ಕ್ರೈಂ ಸುದ್ದಿ:
ರಿಪ್ಪನ್‌ಪೇಟೆ : ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ|Sucide
ರಿಪ್ಪನ್‌ಪೇಟೆ : ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಸಮೀಪದ ನೇರಲಮನೆ ಗ್ರಾಮದಲ್ಲಿ ನಡೆದಿದೆ. ನೇರಲೆಮನೆ ಗ್ರಾಮದ ಬೀರಪ್ಪ (50) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನೇರಲಮನೆ ಗ್ರಾಮದ ಬೀರಪ್ಪ ರವರ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದ್ದು, ಕಳೆದ ಒಂದು ವರ್ಷದ ಹಿಂದೆ ತನ್ನ ಗಂಡನ ವಿರುದ್ಧ ಹೊಸನಗರ ನ್ಯಾಯಾಲಯದಲ್ಲಿ ವಿಚ್ಛೇಧನ ಹಾಗೂ ಜೀವನಾಂಶಕ್ಕಾಗಿ ಧಾವೆ ಹೂಡಿರುತ್ತಾರೆ.ಸಂಸಾರದ ವಿಚಾರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬೀರಪ್ಪ ಮದ್ಯಪಾನ ಮಾಡುವ…
ರಿಪ್ಪನ್‌ಪೇಟೆ : ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ನ ಹ್ಯಾಂಡ್ ಲಾಕ್ ಮುರಿದು ಕಳ್ಳತನ|BikeTheft
ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆಯ ಕಾಲೇಜಿನ ಮುಂಭಾಗದಲ್ಲಿರುವ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಘಟನೆ ನಡೆದಿದೆ. ಕಾಲೇಜಿನ ಮುಂಭಾಗದಲ್ಲಿರುವ ಸಂತೋಷ್ ಎಂಬುವವರು ತಮ್ಮ ಮನೆ ಮುಂದೆ ಭಾನುವಾರ ರಾತ್ರಿ ನಿಲ್ಲಿಸಿದ್ದ ಮಹೀಂದ್ರಾ ಸೆಂಚುರೊ (ka 26 X 0533) ಬೈಕ್ ಬೆಳಗಾಗುವುದರೊಳಗೆ ಕಳ್ಳತನವಾಗಿದೆ. ಭಾನುವಾರ ರಾತ್ರಿ ಸಂತೋಷ್ ಕಲಾಲ್ ತಮ್ಮ ಮನೆಯ ಮುಂದಿನ ಜಗುಲಿಯಲ್ಲಿ ಬೈಕ್ ನ್ನು ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದರು.ಆದರೆ ಬೆಳಿಗ್ಗೆ ಬಂದು ನೋಡುವಾಗ ಬೈಕ್ ನಾಪತ್ತೆಯಾಗಿದೆ. ಈ ಬಗ್ಗೆ ಬೈಕ್…
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ತಮ್ಮ ಕಾರಿನಲ್ಲಿ ಕರೆದೊಯ್ದ ಶಿವಮೊಗ್ಗ ಹೆಚ್ಚುವರಿ ಎಸ್ ಪಿ : ವಿಧಿಯಾಟಕ್ಕೆ ವ್ಯಕ್ತಿ ಸಾವು|shivamogga
ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಓರ್ವರನ್ನು ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಕ್ರಂ ಆಮ್ಟೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗ ನಗರದ ಹೊರವಲಯದ ಹರಿಗೆ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಇರ್ಫಾನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಸಾರ್ವಜನಿಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ಗಾಗಿ ಕಾಯುತ್ತಿದ್ದರು. ಕಾರ್ಯ ನಿಮಿತ್ತ ಭದ್ರಾವತಿಗೆ ತೆರಳಿ ಅದೇ ಮಾರ್ಗವಾಗಿ ಶಿವಮೊಗ್ಗಕ್ಕೆ ಹಿಂದಿರುಗುತ್ತಿದ್ದ ಹೆಚ್ಚುವರಿ ಎಎಸ್ಪಿ ವಿಕ್ರಂ ಆಮ್ಟೆ…
ಗೃಹಸಚಿವರ ತವರಿನಲ್ಲೇ ಅಕ್ರಮ ಮದ್ಯಕ್ಕೆ ವ್ಯಕ್ತಿ ಬಲಿ !!!!!!!?|Guddekoppa
