Headlines

ಬಿಸಿಲ ಬೇಗೆಗೆ ತತ್ತರಿಸಿದ ಮಲೆನಾಡಿನ ಜನತೆ : ಬತ್ತಿದ ಬಾವಿಗಳು – ಕುಡಿಯುವ ನೀರಿಗೆ ಹಾಹಾಕಾರ|high- temperature

ಬಿಸಿಲ ಬೇಗೆಗೆ ತತ್ತರಿಸಿದ ಮಲೆನಾಡಿನ ಜನತೆ : ಬತ್ತಿದ ಬಾವಿಗಳು – ಕುಡಿಯುವ ನೀರಿಗೆ ಹಾಹಾಕಾರ ರಿಪ್ಪನ್‌ಪೇಟೆ;-ನಡು ಮಲೆನಾಡಿನ ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಜೀವನಾಡಿಯಾಗಿರುವ ಶರಾವತಿ ಕುಮದ್ವತಿ ಶರ್ಮಿನಾವತಿ ನದಿಗಳು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿದ್ದು ಈಗ ಬೇಸಿಗೆಯಲ್ಲಿ ಸಂಪೂರ್ಣವಾಗಿ ಬತ್ತಿ ಹೋಗಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದ್ದು ಆಡಿಕೆ ತೋಟಗಳು ಸಹ ಒಣಗಿ ಹೋಗುತ್ತಿದ್ದು ಜನರು ತತ್ತರಿಸಿ ಹೋಗಿದ್ದಾರೆ. ನಡು ಮಲೆನಾಡಿನಲ್ಲಿ ಬೇಸಿಗೆ ಬಿಸಿಲ ತಾಪಮಾನ 37-40 ಡಿಗ್ರಿಯಷ್ಟು ಬಿಸಿಲಿನ ಝಳಕ್ಕೆ ರೈತ ನಾಗರೀಕರು ತತ್ತರಿಸಿದ್ದಾರೆ.ಕುಡಿಯಲು…

Read Full News

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಕೆ ಎಸ್ ಈಶ್ವರಪ್ಪ|KSE

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಸಚಿವ, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.  ಈ ಸಂಬಂಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ”ನಾನು ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು” ಎಂದು ಮನವಿ ಮಾಡಿದ್ದಾರೆ. ”ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪ-ಮುಖ್ಯಮಂತ್ರಿಯವರೆಗೆ ಗೌರವ…

Read Full News

ಪೊಲೀಸರ ಭರ್ಜರಿ ಭೇಟೆ – ದಾಖಲೆ ಇಲ್ಲದ 5.8 ಕೋಟಿ‌ ಮೌಲ್ಯದ 9.5 KG ಚಿನ್ನ ವಶ

ಶಿವಮೊಗ್ಗ ಪೊಲೀಸರು  ಭರ್ಜರಿ ಬೇಟೆ ಮಾಡಿದ್ದಾರೆ. ಗಾಂಧಿಬಜಾರ್​ನಲ್ಲಿ ಸಂಗ್ರಹಿಸಿಟ್ಟಿದ್ದ ದಾಖಲೆ ಇಲ್ಲದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ವಿಚಾರದಲ್ಲಿ ಕೋಟೆ ಪೊಲೀಸ್ ಸ್ಟೇಷನ್​ ಸಿಬ್ಬಂದಿ ದಾಳಿ ನಡೆಸಿದ್ದು, ದಾಳಿ ವೇಳೆ ಬರೋಬ್ಬರಿ 9.5 ಕೆಜಿ ಚಿನ್ನ (gold) ಪತ್ತೆಯಾಗಿದೆ.  ಇಲ್ಲಿನ ಎಲೆ ರೇವಣ್ಣನ ಕೇರಿಯಲ್ಲಿರುವ ಇರುವ ಅಂಗಡಿಯೊಂದರಲ್ಲಿ  ಇಷ್ಟುದೊಡ್ಡ ಮೊತ್ತದ ಚಿನ್ನ ಸೀಜ್ ಮಾಡಲಾಗಿದೆ. ಇದು ಲಕ್ಷ್ಮಣ್​ರವರಿಗೆ ಸೇರಿದ್ದು ಎಂದು ತಿಳಿದುಬಂದಿದ್ದು, ದಾಖಲೆಗಳಿಲ್ಲದ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ಧಾರೆ.  ಇವತ್ತು ಬೆಳಗ್ಗೆ…

Read Full News

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ “ಟಪ್ ಫೈಟ್” ನೀಡುತ್ತಿರುವ ಚಂದ್ರಶೇಖರ್ ಪೂಜಾರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕನ ಹಿಂದೆ, ಈ ಬಾರಿ ಅವನೇ ನಾಯಕ.!?

