ಜಿಲ್ಲಾ ಸುದ್ದಿ:
ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ (04-05-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…
ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ (04-05-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ… ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 04/05/24 ರಂದು ಬೆಳಿಗ್ಗೆ 9-00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ರಿಪ್ಪನ್‌ಪೇಟೆ ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿಯ ನಿಮಿತ ನಾಳೆ ಬೆಳಿಗ್ಗೆ 9-00 ರಿಂದ ಸಂಜೆ 6-00 ಗಂಟೆಯವರೆಗೆ ವಿದ್ಯುತ್ ಸರಬರಾಜು…
ಅದ್ದೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ ಸಂಭ್ರಮ | chariot festival
ಅಪಾರ ಭಕ್ತ ಜನಸ್ತೋಮದಲ್ಲಿ ರಿಪ್ಪನ್‌ಪೇಟೆಯ “ಶ್ರೀಸಿದ್ದಿವಿನಾಯಕಸ್ವಾಮಿಯ ಶ್ರೀಮನ್ಮಹಾರಥೋತ್ಸವ ಸಂಭ್ರಮ’’ ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. 12.30 ಕ್ಕೆ ಶ್ರೀಸಿದ್ದಿವಿನಾಯಕ ರಥವೇರುತ್ತಿದ್ದಂತೆ ಸಿದ್ದಿವಿನಾಯಕ ಸ್ವಾಮಿಗೆ, ಜಗನ್ಮಾತೆ ಆನ್ನಪೂರ್ಣೇಶ್ವರಿ ದೇವಿಗೆ, ಜಯಘೋಷಣೆ ಮುಗಿಲು ಮುಟ್ಟಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ ಈ ವರ್ಷದಲ್ಲಿ ಮಳೆ-ಬೆಳೆ ಸಂವೃದ್ದಿಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ ನೆಮ್ಮದಿಯನ್ನು ಕರುಣಿಸುವಂತಾಗಲೆಂದು ಸರ್ವರ ಪರವಾಗಿ…
Ripponpete | ಕಾರ್ಮಿಕ ದಿನಾಚರಣೆ ಅಂಗವಾಗಿ ಮತದಾನ ಜಾಗೃತಿ ಜಾಥಾ | ಮಹಿಳಾ ಕಾರ್ಮಿಕರಿಗೆ ಸನ್ಮಾನ
Ripponpete | ಕಾರ್ಮಿಕ ದಿನಾಚರಣೆ ಅಂಗವಾಗಿ ಮತದಾನ ಜಾಗೃತಿ ಜಾಥಾ ರಿಪ್ಪನ್‌ಪೇಟೆ : ಕಾರ್ಮಿಕ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮತದಾನ ಜಾಗೃತಿ ಜಾಥಾ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಿದವು. ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ಕಟ್ಟಡ ಕಾರ್ಮಿಕರ ಸಂಘ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ಹೊಸನಗರ ಗ್ರಾಮಾಂತರ ಇವರ ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮತದಾನ…
ಸ್ವಂತ ತಂದೆಗೆ ಆಶ್ರಯ ಕೊಡಲಾಗದ ಕುಮಾರ ಬಂಗಾರಪ್ಪರಿಂದ ನೀತಿ ಪಾಠ ಸಲ್ಲದು – ಶಾಸಕ ಗೋಪಾಲ ಕೃಷ್ಣ ಬೇಳೂರು ವಾಗ್ದಾಳಿ |Election
