ಕ್ರೈಂ ಸುದ್ದಿ:
ತೀರ್ಥಹಳ್ಳಿ : ಶಾರೀಕ್ ಮನೆ ಸೇರಿದಂತೆ ನಾಲ್ಕು ಮನೆಗಳ ಮೇಲೆ ಪೊಲೀಸ್ ರೈಡ್|Manglore blast
ತೀರ್ಥಹಳ್ಳಿ : ಪಟ್ಟಣದ ಸೊಪ್ಪುಗುಡ್ಡೆಯಲ್ಲಿರುವ ಶಾರೀಕ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಪೊಲೀಸರು ರೈಡ್ ಮಾಡಿದ್ದಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಶಾರಿಕ್ ಆರೋಪಿಯಾಗಿರಬಹುದು ಎಂಬ ಕಾರಣಕ್ಕಾಗಿ ಒಟ್ಟು ಮೂರು ತಂಡಗಳಾಗಿ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿ, ಮಾಳೂರು ಹಾಗೂ ಆಗುಂಬೆ ಪೊಲೀಸ್ ಠಾಣೆಯ ಎಸೈಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ. ಶಾರೀಕ್ ಚಿಕ್ಕಮ್ಮನ ಮನೆ ಸೇರಿದಂತೆ ಸಂಬಂಧಿಕರ ಒಟ್ಟು ನಾಲ್ಕು ಮನೆಗಳ ಮೇಲೆ ಪೊಲೀಸರು ರೈಡ್ ಮಾಡಿದ್ದಾರೆ. ಹಲವು ದಾಖಲೆಗಳನ್ನು ತೀರ್ಥಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದು ಹಲವು ಆಯಾಮಗಳಲ್ಲಿ ಪೊಲೀಸರು…
ಮಂಗಳೂರಿನ ಆಟೋ ಸ್ಪೋಟ ಪ್ರಕರಣ – ತೀರ್ಥಹಳ್ಳಿಯ ಶಾರೀಕ್ ಲಿಂಕ್ !!!..??|Manglore
ಮಂಗಳೂರಿನ ಹೊರವಲಯದಲ್ಲಿ ನಡೆದ ಆಟೋ ಸ್ಪೋಟದ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ ಬೆನ್ನಲ್ಲೇ ಈ ಪ್ರಕರಣದಲ್ಲಿ ಶಿವಮೊಗ್ಗದ ವ್ಯಕ್ತಿಯ ಲಿಂಕ್ ಸಹ ಕೇಳಿ ಬರುತ್ತಿದೆ. ಈ ರೀತಿಯ ಸುದ್ದಿಯ ಜಾಡನ್ನ ಬೆನ್ನು ಹತ್ತಿರುವ ಮಾಧ್ಯಮಗಳಿಗೆ ಹೆಸರು ಕೇಳಿ ಬರುತ್ತಿರುವ ಹೆಸರೆಂದರೆ ಶಾರೀಕ್ ಹೆಸರು. ಯಾರೂ ಈ ಶಾರೀಕ್ ಎಂದು ಕೇಳ್ತಾ ಹೋದರೆ ಸೆಪ್ಪಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ಪತ್ತೆಯಾದ ಮೂವರು ಶಂಕಿತರ ಹೆಸರಿನಲ್ಲಿ ಕೇಳಿ ಬಂದ ಪ್ರಮುಖ ಆರೋಪಿ ಈ ಶಾರೀಕ್. ತೀರ್ಥಹಳ್ಳಿಯ ನಿವಾಸಿ…
ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್ ಲಾರಿ ವಶಕ್ಕೆ !!!|Sand Mafia
ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ. ತಾಲೂಕಿನ ಮುತ್ತಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ದಾಳಿ ಮಾಡಿ, ಕೆಎ-15-3172, ಕೆಎ-15-ಎ-0957, ಕೆಎ-42-2108 ನೋಂದಣಿ ಸಂಖ್ಯೆ ಮೂರು ಟಿಪ್ಪರ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳಾದ ಈಚಲಕೊಪ್ಪ ಕಿರಣ, ಮುತ್ತಲ ಮಂಜುನಾಥ ಮತ್ತು ರಾಮಚಂದ್ರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ದಾಳಿ…
ಮತಾಂತರವಾಗುವಂತೆ ಪತ್ನಿಗೆ ಪತಿಯಿಂದ ಚಿತ್ರಹಿಂಸೆ – ತೀರ್ಥಹಳ್ಳಿ ಮೂಲದ ಖಾದರ್ ವಿರುದ್ದ ಪ್ರಕರಣ ದಾಖಲು|arrested
