Headlines

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಶ್ರೀಕಾಂತ್ ರಿಂದ ‘ಸಹಕಾರಿ ರತ್ನ’ ಪುರಸ್ಕೃತ ಎಂ ಎಂ ಪರಮೇಶ್ ಗೆ ಸನ್ಮಾನ

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಶ್ರೀಕಾಂತ್ ರಿಂದ ‘ಸಹಕಾರಿ ರತ್ನ’ ಪುರಸ್ಕೃತ ಎಂ ಎಂ ಪರಮೇಶ್ ಗೆ ಸನ್ಮಾನ

ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ (ಡಿಸಿಸಿ ಬ್ಯಾಂಕ್) ನೂತನ ನಿರ್ದೇಶಕರಾದ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರಾದ  ಶ್ರೀಕಾಂತ್ ರವರು ಇಂದು ರಿಪ್ಪನ್ ಪೇಟೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ವಿಶೇಷ ಭೇಟಿ ನೀಡಿದರು. ಪ್ರದೇಶದ ಸಹಕಾರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ವ್ಯಕ್ತಿತ್ವಗಳನ್ನು ಗುರುತಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದಲ್ಲಿ, ಇತ್ತೀಚೆಗೆ ‘ಸಹಕಾರಿ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿರುವ ಎಂ.ಎಂ. ಪರಮೇಶ್ವರ್ ರವರನ್ನು ಗೌರವಿಸಲಾಯಿತು.

ಶ್ರೀಕಾಂತ್ ರವರು ಪರಮೇಶ್ವರ್ ರವರ ಸೇವಾ ಮನೋಭಾವ, ಸಹಕಾರ ಸಂಘದ ಅಭಿವೃದ್ಧಿಗಾಗಿ ಕೈಗೊಂಡ ಹೋರಾಟ, ಮತ್ತು ರೈತರಿಗೆ ನೀಡಿದ ನಂಬಿಕೆಯಾದ ಸಾಥ್ ಜಿಲ್ಲೆಯಲ್ಲಿ ಮಾದರಿ ಎಂದೂ ಹೇಳಿದ್ದಾರೆ. “ಸಹಕಾರ ಚಟುವಟಿಕೆಗಳು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಪರಮೇಶ್ವರ್ ರವರಂತಹ ನಾಯಕರು ಇದ್ದಾಗ ಸಹಕಾರ ವ್ಯವಸ್ಥೆ ಇನ್ನಷ್ಟು ಬಲವಾಗಿ ನಿಂತುಕೊಳ್ಳುತ್ತದೆ,” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಅಮೀರ್ ಹಂಜ ರವರು ಮಾತನಾಡಿ, ಪರಮೇಶ್ವರ್ ರವರ ದೀರ್ಘಕಾಲೀನ ಸೇವೆಯನ್ನು ಅಭಿನಂದಿಸಿದರು. ಜೀನಿ ರಾಜು, ಶ್ರೀಯುತ ಹರೀಶ್ ಹಾಲು ಗುಡ್ಡೆ, ಗಣೇಶ್ ರಾವ್ ಕೆರೆಹಳ್ಳಿ, ವಿಶ್ವನಾಥ್ ಬರುವೆ ಸೇರಿದಂತೆ ಸ್ಥಳೀಯ ಮುಖಂಡರು, ಸಂಘದ ಸದಸ್ಯರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸನ್ಮಾನ ಸ್ವೀಕರಿಸಿದ ಪರಮೇಶ್ವರ್ ರವರು, “ಈ ಪ್ರಶಸ್ತಿ ನನಗೆ ಲಭಿಸದಲ್ಲ, ಸಹಕಾರ ಸಂಘದ ಸದಸ್ಯರ ಶ್ರಮದ ಯಶಸ್ಸು,” ಎಂದು ಕೃತಜ್ಞತೆಯ ಮಾತು ಹೇಳಿದರು.

ಸರಳ ಕಾರ್ಯಕ್ರಮವು ಆತ್ಮೀಯತೆ, ಗೌರವ ಹಾಗೂ ಸಹಕಾರ ಚೇತನವನ್ನು ಪ್ರತಿಬಿಂಬಿಸುವಂತಿತ್ತು.