ಸ್ವಂತ ತಂದೆಗೆ ಆಶ್ರಯ ಕೊಡಲಾಗದ ಕುಮಾರ ಬಂಗಾರಪ್ಪರಿಂದ ನೀತಿ ಪಾಠ ಸಲ್ಲದು – ಶಾಸಕ ಗೋಪಾಲ ಕೃಷ್ಣ ಬೇಳೂರು ವಾಗ್ದಾಳಿ ಶಿವಮೊಗ್ಗ: ‘ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಆಶ್ರಯ ಕೊಡಲಾಗದ ಕುಮಾರ ಬಂಗಾರಪ್ಪ ಅವರು, ಸ್ವಂತ ತಂದೆಯನ್ನು ಮನೆಯಿಂದ ಹೊರ ದೂಡಿದರು. ಇಂತವರಿಂದ ನೀತಿ ಪಾಠದ ಅವಶ್ಯಕತೆ ನನಗಿಲ್ಲ’ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ಬೇಳೂರು ವಾಗ್ದಾಳಿ ನಡೆಸಿದರು. ಸಾಗರ ತಾಲ್ಲೂಕಿನ ಆವಿನಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಗೀತಾ ಶಿವರಾಜಕುಮಾರ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು…
Ripponpete | ಜಾನಪದ ಹಾಡಿನ ಮೂಲಕ ಕಲಾವಿದರಿಂದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪಪರ ಮತಯಾಚನೆ
ಜಾನಪದ ಹಾಡಿನ ಮೂಲಕ ಕಲಾವಿದರಿಂದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪಪರ ಮತಯಾಚನೆ ರಿಪ್ಪನ್‌ಪೇಟೆ;-ಮೇ.7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರ ಪರ ಜಾನಪದ ಹಾಡಿನ ಮೂಲಕ ಕಲಾವಿದರ ತಂಡ ಮತಯಾಚನೆಯನ್ನು ನಡೆಸುತ್ತಾ ಮತದಾರರ ಮನವೊಲಿಸುತ್ತಿರುವುದು ವಿಶೇಷವಾಗಿದೆ. ಇಲ್ಲಿನ ವಿನಾಯಕ ವೃತ್ತದಲ್ಲಿ ಶಿವಮೊಗ್ಗದ ಕಲಾವಿದರ ತಂಡ ಇಂದು ಬಿಸಿಲಿನಲ್ಲಿಯೇ ಪಿಕ್‌ಆಪ್ ವಾಹನದ ಮೇಲೆ ನಿಂತು ಪಕ್ಷೇತರ ಆಭ್ಯರ್ಥಿ ಕೆ.ಎಸ್.ಈಶ್ವರಪ್ಪನವರ ಪರವಾದ ಜಾನಪದ ಹಾಡು ಹಾಡುವುದರೊಂದಿಗೆ ಕ್ರಮಸಂಖ್ಯೆ 8 ಕ್ಕೆ ಮತಹಾಕುವಂತೆ ಹಾಡು ಹಾಡಿ ಮತದಾರರನ್ನು ಸೆಳೆಯುತ್ತಿದ್ದು…
Ripponpete | ರಜತ ಉತ್ಸವದ ಗಣಪತಿ ಮೂರ್ತಿ ಸಿದ್ದಿವಿನಾಯಕ ದೇವಸ್ಥಾನಕ್ಕೆ ಸಮರ್ಪಣೆ
Ripponpete | ರಜತ ಉತ್ಸವದ ಗಣಪತಿ ಮೂರ್ತಿಯನ್ನು ದೇವಸ್ಥಾನಕ್ಕೆ ಸಮರ್ಪಣೆ ರಿಪ್ಪನ್‌ಪೇಟೆ : ನಾಳೆ ನಡೆಯುವ ಶ್ರೀಸಿದ್ದಿವಿನಾಯಕ ಸ್ವಾಮಿ ಶ್ರೀಮನ್ಮಹಾರಥೋತ್ಸವಕ್ಕೆ ಇಲ್ಲಿನ ಗಣೇಶಪ್ರಸಾದ್ ಹೋಟಲ್‌ನ ದಿ.ರೇವತಿ ಹೆಬ್ಬಾರ್ ಮತ್ತು ಸತ್ಯನಾರಾಯಣ ಹೆಬ್ಬಾರ್ ಸ್ಮರಣಾರ್ಥ ದೀಪಾ ಎಸ್.ಹೆಬ್ಬಾರ್, ಹೆಚ್.ಎಸ್.ಸುದೀಂದ್ರಹೆಬ್ಬಾರ್ ಮತ್ತು ಸಹೋದರಿಯರು ರಜತ ಉತ್ಸವದ ಗಣಪತಿ ಮೂರ್ತಿಯನ್ನು’ ದೇವಸ್ಥಾನಕ್ಕೆ ಇಂದು ಮೆರವಣಿಗೆಯ ಮೂಲಕ ತರುವುದರೊಂದಿಗೆ ಸಮರ್ಪಿಸಿದರು. ಚಂಡೆ ವಾದ್ಯಮೇಳದೊಂದಿಗೆ ಶಿವಮೊಗ್ಗ ರಸ್ತೆಯಲ್ಲಿರುವ ಮನೆಯಿಂದ ರಜತ ಉತ್ಸವ ಮೂರ್ತಿಯನ್ನು ಹೆಚ್.ಎಸ್ ಸುದೀಂದ್ರ ಹೆಬ್ಬಾರ್ ಹೊತ್ತು ಮೆರವಣಿಗೆ ಮೂಲಕ ಸಿದ್ದಿವಿನಾಯಕ ದೇವಸ್ಥಾನಕ್ಕೆ…
Ripponpete | ರಾಜಕೀಯದ ಪರಿಜ್ಞಾನವೇ ಇಲ್ಲದವರು ಸಂಸತ್‌ಗೆ ಹೋದರೆ ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹಾರ ಹೇಗೆ ಸಾಧ್ಯ – ಹರತಾಳು ಹಾಲಪ್ಪ