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ “ಟಪ್ ಫೈಟ್” ನೀಡುತ್ತಿರುವುದು ಚಂದ್ರಶೇಖರ್ ಪೂಜಾರ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕನ ಹಿಂದೆ, ಈ ಬಾರಿ ಅವನೇ ನಾಯಕ.!? ಹರಿಹರ: ಈಗಾಗಲೇ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಏಪ್ರಿಲ್ 13ನೇ ತಾರೀಖಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಮೇ ಹತ್ತರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ 13 ರಂದು ಅಭ್ಯರ್ಥಿಗಳ ಭವಿಷ್ಯ ಹೊರಬಿಳಲಿದೆ. ಪ್ರಮುಖ ಪಕ್ಷಗಳು ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ…

Read Full News

ಉದ್ಯೋಗಾವಕಾಶ : ಏ.12 ರಂದು ವಿವಿಧ ಕಂಪನಿಗಳಿಂದ ನೇರ ಸಂದರ್ಶನ

 ಏಪ್ರಿಲ್ 12 ರಂದು ಶಿವಮೊಗ್ಗ ನಗರದ  ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಏ.12 ರ ಬೆಳಗ್ಗೆ 10.00ಕ್ಕೆ ಪತ್ರಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳು ಈ ನೇರ ಸಂದರ್ಶನದಲ್ಲಿ ಭಾಗವಹಿಸಲಿದ್ಧಾರೆ.  ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮೊ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ…

Read Full News

ಹೊಸನಗರ : ಚಿರತೆ ದಾಳಿಗೆ ಹಸು ಸಾವು – ಆತಂಕದಲ್ಲಿ ಗ್ರಾಮಸ್ಥರು|leopard

ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿರತೆ ದಾಳಿ ಹಸು ಸಾವು – ಮುಜಾಗ್ರತೆ ಕ್ರಮ ಕೈಗೊಳ್ಳಲು ಅರಣ್ಯ ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ಆಗ್ರಹ ಹೊಸನಗರ: ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಒಂದು ತಿಂಗಳಿಂದ ಚಿರತೆ ಓಡಾಟ ನಡೆಸುತ್ತಿದೆ ಎಂದು ಗ್ರಾಮಸ್ಥರು ಹೆದರಿ-ಹೆದರಿ ಓಡಾಟ ನಡೆಸುತ್ತಿದ್ದು ಮುಡ್ರಳ್ಳಿ ಬಳಿ ಒಂದು ಹಸು ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.ಚಿರತೆ ಓಡಾಟ ನಡೆಸುತ್ತಿರುವುದು ಈ ಘಟನೆಯಿಂದ ದೃಡಪಟ್ಟಿದೆ. ಹೊಸನಗರ ತಾಲ್ಲೂಕು ತ್ರಿಣಿವೆ-…

Read Full News

ಕಿಮ್ಮನೆ ನೇತೃತ್ವದ ಕಾಂಗ್ರೆಸ್ ರಥಕ್ಕೆ ಆರ್ ಎಂ ಮಂಜುನಾಥ್ ಗೌಡ ಸಾರಥಿ.!!- ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಕೂಡಿ ಬಾಳೋಣ ಮಂತ್ರ|kimmane-Rmm

ತೀರ್ಥಹಳ್ಳಿ : ರಾಜ್ಯದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ರಾಜ್ಯದ ಪ್ರತಿಷ್ಠಿತ ಕ್ಷೇತ್ರವಾದ ತೀರ್ಥಹಳ್ಳಿಯಲ್ಲಿ ಈ ಬಾರಿ ಚುನಾವಣೆ ರಂಗೇರಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮದ್ಯೆ ಪೈಪೋಟಿ ಮತ್ತಷ್ಟು ರೋಚಕತೆಯಿಂದ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಕಿಮ್ಮನೆ ರತ್ನಾಕರ್ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಆರ್ ಎಂ ಮಂಜುನಾಥ ಗೌಡರು ವಿವಿಧ ಕಡೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದ ಕಾರಣ ಬಂಡಾಯ ಏಳಬಹುದು ಎನ್ನಲಾಗುತಿತ್ತು. ಆದರೆ ಜೋಡೆತ್ತುಗಳು ಒಂದಾಗಿ ಚುನಾವಣೆ ಎದುರಿಸಿ ಕಾಂಗ್ರೆಸ್ ಪಕ್ಷವನ್ನು…

Read Full News

ಕಾಲೇಜಿನ ಗ್ರಂಥಾಲಯದಲ್ಲಿ ಪ್ರತ್ಯಕ್ಷವಾದ ಹಾವು – ಭಯ ಮೂಡಿಸಿದ್ದ ಬರೋಬ್ಬರಿ 8 ಅಡಿ ಉದ್ದದ ಹಾವು

ಶಿವಮೊಗ್ಗ ನಗರದ ಸಹ್ಯಾದ್ರಿ ಸೈನ್ಸ್ ಕಾಲೇಜು ಆವರಣದಲ್ಲಿರುವ ಗ್ರಂಥಾಲಯದಲ್ಲಿಯೇ ಹಾವೊಂದು ಕಾಣಿಸಿಕೊಂಡಿತ್ತು.  ಮೊನ್ನೆ ಕಾಲೇಜಿನ ಗ್ರಂಥಾಲಯದಲ್ಲಿ ಸುಮಾರು 8 ಅಡಿ ಉದ್ದದ ಹಾವೊಂದು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಪುಸ್ತಕಗಳ ರಾಶಿಯ ಅಡಿಯಲ್ಲಿ ಸೇರಿಕೊಂಡಿದ್ದ ಹಾವು, ಆಗಾಗ ಸದ್ದು ಮಾಡುತ್ತಿತ್ತು. ಮೊದಲೇ ನಿಶ್ಚಬ್ಧವಾಗಿದ್ದ ಲೈಬ್ರರಿಯಲ್ಲಿ ಹಾವಿನ ಸದ್ದು ತುಸು ಜೋರಾಗಿಯೇ ಕೇಳಿಬರುತ್ತಿತ್ತು.  ಇನ್ನೂ ಏನು ಶಬ್ಧವಾಗುತ್ತಿದೆ ಎಂದು ನೋಡಿದ ಸಿಬ್ಬಂದಿ ಹಾವೊಂದು ಗೃಂಥಾಲಯವನ್ನು ಸೇರಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಹಾವನ್ನು ಸುರಕ್ಷಿತವಾಗಿ ಹಿಡಿಯಬಲ್ಲ ಸ್ನೇಕ್​ ಜಯಂತ್ ಬಾಬುರನ್ನ ಸಂಪರ್ಕಿಸಿದ್ದಾರೆ.  ಕರೆ…

