w
Headlines
Home » ರಸ್ತೆ ಹಂಪ್‌ ಕಾಣದೆ ಭೀಕರ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ರಸ್ತೆ ಹಂಪ್‌ ಕಾಣದೆ ಭೀಕರ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

IMG 20260216

A 35-year-old biker died in a tragic accident near LBS Nagar Flyover in Shivamogga after failing to notice an unmarked road hump, raising concerns over unsafe and unscientific speed breakers

ಶಿವಮೊಗ್ಗ: ನಗರದ ಎಲ್‌ಬಿಎಸ್ ನಗರ ಫ್ಲೈಓವರ್ ಬಳಿ ಹೊಸದಾಗಿ ನಿರ್ಮಿಸಲಾದ ರಸ್ತೆ ಹಂಪ್‌ ಸ್ಪಷ್ಟವಾಗಿ ಕಾಣದೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರನೊಬ್ಬ ಮೃತಪಟ್ಟಿದ್ದಾನೆ.

ಶಿವಮೊಗ್ಗದ ವಾದಿ ಉದಾ ನಿವಾಸಿ ಉಲ್ಲಾ (35) ಮೃತ ಯುವಕ

ಫೆಬ್ರವರಿ 12ರ ತಡರಾತ್ರಿ ಸುಮಾರು 11:30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಬೈಕ್‌ನಲ್ಲಿ ಸಾಗುತ್ತಿದ್ದ ಉಲ್ಲಾ ಅವರಿಗೆ ರಸ್ತೆಯಲ್ಲಿ ಹೊಸದಾಗಿ ಹಾಕಿದ್ದ ಹಂಪ್‌ ಗಮನಕ್ಕೆ ಬರದೇ, ವೇಗವಾಗಿ ಬಂದ ಬೈಕ್‌ ಹಂಪ್‌ ಮೇಲೆ ಹಾರಿದೆ. ಪರಿಣಾಮ ಸವಾರ ನಿಯಂತ್ರಣ ತಪ್ಪಿ ಬಿದ್ದು, ಸುಮಾರು 50 ಮೀಟರ್‌ ದೂರ ರಸ್ತೆ ಮೇಲೆ ಉಜ್ಜಿಕೊಂಡು ಹೋಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.

ಸ್ಥಳೀಯರು ತಕ್ಷಣ ಧಾವಿಸಿ ಪ್ರಾಥಮಿಕ ನೆರವು ನೀಡಿದರೂ, ಗಂಭೀರ ಗಾಯಗಳಿಂದ ಉಲ್ಲಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸೂಚನಾ ಫಲಕ–ಬಿಳಿಪಟ್ಟಿ ಇಲ್ಲ ಎಂಬ ಆರೋಪ

ಈ ಹಂಪ್‌ ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ ಎಂಬ ಆರೋಪಗಳು ಆರಂಭದಿಂದಲೇ ಕೇಳಿಬರುತ್ತಿವೆ. ಹಂಪ್‌ ಹಾಕಿದ ಬಳಿಕ ಯಾವುದೇ ಸೂಚನಾ ಫಲಕಗಳು, ಬಿಳಿ ಅಥವಾ ಬಣ್ಣದ ಪಟ್ಟಿಗಳು ಅಳವಡಿಸಿಲ್ಲ ಎನ್ನಲಾಗಿದೆ. ಕಳೆದ 15–20 ದಿನಗಳಿಂದ ನಗರದಲ್ಲಿನ ಹಲವೆಡೆ ದೊಡ್ಡ ಗಾತ್ರದ ಹಂಪ್‌ಗಳನ್ನು ದಿಢೀರ್‌ವಾಗಿ ಹಾಕಲಾಗುತ್ತಿದ್ದು, ರೇಡಿಯಂ ಸ್ಟಿಕ್ಕರ್‌ ಅಥವಾ ಬಣ್ಣ ಇಲ್ಲದ ಕಾರಣ ರಾತ್ರಿ ವೇಳೆ ವಾಹನ ಸವಾರರಿಗೆ ಇವು ಕಾಣಿಸದೇ ಅಪಘಾತದ ಅಪಾಯ ಹೆಚ್ಚುತ್ತಿದೆ ಎಂಬ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.