Headlines

ಕೊಲ್ಲೂರಿಗೆ ಆಗಮಿಸಿದ್ದ  ಬೆಂಗಳೂರಿನ ವಿವಾಹಿತ ಮಹಿಳೆ ನಾಪತ್ತೆ

ಕೊಲ್ಲೂರಿಗೆ ಆಗಮಿಸಿದ್ದ  ಬೆಂಗಳೂರಿನ ವಿವಾಹಿತ ಮಹಿಳೆ ನಾಪತ್ತೆ ಕೊಲ್ಲೂರು : ಕೊಲ್ಲೂರಿಗೆ  ಆಗಮಿಸಿದ್ದ ವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ. ಆರ್. ಗೋವಿಂದರಾಜು ಪುತ್ರಿ ವಸುಧಾ ಚಕ್ರವರ್ತಿ (46) ನಾಪತ್ತೆಯಾದ ಮಹಿಳೆ. ಅವರು ಅಗಸ್ಟ್ 28 ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ತೆರಳಿ ಆಂಜನೇಯ ಗರ್ಭಗುಡಿಯಲ್ಲಿ ಕೆಲ ಕಾಲ ಕಳೆದು ವಿವಿದೆಡೆಗೆ ಸಾಗಿ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು. ಪೊಲೀಸರು ಹಾಗೂ ಗ್ರಾಮಸ್ಥರು ಸೌಪರ್ಣಿಕಾ ನದಿ…

Read More

ಶಿಕಾರಿಪುರದ ಹೊಸೂರಿನಲ್ಲಿ ಚಿರತೆಯ ಕಳೆಬರ ಪತ್ತೆ

ಶಿಕಾರಿಪುರದ ಹೊಸೂರಿನಲ್ಲಿ ಚಿರತೆಯ ಕಳೆಬರ ಪತ್ತೆ ಶಿವಮೊಗ್ಗ, ಆಗಸ್ಟ್ : ಶಿಕಾರಿಪುರ ತಾಲ್ಲೂಕಿನ ಹೊಸೂರು ಹೋಬಳಿ, ಗೊಗ್ಗದ ರಾಜ್ಯ ಅರಣ್ಯದ ಸರ್ವೆ ನಂ.197ರಲ್ಲಿ ಚಿರತೆಯೊಂದರ ಮೃತದೇಹ ಪತ್ತೆಯಾಗಿದೆ. ಎಂಪಿಎಂ ನಡುತೋಪಿನಲ್ಲಿ ಪತ್ತೆಯಾದ ಈ ಚಿರತೆಯ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳ ಪ್ರಕಾರ, ಸುಮಾರು ಮೂರು ವರ್ಷದ ಗಂಡು ಚಿರತೆಯ ಮೃತದೇಹ ಇದಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬರುವವರೆಗೆ ಸಾವಿನ ಕಾರಣ ಸ್ಪಷ್ಟವಾಗುವುದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಥಳೀಯರಿಂದ…

Read More

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬಸ್ ಪಲ್ಟಿ – ಹಲವು ಪ್ರಯಾಣಿಕರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬಸ್ ಪಲ್ಟಿ – ಹಲವು ಪ್ರಯಾಣಿಕರಿಗೆ ಗಾಯ ಶಿಕಾರಿಪುರ: ಸದಾಶಿವಪುರ ತಾಂಡದಲ್ಲಿ ಇಂದು ಮುಂಜಾನೆ ಆನವಟ್ಟಿಗೆ ಹೊರಟಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಕೆರೆಯಲ್ಲಿ ಬಿದ್ದ ಅಪಘಾತ ನಡೆದಿದೆ. ಪ್ರಯಾಣಿಸುತ್ತಿದ್ದ ವೇಳೆ ಬಸ್ ಮೊದಲು ಕೆರೆಯ ದಡದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ನೀರಿಗೆ ಜಾರಿದೆ. ಈ ಅವಘಡದಲ್ಲಿ ಸುಮಾರು 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾರಿಗೂ ಹೆಚ್ಚಿನ ಅನಾಹುತವಾಗಿಲ್ಲ. ಗಾಯಾಳುಗಳನ್ನು ತಕ್ಷಣವೇ ಶಿಕಾರಿಪುರದ ಸರ್ಕಾರಿ…

