w
Headlines
Home » ಹಾಡಹಗಲೇ ಕಳ್ಳತನಕ್ಕೆ ಯತ್ನ – ಕೋಪಗೊಂಡ ಗ್ರಾಮಸ್ಥರಿಂದ ಕಳ್ಳನಿಗೆ ಹಿಗ್ಗಾಮುಗ್ಗ ಥಳಿತ

ಹಾಡಹಗಲೇ ಕಳ್ಳತನಕ್ಕೆ ಯತ್ನ – ಕೋಪಗೊಂಡ ಗ್ರಾಮಸ್ಥರಿಂದ ಕಳ್ಳನಿಗೆ ಹಿಗ್ಗಾಮುಗ್ಗ ಥಳಿತ

GridArt 20260214

Daylight house break-in attempt in Sagar taluk of Shivamogga district was foiled as villagers caught the accused thief and handed him over to police. Investigation is underway.

ಶಿವಮೊಗ್ಗ: ಹಾಡಹಗಲೇ ಮನೆಗೆ ನುಗ್ಗಿ ಹಣ–ಚಿನ್ನಾಭರಣ ದೋಚಲು ಯತ್ನಿಸಿದ ವ್ಯಕ್ತಿಯೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಗಂಭೀರ ಹಲ್ಲೆಗೆ ಒಳಗಾದ ಘಟನೆ ನಡೆದಿದೆ.

ಸಾಗರ ತಾಲೂಕಿನ ಕಾನಲ್ರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಬ್ಬಳ್ಳಿ ಹುಚ್ಚಪ್ಪ ಎಂಬ ರೈತನ ಮನೆಯ ಕಿಟಕಿ ಹಾಗೂ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾನೆ ಎನ್ನಲಾಗಿದೆ. ಮನೆಯಲ್ಲಿ ಇಡಲಾಗಿದ್ದ ಸುಮಾರು 50 ಸಾವಿರ ರೂ. ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಗ್ರಾಮಸ್ಥರು ಆರೋಪಿತನನ್ನು ಹಿಡಿದಿದ್ದಾರೆ.

ಕೋಪಗೊಂಡ ಗ್ರಾಮಸ್ಥರು ಆರೋಪಿತನಿಗೆ ಹಿಗ್ಗಾಮುಗ್ಗ ಥಳನೆ ನಡೆಸಿ, ಅರೆಬೆತ್ತಲುಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ನಂತರ ಟ್ರಕ್‌ನಲ್ಲಿ ಕರೆತಂದು ಸಾಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಠಾಣೆಯ ಎದುರಲ್ಲಿಯೂ ಕೆಲವರು ಹಲ್ಲೆ ನಡೆಸಿದ ಆರೋಪಗಳಿವೆ.

ಘಟನೆಯ ಸಂಬಂಧ ಪೊಲೀಸರು ಆರೋಪಿತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ದರೋಡೆ ಯತ್ನದ ಜೊತೆಗೆ ಸಾರ್ವಜನಿಕರಿಂದ ನಡೆದ ಹಲ್ಲೆ ಕುರಿತು ತನಿಖೆ ಮುಂದುವರೆಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.