ತೀರ್ಥಹಳ್ಳಿ : ಗೃಹಸಚಿವ ಆರಗ ಜ್ಞಾನೇಂದ್ರ ಅವರ ತವರೂರು ಹೊದಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಗುಡ್ಡೆಕೊಪ್ಪ ಸಮೀಪದ ತಲವಡ್ಕದ ಕುಟ್ರ ಎಂಬ ಹಳ್ಳಿಯಲ್ಲಿ ಅಕ್ರಮ ಮದ್ಯಕ್ಕೆ ವ್ಯಕ್ತಿ ಬಲಿಯಾದ ಘಟನೆ ಶನಿವಾರ ರಾತ್ರಿ ನೆಡೆದಿದೆ. ಕೆಲವು ದಿನಗಳ ಹಿಂದೆ ಊರಿನ ಗ್ರಾಮಸ್ಥರೆಲ್ಲರೂ ಸೇರಿ ದೈವ ಸಾನಿಧ್ಯದಲ್ಲಿ ನಮ್ಮ ಊರಿನ ಯಾವುದೇ ಅಂಗಡಿ, ಮಳಿಗೆ, ಮನೆ, ಕೈಚೀಲ, ಮತ್ತು ಹೊರ ಊರಿನಿಂದ ಅಥವಾ ಬೇರೆ ಯಾವ ವ್ಯಕ್ತಿಯೂ ಹೊರಗಡೆಯಿಂದ ಮದ್ಯವನ್ನು ತಂದು ಈ ಊರಿನಲ್ಲಿ ಮಾರಾಟ ಮಾಡಬಾರದೆಂದು ದೈವ ನ…
ಭೀಕರ ಕಾರು ಅಪಘಾತ : ಹೊಸನಗರ ಮೂಲದ ಮಾಜಿ ಯೋಧ ಸಾವು – ಇಬ್ಬರ ಸ್ಥಿತಿ ಗಂಭೀರ|accident
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾವಿನಹೊಳೆ ನಿವಾಸಿ ಪ್ರಗತಿಪರ ರೈತ ಹಾಗೂ ಮಾಜಿ ಸೈನಿಕ ಚನ್ನಪ್ಪ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಬೆಂಗಳೂರಿನಿಂದ ಮನೆಗೆ ವಾಪಸ್ಸಾಗುವಾಗ ಶಿವಮೊಗ್ಗ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುವುದಾಗಿ ಎಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ಮೃತರ ಪತ್ನಿ ಮತ್ತು ಪುತ್ರಿಗೂ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪುತ್ರಿಯನ್ನು ಬೆಂಗಳೂರಿಗೆ ತನ್ನ ಮಾರುತಿ ಆಲ್ಟೊ 800 ಕಾರಿನಲ್ಲಿ ಕರೆದುಕೊಂಡು ಹೋಗಿ…
ತೀರ್ಥಹಳ್ಳಿ : ಗಲಾಟೆ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿಯ ಮೇಲೆ ವಾಹನ ಹರಿಯಬಿಟ್ಟ ಯುವಕರು – ಪ್ರಕರಣ ದಾಖಲು |Thirthahalli
ತೀರ್ಥಹಳ್ಳಿ : ಸಾರ್ವಜನಿಕ ಸ್ಥಳದಲ್ಲಿ ಸ್ನೇಹಿತರೇ ಪರಸ್ಪರ ಗಲಾಟೆ ಮಾಡಿಕೊಳ್ಳುತಿದ್ದಾಗ ಬಿಡಿಸಲು ಹೋದ ಪೊಲೀಸ್ ಕಾನ್ ಸ್ಟೇಬಲ್ ಮೇಲೆ ದ್ವಿಚಕ್ರ ವಾಹನವನ್ನ ಹರಿಯಬಿಟ್ಟು ಪರಾರಿಯಾಗಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿಯ ಮೂಡ್ ಹೋಟೆಲ್ ಬಳಿ ಯುವಕರು ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಗಲಾಟೆಯಲ್ಲಿ ತೊಡಗಿಕೊಂಡಿರುತ್ತಾರೆ. ಈ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ದಾವಿಸಿದ ಪೊಲೀಸ್ ಕಾನ್ ಸ್ಟೇಬಲ್ ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಯುವಕರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಪೊಲಿಸ್ ಕಾನ್ ಸ್ಟೇಬಲ್ ತಾವು ಬಂದಿದ್ದ ಬೈಕ್…
ಸಂಸದ ಬಿ ವೈ ರಾಘವೇಂದ್ರ ಖಾತೆಯಿಂದ 16 ಲಕ್ಷ ಎಗರಿಸಿದ ಮುಂಬೈ ಹ್ಯಾಕರ್ |Hacker
ಸಂಸದ ಬಿ ವೈ ರಾಘವೇಂದ್ರ ರವರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 16 ಲಕ್ಷ ರೂ. ಹಣ ಲಪಟಾಯಿಸಿದ್ದ ಪ್ರಕರಣ ನಡೆದಿದೆ. ಈ ಬಗ್ಗೆ ಸ್ವತಃ ಬಿ ವೈ ರಾಘವೇಂದ್ರ ರವರೇ ಶಿಕಾರಿಪುರದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಮತ್ತು ಈ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿ ಹಣ ಹಿಂದಿರುಗುಸುವಲ್ಲಿ ಯಶಸ್ವಿಯಾಗಿದ್ದಾರೆ ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದ ಸಂಸದರ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಹಣ ದಿಢೀರ್ ವರ್ಗಾವಣೆಯಾಗಿತ್ತು. ಆದರೆ ಆ ಖಾತೆಯಿಂದ ಅವರು ಯಾವುದೆ…