Read Full News

ನೀತಿಸಂಹಿತೆ ಉಲ್ಲಂಘನೆ – ಸಾಗರ ಬ್ಲಾಕ್ ಕಾಂಗ್ರೆಸ್ ಮುಖಂಡನ ಮೇಲೆ ಪ್ರಕರಣ ದಾಖಲು|election-code-of-coduct

ಶಿವಮೊಗ್ಗ ಜಿಲ್ಲೆ ಸಾಗರ ಬ್ಲಾಕ್​ ಕಾಂಗ್ರೆಸ್​ನ ಮುಖಂಡರ ವಿರುದ್ಧ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಕೇಸ್ ದಾಖಲಾಗಿದೆ.  ಕಳೆದ ಮಾರ್ಚ್​ 30 ರಂದು  ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳಾ ಸಮಾಜ ಆವರಣದಲ್ಲಿ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಗಿತ್ತು. ಈ ಸಂಬಂಧ  ಬ್ಲಾಕ್ ಕಾಂಗ್ರೆಸ್‌ ಸಮಿತಿ ಸಾಗರದ ಪ್ರಧಾನ ಕಾರ್ಯದರ್ಶಿ ಮಹಾಬಲೇಶ ಕೌತಿ ರವರು ಸಾಗರ ಉಪ ವಿಭಾಗಾಧಿಕಾರಿ ಬಳಿ ಅನುಮತಿ ಕೇಳಿದ್ದರು.  ಈ ಸಂಬಂಧ ಚುನಾವಣಾ ಅಧಿಕಾರಿಯಾದ ಎಸಿಯವರು  ಷರತ್ತು ಬದ್ಧ ಅನುಮತಿಯನ್ನು…

Read Full News

ಹೊಸನಗರ ತಾಲೂಕಿನ ಪಶು ಆಸ್ಪತ್ರೆಗಳು ವೈದ್ಯರು, ಸಿಬ್ಬಂದಿಗಳಿಲ್ಲದೇ ಭಣಗುಟ್ಟುತ್ತಿವೆ – 22 ಆಸ್ಪತ್ರೆಗೆ ಇಬ್ಬರೇ ವೈದ್ಯರು

ರಿಪ್ಪನ್‌ಪೇಟೆ : ಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿಗಳಿಸಿರುವ ಶಿವಮೊಗ್ಗ ಜಿಲ್ಲೆಯ ಮಧ್ಯ ಮಲೆನಾಡಿನ ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ 22 ಪಶು ಅಸ್ಪತ್ರೆಗೆ 2 ಜನ ವೈದ್ಯಾಧಿಕಾರಿಗಳು ಬಿಟ್ಟರೆ ಇನ್ನೂ ಯಾರು ಇರುವುದಿಲ್ಲ ರಾಜಕಾರಣಿಗಳ ಇಚ್ಚಾ ಶಕ್ತಿಯ ಕೊರತೆಯಿಂದಾಗಿ  ತಾಲೂಕಿನಾದ್ಯಂತ ಭಣಗುಟ್ಟುತ್ತಿವೆ ಪಶ ಆಸ್ಪತ್ರೆಗಳು. ರಾಜ್ಯ ಬಿಜೆಪಿ ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದು ಹೊಸನಗರ ತಾಲ್ಲೂಕ್ ಮಾತ್ರ ಹೈನು ಉದ್ಯಮ ಸೇರಿದಂತೆ ಗೋವುಗಳ ಲಾಲನೆ ಪಾಲನೆ ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಹಿಂದುಳಿಯುವಂತಾಗಿದೆ. ರಿಪ್ಪನ್‌ಪೇಟೆಯ…

Read Full News

ತೀರ್ಥಹಳ್ಳಿ : ಆತಂಕಕ್ಕೆ ಕಾರಣವಾಗಿದ್ದ ಚಿರತೆಯ ಮೃತದೇಹ ಮಲ್ಲೇಸರ ಅರಣ್ಯ ಪ್ರದೇಶದಲ್ಲಿ ಪತ್ತೆ|leopard

ತೀರ್ಥಹಳ್ಳಿ- ಮಲ್ಲೇಸರ ಸಿಂದೋಡಿ ಬಳಿಯ ಅರಣ್ಯ ಸಮೀಪದಲ್ಲಿ ಚಿರತೆಯ ಮೃತದೇಹ ಪತ್ತೆ !! ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಲ್ಲೇಸರ ಗ್ರಾಮದಲ್ಲಿ ಕಳೆದ ಕೆಲ ತಿಂಗಳಿನಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯ ಮೃತದೇಹ ಪತ್ತೆಯಾಗಿದೆ. ಹಲವಾರು ತಿಂಗಳಿನಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಸೆರೆಹಿಡಿಯಲು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಬೋನನ್ನು ಸಿದ್ದಪಡಿಸಿ ಇಟ್ಟಿದ್ದರು. ಆದರೂ ಚಿರತೆಯ ಚಲವಲನದ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಆದರೆ ಇಂದು ಚಿರತೆ ಸೆರೆಹಿಡಿಯಲು ಇಟ್ಟಿದ್ದ ಬೋನಿನ ಸಮೀಪದ ಅರಣ್ಯದಲ್ಲಿ ಚಿರತೆಯ…

