Hosanagara | ಕಲ್ಲುಹಳ್ಳ ಸೇತುವೆ ಪಿಚ್ಚಿಂಗ್ ಕುಸಿತ..!
ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಪಟ್ಟಣ ಹೊರವಲಯದ ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್ ಕುಸಿತವಾಗಿದೆ. ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿ (766c)ಯ ಕಲ್ಲುಹಳ್ಳಕ್ಕೆ ಇತ್ತೀಚೆಗೆ ಹೊಸ ಸೇತುವೆ ನಿರ್ಮಿಸಲಾಗಿದೆ. ಸೇತುವೆಯ ಎರಡು ಬದಿ ಮಣ್ಣು ತುಂಬಿ ಪಿಚ್ಚಿಂಗ್ ಕಾಮಗಾರಿ ನಡೆಸಲಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸುರಿದ ಮಳೆಗೆ ಮಣ್ಣು ಕುಸಿದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.
ಸೇತುವೆ ಬದಿಯ ಇಕ್ಕೆಲಕ್ಕೆ ಮಣ್ಣನ್ನ ತುಂಬಿದ್ದು ಅದು ಇನ್ನೂ ಸೆಟ್ಟಿಂಗ್ ಆಗುವ ಮೊದಲೇ ಜೆಸಿಬಿ, ಹಿಟಾಚಿ ಯಂತ್ರ ಬಳಸಿ ಸಮತಟ್ಟು ಮಾಡಲಾಗಿದೆ. ಅಲ್ಲದೇ ಡ್ರೈ ಮಣ್ಣಿಗೆ ಪಿಚ್ಚಿಂಗ್ ಕಟ್ಟಿರುತ್ತಾರೆ. ಈಗ ನೀರು ಇಳಿದ ಹಾಗೆಲ್ಲಾ, ಮಣ್ಣು ಸೆಟ್ಟಿಂಗ್ ಆಗದ ಕಾರಣ ಕುಸಿದಿದೆ. ಇದಕ್ಕೂ ಹೆಚ್ಚು ಮಳೆಗೂ ಏನು ಸಂಬಂಧವಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.