w
Headlines
Home » ನೆಲ್ಲಿಬೀಡು ಅಪಘಾತದಲ್ಲಿ ಯುವತಿ ಸಾವು: ಕುಟುಂಬಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಂತ್ವಾನ

ನೆಲ್ಲಿಬೀಡು ಅಪಘಾತದಲ್ಲಿ ಯುವತಿ ಸಾವು: ಕುಟುಂಬಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಂತ್ವಾನ

Screenshot 2026 08 30 16 52 46 604 com.picsart.studio edit

ನೆಲ್ಲಿಬೀಡು ಅಪಘಾತದಲ್ಲಿ ಯುವತಿ ಸಾವು: ಕುಟುಂಬಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಂತ್ವಾನ

MLA Gopalakrishna Beluru visited the families of road accident victim Archana Jain and offered condolences and financial assistance.

ಸಾಗರ: ತಾಲೂಕಿನ ನೆಲ್ಲಿಬೀಡು ಸಮೀಪ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಳೂರು ಗ್ರಾಮದ ಯುವತಿ ಅರ್ಚನಾ ಜೈನ್ ಅವರ ಕುಟುಂಬವನ್ನು ಶಾಸಕ ಬಿ. ಗೋಪಾಲಕೃಷ್ಣ ಬೆಳೂರು ಭೇಟಿ ಮಾಡಿ ಸಾಂತ್ವನ ಹೇಳಿದರು.

ಮರಳು ಸಾಗಿಸುತ್ತಿದ್ದ ಟಿಪ್ಪರ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅರ್ಚನಾ ಜೈನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದಲ್ಲಿ ಅವರ ತಂದೆ ನೀಲಕುಮಾರ್ ಜೈನ್ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರ್ಚನಾ ಜೈನ್ ಅವರು ಉಡುಪಿಯಲ್ಲಿ ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸಕ್ಕೆ ತೆರಳುವ ಮುನ್ನ ತಂದೆ ನೀಲಕುಮಾರ್ ಜೈನ್ ಅವರು ಮಗಳನ್ನು ಬಸ್‌ಗೆ ಕಳುಹಿಸಲು ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ದುಃಖದಲ್ಲಿರುವ ಕುಟುಂಬದೊಂದಿಗೆ ನಿಂತ ಶಾಸಕ ಗೋಪಾಲಕೃಷ್ಣ ಬೆಳೂರು ಅವರು ಕುಟುಂಬಸ್ಥರಿಗೆ ಧೈರ್ಯ ತುಂಬಿ, ಆರ್ಥಿಕ ನೆರವು ನೀಡಿದರು. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದಿಂದ ದೊರೆಯಬಹುದಾದ ನೆರವು ಹಾಗೂ ಅಗತ್ಯ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.