Read Full News

ಯಡಿಯೂರಪ್ಪ ನೇತೃತ್ವದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತೇವೆ – ಸಿಎಂ ಬೊಮ್ಮಾಯಿ|CM

ತೀರ್ಥಹಳ್ಳಿ : ದೇಶದ ಇತಿಹಾಸದಲ್ಲಿ ಕಡಿಮೆ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಬಿಜೆಪಿ ತತ್ವ-ಸಿದ್ದಾಂತದಡಿ ಹುಟ್ಟಿ, ಅದನ್ನು ಬದಲಾಯಿಸದೇ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ದೊಡ್ಡ ಪಕ್ಷವಾಗಬೇಕಾದರೇ ಅಷ್ಟೇ ಜನರ ವಿಶ್ವಾಸ ಪಕ್ಷ ಗಳಿಸಬೇಕು. ವಿಶ್ವವೇ ಇವತ್ತು ಭಾರತದತ್ತ ನೋಡುವ ನಾಯಕತ್ವ ಬಿಜೆಪಿ ಹಾಗೂ ದೇಶಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ತಾಲೂಕಿನ ತೂದೂರು ಗ್ರಾಮದಲ್ಲಿ ಗುರುವಾರ ಮಂಡಗದ್ದೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ನಾಯಕತ್ವದ ಜೊತೆಗೆ…

Read Full News

ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ,ಆರ್ ಎಂಎಂ ನೇತೃತ್ವದ ಕಾಂಗ್ರೆಸ್ ಬಸ್ ಹತ್ತಲೂ ನೂಕುನುಗ್ಗಲು – ಕಮಲ ತೊರೆದು ಕೈ ಹಿಡಿದ 50ಕ್ಕೂ ಹೆಚ್ಚು ಕಾರ್ಯಕರ್ತರು

ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್ ಮತ್ತು ಆರ್ ಎಂ ಮಂಜುನಾಥ್ ಗೌಡ ನೇತೃತ್ವದ ಕಾಂಗ್ರೆಸ್ ಬಸ್ ಹತ್ತಲೂ ಕ್ಷೇತ್ರದಾದ್ಯಂತ ನೂಕುನುಗ್ಗಲು ಪ್ರಾರಂಭವಾಗಿದೆ.ಇಂದು ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿಯಲ್ಲಿ ಅಧಿಕೃತ ಅಭ್ಯರ್ಥಿಯಾಗಿ ಕಿಮ್ಮನೆ ರತ್ನಾಕರ್ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಕಾಂಗ್ರೆಸ್ ನ ತತ್ವ ಸಿದ್ದಾಂತ ಮತ್ತು ಕಿಮ್ಮನೆ ರತ್ನಾಕರ್ ಅವರ ನಾಯಕತ್ವವನ್ನು ಮೆಚ್ಚಿ ಪಟ್ಟಣದ ಯಡೇಹಳ್ಳಿಕೆರೆ ಬಾಲರಾಜ್ ಮತ್ತು ಅವರ 50 ಕ್ಕೂ ಹೆಚ್ಚು ಸ್ನೇಹಿತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಟ್ಟಣದ ಮುಖ್ಯ…

Read Full News

ಹೊಸನಗರ : SSLC ಪರೀಕ್ಷೆ ಬರೆದು ತಂದೆಯ ಅಂತ್ಯ ಸಂಸ್ಕಾರ ವೀಡಿಯೋ ಕಾಲ್‌ ಮೂಲಕ ವೀಕ್ಷಿಸಿದ ವಿದ್ಯಾರ್ಥಿನಿ- ಹೃದಯವಿದ್ರಾವಕ ಘಟನೆ

ವಿದ್ಯಾರ್ಥಿನಿಯೊಬ್ಬಳು SSLC ಪರೀಕ್ಷೆ ಬರೆದು ಹೋರಬಂದು, ತಂದೆ ಅಂತ್ಯಸಂಸ್ಕಾರವನ್ನು ವಿಡಿಯೋ ಕಾಲ್ ಮೂಲಕ ವೀಕ್ಷಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗೇರುಪುರದ ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ ಆರ್ಶಿಯಾ ಮನಿಯಾರ್ ತಂದೆಯನ್ನು ಕಳೆದುಕೊಂಡ ದುರ್ದೈವಿಯಾಗಿದ್ದಾರೆ. ಕೊಪ್ಪಳ ಮೂಲದ ವಿದ್ಯಾರ್ಥಿನಿ ಅರ್ಶಿಯಾ ಳ ತಂದೆ ಅಬಿದ್ ಪಾಷಾ. ಕಳೆದ ರಾತ್ರಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.ವಿಷಯ ತಿಳಿದ ಶಿಕ್ಷಕರು ರಾತ್ರಿಯೇ ವಿದ್ಯಾರ್ಥಿನಿಯನ್ನು ಕೊಪ್ಪಳಕ್ಕೆ ಕರೆದುಕೊಂಡು ಹೋಗಿ ಮೃತದೇಹದ ದರ್ಶನ ಮಾಡಿಸಿ ಇಂದು ಬೆಳಿಗ್ಗೆ ಪರೀಕ್ಷೆಯ…

