w
Headlines
Home » ತೀರ್ಥಹಳ್ಳಿಗೆ ಯುವ ಐಪಿಎಸ್ ಅಧಿಕಾರಿ: ನೂತನ ಡಿವೈಎಸ್ಪಿಯಾಗಿ ಭಾನುಪ್ರಕಾಶ್ ಜೆ. ನೇಮಕ

ತೀರ್ಥಹಳ್ಳಿಗೆ ಯುವ ಐಪಿಎಸ್ ಅಧಿಕಾರಿ: ನೂತನ ಡಿವೈಎಸ್ಪಿಯಾಗಿ ಭಾನುಪ್ರಕಾಶ್ ಜೆ. ನೇಮಕ

Screenshot 2026 08 30 21 50 49 146 com.picsart.studio edit

ತೀರ್ಥಹಳ್ಳಿಗೆ ಯುವ ಐಪಿಎಸ್ ಅಧಿಕಾರಿ: ನೂತನ ಡಿವೈಎಸ್ಪಿಯಾಗಿ ಭಾನುಪ್ರಕಾಶ್ ಜೆ. ನೇಮಕ

Young IPS officer Bhanu Prakash J. has been appointed as the new DySP of Thirthahalli, taking charge with immediate effect following the retirement of Aravind Kalagujji.

ತೀರ್ಥಹಳ್ಳಿ: ತೀರ್ಥಹಳ್ಳಿ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಐಪಿಎಸ್ ಅಧಿಕಾರಿ ಭಾನುಪ್ರಕಾಶ್ ಜೆ. ಅವರನ್ನು ಸರ್ಕಾರ ನೇಮಕ ಮಾಡಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತೀರ್ಥಹಳ್ಳಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕೆಲಕಾಲದಿಂದ ಖಾಲಿ ಇದ್ದ ಡಿವೈಎಸ್ಪಿ ಹುದ್ದೆಗೆ ಹೊಸ ಅಧಿಕಾರಿಯ ನೇಮಕವಾದಂತಾಗಿದೆ.

ಭಾನುಪ್ರಕಾಶ್ ಜೆ. ಅವರು ಕರ್ನಾಟಕ ಕೇಡರ್‌ನ 2023-24ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಮೂಲತಃ ಬೆಂಗಳೂರಿನವರು. ತೀರ್ಥಹಳ್ಳಿ ಉಪವಿಭಾಗಕ್ಕೆ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ASP) ನಿಯೋಜಿತರಾಗಿರುವ ಅವರು, ಇದೀಗ ಡಿವೈಎಸ್ಪಿ ಹುದ್ದೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದ್ದಾರೆ.

ಈ ಹಿಂದೆ ತೀರ್ಥಹಳ್ಳಿ ಡಿವೈಎಸ್ಪಿಯಾಗಿದ್ದ ಅರವಿಂದ ಕಲಗುಜ್ಜಿ ಅವರು ನಿವೃತ್ತರಾದ ಬಳಿಕ ಹುದ್ದೆ ಖಾಲಿಯಾಗಿತ್ತು. ಇದೀಗ ಯುವ ಐಪಿಎಸ್ ಅಧಿಕಾರಿಯ ನೇಮಕದ ಮೂಲಕ ತೀರ್ಥಹಳ್ಳಿ ಪೊಲೀಸ್ ಉಪವಿಭಾಗಕ್ಕೆ ಹೊಸ ನಾಯಕತ್ವ ದೊರೆತಿದೆ.

ಭಾನುಪ್ರಕಾಶ್ ಜೆ. ಅವರ ನೇಮಕದಿಂದ ತೀರ್ಥಹಳ್ಳಿ ಉಪವಿಭಾಗದ ಪೊಲೀಸ್ ಆಡಳಿತಕ್ಕೆ ಮತ್ತಷ್ಟು ಚುರುಕು ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.