ್ಣಕ್ಕೆ ತಿರುಗಿಸಿ, ಊರಲ್ಲೆಲ್ಲ ಟಾಂ ಟಾಂ ಹೊಡೆದು  ಲಾಭ ಪಡೆಯಲು ಮುಂದಾದ ಶಾಸಕರು ಒಂದು ಕೋಮಿನ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಹೀಗೆ ಮಾಡುವ ಮುನ್ನ ತಾಳ್ಮೆ ವಹಿಸಬೇಕಿತ್ತೆಂದು ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಹೇಳಿದ್ದಾರೆ….

Read Full News
GridArt 20251121

ವರದಿಗಾರಿಕೆಯಲ್ಲಿ ನೇರವಂತಿಕೆ – ಮಾಧ್ಯಮಗಳ ನಿಜಶಕ್ತಿ – ಗೋಪಾಲಕೃಷ್ಣ ಬೇಳೂರು

ರಿಪ್ಪನ್ ಪೇಟೆ : ಪೋಸ್ಟ್ ಮ್ಯಾನ್ ನ್ಯೂಸ್  ಕಚೇರಿ ಉದ್ಘಾಟನೆ ವರದಿಗಾರಿಕೆಯಲ್ಲಿ ನೇರವಂತಿಕೆ – ಮಾಧ್ಯಮಗಳ ನಿಜಶಕ್ತಿ – ಗೋಪಾಲಕೃಷ್ಣ ಬೇಳೂರು ರಿಪ್ಪನ್ ಪೇಟೆ: “ಮಾಧ್ಯಮವು ಕೇವಲ ಸುದ್ದಿಯನ್ನು ಪ್ರಸಾರ ಮಾಡುವ ಯಂತ್ರವಲ್ಲ, ಅದು ಸಂವಿಧಾನದ ನಾಲ್ಕನೆಯ ಅಂಗವಾಗಿ ಸಾರ್ವಜನಿಕರ ಧ್ವನಿ ಮತ್ತು ಪ್ರಜಾಪ್ರಭುತ್ವದ ಶಕ್ತಿ. ವರದಿಗಾರಿಕೆಯಲ್ಲಿ ನೇರವಂತಿಕೆ, ನೈಜತೆ ಹಾಗೂ ಪತ್ರಕರ್ತರ ನಿಷ್ಠೆ ಉಳಿಯುವ ಮಟ್ಟಕ್ಕೆ ಸಮಾಜದಲ್ಲಿಯೂ ವಿಶ್ವಾಸ ಮತ್ತು ಗೌರವ ಉಳಿಯುತ್ತದೆ” ಎಂದು ಶಾಸಕ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ಕೈಗಾರಿಕಾ ನಿಗಮದ ಅಧ್ಯಕ್ಷ…

Read Full News
GridArt 20251120

ಗರ್ತಿಕೆರೆಯಲ್ಲಿ ನ.23ಕ್ಕೆ ಅಮೃತ ಸ್ನೇಹ ಸಮ್ಮಿಲನ , ಶಾಲಾ ಪುನರ್ಮಿಲನ

ಗರ್ತಿಕೆರೆಯಲ್ಲಿ ನ.23ಕ್ಕೆ ಅಮೃತ ಸ್ನೇಹ ಸಮ್ಮಿಲನ , ಶಾಲಾ ಪುನರ್ಮಿಲನ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ಅವರಣದಲ್ಲಿ ಅಮೃತ ಸ್ನೇಹ ಸಮ್ಮಿಲನ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನ. 23 ರ ಭಾನುವಾರ ಬೆಳಗ್ಗೆ 9.30 ಕ್ಕೆ ಅಮೃತ ಸ್ನೇಹ ಸಮ್ಮಿಲನ ‘ಶಾಲಾ ಪುನರ್ಮಿಲನ ಮತ್ತು ಶಿಕ್ಷಕರ ಸಮಾಗಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಮೃತ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಚಿನ್‌ಗೌಡ ತಿಳಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ…