Read Full News

ತೀರ್ಥಹಳ್ಳಿ : ತೂದೂರು ಗ್ರಾಮಕ್ಕೆ ಬರಲಿದ್ದಾರೆ ಮುಖ್ಯಮಂತ್ರಿ ಬೊಮ್ಮಾಯಿ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ ಸಿಎಂ ಫ್ಲೈಟ್|bommai

ನಾಳೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಗ್ರಾಮಕ್ಕೆ  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಆಗಮಿಸಿಲಿದ್ಧಾರೆ. ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಬಿಡುಗಡೆ ಮಾಡಿರುವ ಪ್ರವಾಸ ಪಟ್ಟಿಯಲ್ಲಿರುವ ಪ್ರಕಾರ,  ಬಸವರಾಜ ಬೊಮ್ಮಾಯಿಯವರು  ನಾಳೆ  ಬೆಳಿಗ್ಗೆ :09.00 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣ ದಿಂದ ವಿಶೇಷ ವಿಮಾನದ ಮೂಲಕ ಹೊರಟು 09.50 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿದ್ಧಾರೆ. .  ಅಲ್ಲಿ 10.30 ಕ್ಕೆ  ಆದಿ ಬಣಜಿಗರ” ಸಂಘದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ಧಾರೆ. ನಂತರ  ಮಧ್ಯಾಹ್ನ :12.00 ಕ್ಕೆ  “ರಾಜ್ಯ…

Read Full News

ಬೇಕೆನ್ನುವುದೇ ನರಕ – ಸಾಕೆನ್ನುವುದೇ ಮನುಜ ಮಾರ್ಗ | ಜೀವಿಗಳು ಪರಸ್ಪರ ಉಪಕಾರ ಭಾವನೆಯಿಂದ ಬದುಕಬೇಕು ; ಹೊಂಬುಜ ಶ್ರೀಗಳು|hombuja – matt

ಹೊಂಬುಜ : ಅಹಿಂಸೆಯಿಂದಲೇ ವಿಶ್ವಶಾಂತಿ ಸಂದೇಶದ ಮೂಲಕ ಸಕಲ ಜೀವಿಗಳಿಗೂ ಶಾಂತಿ ಬಯಸಿದ ಭ. ಮಹಾವೀರ ತೀರ್ಥಂಕರರ ಜನ್ಮ-ಜಯಂತಿಯನ್ನು ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾ ಸ್ಥಳವಾದ ಶ್ರೀಕ್ಷೇತ್ರ ಹೊಂಬುಜದಲ್ಲಿ ಇಂದು ಜಗದ್ಗುರು ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳ್ಳಿಗ್ಗೆ 8:00 ಕ್ಕೆ ಭ|| ಮಹಾವೀರ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ ನೆರವೇರಿದವು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು ಮನುಷ್ಯನು ಕೃತಕವಾಗಿ ಮಾಡುವ ಹಿಂಸೆಗಿಂತ ಮಾನಸಿಕವಾಗಿ ಮಾಡುವ ಹಿಂಸೆಯೇ…

Read Full News

ಗೃಹ ಸಚಿವರಿಗೂ ತಟ್ಟಿದ ಚುನಾವಣಾ ನೀತಿ ಸಂಹಿತೆಯ ಬಿಸಿ – ಸಭೆ ಅರ್ಧಕ್ಕೆ ಮೊಟಕುಗೊಳಿಸಿದ ಸಚಿವರು|election-code-of-conduct

ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿ ಸಮೀಪದಲ್ಲಿ ಇರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ವಿಶ್ವಕರ್ಮ ಸಮುದಾಯ ಮುಖಂಡರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕರೆಸಿ ಸಭೆಯನ್ನು ಹಮ್ಮಿಕೊಂಡಿದ್ದರು.ಈ ಸಭೆಯಲ್ಲಿ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಚುನಾವಣೆಯ ನಿಯಮಾವಳಿಯ ಅನುಸಾರ ಚುನಾವಣಾ ಅಧಿಕಾರಿಗಳಿಂದ ಈ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕಾಗಿತ್ತು. ಆದರೆ ಮಂಗಳವಾರ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ಸಭೆಗೆ ಚುನಾವಣ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಚುನಾವಣಾ ಅಧಿಕಾರಿಗಳು ದಿಡಿರ್ ದಾಳಿ…

Read Full News

ಶಿವಮೊಗ್ಗದಲ್ಲಿ ಗಲಭೆಗೆ ಹುನ್ನಾರ – ಆಯನೂರು ಮಂಜುನಾಥ್ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಲಿ – ಕೆ ದಿವಾಕರ್|AAP

ಶಿವಮೊಗ್ಗದಲ್ಲಿ ಗಲಭೆಗೆ ಹುನ್ನಾರ -ಆಯನೂರು ಹೇಳಿಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲಿ – ಕೆ ದಿವಾಕರ್ ರಿಪ್ಪನ್‌ಪೇಟೆ : ಶಿವಮೊಗ್ಗ ನಗರದಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಗಲಭೆಗೆ ಸಿದ್ದತೆ ನಡೆದಿದೆ ಎಂಬ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕೂಡಲೇ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಸಾಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ ದಿವಾಕರ್ ಆಗ್ರಹಿಸಿದರು. ಸೋಮವಾರ ಪಟ್ಟಣದ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ಪತ್ರೀಕಾ ಗೋಷ್ಠಿಯಲ್ಲಿ…

