ಕ್ರೈಂ ಸುದ್ದಿ:
ಮನೆಯಲ್ಲಿ ಯಾರು ಇಲ್ಲದ ವೇಳೆ ಬಗಿಲು ಮುರಿದು ಲಕ್ಷಾಂತರ ರೂ ಮೌಲ್ಯದ ನಗ , ನಗದು ಕಳ್ಳತನ
ಮನೆಯಲ್ಲಿ ಯಾರು ಇಲ್ಲದ ವೇಳೆ ಬಗಿಲು ಮುರಿದು ಲಕ್ಷಾಂತರ ರೂ ನಗ , ನಗದು ಕಳ್ಳತನ ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಕಾರಣಕ್ಕಾಗಿ ಊರಿಗೆ ತೆರಳಿದ್ದ ಶಿವಮೊಗ್ಗ ನಗರದ ನಿವಾಸಿಯೊಬ್ಬರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ನಗರದ ಬೊಮ್ಮನ ಕಟ್ಟೆಯಲ್ಲಿ ನಡೆದಿದೆ. ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಮತ್ತು ಬೊಮ್ಮನ ಕಟ್ಟೆ ನಿವಾಸಿಯಾದ ವ್ಯಕ್ತಿಯೊಬ್ಬರು ತಮ್ಮ ಮಗುವಿಗೆ ಆರೋಗ್ಯ ಸರಿಯಿಲ್ಲದ ಕಾರಣ…
ಉರುಳಿಗೆ ಸಿಲುಕಿ ಚಿರತೆ ಸಾವು
ಉರುಳಿಗೆ ಸಿಲುಕಿ ಚಿರತೆ ಸಾವು ಶಿವಮೊಗ್ಗ: ಅರಣ್ಯದ ಅಂಚಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಪ್ರಾಣಿಹಿಡಿಯುವ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಶಿರಾಳಕೊಪ್ಪ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ತಾಳಗುಂದ ರಾಜ್ಯ ಅರಣ್ಯ ಪ್ರದೇಶಕ್ಕೆ ಸೇರುವ ಖಾಸಗಿ ಜಮೀನಿನ ಅಂಚಿನಲ್ಲಿರುವ ಕಾಡಿನ ದಾರಿಯಲ್ಲಿ ಈ ಉರುಳು ಅಳವಡಿಸಲಾಗಿದೆ ಎಂದು ಅರಣ್ಯ ಇಲಾಖೆ ಪ್ರಾಥಮಿಕ ಅಂದಾಜು ವ್ಯಕ್ತಪಡಿಸಿದೆ. ಕೆಲವು ದಿನಗಳಿಂದ ದುರ್ವಾಸನೆ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲನೆ ನಡೆಸಿದಾಗ, ಉರುಳಿಗೆ ಸಿಲುಕಿ ಕೊಳೆತ ಸ್ಥಿತಿಯಲ್ಲಿ ಮಲಗಿದ್ದ ಚಿರತೆಯ ದೇಹ ಕಣ್ಣಿಗೆ ಬಿದ್ದಿದೆ….
ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತ – ಹೆದ್ದಾರಿಪುರದ ಯುವಕ ಸಾವು
ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತ – ಹೆದ್ದಾರಿಪುರದ ಯುವಕ ಸಾವು ರಿಪ್ಪನ್ ಪೇಟೆ : ಇಲ್ಲಿನ ಹರತಾಳು ಸಮೀಪದ ಕೋಡ್ರಿಗೆ ಹೊಳೆಯ ಸಮೀಪದ ತಿರುವೊಂದರಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾದ ಹಿನ್ನೆಲೆಯಲ್ಲಿ ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಹೆದ್ದಾರಿಪುರ ಸಮೀಪದ ಗಿಣಸೆ ಗ್ರಾಮದ ಮಂಜುನಾಥ್ (32) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಮೃತ ಮಂಜುನಾಥ್ ಹಾಗೂ ಆತನ ಸ್ನೇಹಿತನಾದ ಲೋಹಿತ್ (29) ಹರತಾಳು ಗ್ರಾಮದಿಂದ ಹೆದ್ದಾರಿಪುರಕ್ಕೆ ಹಿರೋ ಹೊಂಡಾ ಸ್ಪೆಂಡರ್ ಬೈಕ್ ನಲ್ಲಿ ಬರುತಿದ್ದಾಗ…