Read Full News
GridArt 20251120

ವ್ಯಕ್ತಿ ನಾಪತ್ತೆ – ಪತ್ತೆಗೆ ಪೊಲೀಸರ ಮನವಿ

ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಕಾಣೆಯಾಗಿರುವ ಘಟನೆ ನಡೆದಿದೆ. ಪಟ್ಟಣದ ಮದೀನ ಕಾಲೋನಿ ನಿವಾಸಿ ಮೀನು ವ್ಯಾಪಾರದಲ್ಲಿ ತೊಡಗಿದ್ದ ಬರ್ಕತ್ ಅಲಿ ಬಿನ್ ಹಾದಿ ಬಾಷಾ ಅವರು ನವೆಂಬರ್ 13, 2025 ರಂದು ಮನೆಯಿಂದ ಹೋದವರು ಮನೆಗೆ ವಾಪಾಸಾಗಿಲ್ಲ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾನ್ಯವಾಗಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಬರ್ಕತ್ ಅಲಿ ಅವರು ಆ ದಿನದಿಂದ ಯಾವುದೇ ರೀತಿಯ ಸಂಪರ್ಕಕ್ಕೂ ಸಿಗದ ಹಿನ್ನೆಲೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ…

Read Full News
IMG 20251120 WA0026

ಸಮಾಜಮುಖಿ ಕಾರ್ಯಗಳಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ – ಕೆ.ಪಾಲಾಕ್ಷ

ಸಮಾಜಮುಖಿ ಕಾರ್ಯಗಳಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ – ಕೆ.ಪಾಲಾಕ್ಷ ರಿಪ್ಪನ್ ಪೇಟೆ: ಸಮಾಜಮುಖಿ ಕಾರ್ಯಗಳ ಮಾಡುವುದರ ಮೂಲಕ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬರು ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ, ಜೀವನದ ಒತ್ತಡವನ್ನು ತೊಡೆದು ಹಾಕಲು ಏಕೈಕ ಮಾರ್ಗ ಸಮಾಜ ಸೇವೆ ಎಂದು ರೋಟರಿ ಜಿಲ್ಲಾ 31 82ರ ಜಿಲ್ಲಾ ಗವರ್ನರ್ ಕೆ ಪಾಲಕ್ಷ ಹೇಳಿದರು. ಪಟ್ಟಣದ ರೋಟರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ…

Read Full News
IMG 20251120 WA0023

ರಿಪ್ಪನ್ ಪೇಟೆ : 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ

ರಿಪ್ಪನ್ ಪೇಟೆ : 72ನೇ ಅಖಿಲ ಭಾರತ ಸಹಕಾರ ಸಪ್ತಾಹ – ಸಮಾರೋಪ ಸಮಾರಂಭ ಸಹಕಾರ ಸಂಘಗಳು ಗ್ರಾಮೀಣ ಜನರಿಗೆ ಉಪಯುಕ್ತವಾಗಿದೆ: ಆರ್. ಎಂ. ಮಂಜುನಾಥ್ ಗೌಡ ರಿಪ್ಪನ್ ಪೇಟೆ : ಪಟ್ಟಣದ ವಿಶ್ವಮಾನವ ಒಕ್ಕಲಿಗರ ಸಭಾಭವನದಲ್ಲಿ ನವೆಂಬರ್  20ರಂದು 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ವಿಜೃಂಭಣೆಯಿಂದ  ಆಚರಿಸಲಾಯಿತು. ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘ ಸಭಾಭವನದಲ್ಲಿ  ಗುರುವಾರ ನಡೆದ  ಕಾರ್ಯಕ್ರಮವನ್ನು  ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ  ಡಾ. ಆರ್. ಎಂ. ಮಂಜುನಾಥ್…

Read Full News
GridArt 20251117

ಮಕ್ಕಳ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ – ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ

ಮಕ್ಕಳ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ – ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ರಿಪ್ಪನ್ ಪೇಟೆ : ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಹೇಳಿದರು. ಸಾರ್ವಜನಿಕ ಶಿಕ್ಷ ಣ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಮೂಗೂಡ್ತಿ ಕ್ಲಸ್ಟರ್ ಮಟ್ಟದ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಸರಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ…

Read Full News
GridArt 20251116

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ – ಹೊಸನಗರ ಕಾಂಗ್ರೆಸ್ ನಿಯೋಗದಿಂದ ಶಾಸಕರ ಬಳಿ ಹಕ್ಕೊತ್ತಾಯ

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ – ಹೊಸನಗರ ಕಾಂಗ್ರೆಸ್ ನಿಯೋಗದಿಂದ ಶಾಸಕರ ಬಳಿ ಹಕ್ಕೊತ್ತಾಯ ಶಿವಮೊಗ್ಗ ಜಿಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಲಗೋಡು ರತ್ನಾಕರ್ ರವರಿಗೆ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಹೊಸನಗರ ತಾಲೂಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ರವರಿಗೆ ನಿಯೋಗದ ಮೂಲಕ ಮನವಿ ಸಲ್ಲಿಸಿದ್ದಾರೆ. ನಿಯೋಗದ ಪರವಾಗಿ ಮಾತನಾಡಿದ ಹೊಸನಗರ…

Read Full News
1372879 screenshot 2025 10 10

ದೂನದಲ್ಲಿ ಮಲೆನಾಡು ಕನ್ನಡಿಗರ ಸೇನೆ ವತಿಯಿಂದ ನಾಳೆ ಅದ್ದೂರಿ ಕನ್ನಡ ರಾಜ್ಯೋತ್ಸವ

ದೂನದಲ್ಲಿ ಮಲೆನಾಡು ಕನ್ನಡಿಗರ ಸೇನೆ ವತಿಯಿಂದ ನಾಳೆ ಅದ್ದೂರಿ ಕನ್ನಡ ರಾಜ್ಯೋತ್ಸವ ರಿಪ್ಪನ್ ಪೇಟೆ : ಇಲ್ಲಿನ ದೂನ ಗ್ರಾಮದ ಮಲೆನಾಡು ಕನ್ನಡಿಗರ ಸೇನೆ ಮತ್ತು ಗೆಳೆಯರ ಬಳಗದ ವತಿಯಿಂದ ದೂನದಲ್ಲಿ ಸೇನೆಯ 3ನೇ ವರ್ಷದ ಸಂಭ್ರಮ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಲೆನಾಡು ಕನ್ನಡಿಗರ ಸೇನೆ ದೂನ ಘಟಕದ ಅಧ್ಯಕ್ಷ ಚಿರಂತ್ ಭಂಡಾರಿ ತಿಳಿಸಿದ್ದಾರೆ. ಬೆಳಗ್ಗೆ 9.00 ಗಂಟೆಗೆ ದೂನ ಸರ್ಕಲ್‌ನಲ್ಲಿ ಧ್ವಜಾರೋಹಣ ಜರುಗಲಿದ್ದು, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜು…

Read Full News
GridArt 20251115

ರಿಪ್ಪನ್‍ಪೇಟೆಯ ರಾಮಕೃಷ್ಣ ವಿದ್ಯಾಲಯದ 5 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಸ್ಥಾನ

ರಿಪ್ಪನ್‍ಪೇಟೆಯ ರಾಮಕೃಷ್ಣ ವಿದ್ಯಾಲಯದ 5 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಸ್ಥಾನ ಬೆಂಗಳೂರು: 2025–26ನೇ ಸಾಲಿನ ರಾಜ್ಯಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ರಿಪ್ಪನ್‍ಪೇಟೆಯ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರು ದಿಟ್ಟ ಪ್ರದರ್ಶನ ನೀಡಿದ್ದು, ಎರಡೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಮಿಂಚಿದ ಐದು ಪ್ರತಿಭಾವಂತ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಅಪರೂಪದ ಸಾಧನೆ ಮಾಡಿದ್ದಾರೆ. ಆಯ್ಕೆಯಾದ ಕ್ರೀಡಾಪಟುಗಳು: 1. ಶ್ರೇಯಾ ಬಿ.ಆರ್ — 10ನೇ ತರಗತಿ…