Read Full News

ರಿಪ್ಪನ್‌ಪೇಟೆ ಸಮೀಪದ ಮೂಗೂಡ್ತಿಯಲ್ಲಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಅಪಾರ ಹಾನಿ|fire

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಮೂಗೂಡ್ತಿ ಗ್ರಾಮದಲ್ಲಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ್ದು ಜಾನವಾರಿಗೆ ಬಳಸಲೆಂದು ಸಂಗ್ರಹಿಸಿಟ್ಟಿದ್ದ ಹುಲ್ಲು ಮತ್ತು ಶೇಖರಿಸಿಟ್ಟಿದ್ದ ಒಣ ಅಡಿಕೆ ಬೆಂಕಿಗೆ ಆಹುತಿಯಾಗಿದೆ. ಮೂಗೂಡ್ತಿ ಗ್ರಾಮದ ಕೃಷಿಕ ರುದ್ರಪ್ಪ ಗೌಡ ಎಂ ಡಿ ಎಂಬುವವರಿಗೆ ಸೇರಿದ ಕೊಟ್ಟಿಗೆಯಲ್ಲಿ ಇಂದು ಸಂಜೆ ಬೆಂಕಿ ಕಾಣಿಸಿಕೊಂಡಿದೆ.ತಕ್ಷಣ ಸ್ಥಳೀಯರ ಸಹಕಾರದಿಂದ ಜಾನುವಾರುಗಳನ್ನು ಹೊರತೆಗೆಯಲಾಯಿತು.ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕಾಗಿಸಿ ಕಾರ್ಯಾಚರಣೆ ನಡೆಸುತಿದ್ದಾರೆ. ಕೊಟ್ಟಿಗೆಯಲ್ಲಿದ್ದ ಒಣ ಹುಲ್ಲು ಹಾಗೂ ಲಕ್ಷಾಂತರ ರೂ ಮೌಲ್ಯದ ಶೇಖರಿಸಿಟ್ಟಿದ್ದ ಗೋಟು ಅಡಿಕೆ ಬೆಂಕಿಗೆ…

Read Full News

ತೀರ್ಥಹಳ್ಳಿಯ ಕಾಂಗ್ರೆಸ್ ಟಿಕೆಟ್ ಕಿಮ್ಮನೆ ರತ್ನಾಕರ್ ಗೆ ಬಹುತೇಕ ಖಚಿತ – ಇಂದೇ ಘೋಷಣೆಯ ಸಾಧ್ಯತೆ|kimmane

ತೀರ್ಥಹಳ್ಳಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್​ ಈಗಾಗಲೇ ತನ್ನ ಮೊದಲ ಪಟ್ಟಿಯನ್ನು ರಿಲೀಸ್​ ಮಾಡಿದ್ದು ಎರಡನೇ ಪಟ್ಟಿಯನ್ನು ಇಂದು ಸಂಜೆ ಅಥವಾ ನಾಳೆ ರಿಲೀಸ್ ಮಾಡಲಿದ್ದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕಿಮ್ಮನೆ ರತ್ನಾಕರ್ ಗೆ ಬಹುತೇಕ ಖಚಿತವಾಗಿದೆ ಎಂದು ಉನ್ನತ ಮೂಲಗಳ ಮಾಹಿತಿಯಿಂದ ತಿಳಿದುಬಂದಿದೆ. ಎರಡನೆ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿಯನ್ನು ಮಾತ್ರ ಘೋಷಿಸುತಿದ್ದು ಇನ್ನುಳಿದಂತಹ ಶಿವಮೊಗ್ಗ ನಗರ,ಶಿವಮೊಗ್ಗ ಗ್ರಾಮಾಂತರ ಮತ್ತು ಶಿಕಾರಿಪುರ ಕ್ಷೇತ್ರ ಅಭ್ಯರ್ಥಿಗಳನ್ನು ಇನೂ…

Read Full News

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ (05-04-2023) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 05/04/23 ರಂದು ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ರಿಪ್ಪನ್ ಪೇಟೆ  110/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣ ಕಾರ್ಯವಿರುವ ನಿಮಿತ್ತ  ನಾಳೆ ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 3-00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ??? ರಿಪ್ಪನ್ ಪೇಟೆ,ಹೆದ್ದಾರಿಪುರ,ಕೆಂಚನಾಲ,ಗರ್ತಿಕೆರೆ, ಬೆಳ್ಳೂರು,ಅರಸಾಳು,ಕೋಡೂರು ಮತ್ತು ಚಿಕ್ಕಜೇನಿ…

Read Full News

ಚುನಾವಣೆಯ ಠೇವಣಿ ಕಟ್ಟಲು ದೇಣಿಗೆ ಕೊಟ್ಟ ಗ್ರಾಮಸ್ಥರು – ಭಾವುಕರಾಗಿ ಕಣ್ಣೀರಿಟ್ಟ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ|Beluru