RIPPONPETE | ನಿರ್ಲಕ್ಷ್ಯದಿಂದ ಜಾನುವಾರು ಸಾಗಣೆ – ಚಾಲಕನ ಅಜಾಗರೂಕತೆಗೆ ಹಸು ಬಲಿ
ನಿರ್ಲಕ್ಷ್ಯದಿಂದ ಜಾನುವಾರು ಸಾಗಣೆ – ಚಾಲಕನ ಅಜಾಗರೂಕತೆಗೆ ಹಸು ಬಲಿ ರಿಪ್ಪನ್ ಪೇಟೆ : ಜಾನುವಾರು ಸಾಗಣೆ ಪ್ರಕರಣದಲ್ಲಿ ನಿರ್ಲಕ್ಷ್ಯ ಚಾಲನೆಯಿಂದ ಹಸುವೊಂದು ಮೃತಪಟ್ಟ ಘಟನೆ ಅರಸಾಳು ವ್ಯಾಪ್ತಿಯಲ್ಲಿ ಇಂದು ನಡೆದಿದೆ. ರಿಪ್ಪನ್‌ಪೇಟೆ ದಿಕ್ಕಿನಿಂದ ಅರಸಾಳು ಕಡೆಗೆ ಸಂಚರಿಸುತ್ತಿದ್ದ ಟಾಟಾ ಏಸ್ (KA 40 B 1570) ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ವಾಹನ ಚಾಲಕ ಹಾಗೂ ಸಹಚರರನ್ನು ಪೊಲೀಸರು ವಶಕ್ಕೆ ಪಡೆದರು….
RIPPONPETE | ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು
RIPPONPETE | ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು ರಿಪ್ಪನ್ ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೊಸನಗರ ರಸ್ತೆಯ ತಾವರೆಕೆರೆಗೆ ಉರುಳಿಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಹಾಸನದಿಂದ ಕೊಲ್ಲೂರಿಗೆ ತೆರಳುತಿದ್ದ ಮಾರುತಿ ಆಲ್ಟೋ ಕಾರು ಹೊಸನಗರ ರಸ್ತೆಯ ತಾವರೆಕೆರೆ ಬಳಿಯಲ್ಲಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದಿರುವ ಘಟನೆ ನಡೆದಿದೆ.ಕಾರಿನಲ್ಲಿ ಮೂವರು ಪ್ರಯಾಣಿಸುತಿದ್ದು ಅದೃಷ್ಟವಶಾತ್ ಘಟನೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ಏಕಾಏಕಿ ಕೆರೆಗೆ ಉರುಳುತಿದ್ದಂತೆ ಸ್ಥಳೀಯರು ಸಹಾಯಕ್ಕೆ…
ಆನ್‌ಲೈನ್‌ನಲ್ಲಿ 1000 ಬ್ಯಾಗ್ ಸಿಮೆಂಟ್‌ಗೆ ಆರ್ಡರ್ – 4.15 ಲಕ್ಷ ಕಳೆದುಕೊಂಡ ಸಾಗರದ ವ್ಯಕ್ತಿ
ಆನ್‌ಲೈನ್‌ನಲ್ಲಿ 1000 ಬ್ಯಾಗ್ ಸಿಮೆಂಟ್‌ಗೆ ಆರ್ಡರ್ – 4.15 ಲಕ್ಷ ಕಳೆದುಕೊಂಡ ಸಾಗರದ ವ್ಯಕ್ತಿ ಶಿವಮೊಗ್ಹ: ಆನ್‌ಲೈನ್‌ನಲ್ಲಿ ವಸ್ತುಗಳನ್ನು ತಲುಪಿಸುವ ನೆಪದಲ್ಲಿ ಹಣ ಪಡೆದು ಮೋಸ ಮಾಡುವ ಜಾಲಗಳು ಸಕ್ರಿಯವಾಗಿದ್ದು ಇಂತಹ ವಂಚನೆಗೆ ಸಾಗರದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಸಿಮೆಂಟ್ ಖರೀದಿಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಕಾಮಗಾರಿ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ 1000 ಬ್ಯಾಗ್ ಸಿಮೆಂಟ್ ಅಗತ್ಯವಿತ್ತು. ಆದರೆ, ಅವರು ಯಾವಾಗಲೂ ಖರೀದಿ ಮಾಡುತ್ತಿದ್ದ ಸಿಮೆಂಟ್ ಅಂಗಡಿಯಲ್ಲಿ ಸ್ಟಾಕ್ ಲಭ್ಯವಿರದ ಕಾರಣ, ಆನ್‌ಲೈನ್‌ನಲ್ಲಿ ಖರೀದಿಸಲು ಮುಂದಾಗಿದ್ದಾರೆ….