Read Full News
GridArt 20251115

ರಿಪ್ಪನ್ ಪೇಟೆಯ ಶ್ರೇಯಾ ಬಿ.ಆರ್‌ಗೆ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಸ್ಥಾನ – ನಾಲ್ಕನೇ ಬಾರಿಗೆ ಕರ್ನಾಟಕ ತಂಡಕ್ಕೆ ಆಯ್ಕೆ

ರಿಪ್ಪನ್ ಪೇಟೆಯ ಶ್ರೇಯಾ ಬಿ.ಆರ್‌ಗೆ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಸ್ಥಾನ – ನಾಲ್ಕನೇ ಬಾರಿಗೆ ಕರ್ನಾಟಕ ತಂಡಕ್ಕೆ ಆಯ್ಕೆ ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸೋನಾಲಿ ರಿಪ್ಪನ್ ಪೇಟೆ: ಶಾರದಾ ರಾಮಕೃಷ್ಣ ವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿನಿ ಶ್ರೇಯಾ ಬಿ.ಆರ್ ಮತ್ತೊಮ್ಮೆ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ 17 ವರ್ಷ ವಯೋಮಿತಿಯೊಳಗಿನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮಿಂಚಿನ ಪ್ರದರ್ಶನ ನೀಡಿ, ಮಹಾರಾಷ್ಟ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪಟ್ಟಣದ ಶಬರೀಶ ನಗರದ…

Read Full News
IMG 20251114 WA0080

ಟ್ಯಾಂಕರ್ ಲಾರಿ – ಬೈಕ್ ನಡುವೆ ಭೀಕರ ಅಪಘಾತ ; ಬೈಕ್ ಸವಾರ ಸಾವು..!

ಟ್ಯಾಂಕರ್ ಲಾರಿ – ಬೈಕ್ ನಡುವೆ ಭೀಕರ ಅಪಘಾತ ; ಬೈಕ್ ಸವಾರ ಸಾವು..! ತೀರ್ಥಹಳ್ಳಿ : ತಾಲೂಕಿನ ಬೆಜ್ಜವಳ್ಳಿಯ ಮುಖ್ಯರಸ್ತೆಯಲ್ಲಿ ಬೈಕ್ ಸವಾರ ಹಾಗೂ ಡಿಸೇಲ್  ಟ್ಯಾಂಕರ್  ಲಾರಿ ನಡುವೆ ಬೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 59 ವರ್ಷದ ವೆಂಕಟೇಶ್ ಎನ್ನುವ ಕುಡುವಳ್ಳಿ ಹಿರೇಬೇಯ್ಲಿನ‌ ವ್ಯಕ್ತಿ ಮೃತ ದುರ್ದೇವಿ.   ಡಿಸೇಲ್ ಟ್ಯಾಂಕರ್ ಲಾರಿ ಬೆಜ್ಜವಳ್ಳಿ ಸಮೀಪ ಬಂದಾಗ  ಅರಣ್ಯ ಇಲಾಖೆಯ ನೌಕರ ಎದುರಾದಾಗ…

Read Full News
GridArt 20251114 210822167 wm

ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಡೀರ್ ಭೇಟಿ

ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಡೀರ್ ಭೇಟಿ ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ನಡೆದಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ಮತ್ತು ಸಿಬ್ಬಂದಿಗಳ ಕರ್ತವ್ಯಾವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿತು. ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಗಳ ವಿರುದ್ಧ ಸ್ವಯಂ ದೂರನ್ನು ದಾಖಲಿಸಿರುವ ಲೋಕಾಯುಕ್ತ ಇಲಾಖೆ, ಈ ಹಿನ್ನೆಲೆಯಲ್ಲಿ ಎಲ್ಲಾ…

