ಜಿಲ್ಲಾ ಸುದ್ದಿ:
ಹೊಸನಗರ : 30 ಅಡಿ ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
ಆಕಸ್ಮಿಕವಾಗಿ 30 ಅಡಿ ಬಾವಿಗೆ ಬಿದ್ದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪದಲ್ಲಿ ನಡೆದಿದೆ. ಮಾವಿನಕೊಪ್ಪದ ನಿವಾಸಿಯಾದ ಯಶೋದಮ್ಮ (60) ಬಾವಿಗೆ ಬಿದ್ದ ಮಹಿಳೆ. ಮಾನಸಿಕವಾಗಿ ದುರ್ಬಲರಾಗಿದ್ದ ಯಶೋದಮ್ಮ, ತಮ್ಮ ಮನೆಯ ಹಿಂದಿನ ಬಾವಿಗೆ ಬಿದ್ದಿದ್ದಾರೆ. ಇನ್ನು ಮನೆಯಲ್ಲಿ ಅತ್ತೆ ಕಾಣದಿದ್ದಾಗ ಸೊಸೆ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಬಳಿಕ ಮನೆ ಹಿಂಭಾಗದ ಬಾವಿಗೆ ಮುಚ್ಚಿದ ಕಬ್ಬಿಣದ ಗ್ರಿಲ್ ತೆರೆದಿದ್ದನ್ನು ಕಂಡ ಸೊಸೆ. ಅನುಮಾನದಿಂದ ಬಾವಿಯಲ್ಲಿ ನೋಡಿದ್ದಾರೆ. ಅತ್ತೆ…
ಮಾಲ್ಗುಡಿಯಲ್ಲಿ ರೈಲು ನಿಲುಗಡೆ ಸ್ವಾಗತಾರ್ಹ – ಜನರಲ್ಲಿ ಜಾಗೃತಿ ಅವಶ್ಯ : ಕಲಗೋಡು ರತ್ನಾಕರ್|malgudi
ಮಾಲ್ಗುಡಿಯಲ್ಲಿ ರೈಲು ನಿಲುಗಡೆ ಸ್ವಾಗತಾರ್ಹ – ಜನರಲ್ಲಿ ಜಾಗೃತಿ ಅವಶ್ಯ : ಕಲಗೋಡು ರತ್ನಾಕರ್ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ಮಾಲ್ಗುಡಿ ರೈಲ್ವೇ ನಿಲ್ದಾಣದಲ್ಲಿ ಇಂಟರ್ ಸಿಟಿ ರೈಲುಗಳು ನಿಲಗಡೆಯಾಗುತ್ತಿರುವುದು ಸಂತಸದ ವಿಷಯವಾಗಿದ್ದು ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಜನರಿಗೆ ಈ ರೈಲ್ವೆ ನಿಲ್ದಾಣದ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು. ರಿಪ್ಪನಪೇಟೆ ಕುವೆಂಪು ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹೊಸನಗರ ತೀರ್ಥಹಳ್ಳಿ ತಾಲ್ಲೂಕಿನ …
ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸುಳ್ಳು ವದಂತಿ – ಸಂಸದ ಬಿ ವೈ ರಾಘವೇಂದ್ರ|byr
ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸುಳ್ಳು ವದಂತಿ – ಸಂಸದ ಬಿ ವೈ ರಾಘವೇಂದ್ರ ರಿಪ್ಪನ್‌ಪೇಟೆ : ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸುಳ್ಳು ವದಂತಿ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು. ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪತ್ರೀಕಾಗೋಷ್ಟಿ ನಡೆಸಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಕುಮಾರ್ ಬಂಗಾರಪ್ಪ ರವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಹಾಗೂ ರಾಜ್ಯ ವ್ಯಾಪ್ತಿಯಲ್ಲಿ ಸಂಘಟನೆಯ ಬಲವನ್ನು ಹೆಚ್ಚಿಸಿದವರಾಗಿದ್ದು ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಕಟ್ಟುಕಥೆಯಾಗಿದೆ ಎಂದರು….
