ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳ ಅಟ್ಟಹಾಸ – ನಿಷೇಧಿತ ಸಂಘಟನೆಯ ಗೋಡೆ ಬರಹ|shiralakopppa

ಮಲೆನಾಡಿನ ಹೆಬ್ಬಾಗಿಲಲ್ಲಿ ಮತ್ತೆ ಕಿಡಿಗೇಡಿ ಕೃತ್ಯ ಕಂಡು ಬಂದಿದೆ. ಶಾಂತವಾಗಿದ್ದ ಶಿವಮೊಗ್ಗದಲ್ಲಿ ‘ಜಾಯಿನ್ ಸಿಎಫ್‌ಐ’ ಎನ್ನುವ ಗೋಡೆ ಬರೆದು ಸಮಾಜದ ಸ್ವಾಸ್ಥ್ಯ ಕದಡಲು ಕಿಡಿಗೇಡಿಗಳು ಮುಂದಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ವಿವಿಧ ಕಡೆಗಳಲ್ಲಿ ಕಿಡಿಗೇಡಿಗಳು ಜಾಯಿನ್ ಸಿಎಫ್‌ಐ ಎಂಬ ಗೋಡೆ ಬರಹ ಬರದಿದ್ದಾರೆ.




ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಲ್ಲೆಲ್ಲಿ ಗೋಡೆ ಬರಹಗಳು?

ಹಳೆಯ ಪೆಟ್ರೋಲ್ ಬಂಕ್ ಪಕ್ಕದ ಕಂಬ, ಭೋವಿ ಕಾಲೋನಿಗೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬ, ದೊಡ್ಡಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿಯ ಸಿಮೆಂಟ್ ಬೋರ್ಡ್, ವಿದ್ಯುತ್ ಕಂಬ, ಕೆಲವರ ಮನೆಯ ಗೋಡೆಗಳ ಮೇಲೆ ಸೇರಿದಂತೆ ಹಲವೆಡೆ ‘ಜಾಯಿನ್ ಸಿ.ಎಫ್.ಐ(Join CFI)’ ಎಂದು ಬರೆಯಲಾಗಿದೆ. ನೀಲಿ ಮತ್ತು ಕೆಂಪು ಬಣ್ಣದ ಸ್ಪ್ರೇ ಪೇಂಟ್’ನಿಂದ ಬರೆದಿರುವುದು ಮತ್ತು ಸ್ಟಾರ್ ಚಿತ್ರ ಬಿಡಿಸಿರುವುದು ಕಂಡುಬಂದಿರುತ್ತದೆ.




ಗೋಡೆ ಬರಹಗಳ ಮೇಲೆ ಪೇಂಟ್ ಶಿರಾಳಕೊಪ್ಪ ಪಟ್ಟಣದ ವಿವಿಧೆಡೆ ಗೋಡೆಗಳ ಮೇಲೆ ಬರೆದಿದ್ದ ಬರಹಗಳ ಮೇಲೆ ಪೊಲೀಸರು ಬಣ್ಣ ಬಳಿದಿದ್ದಾರೆ.



Leave a Reply

Your email address will not be published. Required fields are marked *