Read Full News
GridArt 20251114

ರಿಪ್ಪನ್ ಪೇಟೆಯ ಅನಂತಮೂರ್ತಿ ಜವಳಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ | ಜಿನೋಮ್ ಸೇವಿಯರ್ ಅವಾರ್ಡ್ ಗೆ ಭಾಜನ

ರಿಪ್ಪನ್ ಪೇಟೆಯ ಅನಂತಮೂರ್ತಿ ಜವಳಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ | ಜಿನೋಮ್ ಸೇವಿಯರ್ ಅವಾರ್ಡ್ ಗೆ ಭಾಜನ | ಹಳದಿ ರುದ್ರಾಕ್ಷಿ ಹಲಸಿನ ಪ್ರಭೇದ ಸಂರಕ್ಷಣೆಗೆ ಮಾನ್ಯತೆ ರಿಪ್ಪನ್ ಪೇಟೆ: ನವದೆಹಲಿಯಲ್ಲಿ  ಬುಧವಾರ ನಡೆದ ಸಸ್ಯ ಪ್ರಭೇದಗಳ ಮತ್ತು ರೈತರ ಹಕ್ಕು ಪ್ರಾಧಿಕಾರದ  ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ‘ಜಿನೋಮ್ ಸೇವಿಯರ್ ‘ ಪ್ರಶಸ್ತಿಯನ್ನು  ಅನಂತಮೂರ್ತಿ ಜವಳಿಯವರಿಗೆ ನೀಡಿ…

Read Full News
GridArt 20251113

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ, ಹೊಸನಗರ ತಾಲೂಕಿನಲ್ಲಿದೆ 144 ಹುದ್ದೆ ! ಈ ಸುದ್ದಿ ನೋಡಿ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ, ಹೊಸನಗರ ತಾಲೂಕಿನಲ್ಲಿದೆ 144 ಹುದ್ದೆ ! ಈ ಸುದ್ದಿ ನೋಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಗೌರವಧನ ಸೇವೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಸ್ಥಳೀಯ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಭದ್ರಾವತಿಯಲ್ಲಿ 19 ಅಂಗನವಾಡಿ ಕಾರ್ಯಕರ್ತೆಯರು ಮತ್ತು…

Read Full News
GridArt 20251113

ರಿಪ್ಪನ್‌ಪೇಟೆ ವಿನಾಯಕ ಸರ್ಕಲ್‌ ಅಭಿವೃದ್ಧಿಗೆ 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ರಿಪ್ಪನ್‌ಪೇಟೆ ವಿನಾಯಕ ಸರ್ಕಲ್‌ ಅಭಿವೃದ್ಧಿಗೆ 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ಪಟ್ಟಣ ಪಂಚಾಯಿತಿ ಮಾದರಿಯಲ್ಲಿ ಅಭಿವೃದ್ಧಿ – ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ರಿಪ್ಪನ್‌ಪೇಟೆ, ನ.13 – ಪಟ್ಟಣದ ವಿನಾಯಕ ಸರ್ಕಲ್‌ನ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಗಳಿಗೆ ಇಂದು ಸಂಜೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, “ಪಟ್ಟಣ ಪಂಚಾಯಿತಿ ಮಾದರಿಯಲ್ಲಿ ರಿಪ್ಪನ್‌ಪೇಟೆಯ ಅಭಿವೃದ್ಧಿ ಮಾಡಲಾಗುವುದು. ನಾಲ್ಕು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ವಿನಾಯಕ ಸರ್ಕಲ್‌ಗೆ…