ಮುಖ್ಯ ಶಿಕ್ಷಕರ ವರ್ಗಾಯಿಸಲು ಒತ್ತಾಯಿಸಿ ಶಾಲೆಗೆ ಬೀಗ ಜಡಿದು ಪೋಷಕರ ಪ್ರತಿಭಟನೆ – BEO ಮಧ್ಯ ಪ್ರವೇಶದಿಂದ ಪ್ರತಿಭಟನೆ ಅಂತ್ಯ
ಮುಖ್ಯ ಶಿಕ್ಷಕರ ವರ್ಗಾಯಿಸಲು ಒತ್ತಾಯಿಸಿ ಶಾಲೆಗೆ ಬೀಗ ಜಡಿದು ಪೋಷಕರ ಪ್ರತಿಭಟನೆ – BEO ಮಧ್ಯ ಪ್ರವೇಶದಿಂದ ಪ್ರತಿಭಟನೆ ಅಂತ್ಯ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ಆಗ್ರಹಿಸಿ ಪೋಷಕರು ಹಾಗೂ ಗ್ರಾಮಸ್ಥರು ನಡೆಸುತಿದ್ದ ಪ್ರತಿಭಟನೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಧ್ಯ ಪ್ರವೇಶದಿಂದ ಬಗೆಹರಿದಿದೆ. ತಮ್ಮಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಳೆದ ಆರು ತಿಂಗಳಿಂದ ಶಾಲೆಗೆ ಗೈರು ಹಾಜರಾಗಿ…
ಮುಖ್ಯ ಶಿಕ್ಷಕರ ವರ್ಗಾವಣೆಗೆ ಆಗ್ರಹಿಸಿ ತಮ್ಮಡಿಕೊಪ್ಪ ಗ್ರಾಮಸ್ಥರ ಪ್ರತಿಭಟನೆ|protest
ಮುಖ್ಯ ಶಿಕ್ಷಕರ ವರ್ಗಾವಣೆಗೆ ಆಗ್ರಹಿಸಿ ತಮ್ಮಡಿಕೊಪ್ಪ ಗ್ರಾಮಸ್ಥರ ಪ್ರತಿಭಟನೆ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ಆಗ್ರಹಿಸಿ ಪೋಷಕರು ಹಾಗೂ ಗ್ರಾಮಸ್ಥರು ದಿಡೀರ್ ಪ್ರತಿಭಟನೆ ನಡೆಸುತಿದ್ದಾರೆ. ಕಳೆದ ಹಲವಾರು ತಿಂಗಳುಗಳಿಂದ ಮುಖ್ಯ ಶಿಕ್ಷಕರಾದ ಗಂಗನಾಯ್ಕ್ ಅನಧಿಕೃತವಾಗಿ ಸತತ ಗೈರು ಹಾಜರಾಗುತಿದ್ದು ಪೋಷಕರ ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ಶಾಲಾಭಿವೃದ್ದಿ ಸಮಿತಿ,ಪೋಷಕರು ಹಾಗೂ ಸಾರ್ವಜನಿಕರು ಇಂದು ದಿಡೀರ್ ಪ್ರತಿಭಟನೆ ನಡೆಸಿ ಮುಖ್ಯ…
ಚಂದ್ರಯಾನ -3 ಇಸ್ರೋ ತಂಡದಲ್ಲಿ ಕೋಣಂದೂರಿನ ಮಹಿಳೆ – ಮಾಜಿ ಶಾಸಕರ ಪುತ್ರಿಗೆ ಅಭಿನಂದನೆಗಳ ಮಹಾಪೂರ
ಚಂದ್ರಯಾನ -3 ಲ್ಯಾಂಡರ್ ಬುಧವಾರ ಸಂಜೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದ್ದು, ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೋ ವಿಜ್ಞಾನಿಗಳಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಮಹಿಳೆಯೊಬ್ಬರು ಇದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಹೌದು, ಶಿವಮೊಗ್ಗ ಮೂಲದ ಶಿವಾನಿ (ISRO deputy director) ಎಂಬ ಮಹಿಳೆ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಪಟ್ಟಣದ ಮಾಜಿ…
ಅರಸಾಳಿನ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಸಂಭ್ರಮ – ಇಂಟರ್ ಸಿಟಿ ರೈಲು ನಿಲುಗಡೆ | ಆನ್ ಲೈನ್ ಬುಕ್ಕಿಂಗ್ ಪ್ರಾರಂಭ|malgudi
ಅರಸಾಳಿನ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಸಂಭ್ರಮ – ಇಂಟರ್ ಸಿಟಿ ರೈಲು ನಿಲುಗಡೆ | ಆನ್ ಲೈನ್ ಬುಕ್ಕಿಂಗ್ ಪ್ರಾರಂಭ ರಿಪ್ಪನ್‌ಪೇಟೆ : ಇಲ್ಲಿನ ಅರಸಾಳಿನ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಇಂದು ಸಂಭ್ರಮದ ವಾತಾವರಣ.ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ಮೈಸೂರು – ಬೆಂಗಳೂರು – ತಾಳಗುಪ್ಪ ರೈಲು ನಿಲುಗಡೆ ನೀಡಿದ್ದು ಈ ಸಂಭ್ರಮಕ್ಕೆ ಕಾರಣ. ರೈಲಿನ ಸ್ವಾಗತಕ್ಕೆ ನಿಲ್ದಾಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆಯೇ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕಳೆದ ಹಲವಾರು…