ರಾಜಕೀಯದ ಪರಿಜ್ಞಾನವೇ ಇಲ್ಲದವರು ಸಂಸತ್‌ಗೆ ಹೋದರೆ ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹಾರ ಹೇಗೆ ಸಾಧ್ಯ ರಿಪ್ಪನ್‌ಪೇಟೆ;-ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಭೌಗೋಲಿಕ ಹಿನ್ನಲೆ ಅರಿವೇ ಇಲ್ಲದ.ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಸರೇ ಇಲ್ಲದ ಆಂತವಳಿಗೆ ಮತದಾರರ ಮತಹಾಕಬೇಕಾ.? ಬಗರ್ ಹುಕುಂ ಆರಣ್ಯ ಹಕ್ಕು ಅಂದರೆ ಏನು ಎಂಬುದೇ ಗೊತ್ತಿಲ್ಲದವರು ಸಂಸತ್ ಪ್ರವೇಶ ಮಾಡಿದರೆ ಪ್ರಯೋಜನವಿಲ್ಲ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿರುವಂತಹ ಬಿ.ವೈ.ರಾಘವೇಂದ್ರರನ್ನು ಬೆಂಬಲಿಸುವಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಮತದಾರರಲ್ಲಿ ಮನವಿ ಮಾಡಿದರು. ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ…
ಮೂಲಭೂತ ಸೌಕರ್ಯಕ್ಕಾಗಿ ಈಚಲುಕೊಪ್ಪ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ | Election Boycott
ಮೂಲಭೂತ ಸೌಕರ್ಯಕ್ಕಾಗಿ ಈಚಲುಕೊಪ್ಪ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ | Election Boycott ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಈಚಲುಕೊಪ್ಪ ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಕೇಳಿ ಬಂದಿದೆ. ಇನ್ನೇನು ಲೋಕಸಭಾ ಚುನಾವಣೆಗೆ 7 ದಿನ ಬಾಕಿ ಇರುವಾಗಲೇ ನಮ್ಮೂರಿಗೆ ಚುನಾವಣಾ ಪ್ರಚಾರಕ್ಕೆ ಯಾರೂ ಬರಬಾರದೆಂದು ಗ್ರಾಮಸ್ಥರು ನಿರ್ಬಂಧ ವಿಧಿಸಿ ಪ್ಲೆಕ್ಸ್ ಅಳವಡಿಸಿದ್ದಾರೆ. ಶರಾವತಿ ಮುಳುಗಡೆಯಿಂದಾಗಿ ಆಸ್ತಿಪಾಸ್ತಿ ಮನೆಮಠ ಕಳೆದುಕೊಂಡು ನೆಲೆಯರಸಿ ಈಚಲುಕೊಪ್ಪ, ಬಗ್ಗಳ, ಹಲುಸಾಲೆ ಮಳವಳ್ಳಿ, (ಕಾಪೇರ ಮನೆ )ಗಳಿಗೆ ಬಂದ 40ಕ್ಕೂ ಹೆಚ್ಚು…
ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಗೂ ಪೆನ್ ಡ್ರೈವ್ ಭೀತಿ..!! – ಕೋರ್ಟ್ ನಿಂದ ಸ್ಟೇ ತಂದ ಕಾಂತೇಶ್ | KSE
ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಗೂ ಪೆನ್ ಡ್ರೈವ್ ಭೀತಿ – ಕೋರ್ಟ್ ನಿಂದ ಸ್ಟೇ ತಂದ ಕಾಂತೇಶ್ | KSE ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ಗೂ (kanthesh )ಸಹ ಅಶ್ಲೀಲ ಸಿಡಿ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕಾಂತೇಶ್, ಮಾಧ್ಯಮಗಳಿಗೆ ನಿರ್ಬಂಧ ಕೋರಿ…
Ripponpete | ಕಾಂಗ್ರೆಸ್ ರ್‍ಯಾಲಿ ವೇಳೆಯಲ್ಲಿ ಘೋಷಣೆ ಪ್ರಕರಣ – ಡಿವೈಎಸ್ಪಿ ನೇತ್ರತ್ವದಲ್ಲಿ ಸಂಧಾನ ಸಭೆ ಯಶಸ್ವಿ
Ripponpete | ಕಾಂಗ್ರೆಸ್ ರ್‍ಯಾಲಿ ವೇಳೆಯಲ್ಲಿ ಘೋಷಣೆ ಪ್ರಕರಣ – ಡಿವೈಎಸ್ಪಿ ನೇತ್ರತ್ವದಲ್ಲಿ ಸಂಧಾನ ಸಭೆ ಯಶಸ್ವಿ ರಿಪ್ಪನ್‌ಪೇಟೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರೋಡ್ ಷೋ ವೇಳೆಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿವೈಎಸ್ಪಿ ನೇತ್ರತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಸೋಮವಾರ ರಾತ್ರಿ ಕಾಂಗ್ರೆಸ್ ಪಕ್ಷದ ರೋಡ್ ಷೋ ವೇಳೆಯಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು ಈ…