ವಿವಾಹಿತ ಹಿಂದೂ ಮಹಿಳೆಗೆ ವಿಚ್ಛೇದನ ಕೊಡಿಸಿ, ನಂತರ ಆಕೆಯನ್ನ ಮದುವೆಯಾಗಿ ಇದೀಗ ಮತಾಂತರವಾಗುವಂತೆ ಹಿಂಸೆ ನೀಡುತ್ತಿರುವ ಆರೋಪ ಮಹಿಳೆಯಿಂದ ಕೇಳಿಬಂದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಅಬ್ದುಲ್ ಖಾದರ್ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಚಿತ್ರದುರ್ಗದ ಮಹಿಳಾ ಠಾಣೆಯ ಪೊಲೀಸರು ಎಫ್ಐಆರ್ ದಾಖಲು ಮಾಡಿ, ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ತೀರ್ಥಹಳ್ಳಿ ಮೂಲದ ಸಂತ್ರಸ್ತ ಮಹಿಳೆ ಹತ್ತು ವರ್ಷಗಳ ಹಿಂದೆಯೇ ಶ್ರೀನಿವಾಸ್ ಎಂಬುವವರನ್ನ ವಿವಾಹವಾಗಿದ್ದರು. ಹೊಟ್ಟೆಪಾಡಿಗಾಗಿ ತೀರ್ಥಹಳ್ಳಿಯಲ್ಲಿರುವ ಡಯಾಲಿಸಿಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಈ…
ಚಲಿಸುತಿದ್ದ KSRTC ಬಸ್ ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ|
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಚಲಿಸುತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಭದ್ರಾವತಿಯ ವೀರಾಪುರ ಕ್ರಾಸ್ ಬಳಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಿಳ್ಳೆನಹಳ್ಳಿ ನಿವಾಸಿ ನಂದೀಶ್ (35) ಎಂಬುವವರು ಮೃತ ದುರ್ದೈವಿ. ನಂದೀಶ್ ಕಳೆದ ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೆಗ್ಗಾನ್ ಆಸ್ಪೆತ್ರೆಗೆ ಚಿಕಿತ್ಸೆಗಾಗಿ ಸ್ನೇಹಿತನ ಜತೆ ಬಂದಿದ್ದ ನಂದೀಶ್, ಚಿಕಿತ್ಸೆ ಪಡೆಯುವುದಿಲ್ಲ ಎಂದು ಹಠ ಮಾಡಿದ್ದಾರೆ. ಆಸ್ಪತ್ರೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಾಪಸ್ ಬರುತ್ತಿದ್ದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ…
ರಿಪ್ಪನ್‌ಪೇಟೆ – ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಮದೀನಾ ಕಾಲೋನಿಯ ಯುವಕನ ಬಂಧನ|Ripponpet
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಸಂತೆ ಮಾರ್ಕೆಟ್ ಬಳಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಮದೀನಾ ಕಾಲೋನಿ ನಿವಾಸಿ ತನ್ವೀರ್ ಬಂಧಿತ ಆರೋಪಿಯಾಗಿದ್ದಾನೆ.ಈತನಿಗೆ ಇತ್ತೀಚೆಗೆ ಗಾಂಜಾ ಸೇವನೆ ಆರೋಪದಡಿಯಲ್ಲಿ ಬಂಧಿಸಲಾಗಿದ್ದ ಸಿದ್ದಪ್ಪನಗುಡಿ ನಿವಾಸಿ ಸಿದ್ದೇಶ್ ಗಾಂಜಾ ನೀಡಿರುವುದಾಗಿ ತನಿಖೆ ವೇಳೆಯಲ್ಲಿ ಆರೋಪಿ ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ ಸಿದ್ದೇಶ್ ಮೇಲೆ ಪ್ರಕರಣ ದಾಖಲಾಗಿದೆ. ವೈದ್ಯಕೀಯ ಪರೀಕ್ಷೆಯಿಂದ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವ ಹಿನ್ನಲೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಆರೋಪಿಯನ್ನು…
ಗಾಜನೂರಿನ ಫಿಶ್ ಹೊಟೇಲ್ ಗಳ ಮೇಲೆ ಅಬಕಾರಿ ಇಲಾಖೆ ದಾಳಿ – ಅಪಾರ ಪ್ರಮಾಣದ ಮದ್ಯ ವಶ|gajanoor
ಗಾಜನೂರಿನಲ್ಲಿರುವ ಫಿಶ್ ಹೋಟೆಲ್ ಗಳ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸಿದೆ. ಯಾವುದೇ ಪರವಾನಗಿ ಇಲ್ಲದೆ ಫಿಶ್ ಹೋಟೆಲ್ ಗಳು ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ದಾಳಿ ನಡೆದಿದೆ. ಮಂಗಳವಾರ ಅಬಕಾರಿ ಉಪ ಆಯುಕ್ತರು ಕ್ಯಾಪ್ಟನ್ ಅಜೀತ್ ಕುಮಾರ್ ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಶಿವಮೊಗ್ಗ ತಾಲ್ಲೂಕಿನ ಗಾಜನೂರು ವ್ಯಾಪ್ತಿಯಲ್ಲಿನ ರೆಸ್ಟೋರೆಂಟ್ ಗಳು ಯಾವುದೇ ಅಬಕಾರಿ ಲೈಸೆನ್ಸ್ ಹೊಂದಿಲ್ಲದೆ ಸಾರ್ವಜನಿಕರಿಗೆ ಹೋಟೆಲ್ ನಲ್ಲಿ ಮದ್ಯ ಸರಬರಾಜು ಮಾಡಿ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುವ 7 ಹೋಟೆಲ್ ಗಳ ಮೇಲೆ…
ತೀರ್ಥಹಳ್ಳಿ : ಹಣದಾಸೆಗೆ ಸ್ನೇಹಿತನನ್ನು ಗುಂಡಿಕ್ಕಿ ಕೊಂದಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ |POSTMAN NEWS
ತೀರ್ಥಹಳ್ಳಿ : ಸ್ನೇಹಿತನನ್ನು ಹಣದ ಆಸೆಗೆ ಗುಡ್ಡಕ್ಕೆ ಕರೆಯಿಸಿ ಗುಂಡಿಕ್ಕಿ ಕೊಂದ ತೀರ್ಥಹಳ್ಳಿ ತಾಲೂಕಿನ ವಾಟಗಾರು ಗ್ರಾಮದ ಭುಜಂಗ (45) ಎಂಬುವರಿಗೆ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಭುಜಂಗ ತಮ್ಮ ಪಕ್ಕದ ಗ್ರಾಮದ ಮಳಲಿಮಕ್ಕಿ ಗ್ರಾಮದ ನಾಗರಾಜ್ (35) ನನ್ನು ಕೆಸಿನಮನೆ ಗ್ರಾಮದ ಅಭಯಾರಣ್ಯದ ಗುಡ್ಡಕ್ಕೆ ಕರೆಯಿಸಿ ತನ್ನ ಬಳಿ ಇದ್ದ ನಾಡ ಬಂದೂಕುನಿಂದ ಗುಂಡಿಕ್ಕಿ ಕೊಂದಿದ್ದರು. ಬಳಿಕ ನಾಗರಾಜ್ ಬಳಿ ಇದ್ದ ಬೈಕ್, ಹಣ, ಬಂಗಾರದ ಚೈನ್…
ಕೆಂಚನಾಲ : ಯುವಕನಿಗೆ PFI ಸಂಘಟನೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ – ದೂರು ದಾಖಲು|Kenchanal
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಯುವಕನೊಬ್ಬ ನಿಗೆ ಪಿಎಫ಼್ ಐ ಸಂಘಟನೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ instragram ನಲ್ಲಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಕೆಂಚನಾಲ ಗ್ರಾಮದ ಸುಮಂತ್ ಎಂಬ ಯುವಕನಿಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟ್ರಾಗ್ರಾಮ್ ನಲ್ಲಿ only____pfi ಎಂಬ ಖಾತೆಯಿಂದ ಜೀವ ಬೆದರಿಕೆ ಬಂದಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯ ಹಿನ್ನಲೆ : ಸಾಮಾಜಿಕ ಜಾಲತಾಣವಾದ Instagram ನ ಸಕ್ರೀಯ ಸದಸ್ಯನಾಗಿರುವ ಸುಮಂತ್ ಗೆ only___pfi ಎಂಬ…
ಭದ್ರಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ಗುಂಪಿನ ನಡುವೆ ಗಲಾಟೆ – ಓರ್ವನಿಗೆ ಚೂರಿ ಇರಿತ : ವದಂತಿಗಳಿಗೆ ಕಿವಿಗೊಡದಂತೆ ಪೊಲೀಸ್ ಇಲಾಖೆ ಮನವಿ|bhadravathi
ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಯುವಕರ ನಡುವೆ ಗಲಾಟೆ ನಡೆದಿರುವ ಘಟನೆ ಭದ್ರಾವತಿಯ ಗಾಂಧಿ ವೃತ್ತದಲ್ಲಿ ನಡೆದಿದೆ. ಗಲಾಟೆಯಲ್ಲಿ ಅರವಿಂದ್ ಮತ್ತು ಗೌತಮ್ ಎಂಬುವವರಿಗೆ ಗಾಯವಾಗಿದೆ. ಇಬ್ಬರನ್ನು ಭದ್ರವತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ಆಸ್ಪತ್ರೆ ಬಳಿಯೂ ಎರಡು ಕೋಮಿನ ಯುವಕರ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ರಿಜ್ವಾನ್ ಎಂಬುವರಿಗೆ ಚಾಕು ಇರಿಯಲಾಗಿದ್ದು, ಹರೀಶ್ ಎಂಬುವವರಿಗೆ ಗಾಯವಾಗಿದೆ. ಚಾಕು ಇರಿತಕ್ಕೊಳಗಾದ ರಿಜ್ವಾನ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭದ್ರಾವತಿ ಹಳೇ ನಗರ ಪೊಲೀಸ್…