ಸಾಗರ ವಿಧಾನಸಭಾ ಕ್ಷೇತ್ರದ ಹೊಸನಗರ ತಾಲೂಕಿನ ಹೆಬೈಲು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗ್ರಾಮಸ್ಥರು ದೇಣಿಗೆ ರೂಪದಲ್ಲಿ ಚುನಾವಣೆಗೆ ಠೇವಣಿ ಕಟ್ಟಲು ಹಣ ನೀಡಲು ಮುಂದಾದ ಸಂಧರ್ಭದಲ್ಲಿ ಬೇಳೂರು ಗೋಪಾಲಕೃಷ್ಣ ಭಾವುಕರಾದ ಘಟನೆ ನಡೆದಿದೆ. ಹೆಬ್ಬೈಲು ಲೋಕಪ್ಪರವರ ಮನೆಯಲ್ಲಿ 2023ರ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗ ವಿಜಾಪುರ ಮತ್ತು ಮತ್ತಿಕೊಪ್ಪ ವತಿಯಿಂದ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರುರವರಿಗೆ ದೇಣಿಗೆ ರೂಪದಲ್ಲಿ ಠೇವಣಿಗೆ ಹಣ ನೀಡಿದರು. ಅಭಿಮಾನಿಗಳು ಪ್ರೀತಿಯಿಂದ…

Read Full News

ಸಾಗರ : ಏಕಾಏಕಿ ಬಾಲಕನಿಗೆ ಗುಮ್ಮಿದ ಗೂಳಿ – ವೀಡಿಯೋ ವೈರಲ್|sagara

ದಾರಿಯಲ್ಲಿ ಹೋಗುತ್ತಿದ್ದ ಗೂಳಿ ಅಪ್ರಚೋದಿತವಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪುಟ್ಟ ಬಾಲಕನ ಮೇಲೆ ದಾಳಿ ನಡೆಸಿ, ಆತನನ್ನು ಕ್ಷಣ ಮಾತ್ರದಲ್ಲಿ ಕೊಂಬುಗಳಿಂದ ಎತ್ತಿ ಬಿಸಾಕಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನೆಹರೂ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಸಹೋದರರು ಸೈಕಲ್ ನಲ್ಲಿ ಆಟವಾಡುತ್ತಿರುವುದನ್ನು ನೋಡುತ್ತಿದ್ದ ಬಾಲಕನ ಮೇಲೆ ಗೂಳಿ ದಾಳಿ ನಡೆಸಿರುವ ಘಟನೆ ನೆಹರು ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.  ಗಾಯಾಳು ಬಾಲಕನನ್ನು 6 ವರ್ಷದ ನಜಾನ್ ಆಲಿಖಾನ್ ಎಂದು ತಿಳಿದು ಬಂದಿದೆ.ಮನೆಯ ಸಮೀಪವೇ ಏಕಾಏಕಿ ಗೂಳಿ  ದಾಳಿ…

Read Full News

ಕಮಲ ತೊರೆದು ಕೈ ಹಿಡಿದ ಬಾಳೂರು ಗ್ರಾಪಂ ಉಪಾಧ್ಯಕ್ಷ ದಿವಾಕರ್|congress

ಕಮಲ ತೊರೆದು ಕೈ ಹಿಡಿದ ಬಾಳೂರು ಗ್ರಾಪಂ ಉಪಾಧ್ಯಕ್ಷ ದಿವಾಕರ್ ರಿಪ್ಪನ್‌ಪೇಟೆ : ಬಾಳೂರು(Baluru) ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿವಾಕರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಭಾನುವಾರ ಕೆಂಚನಾಲ(Kenchanala) ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಿಧಾನಸಭಾ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ಕಾಂಗ್ರೆಸ್(Congress) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಇವರು ಇಂದು  ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.ಬಾಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ…

Read Full News

ಎಂಎಲ್ ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್ ರಾಜೀನಾಮೆ..!!! ಈಶ್ವರಪ್ಪ ಪುತ್ರ ಕಾಂತೇಶ್ ಗೆ ತಮ್ಮ ವಿರುದ್ದ ಸ್ಪರ್ಧಿಸಲು ಪಂಥಾಹ್ವಾನ|ayanur manjunath

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣಕ್ಕೆ ಇಳಿಯಬೇಕು ಎಂದು ನಿರ್ಧಾರ ಮಾಡಿದ್ದೇನೆ. ಶೀಘ್ರದಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಚುನಾವಣಾ ಆಖಾಡಕ್ಕೆ ಇಳಿಯುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಕೂಡ ನಿಲುವು ಪ್ರಕಟಿಸಿದ್ದೇನೆ. ಪಕ್ಷದ ವೇದಿಕೆಯಲ್ಲಿ ಕೂಡ ನನ್ನ ವಿನಂತಿಯನ್ನು ಸಲ್ಲಿಸಿದ್ದೇನೆ. ಆದರೆ, ವಿನಂತಿಗೆ ಪೂರಕವಾಗಿ ನನಗೆ ಪಕ್ಷದಿಂದ ಟಿಕೆಟ್ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಆದರೆ ಕೆಲವರ ಮಕ್ಕಳ…

Read Full News

ಬೇಳೂರು – ಕಾಗೋಡು ಸಮ್ಮುಖದಲ್ಲಿ ಬಾಳೂರು ಗ್ರಾಪಂ ಮಾಜಿ ಅಧ್ಯಕ್ಷೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ|congress

ಬೇಳೂರು – ಕಾಗೋಡು ಸಮ್ಮುಖದಲ್ಲಿ ಬಾಳೂರು ಗ್ರಾಪಂ ಮಾಜಿ ಅಧ್ಯಕ್ಷೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ರಿಪ್ಪನ್‌ಪೇಟೆ : ಬಾಳೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇಂದು ಬಾಳೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 20 ತಿಂಗಳು ಬಾಳೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಕಾರ್ಯ  ನಿರ್ವಹಿಸಿದ್ದ ಲೀಲಾವತಿ…

