ರಿಪ್ಪನ್‌ಪೇಟೆ : ಇತ್ತೀಚಿಗೆ ರಿಪ್ಪನ್ ಪೇಟೆ ಸುತ್ತಮುತ್ತಲಿನ ಮೂರು ದೇವಸ್ಥಾನಗಳಲ್ಲಿ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಲಿಂಗದೇವರಕೊಪ್ಪ ಸರ್ಕಾರಿ ಶಾಲೆಯ ಶಿಕ್ಷಕ ವಸಂತ್ ಕುಮಾರ್ ಹಾಗೂ ಗುಡ್ಡದೇವರನಳ್ಳಿ ಗ್ರಾಮದ ಸಲೀಂ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶೋಕಿ ಜೀವನ ನಡೆಸಲು ಕಳೆದ ಮೂರು ವರ್ಷಗಳಿಂದ ಕಳ್ಳತನ ನಡೆಸುತಿದ್ದ ಇವರು ಒಮ್ಮೆಯು ಸಿಕ್ಕಿಬಿದ್ದಿರಲಿಲ್ಲ.
ಆರೋಪಿತರು ಕಳೆದ 3-4 ವರ್ಷಗಳಿಂದ ಈ ರೀತಿಯ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದು ಎಲ್ಲಿಯೂ ಸಿಕ್ಕಿಬಿದ್ದಿರುವುದಿಲ್ಲ. ವೈಭವ/ಶೋಕಿ ಜೀವನಕ್ಕಾಗಿ ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿತರಿಂದ ಮೂರು ಜಿಲ್ಲೆಯಲ್ಲಿ ಒಟ್ಟೂ 18 ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ಅವರುಗಳಿಂದ ಕೃತ್ಯಕ್ಕೆ ಬಳಸಿದ 1] ಮಾರುತಿ ನೆಕ್ಸಾ ಕಂಪನಿಯ ಎಸ್.ಕ್ರಾಸ್ ಕಾರ-01, ಅಕಿil 12,00,000 ರೂಪಾಯಿ, 2] ಬಜಾಜ ಪ್ಲಾಟಿನಾ ಕಂಪನಿಯ ಮೋಟಾರ ಸೈಕಲ್01, ಅಕಿll 30,000, 3] ನಗದು ಹಣ 2,29,000 ರೂಪಾಯಿ 4] 9 ಗ್ರಾಂ ತೂಕದ ದೇವರ ಬಂಗಾರದ ಆಭರಣಗಳು, ಅಕಿ 50,000, 5] 3 ಕೆ.ಜಿ 400 ಗ್ರಾಂ ತೂಕದ ದೇವರ ಬೆಳ್ಳಿಯ ಆಭರಣಗಳು, ಅಕಿ 1,80,400 ರೂಪಾಯಿ, 6] ಹಿತ್ತಾಳೆಯ 140 ಘಂಟೆಗಳು, ಅಕಿ 1,45,000 ರೂಪಾಯಿ, 7] 27 ಹಿತ್ತಾಳೆಯ ದೀಪದ ಶಮೆ, ಅಕಿll 39,550 ರೂಪಾಯಿ, 8] 22 ಹಿತ್ತಾಳೆಯ ತೂಗು ದೀಪಗಳು, ಅಕಿ 9,600 ರೂಪಾಯಿ, 9] 7 ತಾಮ್ರದ ಕೊಡಗಳು, ಅಕಿil 13,500 ರೂಪಾಯಿ, ಹಾಗೂ 8] ಇನ್ನಿತರೇ 35 ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳು, ಅಕಿ॥ 13,235 ರೂಪಾಯಿ, 9] ಡಿ.ವಿ.ಆರ್-01, ಅಕಿ 10,000 ರೂಪಾಯಿಗಳು, ಹೀಗೆ ಒಟ್ಟು 19,20,285/- ಬೆಲೆಯ ಸ್ವತ್ತನ್ನು ಜಪ್ತುಪಡಿಸಿಕೊಂಡಿದ್ದು ಇರುತ್ತದೆ.
ವಿಷ್ಣುವರ್ಧನ್ ಎನ್. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ, ಕಾರವಾರ, ಸಿ.ಟಿ.ಜಯಕುಮಾರ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು ಕಾರವಾರ, ರವಿ ನಾಯ್ಕ ಮಾನ್ಯ ಪೊಲೀಸ ಉಪಾಧೀಕ್ಷಕರು ಶಿರಸಿ ಉಪವಿಭಾಗರವರ ಮಾರ್ಗದರ್ಶನದಲ್ಲಿ. ಸುರೇಶ ಯಳ್ಳೂರ, ಪಿ.ಐ ಯಲ್ಲಾಪುರ ಪೊಲೀಸ್ ಠಾಣೆ. ಇವರ ನೇತೃತ್ವದಲ್ಲಿ ಪಿ.ಎಸ್.ಐ ರವರುಗಳಾದ ಮಂಜುನಾಥ ಗೌಡರ್, ಅಮೀನಸಾಬ್ ಅತ್ತಾರ, ಶ್ಯಾಮ ಪಾವಸ್ಕರ್, ಪ್ರೊ. ಪಿ.ಎಸ್.ಐ ಉದಯ, ಹಾಗೂ ಸಿಬ್ಬಂದಿಯವರಾದ ದೀಪಕ್ ನಾಯ್ಕ. ಬಸವರಾಜ ಹಗರಿ, ಮಹ್ಮದ ಶಫೀ, ಗಜಾನನ ನಾಯ್ಕ, ಪರಶುರಾಮ ಕಾಳೆ, ಪ್ರವೀಣ ಪೂಜಾರ, ಗಿರೀಶ, ನಂದೀಶ, ಹಾಗೂ ಮಹಿಳಾ ಸಿಬ್ಬಂದಿ ಶೋಭಾ ನಾಯ್ಕ, ಹಾಗೂ ಸಿ.ಡಿ.ಆರ್ ಸೆಲ್ ವಿಭಾಗದ ಉದಯ, ರಮೇಶ ಹಾಗೂ ಹಾವೇರಿ ಜಿಲ್ಲೆಯ ಹಂಸಬಾವಿ ಪೊಲೀಸ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮನೋಹರ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು. ಸದರಿ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಕಾರವಾರ ರವರು ಶ್ಲಾಘಿಸಿದ್ದು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.