ಅಪಘಾತವಾಗಿ ಬಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದು ಯುವಕರಿಬ್ಬರು ಸಾವು
ಅಪಘಾತವಾಗಿ ಬಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದು ಯುವಕರಿಬ್ಬರು ಸಾವು ಶಿವಮೊಗ್ಗ: ಆಯನೂರು ಮತ್ತು ಹಾರನಹಳ್ಳಿ ಮಾರ್ಗ ಮಧ್ಯೆ ಶುಕ್ರವಾರ ಸಂಜೆ ಟ್ರ್ಯಾಕ್ಟರ್ ಹರಿದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಲ್ಲಾಪುರ ಗ್ರಾಮದ ಆಕೀಬ್ (25) ಮತ್ತು ಚಾಂದ್ ಪೀರ್ (18) ಮೃತಪಟ್ಟವರು. ಘಟನೆಯಲ್ಲಿ ಎರಡು ಬೈಕುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ, ಬೈಕ್ ಚಾಲಕ ಮತ್ತು ಹಿಂಬದಿ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದರು. ಇದೇ ಸಂದರ್ಭದಲ್ಲಿ ಹಿಂದೆ ಬರುತ್ತಿದ್ದ ಟ್ರ್ಯಾಕ್ಟರ್ ಕೆಳಕ್ಕೆ ಬಿದ್ದವರ ಮೇಲೆ ಹರಿದಿದೆ. ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲೇ…
ಮದುವೆಯಾದ ಒಂದೇ ದಿನಕ್ಕೆ ಮದುಮಗ ಹೃದಯಾಘಾತದಿಂದ ಸಾವು
Groom dies of heart attack just one day after wedding ಮದುವೆಯಾದ ಒಂದೇ ದಿನಕ್ಕೆ ಮದುಮಗ ಹೃದಯಾಘಾತದಿಂದ ಸಾವು Groom dies of heart attack just one day after wedding ಶಿವಮೊಗ್ಗ: ಮದುವೆಯಾಗಿ ಒಂದೇ ದಿನದಲ್ಲಿ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಭದ್ರಾವತಿ ತಾಲೂಕಿನ ಹನುಮಂತಾಪುರದಲ್ಲಿ ನಡೆದಿದೆ. ನವವಿವಾಹಿತ ರಮೇಶ್ (28) ಅವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹರಪನಹಳ್ಳಿಯ ಬಂಡ್ರಿಯ ಮಧುವನ್ನು ರಮೇಶ್ ಭಾನುವಾರ ಶಿವಮೊಗ್ಗದ ಬಿ.ಹೆಚ್ ರಸ್ತೆ ಗಂಗಾಪ್ರಿಯಾ ಕಲ್ಯಾಣ…
ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಪತಿಗೆ 10 ವರ್ಷ ಜೈಲು ಶಿಕ್ಷೆ
ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಪತಿಗೆ 10 ವರ್ಷ ಜೈಲು ಶಿಕ್ಷೆ ಶಿವಮೊಗ್ಗ, ಡಿಸೆಂಬರ್ 1: ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವುದಾಗಿ ಶಿವಮೊಗ್ಗ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಥಹಳ್ಳಿ ತಾಲ್ಲೂಕಿನ ಮೂವಳ್ಳಿ ಗ್ರಾಮದ ಆಲ್ಬರ್ಟ್ (45) ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜೊತೆಗೆ ರೂ.15,000 ದಂಡ ಹಾಗೂ ದಂಡ…
ಪೊಕ್ಸೊ ಪ್ರಕರಣದಲ್ಲಿ ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ
ಪೊಕ್ಸೊ ಪ್ರಕರಣದಲ್ಲಿ ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಶಿವಮೊಗ್ಗ ಡಿಸೆಂಬರ್ 1: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಭದ್ರಾವತಿಯ ಯುವಕನೋರ್ವನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ – 1 ಕೋರ್ಟ್ ತೀರ್ಪು ನೀಡಿದೆ. 21 ವರ್ಷದ ಯುವಕನೇ ಜೈಲು ಶಿಕ್ಷೆಗೆ ಗುರಿಯಾದ ಯುವಕನಾಗಿದ್ದಾನೆ ಜೈಲು ಶಿಕ್ಷೆಯ ಜೊತೆಗೆ 61 ಸಾವಿರ ರೂ. ದಂಡ ವಿಧಿಸಲಾಗಿದೆ….