Read Full News
GridArt 20251112

ರಿಪ್ಪನ್‌ಪೇಟೆಯ ಎಂ.ಎಂ. ಪರಮೇಶ್ ಅವರಿಗೆ ರಾಜ್ಯ ಮಟ್ಟದ “ಸಹಕಾರಿ ರತ್ನ” ಪ್ರಶಸ್ತಿ ಗೌರವ

ರಿಪ್ಪನ್‌ಪೇಟೆಯ ಎಂ.ಎಂ. ಪರಮೇಶ್ ಅವರಿಗೆ ರಾಜ್ಯ ಮಟ್ಟದ “ಸಹಕಾರಿ ರತ್ನ” ಪ್ರಶಸ್ತಿ ಗೌರವ ರಿಪ್ಪನ್‌ಪೇಟೆ : ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ನೀಡಲಾಗುವ ರಾಜ್ಯ ಮಟ್ಟದ ‘ಸಹಕಾರಿ ರತ್ನ’ ಪ್ರಶಸ್ತಿಗೆ ಈ ಬಾರಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ ಆಯ್ಕೆಯಾಗಿದ್ದಾರೆ. ನವೆಂಬರ್ 14 ರಂದು ಬೆಂಗಳೂರು ಪ್ಯಾಲೇಸ್ ಗ್ರೌಂಡ್‌ನ ಗಾಯತ್ರಿ ವಿಹಾರ್ನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ. ಎಂ.ಎಂ….

Read Full News
IMG 20251112 WA0014(1)

ಕೇಂದ್ರ ಗೃಹ ಸಚಿವರಿಗೆ ಶಿವಮೊಗ್ಗದಿಂದ ‘ಬಳೆ’ ಪೋಸ್ಟ್‌ ಮಾಡಿದ ಮಹಿಳೆಯರು

ಕೇಂದ್ರ ಗೃಹ ಸಚಿವರಿಗೆ ಶಿವಮೊಗ್ಗದಿಂದ ‘ಬಳೆ’ ಪೋಸ್ಟ್‌ ಮಾಡಿದ ಮಹಿಳೆಯರು ಶಿವಮೊಗ್ಗ: ದೇಶದಲ್ಲಿ ಪದೇ ಪದೆ ದಾಳಿಯಾಗುತ್ತಿದ್ದರೂ ಉಗ್ರರ ಅಟ್ಟಹಾಸ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಷಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಂಚೆ ಕಚೇರಿ ಮುಂಭಾಗ ನಗರ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 2019ರಲ್ಲಿ 800 ಕೆ.ಜಿ ಸ್ಪೋಟಕ ಹೊತ್ತು ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಪುಲ್ವಾಮಾದಲ್ಲಿ ದಾಳಿಯಾಗಿತ್ತು. 2025ರಲ್ಲಿ ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ನಾಗರಿಕರ ಹತ್ಯೆ ಮಾಡಲಾಗಿತ್ತು….

Read Full News
JPEG 20251112 213221

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಎರಡು ಹಸುಗಳು ಸಜೀವ ದಹನ

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಎರಡು ಹಸುಗಳು ಸಜೀವ ದಹನ ಶಿವಮೊಗ್ಗ : ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತಿನಕೊಪ್ಪದಲ್ಲಿ ನಡೆದ ದುರಂತ ಘಟನೆಯಲ್ಲಿ ಎರಡು ಹಸುಗಳು ಸಜೀವ ದಹನವಾಗಿದೆ. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಸಂತೋಷ್ ಎಂಬುವವರ ಮನೆಯ ಹಿಂಭಾಗದಲ್ಲಿದ್ದ ಅಡಿಕೆ ದಬ್ಬೆ ಪಕ್ಕದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಆ ಸಮಯದಲ್ಲಿ ಕೊಟ್ಟಿಗೆಯೊಳಗೆ ಸದ್ಯದಲ್ಲೇ ಕರು ಹಾಕುವ ಸ್ಥಿತಿಯಲ್ಲಿದ್ದ ಎರಡು ಹಸುಗಳು ಬಿಕ್ಕಟ್ಟಿನಿಂದ ಪಾರಾಗಲಾರದೇ ಬೆಂಕಿಗೆ ಆಹುತಿಯಾಗಿವೆ. ಬೆಂಕಿ ತೀವ್ರಗೊಂಡಿದ್ದು, ಸ್ಥಳೀಯರು ನೀರು ಸುರಿದು…