ನವಜಾತ ಶಿಶುವನ್ನು ಆಸ್ಪತ್ರೆಯ ಶೌಚಾಲಯದಲ್ಲಿ ಬಿಟ್ಟು ಹೋದ ಹೆತ್ತಮ್ಮ | ಬೇಡವಾದ ಪಲ್ಲಂಗದಾಟಕ್ಕೆ ಸಾಕ್ಷಿಯಾದ ಮಗು|Shivamogga
ತಾಯಿಯೊಬ್ಬಳು ತನ್ನ ನವಜಾತ ಹೆಣ್ಣು ಮಗುವನ್ನು ಆಸ್ಪತ್ರೆಯ ಬಾತ್ ರೂಂನಿಂದ ಹೊರಗೆ ಬಿಸಾಡಿರುವ ಘಟನೆ ಶಿವಮೊಗ್ಗ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೊಟ್ಟೆ ನೋವು ಮತ್ತು ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಎಂದು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಶರಾವತಿ ನಗರದ ಯುವತಿ ದಾಖಲಾಗಿದ್ದಾಳೆ. ಬಳಿಕ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇಂದು ಬೆಳಗ್ಗೆ ನವಜಾತ ಹೆಣ್ಣು ಮಗುವನ್ನು ಆಸ್ಪತ್ರೆಯ ಶೌಚಾಲಯದಲ್ಲಿ ಬಿಟ್ಟು ಬಂದಿದ್ದಾಳೆ. ಮಗುವಿನ ಅಳುವಿನ ಶಬ್ಧ ಸರ್ಜರಿ ವಿಭಾಗದಿಂದ ಕೇಳಿ ಬಂದಿದ್ದಕ್ಕೆ ಮೆಗ್ಗಾನ್ ಸಿಬ್ಬಂದಿಗಳು ಎಚ್ಚೆತ್ತುಕೊಂಡು ಹುಡುಕಿದ್ದಾರೆ. ಶೌಚಾಲಯದ…
ರಸ್ತೆ ಅಪಘಾತ : ಭಾರತ್ ಜೋಡೋ ಯಾತ್ರೆಗೆ ತೆರಳಿದ್ದ ಕಾಂಗ್ರೆಸ್ ಕಾರ್ಯಕರ್ತ ಸಾವು |Accident
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಲ್ಲಲು ತೆರಳಿದ್ದ ಕಾಂಗ್ರೆಸ್ ಕಾರ್ಯಕರ್ತನೋರ್ವ ಅಪಘಾತದಿಂದ ಮೃತಪಟ್ಟ ಘಟನೆ ಸೋಮವಾರ ಹಿರಿಯೂರಿನಲ್ಲಿ ನಡೆದಿದೆ. ಸಾಗರ ತಾಲೂಕು ತ್ಯಾಗರ್ತಿ ಸಮೀಪದ ಹಿರೇಬಿಲಗುಂಜಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುತ್ತದಿಂಬ ಗ್ರಾಮದ ರಮೇಶ್ (62) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಎಂ.ಎಲ್ ರಮೇಶ್ ಅವರು ಭಾರತ್ ಜೋಡೊ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಗರ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆ ಹಿರಿಯೂರಿಗೆ ತೆರಳಿದ್ದರು ಈ ಸಂದರ್ಭದಲ್ಲಿ ರಸ್ತೆ ದಾಟುವಾಗ ಖಾಸಗಿ…
ತೀರ್ಥಹಳ್ಳಿ : ಕ್ಷುಲ್ಲಕ ಕಾರಣಕ್ಕೆ ಎದೆಗೆ ಚೂರಿ ಇರಿತ – ಗಾಯಾಳು ಮಣಿಪಾಲ್ ಗೆ ದಾಖಲು|Stabbing
ಕ್ಷುಲ್ಲಕ ಕಾರಣಕ್ಕೆ ಮಸೀದಿಯ ಸಮೀಪ ಇಬ್ಬರ ನಡುವೆ ನಡೆದ ಗಲಾಟೆ..ಚಾಕು ಇರಿತದಲ್ಲಿ ದುರಂತ ಅಂತ್ಯ ಕಂಡ ಘಟನೆ ಮಾಳೂರು ಪೊಲೀಸ್ ಠಾಣೆಯ ಎದುರು ನಡೆದಿದೆ. ಮಾಳೂರು ಮಟನ್ ಅಂಗಡಿಯ ಮಾಲೀಕ ಶಮಿಯುಲ್ಲಾ ಎಂಬುವರ ಎದೆಗೆ ರಿಜ್ವಾನ್ ಎಂಬಾತ ಚಾಕು ಇರಿದಿದ್ದಾನೆ ಪರಿಣಾಮ ಶಮಿಯುಲ್ಲಾ ಎದೆಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳು ಶಮಿಯನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ ಸದ್ಯ ಮಣಿಪಾಲ್ ಆಸ್ಪಯಲ್ಲಿ ದಾಖಲಾಗಿರುವ ಶಮಿಯುಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ….