Ripponpete | ಹೆಚ್ಚುತ್ತಿರುವ ಡೆಂಗ್ಯೂ – ಖಾಸಗಿ ಮೆಡಿಕಲ್ ಶಾಪ್ ಗಳಿಗೆ ವಾರ್ನಿಂಗ್ ಕೊಟ್ಟ ಪಿಎಸ್‌ಐ ಪ್ರವೀಣ್
ರಿಪ್ಪನ್‌ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಮರಣ ಮೃದಂಗ ಬಾರಿಸುತಿದ್ದು ಈಗಾಗಲೇ ಒಬ್ಬರು ಸಾವನ್ನಪ್ಪಿ ನೂರಕ್ಕೂ ಹೆಚ್ಚು ಜನ ಡೆಂಗ್ಯೂ ಜ್ವರದಿಂದ ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಸಾಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಈ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪಟ್ಟಣದ ಎಲ್ಲ ಖಾಸಗಿ ಮೆಡಿಕಲ್ ಶಾಪ್ ಗಳಿಗೆ ತೆರಳಿ ವೈದ್ಯರ ಚೀಟಿಯಿಲ್ಲದೇ ಜ್ವರ ಸಂಬಂಧಿತ ಖಾಯಿಲೆಗಳಿಗೆ ಔಷಧ ನೀಡದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಡೆಂಗ್ಯೂ ಲಕ್ಷಣವಿರುವ ರೋಗಿಗಳು ಪಟ್ಟಣದ ಮೆಡಿಕಲ್ ನಲ್ಲಿ ಜ್ವರದ ಮಾತ್ರೆ ತಿಂದು ಆ ಕ್ಷಣಕ್ಕೆ ಗುಣಮುಖರಾಗಿ ಮಾರನೇ ದಿನ ಮತ್ತೆ ಜ್ವರ ಕಾಣಿಸಿಕೊಂಡು ಮತ್ತೆ ಮೆಡಿಕಲ್ ಗೆ ಮಾತ್ರೆಗೆ ಮೊರೆ ಹೋಗುತ್ತಾರೆ.ಕೊನೆಗೆ ಬಿಳಿರಕ್ತ ಕಣಗಳು ತೀವ್ರವಾಗಿ ಕ್ಷೀಣಿಸಿದ ನಂತರ ಆಸ್ಪತ್ರೆಯ ಕಡೆಗೆ ಮುಖ ಮಾಡುತ್ತಾರೆ ಹಾಗಾಗಿ ಯಾವುದೇ ಕಾರಣಕ್ಕೂ ಜ್ವರಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ವೈದ್ಯರ ಚೀಟಿಯಿಲ್ಲದೇ ಔಷಧ ನೀಡಬೇಡಿ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ವಾರ್ನಿಂಗ್ ನೀಡಿದ್ದಾರೆ.
ಆರೋಗ್ಯ ಇಲಾಖೆಯಿಂದಲೂ ಪಟ್ಟಣ ವ್ಯಾಪ್ತಿಯ ಎಲ್ಲಾ ಖಾಸಗಿ ಕ್ಲಿನಿಕ್ , ಲ್ಯಾಬ್ ಹಾಗೂ ಮೆಡಿಕಲ್ ಶಾಪ್ ಗಳಿಗೆ ನೋಟೀಸ್ ಜಾರಿ ಮಾಡಿದ್ದು ಜ್ವರಕ್ಕೆ ಸಂಬಂಧಿಸಿದ ರೋಗಿಗಳ ಬಗ್ಗೆ ತತ್ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ ಹಾಗೂ ಮಧುಸೂಧನ್ ಇದ್ದರು.