Read Full News
GridArt 20251111 215656339 wm

RIPPONPETE | ಕುಗ್ರಾಮದ ಹುಡುಗಿಯ ವಿಶ್ವ ದಾಖಲೆ – ಗಿನ್ನೆಸ್ ವರ್ಲ್ಡ್ ಬುಕ್‌ನಲ್ಲಿ ಅರಸಾಳಿನ ಕವನಶ್ರೀಗೆ ಗೌರವ

RIPPONPETE | ಕುಗ್ರಾಮದ ಹುಡುಗಿಯ ವಿಶ್ವ ದಾಖಲೆ – ಗಿನ್ನೆಸ್ ವರ್ಲ್ಡ್ ಬುಕ್‌ನಲ್ಲಿ ಅರಸಾಳಿನ ಕವನಶ್ರೀಗೆ ಗೌರವ ರಿಪ್ಪನ್ ಪೇಟೆ: ಕನಸು, ಪರಿಶ್ರಮ ಮತ್ತು ಪ್ರತಿಭೆ ಒಂದೇ ಹಾದಿಯಲ್ಲಿ ಸಾಗಿದಾಗ ಅದ್ಭುತಗಳು ಸಂಭವಿಸುತ್ತವೆ ಎಂಬುದಕ್ಕೆ ಜೀವಂತ ಉದಾಹರಣೆ ಅರಸಾಳು ಗ್ರಾಮದ ಯುವತಿ ಕವನಶ್ರೀ ಹೆಚ್.ಎಂ.. ಚೆನ್ನೈನ ಎಸ್.ಆರ್.ಎಂ. ಆಡಿಟೋರಿಯಂನಲ್ಲಿ ನಡೆದ ವಿಶಿಷ್ಟ ‘ಸ್ಯಾಂಪಲ್ಸ್ ಡಿಸ್ಪ್ಲೇ’ ಕಾರ್ಯಕ್ರಮದಲ್ಲಿ, ಕವನಶ್ರೀ ಅವರು ಮದರ್ ಇಂಡಿಯಾಸ್ ಕ್ರೋಶೆಕ್ವೀನ್ಸ್ ವಿಭಾಗದಲ್ಲಿ 1,00,581 ಕ್ರೋಶೆ ಸ್ಕ್ವೇರ್ ಸ್ಯಾಂಪಲ್‌ಗಳನ್ನು ತಯಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿ, ಗಿನ್ನೆಸ್…

Read Full News
GridArt 20251111

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ – ಚೇತನ ಆರ್.ಪಿ.

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ – ಚೇತನ ಆರ್.ಪಿ. ರಿಪ್ಪನ್ ಪೇಟೆ: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮತ್ತು ಪ್ರತಿಭೆ ಅಪಾರವಾಗಿದೆ. ಪೋಷಕರು ಹಾಗೂ ಶಿಕ್ಷಕರು ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿದರೆ, ಮುಂದಿನ ದಿನಗಳಲ್ಲಿ ಅವರು ಉತ್ತಮ ಪ್ರಜೆಗಳಾಗಿ ಬೆಳೆದು ಬರುವರು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಚೇತನ ಆರ್.ಪಿ. ಹೇಳಿದರು. ಪಟ್ಟಣದ ಗುಡ್ ಶೆಪರ್ಡ್ ಶಾಲೆಯಲ್ಲಿ ಬಾಳೂರು ಮತ್ತು ರಿಪ್ಪನ್ ಪೇಟೆ ಗ್ರಾಮ…

Read Full News
GridArt 20251110

ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಹೆದ್ದಾರಿಯಲ್ಲಿ ಆತಂಕ!

ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಹೆದ್ದಾರಿಯಲ್ಲಿ ಆತಂಕ! ಶಿವಮೊಗ್ಗ: ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಸಮೀಪ ರಸ್ತೆಯಲ್ಲೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ. ಮಂಡಗದ್ದೆ ಬಳಿ ವೇಗವಾಗಿ ಬರುತ್ತಿದ್ದ ಬಸ್‌ಗೆ ಕಾಡಾನೆ ದಿಢೀ‌ರ್ ಎದುರಾಗಿದೆ. ಅನಿರೀಕ್ಷಿತವಾಗಿ ಆನೆಯನ್ನು ನೋಡಿದ ಬಸ್ ಚಾಲಕ ತಕ್ಷಣವೇ ಬಸ್ ಅನ್ನು ನಿಲ್ಲಿಸಿ ಅಪಾಯವನ್ನು ತಪ್ಪಿಸಿದ್ದಾರೆ. ಈ ಘಟನೆಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಒಮ್ಮೆಲೆ ಆತಂಕಕ್ಕೊಳಗಾದರು. ಹಲವರು ತಮ್ಮ ಮೊಬೈಲ್‌ ಕ್ಯಾಮರಾಗಳಲ್ಲಿ ಆನೆಯ ಚಿತ್ರಗಳನ್ನು ಸೆರೆಹಿಡಿದರೆ, ಇನ್ನು ಕೆಲವರು ಗಾಬರಿಯಾಗಿದ್ದರು….

Read Full News
GridArt 20251108

RIPPONPETE | ತಳಲೆಯಲ್ಲಿ ನಾಳೆ ಟ್ರಾಕ್ಟರ್ ಮತ್ತು ಟ್ರೈಲರ್ ರಿವರ್ಸ್ ಸ್ಪರ್ಧೆ – ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿಭಿನ್ನ ಕಾರ್ಯಕ್ರಮ

RIPPONPETE | ತಳಲೆಯಲ್ಲಿ ನಾಳೆ ಟ್ರಾಕ್ಟರ್ ಮತ್ತು ಟ್ರೈಲರ್ ರಿವರ್ಸ್ ಸ್ಪರ್ಧೆ – ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿಭಿನ್ನ ಕಾರ್ಯಕ್ರಮ ರಿಪ್ಪನ್ ಪೇಟೆ : ಕುಮದ್ವತಿ ಟ್ರಾಕ್ಟರ್ ಮಾಲೀಕರು, ಚಾಲಕರು ಹಾಗೂ ಗೆಳೆಯರ ಬಳಗ ಮೂಗೂಡ್ತಿ-ತಳಲೆ ಇವರ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಥಮ ವರ್ಷದ ಟ್ರಾಕ್ಟರ್ ಮತ್ತು ಟ್ರೈಲರ್ ರಿವರ್ಸ್ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆ ನವೆಂಬರ್ 9, 2025, ಭಾನುವಾರ ಬೆಳಗ್ಗೆ 9 ಗಂಟೆಗೆ ನಡೆಯಲಿದ್ದು, ಶಿವಮೊಗ್ಗ ಜಿಲ್ಲೆಯೊಳಗಿನ ಸ್ಪರ್ಧಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ…

Read Full News
GridArt 20251107

SHIVAMOGGA | ‘ಅಕ್ಕ ಪಡೆ’ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ

SHIVAMOGGA | ಅಕ್ಕ ಪಡೆ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಕ್ಕ ಪಡೆ ತಂಡ ರಚನೆ ಮಾಡಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ತಂಡಕ್ಕೆ ಎನ್ ಸಿ ಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವ 5 ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು 35 ರಿಂದ 45 ವರ್ಷದೊಳಗಿನವರಾಗಿದ್ದು,…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.