Read More

ಲಂಚದ ಆಸೆಗೆ ಬಿದ್ದ ಜನರಿಗೆ ಆಶ್ರಯ ಕೊಡಬೇಕಾದ ಅಧಿಕಾರಿ – ಲೋಕಾಯುಕ್ತ ಬಲೆಗೆ

ಲಂಚದ ಆಸೆಗೆ ಬಿದ್ದ ಜನರಿಗೆ ಆಶ್ರಯ ಕೊಡಬೇಕಾದ ಅಧಿಕಾರಿ – ಲೋಕಾಯುಕ್ತ ಬಲೆಗೆ ಶಿವಮೊಗ್ಗ: ಖರೀದಿಸಿದ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡಲು ಮಹಾನಗರ ಪಾಲಿಕೆಯ ಆಶ್ರಯ ಮನೆ ವಿಭಾಗದ ಸಮುದಾಯ ಸಂಘಟನಾಧಿಕಾರಿ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರಿ ದಾಳಿ ನಡೆಸಿ ಬಂಧಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಶಶಿಧರ ಎ ಪಿ (೫೭) ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ. ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ವಾಸಿ ಮೊಹಮ್ಮದ್ ಆಸೀಫ್ ಉಲ್ಲಾ ಎನ್ನುವವರು ಬೊಮ್ಮನಕಟ್ಟೆಯಲ್ಲಿ ಅಮ್ಜದ್ ಅಲಿ ಎನ್ನುವವರಿಂದ ಮನೆಯನ್ನು ಖರೀದಿಸಿದ್ದರು. ಈ ಮನೆಯನ್ನು…

Read More

23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವರದಕ್ಷಿಣೆ ಪ್ರಕರಣದ ಆರೋಪಿ ಬಂಧನ

23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವರದಕ್ಷಿಣೆ ಪ್ರಕರಣದ ಆರೋಪಿ ಬಂಧನ ಹೊಸನಗರ : ವರದಕ್ಷಿಣೆ ಕಾಯ್ದೆ ಪ್ರಕರಣದಲ್ಲಿ ಕಳೆದ 23 ವರ್ಷಗಳಿಂದ ನ್ಯಾಯಾಲಯದ ಮೊರೆ ಹೋಗದೆ ತಲೆಮರೆಸಿಕೊಂಡಿದ್ದ ಹೊಸನಗರ ಮೂಲದ ಆರೋಪಿ ಕೊನೆಗೂ ಕಾನೂನು ಬಲೆಗೆ ಸಿಕ್ಕಿದ್ದಾನೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪಿಗೆ ನಿವಾಸಿ ನಾಸೀರ ಖಾನ್ (52) ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿತನ ವಿರುದ್ಧ 2002ರಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದಡಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣ ದಾಖಲಾದ ನಂತರ ನ್ಯಾಯಾಲಯಕ್ಕೆ ಹಾಜರಾಗದೆ, ಕಳೆದ…

Read More

ಬೈಕ್ ನಲ್ಲಿ ಶ್ರೀಗಂಧ ಕಳ್ಳ ಸಾಗಾಟ – ಮಾಲು ಸಮೇತ ಓರ್ವ ವಶಕ್ಕೆ!

ಬೈಕ್ ನಲ್ಲಿ ಶ್ರೀಗಂಧ ಕಳ್ಳ ಸಾಗಾಟ – ಮಾಲು ಸಮೇತ ಓರ್ವ ವಶಕ್ಕೆ! ಸಾಗರ ವಲಯ ಅರಣ್ಯ ಸಂಚಾರಿ ದಳ ಹಾಗೂ ತೀರ್ಥಹಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಜ್ಜವಳ್ಳಿ ಸಮೀಪ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಶ್ರೀಗಂಧ ಕಳ್ಳ ಸಾಗಾಣಿಕೆ ಪತ್ತೆಯಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮೂಕಬಲ್ (56) ಎಂಬಾತನು 14.300 ಗ್ರಾಂ ಶ್ರೀಗಂಧವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ತಡೆದು ಬಂಧಿಸಿದ್ದಾರೆ. ನಂತರ ಪ್ರಕರಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಈ…

Read More

HOSANAGARA | ನಗರದಲ್ಲಿ ಮನೆ ಕಳ್ಳತನ ಪ್ರಕರಣ – 48 ಗಂಟೆಗಳಲ್ಲಿ ಆರೋಪಿಗಳ ಪತ್ತೆ, 4 ಲಕ್ಷ ಮೌಲ್ಯದ ನಗದು ಚಿನ್ನಾಭರಣ ವಶಕ್ಕೆ!