ಅರಸಾಳು ಮಾಲ್ಗುಡಿ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಶಾಸಕ ಆರಗ ಜ್ಞಾನೇಂದ್ರ ಸಂತಸ|araga
ಅರಸಾಳಿನಲ್ಲಿ ರೈಲು ನಿಲುಗಡೆ ಶಾಸಕ ಆರಗ ಜ್ಞಾನೇಂದ್ರ ಸಂತಸ, ಬಹು ವರ್ಷಗಳ ಬೇಡಿಕೆಯಾಗಿದ್ದ ಅರಸಾಳು ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಇಂದಿನಿಂದ ಆರಂಭವಾಗಿದ್ದು ಈ ಹಿನ್ನಲೆಯಲ್ಲಿ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಬಹಳ ವರ್ಷಗಳಿಂದ ಈ ನಿಲುಗಡೆಗೆ ಪತ್ರ ಮುಖೇನ ಒತ್ತಾಯಿಸಿದ್ದನ್ನು ನೆನಪಿಸಿಕೊಂಡಿರುವ ಶಾಸಕರು, ತೀರ್ಥಹಳ್ಳಿ ಮತ್ತು ಹುಂಚ ಹೋಬಳಿಯ ಸಾರ್ವಜನಿಕರಿಗೆ ರೈಲು ಸೇವೆ ಹತ್ತಿರವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಿದ್ದಾರೆ. ಅರಸಾಳು ಮತ್ತು ಕುಂಸಿ…
ಚಂದ್ರಯಾನ -3 ಯಶಸ್ವಿ – ರಿಪ್ಪನ್‌ಪೇಟೆಯಲ್ಲಿ ಸಂಭ್ರಮಾಚರಣೆ
ರಿಪ್ಪನ್‌ಪೇಟೆ : ವಿಜ್ಞಾನಿಗಳ ಅವಿರತ ಶ್ರಮದಿಂದ ಚಂದ್ರಯಾನ 3 ವಿಕ್ರಂ ಯಶಸ್ವಿ ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಪಟ್ಟಣದ ವಿನಾಯಕ ವೃತ್ತದಲ್ಲಿ ವಿಜಯೋತ್ಸವ, ಸಂಭ್ರಮಾಚರಣೆ ನಡೆಯಿತು. ಪಟ್ಟಣದ ವಿನಾಯಕ ವೃತ್ತದಲ್ಲಿ ಸಾರ್ವಜನಿಕರು ರಾಷ್ಟ್ರ ಧ್ವಜ ಬೀಸುತ್ತಾ ,ಘೋಷಣೆ ಕೂಗಿ ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಿಸಿದರು. ಪುಟ್ಟ ಮಗುವಿನಂಥ ರೋವರ್‌ನ್ನು ಒಡಲಲ್ಲಿ ಹೊತ್ತ ವಿಕ್ರಮ್ ಲ್ಯಾಂಡರ್ ತುಂಬು ಗರ್ಭಿಣಿಗೂ ಆಯಾಸವಾಗದಷ್ಟು ಮೃದುವಾಗಿ ಚಂದ್ರನ ಮೇಲೆ ಮೆಲ್ಲಗೆ ಹೆಜ್ಜೆ ಇಡುತ್ತಿದ್ದಂತೆಯೇ ಇತ್ತ ಇಡೀ ಭಾರತವೇ ಎದ್ದು ನಿಂತು ಕುಣಿದಾಡಿತು. ಚಂದ್ರಯಾನ 3 ರ…
ಚಂದ್ರಯಾನ -3 ಯಶಸ್ವಿಗಾಗಿ ದೇವಾಲಯ ,ದರ್ಗಾಗಳಲ್ಲಿ ವಿಶೇಷ ಪೂಜೆ,ಪ್ರಾರ್ಥನೆ
ಇಡೀ ಪ್ರಪಂಚದ ಗಮನ ಇದೀಗ ಭಾರತದ ಮೇಲಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಯಶಸ್ಸಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಹರಿದು ಬರುತ್ತಿವೆ. ಇಂದು ಸಂಜೆ 6:04ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿಳಿಯಲಿದೆ. ಈ ಸಂತೋಷದ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಪ್ರಪಂಚವೇ ಕಾತುರದಿಂದ ಕಾಯುತ್ತಿದೆ. ವಿಕ್ರಮ್ ಚಂದ್ರನ ಮೇಲೆ ಸರಿಯಾಗಿ ಲ್ಯಾಂಡ್ ಆಗಲಿ ಎಂದು ಶಿವಮೊಗ್ಗ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಸಿಗಂದೂರು ದೇವಾಲಯದಲ್ಲಿ ಪೂಜೆ: ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ…