Headlines

ಪತಿಗೆ ಕತ್ತಿಯಿಂದ ಬೆದರಿಸಿ ಪತ್ನಿಯ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ – ಭಗ್ನ ಪ್ರೇಮಿಯಿಂದಲೇ ಅಪಹರಣ|Kidnap

ವಿವಾಹಿತೆಯೊಬ್ಬಳು ಕಿಡ್‌ನ್ಯಾಪ್‌ ಆಗಿರುವ ಪ್ರಕರಣವನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಚುರುಕಾದ ಕಾರ್ಯಾಚರಣೆಯಿಂದ ಭೇದಿಸಿದ್ದು, ಪ್ರಿಯಕರನಿಂದಲೇ ಮಹಿಳೆಯ ಅಪಹರಣವಾಗಿರುವುದು ಪತ್ತೆಯಾಗಿದೆ.

ಡಿ.4ರಂದು ಎನ್‌ಟಿಬಿ ಲೇಔಟ್‌ನಲ್ಲಿದ್ದ ಮನೆಯಿಂದ ಮಹಿಳೆಯ ಅಪಹರಣವಾಗಿತ್ತು. ಮಹಿಳೆಯ ಗಂಡನಿಗೆ ಮಚ್ಚು ತೋರಿಸಿ ಅಪಹರಣ ಮಾಡಲಾಗಿದ್ದಲ್ಲದೆ, ಆಕೆಯ ಗಂಡನ ಕಾರಲ್ಲೇ ಆರೋಪಿಗಳು ಎಸ್ಕೇಪ್ ಆಗಿದ್ದರು. ಈ ಪ್ರಕರಣದಲ್ಲಿ ಆಕೆಯ ಪ್ರಿಯಕರ ಸುರೇಶ್ ಸಹಿತ ನಾಲ್ವರನ್ನು ಬಂಧಿಸಲಾಗಿದೆ. ಅಬ್ದುಲ್ ಅಬ್ರಾರ್, ಮಹೇಶ್, ಮಂಜುನಾಥ್ ಇತರ ಮೂವರು ಆರೋಪಿಗಳು.

ಬಾಲ್ಯದ ಸ್ನೇಹಿತ ಸುರೇಶ್‌ ಜತೆಗೆ ಈಕೆಗೆ ಮೊದಲಿನಿಂದಲೂ ಪ್ರೇಮವಿದ್ದು, ಆದರೂ ಶಿಕ್ಷಕನನ್ನು ಮದುವೆಯಾಗಿದ್ದಳು. ಪ್ರಿಯಕರನ ಜತೆ ಕುಣಿಗಲ್‌ನಲ್ಲಿ 7 ವರ್ಷದಿಂದ ಇದ್ದಳು. ಕೊನೆಗೆ ಗಂಡ ಹಾಗೂ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ವಾಪಸ್ಸಾಗಿದ್ದಳು. ಹೋಗುವಾಗ ಹಣ ತೆಗೆದುಕೊಂಡು ಹೋಗಿದ್ದಾಳೆ ಎಂಬ ಅನುಮಾನದಿಂದ ಆಕೆಯನ್ನು ಪ್ರಿಯಕರ ಸುರೇಶನೇ ಅಪಹರಿಸಿದ್ದಾನೆ. 

ಭದ್ರಾವತಿಯ ಕಲ್ಲಹಳ್ಳಿಯಲ್ಲಿ ಸುರೇಶ್‌ನನ್ನು ಹಾಗೂ ಇತರ ಮೂವರನ್ನು ಬಾರಂದೂರಿನಲ್ಲಿ ಸೆರೆಹಿಡಿಯಲಾಗಿದೆ. ಚನ್ನಪಟ್ಟಣದಲ್ಲಿ ಇರಿಸಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ.

Leave a Reply

Your email address will not be published. Required fields are marked *