ನಗರದಲ್ಲಿ ಮನೆ ಕಳ್ಳತನ ಪ್ರಕರಣ – 48 ಗಂಟೆಗಳಲ್ಲಿ ಆರೋಪಿಗಳ ಪತ್ತೆ, 4 ಲಕ್ಷ ಮೌಲ್ಯದ ಚಿನ್ನ ವಶ! ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಬಳೆ ಹಾಗೂ ಮಾಸ್ತಿಕಟ್ಟೆ ಪ್ರದೇಶದಲ್ಲಿ ಆಗಸ್ಟ್ 21ರಂದು ಸಂಭವಿಸಿದ ಕಳ್ಳತನ ಪ್ರಕರಣವನ್ನು ಪಿಎಸೈ ಶಿವಾನಂದ ಕೆ ನೇತ್ರತ್ವದ ಪೊಲೀಸರು ಕೇವಲ 48 ಗಂಟೆಗಳಲ್ಲಿ ಪ್ರಕರಣ ಭೇದಿಸಿ, ಇಬ್ಬರು ಅಂತರ ಜಿಲ್ಲೆ ಆರೋಪಿಗಳನ್ನು ದಸ್ತಗಿರಿ ಮಾಡಿದೆ. ನಗರ ಹೋಬಳಿಯ ಕಬಳೆ ಗ್ರಾಮದ ರಿಚರ್ಡ್ ಡಿ ಸೋಜಾ ಹಾಗೂ ಮಾಸ್ತಿಕಟ್ಟೆ ಗ್ರಾಮದ…

Read More

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಶಿಕ್ಷಕಿ – ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಶಿಕ್ಷಕಿ – ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಪತಿಯನ್ನು ಕೊಲೆಗೈದ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ, ಮತ್ತೋರ್ವನಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿರುವ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ. ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಶನಿವಾರ ಈ ತೀರ್ಪು ಪ್ರಕಟಿಸಿದರು. ಅಂತರಗಂಗೆಯ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಲಕ್ಷ್ಮೀ, ಗುಲ್ಬರ್ಗದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ ಇಮ್ತಿಯಾಜ್…

Read More

HOSANAGARA | ಔಷಧಿ ಸಿಂಪಡಿಸುವಾಗ ಅಡಿಕೆ ಮರದಿಂದ ಬಿದ್ದು  ಸಾವು

HOSANAGARA | ಔಷಧಿ ಸಿಂಪಡಿಸುವಾಗ ಅಡಿಕೆ ಮರದಿಂದ ಬಿದ್ದು  ಸಾವು ಹೊಸನಗರ: ತಾಲೂಕಿನ  ಕಿಳಂದೂರು ಗ್ರಾಮದ ನೂಲಿ- ಗೇರಿಯ ಅಡಿಕೆ ತೋಟದಲ್ಲಿ ಔಷಧ ಸಿಂಪಡಣೆ ವೇಳೆ ಕೃಷಿ ಕಾರ್ಮಿಕ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಮನೆ ನಿವಾಸಿ ಸಾದಿಕ್ (42)ಮೃತಪಟ್ಟ ಕಾರ್ಮಿಕ. ಅ. 18ರಂದು ಸಾದಿಕ್ ಮತ್ತು ಮಂಜುನಾಥ ಎಂಬುವರು ನೂಲಿಗೇರಿ ನಿವಾಸಿ ಅಬ್ಬಾಸ್ ಅವರ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುತ್ತಿದ್ದರು. ಆಗ ಮರದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು….

Read More

HOSANAGARA | ಪಟಗುಪ್ಪ ಸೇತುವೆ ಬಳಿ ವ್ಯಕ್ತಿಯ ಶವ ಪತ್ತೆ

HOSANAGARA | ಪಟಗುಪ್ಪ ಸೇತುವೆ ಬಳಿ ವ್ಯಕ್ತಿಯ ಶವ ಪತ್ತೆ ಹೊಸನಗರ ತಾಲ್ಲೂಕಿನ ಗಡಿ ಭಾಗವಾದ ಸಾಗರ ತಾಲೂಕಿಗೆ ಹೊಂದಿಕೊಂಡಿರುವ ಪಟಗುಪ್ಪ ಸೇತುವೆ ಬಳಿ ಹಿನ್ನೀರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ಶಿಕಾರಿಪುರ ಮೂಲದ ಶಿವರಾಜ್ (29) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಶಿಕಾರಿಪುರ ತಾಲ್ಲೂಕಿನ ಬಿಳಕಿ ಗ್ರಾಮದವರು ಎಂದು ತಿಳಿದುಬಂದಿದ್ದು , ಶಿವರಾಜ್‌ಗೆ ಮದ್ಯಪಾನ ವ್ಯಸನವಿದ್ದು, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More