ಕ್ರೈಂ ಸುದ್ದಿ:
ಶಿವಮೊಗ್ಗದ ಹಲ್ಲೆ ಪ್ರಕರಣ – ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು|Shivamogga
ಶಿವಮೊಗ್ಗ : ಸೀಗೆಹಟ್ಟಿ ಬಳಿಯ ಧರ್ಮಪ್ಪ ನಗರದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಉಳಿದವರ ವಿಚಾರಣೆ ಮುಂದುವರೆದಿದೆ. ಪ್ರಕಾಶ್ ಎಂಬುವವನ ಮೇಲೆ ಹಲ್ಲೆ ಮತ್ತು ಸೀಗೆಹಟ್ಟಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಮಾರ್ಕೆಟ್ ಫೌಜನ್(22), ಅಜರ್ ಯಾನೆ ಅಜ್ಜು(24) ಹಾಗೂ ಫರಾಜ್ (21) ಎಂಬುವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಮೂವರು ಪ್ರಕಾಶ್ ಹಲ್ಲೆಗೆ…
ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿಯ ಭೀಕರ ಕೊಲೆ|ನಡುರಸ್ತೆಯಲ್ಲಿ ಮೃತದೇಹ ಪತ್ತೆ|Murder
ಶಿವಮೊಗ್ಗ ನಗರದ ಜೈಲ್ ರಸ್ತೆಯ ಇಡ್ಲಿ ಹೌಸ್ ಪಕ್ಕದ ತಿರುವಿನ ವೆಂಕಟೇಶ ನಗರ ತಿರುವಿನ ಆರಂಭದ ಮನೆಯೊಂದರ ಮುಂದೆ ಇಂದು ಮುಂಜಾನೆ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ. ಆತನ ಹೊಟ್ಟೆಗೆ ಚಾಕುವಿನಿಂದ ತಿವಿದಿದ್ದಾರೆ. ಮೃತ ವ್ಯಕ್ತಿಯನ್ನು ಗಾಂಧಿನಗರದ ನಿವಾಸಿ ಹಾಗೂ ಶಿವಮೊಗ್ಗ ನಗರದ ಭಾರತ್ ನ್ಯೂರೋ ಕ್ಲಿನಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯ್ ಎಂ.ವಿ.ಎಂದು ಹೇಳಲಾಗುತ್ತಿದೆ. ಆತನಿಗೆ ಸುಮಾರು 34 ವರ್ಷ ವಯಸ್ಸು ಎನ್ನಲಾಗಿದೆ. ಗಾಂಧಿನಗರದ ನಿವಾಸಿಯಾದ ಆತನಿಗೆ ನಿನ್ನೆ ರಾತ್ರಿ ಎರಡು ಮೂವತ್ತರ ಹೊತ್ತಿಗೆ ಆಸ್ಪತ್ರೆಯಿಂದ ಫೋನ್…
ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ – ಯುವಕ ಸ್ಥಳದಲ್ಲೇ ಸಾವು – ಇನ್ನೋರ್ವ ಗಂಭೀರ|Accident
ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪ ಗ್ಯಾಸ್ ಸಿಲಿಂಡರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶಿವಮೊಗ್ಗದಿಂದ ಆಯನೂರು ಕಡೆ ಹೊರಟಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಗೆ ಹಾಗೂ ಆಯನೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬೈಕ್ ನ ನಡುವೆ ಈ ಅಪಘಾತ ಸಂಭವಿಸಿದ್ದು. ಸ್ಥಳದಲ್ಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಆಯನೂರು ಕೋಟೆ ನಿವಾಸಿ ಯಶವಂತ್ ಎಂಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನ ಹಿಂಬದಿ ಕೂತಿದ್ದ ವ್ಯಕ್ತಿಯ ಕಾಲು ಮುರಿದಿದ್ದು ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ…
ರಿಪ್ಪನ್‌ಪೇಟೆ : ನಿವೃತ ಎ ಎಸ್ ಐ ಮನೆಗೆ ಹಗಲು ಹೊತ್ತಿನಲ್ಲಿಯೇ ನುಗ್ಗಿ ಕಳ್ಳತನ – ಹತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನ|Theft
ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿ ವಾಸವಾಗಿರುವ ನಿವೃತ್ತ ಎಎಸ್ ಐ ರೊಬ್ಬರ ಮನೆಗೆ ಹಗಲು ಹೊತ್ತಿನಲ್ಲಿಯೇ ಕಳ್ಳರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ ಇಂದು ನಡೆದಿದೆ. ದಿನದಿಂದ ದಿನಕ್ಕೆ ಕಳ್ಳರು ಸ್ಮಾರ್ಟ್ ಆಗುತ್ತಿದ್ದಾರೆ, ಮತ್ತಷ್ಟು ಚುರುಕಾಗುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ.. ಅವರವರದ್ದೇ ಆದ ದಾರಿಗಳನ್ನು ಕಂಡುಕೊಂಡು, ತಾವು ಐನಾತಿ ಕಳ್ಳರೇ ಸರಿ ಎಂಬವುದನ್ನು ಸಾಬೀತುಪಡಿಸುತ್ತಿದ್ದಾರೆ. ತಂತ್ರಜ್ಞಾನದ ಸಮ್ಮುಖದಲ್ಲಿ ರಾತ್ರಿಗಳು ಮೊದಲಿನಂತಿಲ್ಲ… ಹಾಗಂತ ಹಗಲು ಎಚ್ಚೆತ್ತುಕೊಳ್ಳುವುದಕ್ಕೆ ಅವಕಾಶವಿದೆಯಾ ಎಂದು ನೋಡಿದರೆ…
ಸ್ನೇಹಿತರ ನಡುವಿನ ಗಲಾಟೆ ಚೂರಿ ಇರಿತದಲ್ಲಿ ಅಂತ್ಯ : ಗಾಯಾಳು ಆಸ್ಪತ್ರೆಗೆ ದಾಖಲು-ಆರೋಪಿ ಪರಾರಿ|Stabbed
ಹೊಟೇಲ್ ನಲ್ಲಿ ಊಟ ಮಾಡುತಿದ್ದ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತು ಮಾತಲ್ಲೇ ಗಲಾಟೆಯಾಗಿ ಒಬ್ಬನಿಗೆ ಚೂರಿ ಇರಿತವಾಗಿರುವ ಘಟನೆ ನಡೆದಿದೆ. ಸಾಗರ ನಗರದ ಬಿ.ಎಚ್ ರಸ್ತೆಯ ಮಂಜುಶ್ರೀ ಹೋಟೆಲಿಗೆ ಗ್ರಾಹಕರಾಗಿ ಇಬ್ಬರು ಯುವಕರು ಬಂದಿದ್ದಾರೆ. ಅವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದೆ. ಗಲಾಟೆ ತಾರಕಕ್ಕೇರಿ, ಒಬ್ಬ ಮತ್ತೊಬ್ಬನಿಗೆ ಚೂರಿಯಿಂದ ಚುಚ್ಚಿದ್ದಾನೆ. ಇರಿತಕ್ಕೆ ಒಳಗಾದವನನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಚೂರಿಯಿಂದ ಹಲ್ಲೆ ನಡೆಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ…
ಕೊಡಚಾದ್ರಿ ಬೆಟ್ಟವೇರಿದ್ದ ಕೇರಳ ಮೂಲದ ವ್ಯಕ್ತಿ ಹೃದಯಾಘಾತದಿಂದ ಸಾವು|Kodachadri
ಕೊಡಚಾದ್ರಿ ಗಿರಿ ಹತ್ತಿದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಕೇರಳದ ಕನ್ನೂರು ಜಿಲ್ಲೆಯ ವಾಲಪ್ಪಿಲ್ ಸಮೀಪದ ಕೊಟ್ಟಾರತು ಗ್ರಾಮದ ನಿವಾಸಿ ಗೋವಿಂದನ್ ಕುನ್ನಪ್ಪ (72) ಮೃತ ವ್ಯಕ್ತಿ ಶುಕ್ರವಾರದಂದು ಕೇರಳದಿಂದ ಕೊಲ್ಲೂರು ಶ್ರೀ ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ಗೋವಿಂದನ್ ಕುಟುಂಬ ಕೊಲ್ಲೂರಿನಲ್ಲಿ ವಾಸ್ತವ್ಯ ಹೂಡಿ ಇಂದು ಬೆಳಿಗ್ಗೆ ಕೊಡಚಾದ್ರಿ ಗಿರಿಗೆ ಹೋಗಿದ್ದು ಪ್ರವಾಸಿಮಂದಿರದಿಂದ ಗಿರಿ ತುದಿಯ ಸರ್ವಜ್ಞ ಪೀಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದರು. ಸರ್ವಜ್ಞ ಪೀಠ ತಲುಪಿದ ನಂತರ ಅಲ್ಲೇ ಗೋವಿಂದನ್ ಕುನ್ನಪ್ಪ ಕುಸಿದು…
ರಿಪ್ಪನ್‌ಪೇಟೆ : ಧರ್ಮಸ್ಥಳಕ್ಕೆ ಹೋಗಿ ಕೇಶ ಮುಂಡನೇ ಮಾಡಿಸಿಕೊಂಡು ಬಂದಿದ್ದ ವ್ಯಕ್ತಿ ಆತ್ಮಹತ್ಯೆ|Sucide
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೋಡೂರು ಗ್ರಾಮದ ಇಂದಿರಾನಗರ ನಿವಾಸಿ ಸತೀಶ್ (35) ತನ್ನ ಮನೆಯಲ್ಲಿಯೇ ಇಂದು ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಈತ ಮಾನಸಿಕವಾಗಿ ನೊಂದಿದ್ದ. ಕಳೆದ ಮೂರು ದಿನಗಳ ಹಿಂದಷ್ಟೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದು ಪೂಜೆ ಸಲ್ಲಿಸಿ ಕೇಶ ಮುಂಡನ ಮಾಡಿಸಿಕೊಂಡು ಬಂದಿದ್ದ ಎಂದು ತಿಳಿದುಬಂದಿದೆ. ಪತ್ನಿ, ಇಬ್ಬರು (ಪುತ್ರಿ, ಪುತ್ರ) ಚಿಕ್ಕ ಮಕ್ಕಳನ್ನು ಹಾಗೂ ಸಹೋದರ ಸೇರಿದಂತೆ ಅಪಾರ…
ಗರ್ತಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳ್ಳತನ| ಕೋಣಂದೂರಿನ ಎರಡು ಶಾಲೆಗಳಲ್ಲಿ ಕಳ್ಳತನ|theft
ಗರ್ತಿಕೆರೆ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬೀಗಗಳನ್ನು ತುಂಡರಿಸಿ ಒಳ ನುಗ್ಗಿದ ದುಷ್ಕರ್ಮಿಗಳು ಗಾಡ್ರೇಜ್ ಬೀರುಗಳನ್ನು ಮುರಿದು ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿ ಗಾಡ್ರೇಜ್ ಬೀರುನಲ್ಲಿದ್ದ ಅಂದಾಜು 20 ಸಾವಿರ ಕ್ಕೂ ಹೆಚ್ಚು ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ತಡರಾತ್ರಿ ನಡೆದಿದೆ. ಇಂದು ಬೆಳಿಗ್ಗೆ ಕಾಲೇಜು ಸಿಬ್ಬಂದಿಗಳು ಕಾಲೇಜಿಗೆ ಬಂದಾಗ ಬೀಗ ಮುರಿದ ಪರಿಸ್ಥಿತಿ ನೋಡಿ ಕಾಲೇಜಿನ ಕಡತಗಳು ಚೆಲ್ಲಾಪಿಲ್ಲಿಯಾಗಿ ಇರುವುದನ್ನು ಕಂಡು ದಂಗಾಗಿ ಕಾಲೇಜಿನ ಪ್ರಾಚಾರ್ಯರಿಗೆ ಹಾಗೂ ಪೊಲೀಸರಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಶ್ವಾನ…
ತೀರ್ಥಹಳ್ಳಿ : ಶಾಲಾ ಬಾಲಕಿಯನ್ನು ಅಪಹರಣ ಮಾಡಲು ಯತ್ನಿಸಿದ ದುಷ್ಕರ್ಮಿಗಳು !!!Thirthahalli
ತೀರ್ಥಹಳ್ಳಿ : ತಾಲೂಕಿನ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೇಲಿನಕುರುವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಸಂಜೆ 4.30 ರ ಶಾಲೆ ಬಿಡುವ ವೇಳೆಗೆ ಓಮಿನಿ ಕಾರಿನಲ್ಲಿ ಬಂದ ನಾಲ್ಕರಿಂದ ಐದು ಜನರ ತಂಡ ಶಾಲೆಯ ಸಮೀಪದಲ್ಲೇ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಓಮಿನಿ ಕಾರಿನಲ್ಲಿ ಬಲವಂತವಾಗಿ ಹೊತ್ತೊಯ್ಯಲು ಪ್ರಯತ್ನಿಸಿರುವ ದುರ್ಘಟನೆ ಗುರುವಾರ ಸಂಜೆಯ ವೇಳೆ ನೆಡೆದಿದೆ. ವಿದ್ಯಾರ್ಥಿನಿಯನ್ನು ಕಾಪಾಡಿದ ವಿದ್ಯಾರ್ಥಿ: ಇದನ್ನು ನೋಡಿದ ಶಾಲಾ ವಿದ್ಯಾರ್ಥಿ ಅಕುಲ್ ಎಂಬಾತ ವಿದ್ಯಾರ್ಥಿನಿಯನ್ನು ಹೊತ್ತೊಯ್ಯಲು ಬಂದಿದ್ದ ತಂಡದವರ ಮೇಲೆ ಕಲ್ಲು ಎಸೆದು…
ಆನಂದಪುರ : ಕುಟುಂಬದವರೊಂದಿಗೆ ಬಟ್ಟೆ ತೊಳೆಯಲು ಹೋದಾಗ ಕೆರೆಯಲ್ಲಿ ಮುಳುಗಿ ಯುವಕ ಸಾವು|ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ|Crimenews
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಗಿಳಾಲಗುಂಡಿ ಗ್ರಾಮದ ಅಮ್ಮನಕೆರೆಯಲ್ಲಿ ಯುವಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಗಿಳಾಲಗುಂಡಿಯಲ್ಲಿ ತಮ್ಮ ಸಂಬಂಧಿಕರ ಮನೆಯ ಮದುವೆಗೆಂದು ಆಗಮಿಸಿದ್ದ ಚಿಕ್ಕಮಗಳೂರಿನ ಸಮೀಪದ ಹಾಂದಿ ಗ್ರಾಮದ ಯುವಕ ಅಮಿನ್ (19 ) ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಅಮ್ಮನಕೆರೆಯಲ್ಲಿ ಕುಟುಂಬದವರ ಜೊತೆ ಬಟ್ಟೆ ತೊಳೆಯಲು ಬಂದಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಕುಟುಂಬದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆಯ ಮೂಲಕ ಯುವಕನ…