Headlines

ಮುಂದುವರಿದ ಮಳೆ – ತೀರ್ಥಹಳ್ಳಿ ತಾಲೂಕಿನಾದ್ಯಂತ ನಾಳೆ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ | Rain

ಮುಂದುವರಿದ ಮಳೆ – ತೀರ್ಥಹಳ್ಳಿ ತಾಲೂಕಿನಾದ್ಯಂತ ನಾಳೆ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ | Rain

ತೀರ್ಥಹಳ್ಳಿ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಅಂಗನವಾಡಿಗಳು ಮತ್ತು ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಜು.18ರ ಗುರುವಾರ ರಜೆಯನ್ನು ಘೋಷಿಸಿ ತಹಶೀಲ್ದಾರ್ ಬಿ ಜಕ್ಕಣ್ಣ ಗೌಡರ್  ಆದೇಶ ಹೊರಡಿಸಿದ್ದಾರೆ.


ತಾಲೂಕಿನಲ್ಲಿ ಭಾರಿ ಮಳೆಯಿಂದ ಅನೇಕ ಕಡೆ ಅವಘಡಗಳು ಸಂಭವಿಸುತಿದೆ ಈ ಹಿನ್ನಲೆಯಲ್ಲಿ ಜುಲೈ 16 ರ ಮಂಗಳವಾರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಬುಧವಾರ ಮೊಹರಂ ಅಂಗವಾಗಿ ಸರ್ಕಾರಿ ರಜೆಯಿತ್ತು.

ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ನಾಳೆ ರಜೆಯನ್ನು ಘೋಷಿಸಿ ತಹಶೀಲ್ದಾರ್ ಬಿ ಜಕ್ಕಣ್ಣ ಗೌಡರ್ ಆದೇಶ ಹೊರಡಿಸಿದ್ದಾರೆ.

About The Author

Leave a Reply

Your email address will not be published. Required fields are marked *