ನೂರಾರು ಕನಸು ಹೊತ್ತು ಮದುವೆಯಾಗಿದ್ದ ನವ ವಿವಾಹಿತೆ ವರದಕ್ಷಿಣೆ ಭೂತಕ್ಕೆ ಬಲಿಯಾಗಿರುವ ಘಟನೆ ಶಿವಮೊಗ್ಗ ಶಿಕಾರಿಪುರದ ಶಿರಾಳಕೊಪ್ಪದ ಉಡುಗುಣಿ ಗ್ರಾಮದಲ್ಲಿ ನಡೆದಿದೆ.
ನವವಿವಾಹಿತೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಸಂಗೀತಾ ಅನುಮಾನಸ್ಪದವಾಗಿ ಸಾವನಪ್ಪಿದ್ದು, ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡ, ಅತ್ತೆ ಮಾವನ ಕಿರುಕುಳಕ್ಕೆ ಅಮಾಯಕ ಜೀವ ಬಲಿಯಾಗಿದ್ದು, ಸಂಗೀತಾ ನೂರಾರು ಕನಸು ಹೊತ್ತು ಹರೀಶ್ ಎಂಬಾತನ ಜೊತೆ ಮದುವೆಯಾಗಿದ್ದರು. ಸಂಗೀತಾ ಪೋಷಕರು ಚಿನ್ನ, ಹಣ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದರು.
ಮದುವೆಯಾದ ಆರು ತಿಂಗಳಿಗೆ ಹಣ ತರುವಂತೆ ಪತಿ ಹರೀಶ್ ಕಿರುಕುಳ ನೀಡುತ್ತಿದ್ದ, ಹರೀಶ್ ಜೊತೆ ಅತ್ತೆ ದುರ್ಗಮ್ಮ, ಮಾವ ಶಿವಲಿಂಗಯ್ಯ ಕೂಡ ಕಿರುಕುಳ ನೀಡಿ ಮಾನಸಿಕ ಹಿಂಸೆ ನೀಡುತ್ತಿದ್ರು. ಹರೀಶ್ ಹಲವು ಬಾರಿ ಹಣಕ್ಕಾಗಿ ಹೊಡೆದು ತವರು ಮನೆಗೆ ಕಳಿಸಿದ್ದ. ಕಳೆದ ಡಿಸೆಂಬರ್ 1 ರಂದು ಸಂಗೀತಾ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದ್ದು, ಪತಿ ಹರೀಶ್ ಸಂಗೀತಾಗೆ ಹೊಡೆದು ಸಾಯಿಸಿ ಆತ್ಮಹತ್ಯೆ ಕಥೆ ಕಟ್ಟಿರೋ ಅನುಮಾನ ಶುರುವಾಗಿದ್ದು,
ಈ ಸಂಬಂದ ಪತಿ ಹರೀಶ್, ಅತ್ತೆ ಮಾವ ವಿರುದ್ದ ವರದಕ್ಷಿಣೆ ಕಿರುಕುಳ, ಕೊಲೆ ಪ್ರಕರಣ ದಡಿ ಕೇಸ್ ದಾಖಲಾಗಿದೆ.