ಶಿವಮೊಗ್ಗದಲ್ಲಿ ಪಿಡಿಒ ಮನೆಗೆ ಕನ್ನ: 943 ಗ್ರಾಂ ಚಿನ್ನಾಭರಣ ಸೇರಿ 71 ಲಕ್ಷ ರೂ. ಮೌಲ್ಯದ ವಸ್ತು ಕಳವು

ಶಿವಮೊಗ್ಗದಲ್ಲಿ ಪಿಡಿಒ ಮನೆಗೆ ಕನ್ನ: 943 ಗ್ರಾಂ ಚಿನ್ನಾಭರಣ ಸೇರಿ 71 ಲಕ್ಷ ರೂ. ಮೌಲ್ಯದ ವಸ್ತು ಕಳವು

Shivamogga burglary: 943 grams of gold jewellery, silver items, ₹7.86 lakh cash and other valuables worth around ₹71.42 lakh stolen from a PDO family’s rented house in Vidyanagar.

ಶಿವಮೊಗ್ಗ: ನಗರದ ವಿದ್ಯಾನಗರ 4ನೇ ಅಡ್ಡರಸ್ತೆಯಲ್ಲಿರುವ ಪಿಡಿಒ ಕುಟುಂಬ ವಾಸವಿದ್ದ ಬಾಡಿಗೆ ಮನೆಯಲ್ಲಿ ಭರ್ಜರಿ ಕಳ್ಳತನ ನಡೆದಿದ್ದು, 943 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, 7.86 ಲಕ್ಷ ರೂ. ನಗದು, 15 ಕೈಗಡಿಯಾರಗಳು ಹಾಗೂ ದೇವರ ಮೂರ್ತಿ ಸೇರಿದಂತೆ ಒಟ್ಟು ಸುಮಾರು 71.42 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿವೆ.

ವಿದ್ಯಾನಗರ ನಿವಾಸಿ ಹಾಗೂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಟರಾಜ್ ಕೆ.ಎನ್. (55) ಅವರು ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆಲಸಕ್ಕೆ ತೆರಳಿದ್ದ ವೇಳೆ ಕಳ್ಳತನ

ನಟರಾಜ್ ಕೆ.ಎನ್. ಹಾಗೂ ಅವರ ಪತ್ನಿ ಇಬ್ಬರೂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕುಟುಂಬ ಸಮೇತ ವಿದ್ಯಾನಗರದ 4ನೇ ಅಡ್ಡರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.ಆಗಸ್ಟ್ 28ರಂದು ಬೆಳಗ್ಗೆ ಸುಮಾರು 11.15ಕ್ಕೆ ದಂಪತಿ ಮನೆಗೆ ಬೀಗ ಹಾಕಿಕೊಂಡು ಕರ್ತವ್ಯಕ್ಕೆ ತೆರಳಿದ್ದರು. ಸಂಜೆ ವೇಳೆಗೆ ಅವರ ಪುತ್ರಿ ವೈಷವಿ ದೂರವಾಣಿ ಮೂಲಕ ಕರೆ ಮಾಡಿ ಮನೆಯಲ್ಲಿ ಕಳ್ಳತನವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ತಕ್ಷಣ ಮನೆಗೆ ಹಿಂದಿರುಗಿದ ದಂಪತಿ ಪರಿಶೀಲಿಸಿದಾಗ, ಮನೆಯ ಮುಖ್ಯ ಬಾಗಿಲಿನ ಬೀಗವನ್ನು ಮುರಿದು ಕಳ್ಳರು ಒಳನುಗ್ಗಿರುವುದು ಕಂಡುಬಂದಿದೆ. ಬಳಿಕ ಬೆಡ್‌ರೂಮ್‌ನಲ್ಲಿದ್ದ ಗಾಡ್ರೆಜ್ ಬೀರುವಿನ ಬೀಗ ಒಡೆದು ಅದರಲ್ಲಿದ್ದ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

943 ಗ್ರಾಂ ಚಿನ್ನಾಭರಣ ಕಳವು

ದೂರಿನಲ್ಲಿ ಒಟ್ಟು 943 ಗ್ರಾಂ ತೂಕದ ವಿವಿಧ ಬಗೆಯ ಚಿನ್ನಾಭರಣಗಳು ಕಳುವಾಗಿರುವುದಾಗಿ ತಿಳಿಸಲಾಗಿದೆ. ಚಿನ್ನದ ಸರಗಳು, ನೆಕ್ಲೆಸ್‌ಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು, ಹ್ಯಾಂಗಿಂಗ್ಸ್‌, ಪೆಂಡೆಂಟ್ ಹೊಂದಿರುವ ಸರ, ಲಕ್ಷ್ಮಿ ತಾಳಿ, ಚಿನ್ನದ ಗೊಂಬೆಗಳು ಹಾಗೂ ಚಿನ್ನದ ಗಟ್ಟಿ ಸೇರಿದಂತೆ ಹಲವು ವಸ್ತುಗಳು ಕಳುವಾಗಿವೆ.

ಇದರ ಜೊತೆಗೆ ಸುಮಾರು 500 ಗ್ರಾಂ ಬೆಳ್ಳಿ ವಸ್ತುಗಳು, 7.86 ಲಕ್ಷ ರೂ. ನಗದು, 15 ಕೈಗಡಿಯಾರಗಳು ಹಾಗೂ ದೇವರ ಮೂರ್ತಿ ಸೇರಿದಂತೆ ಇತರೆ ವಸ್ತುಗಳೂ ಕಳ್ಳತನವಾಗಿವೆ.

ಘಟನೆಗೆ ಸಂಬಂಧಿಸಿದಂತೆ ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಸ್ತೂರಿರಂಗನ್ ವರದಿ ಸಂವಾದ: ಮಲೆನಾಡಿನ ರೈತರಿಗೆ ಸಿಎಂ ಡಿ.ಕೆ. ಶಿವಕುಮಾರ್ ನೀಡಿದ ಭರವಸೆಗಳೇನು?

ಮಲೆನಾಡಿನ ರೈತರ ಜಮೀನಿಗೆ ಕೈಹಾಕಬೇಡಿ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ಕಸ್ತೂರಿರಂಗನ್ ವರದಿ ಸಂವಾದ: ಮಲೆನಾಡಿನ ರೈತರಿಗೆ ಸಿಎಂ ಡಿ.ಕೆ.…

4 hours ago

ವಿಶ್ವಕರ್ಮ ಜಯಂತಿ ಕೌಶಲ, ಶ್ರಮ ಹಾಗೂ ಸೃಜನಶೀಲತೆಯ ಪ್ರತೀಕ: ಗಣೇಶ್ ಆಚಾರ್ಯ

ವಿಶ್ವಕರ್ಮ ಜಯಂತಿ ಕೌಶಲ, ಶ್ರಮ ಹಾಗೂ ಸೃಜನಶೀಲತೆಯ ಪ್ರತೀಕ: ಗಣೇಶ್ ಆಚಾರ್ಯ Vishwakarma Jayanti was celebrated by the…

5 hours ago

ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ

ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ A fire caused by a…

1 day ago

ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ

ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ Arasalu's Kavanasree H.M. earns two more Guinness…

1 day ago

ಸರ್ಕಾರಿ ಜಾಗದಲ್ಲಿ ಖಾಸಗಿ ಬೇಲಿ; ಕಂದಾಯ ಅಧಿಕಾರಿಗಳಿಂದ ತೆರವು – ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ

ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಜಾಗದ ಬೇಲಿ ತೆರವು; ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ Revenue officials removed a fence…

1 day ago

ರಿಪ್ಪನ್‌ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ರಿಪ್ಪನ್‌ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ Special pooja was offered at Varasiddhi…

2 days ago