Read Full News

ರಿಪ್ಪನ್‌ಪೇಟೆ – ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿಯ 116 ನೇ ಜನ್ಮ ದಿನಾಚರಣೆ

ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ 116ನೇ ಜನ್ಮ ದಿನಾಚರಣೆಯನ್ನು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಆಚರಿಸಲಾಯಿತು‌. ಪಟ್ಟಣದ ಹಿಂದೂ ಮಹಾಸಭಾ ವೇದಿಕೆಯಲ್ಲಿ ಪಟ್ಟಣದ ಡಾ.ಶಿವಕುಮಾರ ಸ್ವಾಮೀಜಿರವರ ಭಕ್ತ ವೃಂದ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಆಶೀರ್ವಚನ ನೀಡಿ ಕಲಿಯುಗದ ನಡೆದಾಡುವ ದೇವರಾದ ಡಾ. ಶಿವಕುಮಾರ ಸ್ವಾಮೀಜಿ ಯವರು ಕೋಟ್ಯಾಂತರ ಮಂದಿಗೆ ತ್ರಿವಿಧ ದಾಸೋಹದ…

Read Full News

ಡಿಕೆಶಿ ಸಂಧಾನ ಸಭೆ ಯಶಸ್ವಿ – ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಅಂತಿಮ|dk-rmm-kimmane

ಶಿವಮೊಗ್ಗ: ಕಿಮ್ಮನೆ ರತ್ನಾಕರ್ ಅವರಿಗೆ ಚುನಾವಣೆಗೆ ಟಿಕೆಟ್ ನೀಡುವುದು ಮತ್ತು  ಆರ್.ಎಂ.ಮಂಜುನಾಥಗೌಡ ಅವರನ್ನು ವಿಧಾನ ಪರಿಷತ್ ಗೆ ಕಳುಹಿಸುವ  ಭರವಸೆಯನ್ನು ಕೆಪಿಸಿಸಿ  ನೀಡಿದೆ ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ವಿದಾನಸಭಾ ಕ್ಷೇತ್ರದ ಉಮೇದರುವಾರಿಕೆ ಸಂಬಂಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥಗೌಡ ಮಧ್ಯೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.  ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥ ಗೌಡ ಅವರ ನಡುವೆ ಪ್ರಬಲ…

Read Full News

ಹುಲಿಕಲ್ ಘಾಟಿ ಏಪ್ರಿಲ್ 15 ರವರೆಗೆ ಬಂದ್ – ಸಕಾಲಕ್ಕೆ ಮುಗಿಯಲಿಲ್ಲ ಕಾಮಗಾರಿ : ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ…

ಏಪ್ರಿಲ್ 5 ರಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದ್ದ ಬಾಳೇಬರೆ ಘಾಟಿ ಮತ್ತೆ 15 ದಿನಗಳ ಕಾಲ ಬಂದ್ ಆಗಿರಲಿದೆ. ಇದರಿಂದಾಗಿ ಹೊಸನಗರ-ಕುಂದಾಪುರ, ಸಾಗರ-ಕುಂದಾಪುರ ಹಾಗೂ ತೀರ್ಥಹಳ್ಳಿ ಕುಂದಾಪುರ ಮಾರ್ಗಕ್ಕೆ ಪರ್ಯಾಯ ರಸ್ತೆಗಳನ್ನ ಸೂಚಿಸಲಾಗಿದೆ. ಫೆ.5 ರಂದು ಬಾಳೇಬರೆ ಘಾಟಿಯಲ್ಲಿ 2570 ಮೀಟರ್ ಪೇವ್ ಮೆಂಟ್ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು ಏ.5 ರ ವರೆಗೆ ಬಾಳೇಬರೆ ಘಾಟಿಯನ್ನ ಬಂದ್ ಮಾಡಿ ಬದಲೀ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಕಾರಣಾಂತರದಿಂದ ಏ.15 ರವರೆಗೆ ಘಾಟಿಯಲ್ಲಿ ವಾಹನ ಸಂಚಾರವನ್ನ ಬಂದ್ ಮಾಡಿ…

Read Full News

ಶಿವಮೊಗ್ಗ – ಹರಕೆರೆ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ಕೋಟ್ಯಾಂತರ ರೂ ವಶ|election

Shivamogga ಮಾ.31: ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಹರಕೆರೆ ಚೆಕ್ ಪೋಸ್ಟ್ ನಲ್ಲಿ 1 ಕೋಟಿ 39 ಲಕ್ಷ ರೂ ನಗದು ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕರ್ನಾಟಕ ಸಾರ್ವತ್ರಿಕ ಚುನಾವಣೆ ಹಿನ್ನಲೆ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು, ವಾಹನಗಳನ್ನು ತಪಾಸಣೆ ನಡೆಸುತ್ತಿರುವ ವೇಳೆ ಯಾವುದೇ ದಾಖಲೆಯಿಲ್ಲದೆ ಹರಕೆರೆ ಚೆಕ್ ಪೋಸ್ಟ್ ನಲ್ಲಿ ಸಾಗಿಸುತ್ತಿದ್ದ ಬೊಲೆರೋ ವಾಹನದಲ್ಲಿ 1 ಕೋಟಿ 39 ಲಕ್ಷ ರೂ. ಹಣ ಪತ್ತೆಯಾಗಿದೆ. ಕಾರು ತಪಾಸಣೆ ನಡೆಸಿದಾಗ 1 ಕೋಟಿ ರೂ. ನಗದು…

Read Full News