SAGARA | ಜೋಗ್ ಫಾಲ್ಸ್ ನಲ್ಲಿ ಎರಡು ಮಂಗಗಳ ಮೃತದೇಹ ಪತ್ತೆ – ಹೆಚ್ಚಾಯು ಮಂಗನ ಖಾಯಿಲೆ ಆತಂಕ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್‌ಫಾಲ್ಸ್‌ನ ವರ್ಕ್‌ಮನ್ ಬ್ಲಾಕ್ ಹಾಗೂ ರೆಡ್ಡಿ ಬ್ಲಾಕ್ ಪ್ರದೇಶದಲ್ಲಿ ಎರಡು ಮಂಗಗಳ ಮೃತದೇಹಗಳು ಭಾನುವಾರ ಪತ್ತೆಯಾಗಿದೆ.
ಸಾರ್ವಜನಿಕರ ಮಾಹಿತಿ ಅನ್ವಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿ ಮತ್ತು ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೈದ್ಯಾಧಿಕಾರಿಗಳು ಮಂಗಗಳ ಮೃತ ದೇಹದ ಪರೀಕ್ಷೆ ನಡೆಸಿದ್ದಾರೆ. ಫಲಿತಾಂಶದ ನಂತರ ಮಂಗಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಅಗತ್ಯವಿಲ್ಲದೆ ಯಾರು ಸಹ ಕಾಡಿಗೆ ತೆರಳಬಾರದು. ಅನಿವಾರ್ಯ ಸಂದರ್ಭದಲ್ಲಿ ಇಲಾಖೆಯಿಂದ ವಿತರಿಸುವ ಡಿಎಂಪಿ ತೈಲವನ್ನು ಹಚ್ಚಿಕೊಂಡು ಹೋಗಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.