Headlines

ಮನೆಯ ಕೊಟ್ಟಿಗೆಯಲ್ಲಿ ಅಡಗಿ‌ ಕುಳಿತಿದ್ದ ಚಿರತೆ – ಅರಣ್ಯಾಧಿಕಾರಿಗಳಿಂದ ಯಶಸ್ವಿ ರಕ್ಷಣಾ ಕಾರ್ಯಾಚರಣೆ|leopard

ಸೊರಬ: ತಾಲೂಕಿನ ಕುಪ್ಪೆ ಗ್ರಾಮದ ಮನೆಯೊಂದರ ಕೊಟ್ಟಿಗೆಯಲ್ಲಿ ಅಡಗಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.  ಗ್ರಾಮದ ಶಿವಕುಮಾರ್ ಗೌಡ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಸೇರಿದ್ದು, ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.  ಕೂಡಲೇ ಕಾರ್ಯಪ್ರವೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.  ಚಿರತೆಗೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹಂಪೆಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.  ಕಾರ್ಯಾಚರಣೆಯಲ್ಲಿ…

Read Full News

ಬಡ ಕುಟುಂಬದ ಮಹಿಳೆಯರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ|

ಹೆಣ್ಣುಮಕ್ಕಳ ಮೇಲೆ ದರ್ಪ ತೋರಿದ ಅರಣ್ಯಇಲಾಖೆ ಅಧಿಕಾರಿಗಳು ತೀರ್ಥಹಳ್ಳಿ : ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೈಮರ ಸಮೀಪದ ಸುಣ್ಣದಮನೆ ಎಂಬಲ್ಲಿ ಹೆಣ್ಣುಮಕ್ಕಳ ಮೇಲೆ ಅರಣ್ಯಇಲಾಖೆ ಅಧಿಕಾರಿಗಳು ಹಲ್ಲೆ ನೆಡೆಸಿದ್ದಲ್ಲದೆ ತೀರ ಅಮಾನವೀಯವಾಗಿ ನೆಡೆದುಕೊಂಡಿದ್ದಾರೆ. ರವಿ ನಾಯಕ್ ಎಂಬುವರು ಅಲ್ಲಿ ಡಿಮ್ಯಾಂಡ್ ದಾಖಲೆಯ ಆಧಾರದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದು ಗ್ರಾಮಪಂಚಾಯಿತಿಯಿಂದ ಡಿಮ್ಯಾಂಡ್ ಕೂಡ ಕೊಟ್ಟಿದ್ದಾರೆ. ಆದರೂ ಇಂದು ಏಕಾಏಕಿ ಮನೆಗೆ ನುಗ್ಗಿದ ಅರಣ್ಯ ಅಧಿಕಾರಿಗಳು ಮನೆಯಲ್ಲಿ ಇದ್ದವರ ಮೇಲೆ ಹಲ್ಲೆ ನೆಡೆಸಿದ್ದಾರೆ. ಸುಮಾರು 8 ಜನ ಅರಣ್ಯ ಅಧಿಕಾರಿಗಳು…

Read Full News

ರಿಪ್ಪನ್‌ಪೇಟೆ : ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಭಾರಿ ನಷ್ಟ|fire

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಚಂದಾಳದಿಂಬ ಗ್ರಾಮದಲ್ಲಿ ರೈತರೊಬ್ಬರ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಭಾರಿ ನಷ್ಟವಾಗಿರುವ ಘಟನೆ ನಡೆದಿದೆ. ಚಂದಾಳದಿಂಬ ಸಮೀಪದ ಅಮಟೆಕೊಪ್ಪ ಗ್ರಾಮದ ಲಿಂಗಮೂರ್ತಿ ಗೌಡ ರವರ ಮನೆಯ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಶೇಖರಿಸಿಟ್ಟಿದ್ದ ಹಳೆಯ ನಾಟ ಮತ್ತು ಹುಲ್ಲು ಪಿಂಡಿಗಳು ಬೆಂಕಿಗೆ ಅಹುತಿಯಾಗಿದೆ. ಬೆಂಕಿ ಹತ್ತಿದ ಮಾಹಿತಿ ಸಿಕ್ಕ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದಾರೆ.ಅಗ್ನಿಶಾಮಕ ಸಿಬ್ಬಂಧಿ ಕಾರ್ಯಾಚರಣೆಯನ್ನು ಕೈಗೊಂಡಿದ್ದರಿಂದಾಗಿ ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಕಾರ್ಯಾಚರಣೆಯಲ್ಲಿ…

Read Full News

ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಮಾನ ಮತದಾನ ಹಕ್ಕು ನೀಡಿದ ದೇಶ ಭಾರತ – ವೀರನಗೌಡ ಹುಡೇದ|voting awareness

ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಮಾನ ಮತದಾನ ಹಕ್ಕು ನೀಡಿದ ದೇಶ ಭಾರತ – ವೀರನಗೌಡ ಹುಡೇದ ರಿಪ್ಪನ್ ಪೇಟೆ  : ವಿಶ್ವದ ಕೆಲವು ದೇಶಗಳು ನೂರಾರು ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ ಸಹ ಮಹಿಳೆಯರಿಗೆ ಮತದಾನದ ಹಕ್ಕು ನೀಡಿರಲಿಲ್ಲ. ಆ ರಾಷ್ಟ್ರಗಳು ಅನೇಕ ವರ್ಷಗಳ ನಂತರ ಸಮಾನ ಮತದಾನ ಹಕ್ಕು ಪಡೆಯುವಂತಾಯಿತು. ಆದರೆ ಭಾರತ ಮಾತ್ರ ಸ್ವಾತಂತ್ರ ಬಂದ ಪ್ರಥಮದಲ್ಲಿ ಸ್ತ್ರೀ-ಪುರುಷ ಎಂದು ಭೇದ ಭಾವ ಮಾಡದೆ ಸಮಾನ ಮತದಾನದ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಯಿತು. ಈ ಕಾರ್ಯದಲ್ಲಿ ಡಾ. ಬಾಬಾ…

Read Full News

ರಿಪ್ಪನ್‌ಪೇಟೆ – ಮತದಾನ ಪ್ರಕ್ರಿಯೆ ಕುರಿತು ಜಾಗೃತಿಗಾಗಿ ಈ ಸ್ವೀಪ್ ಬಸ್ ಸಂಚಾರ|election

ರಿಪ್ಪನ್‌ಪೇಟೆ :  ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತಿದ್ದು ಮತದಾರರಲ್ಲಿ ಇವಿಎಂ/ವಿವಿಪ್ಯಾಟ್ ಸೇರಿದಂತೆ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸಿ, ಮತದಾನ ಪ್ರಮಾಣ ಹೆಚ್ಚಿಸುವುದು ಈ ಸ್ವೀಪ್ ಎಕ್ಸ್‌ಪ್ರೆಸ್ ಬಸ್ ಸಂಚಾರದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಐಈಸಿ ಸಮಾಲೋಚನಾಧಿಕಾರಿ ಗಣೇಶ್ ತಿಳಿಸಿದರು. ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮತ್ತು ಶಿವಮೊಗ್ಗ ಸ್ವೀಪ್ ಸಮಿತಿ ಹಾಗೂ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಲಾದ ಮತದಾನ ಜಾಗೃತಿ ಕಾರ್ಯಕ್ರಮದ ಕುರಿತು ರಿಪ್ಪನ್‌ಪೇಟೆ ವಿನಾಯಕ ವೃತ್ತದಲ್ಲಿ ಸ್ವೀಪ್ ಎಕ್ಸ್‌ಪ್ರೆಸ್ ಒಳಗೆ ಮಾದರಿ ಮತದಾನ…

Read Full News

ಬೆಳಕು ಕೊಟ್ಟ ನಾಡನ್ನು ಕತ್ತಲಲ್ಲಿರಿಸಿದ ಮೂರು ಪಕ್ಷಗಳನ್ನು ತಿರಸ್ಕರಿಸಿ – ಸಾಲೂರು ಶಿವಕುಮಾರ್|AAP

ರಾಜ್ಯಕ್ಕೆ ಬೆಳಕು ಕೊಟ್ಟ ನಾಡನ್ನು ಕತ್ತಲಲ್ಲಿರಿಸಿದ ಮೂರು ಪಕ್ಷಗಳನ್ನು ತಿರಸ್ಕರಿಸಿ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವ ಮೂಲಕ ಸದೃಡ,ನಿರ್ಭೀತ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಲೂರು ಶಿವಕುಮಾರ್ ಹೇಳಿದರು. ಹುಂಚ ಹೋಬಳಿಯ ಗರ್ತಿಕೆರೆ ಗ್ರಾಮದಲ್ಲಿ ಮತಯಾಚನೆ ಕಾರ್ಯಕ್ರಮದ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯಕ್ಕೆ ವಿದ್ಯುತ್ ನೀಡಲು ತನ್ನೆಲ್ಲಾ ಸರ್ವಸ್ವವನ್ನೂ ಕಳೆದುಕೊಂಡ ನಾಡನ್ನು ಈಗ ಕತ್ತಲಲ್ಲಿರಿಸಿರುವ ಪ್ರಮುಖ ಮೂರು ಪಕ್ಷಗಳನ್ನು…

Read Full News

ರಾಷ್ಟ್ರಕವಿ ಕುವೆಂಪು ಜಿಲ್ಲೆಯಲ್ಲಿ ನಾಡಗೀತೆ ಬದಲು ಮೊಳಗಿದ ತಮಿಳುನಾಡಿನ ನಾಡಗೀತೆ|election

ರಾಷ್ಟ್ರ ಕವಿ ಕುವೆಂಪು ರವರ ತವರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆ ಹಾಡಿರುವ ಘಟನೆ ನಡೆದಿದೆ. ನಗರದ ಎನ್ ಇಎಸ್ ಮೈದಾನದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ತಮಿಳು ಬಾಂಧವರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ  ಮಾಜಿ ಸಚಿವ ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಹಾಗೂ ಮುಖ್ಯ ಅಥಿತಿಗಳಾಗಿ ಅಣ್ಣಮಲೈ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಲು ಮುಂದಾಗಿದ್ದರು. ಆದರೆ ತಮಿಳು ನಾಡಿನ ನಾಡಗೀತೆ ಹಾಡು ಆರಂಭವಾಗಿತ್ತು. ತಕ್ಷಣವೇ ಈಶ್ವರಪ್ಪ…

Read Full News

ನಾಗರಹಳ್ಳಿ ನಾಗೇಂದ್ರಸ್ವಾಮಿಯ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಜಗದ್ಗುರು ಶಂಕರಾಚಾರ್ಯರ ಜಯಂತಿ ಮಹೋತ್ಸವ ಸಂಪನ್ನ|nagarahalli

“ನಾಗೇಂದ್ರಸ್ವಾಮಿಯ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಜಗದ್ಗುರು ಶಂಕರಾಚಾರ್ಯರ ಜಯಂತಿ ಮಹೋತ್ಸವ  ಸಂಪನ್ನ’’ ರಿಪ್ಪನ್‌ಪೇಟೆ;-ಸಮೀಪದ ಇತಿಹಾಸ ಪ್ರಸಿದ್ದ ಶ್ರೀನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ   ಶ್ರಿ ನಾಗೇಂದ್ರ ಸ್ವಾಮಿಯ ಹನ್ನೆರಡನೇ ವರ್ಷದ ಪ್ರತಿಷ್ಟಾವಧಂತಿ ಉತ್ಸವ ಮತ್ತು ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತೋತ್ಸವ ಕಾರ್ಯಕ್ರಮವು ಶ್ರದ್ದಾಭಕ್ತಿಯಿಂದ ಜರುಗಿತು. ನಾಗೇಂದ್ರಸ್ವಾಮಿಯ ಸನ್ನಿಧಿಯಲ್ಲಿ ದೇವತಾ ಪ್ರಾಥನೆ ಪೂಜೆ, ದೇವನಾಂದಿ,ಪ್ರಧಾನ ಸಂಕಲ್ಪ,ಮಹಾಗಣಪತಿ ಹವನ, ಸಪರಿವಾರ ಗಣಗಳಿಗೆ ಮೂಲಮಂತ್ರ ಹವನ ಹಾಗೂ ಪ್ರಾಯಶ್ಚಿತ್ತ ಹವನಗಳು ಶ್ರೀಸ್ವಾಮಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ,ಸಂಜೆ ಪ್ರಾಸಾದ ಶುದ್ಧಿ,ವಾಸ್ತು ,ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಜಗದ್ಗುರು…

Read Full News

ಮೂಲೆಗದ್ದೆ ಶ್ರೀಗಳ ಅಶೀರ್ವಾದ ಪಡೆದ ಸಾಗರ ಕ್ಷೇತ್ರದ ಪಕ್ಷೇತ್ರರ ಅಭ್ಯರ್ಥಿ ಶಿವಕುಮಾರ್ ವಿ.ಪಾಟೀಲ್|election

ಮೂಲೆಗದ್ದೆ ಶ್ರೀಗಳ ಅಶೀರ್ವಾದ ಪಡೆದ  ಪಕ್ಷೇತ್ರರ ಅಭ್ಯರ್ಥಿ ಶಿವಕುಮಾರ್ ವಿ.ಪಾಟೀಲ್ ರಿಪ್ಪನ್‌ಪೇಟೆ;- ಮೇ 10 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಸಾಗರ-ಹೊಸನಗರ ಕ್ಷೇತ್ರದ ಪಕ್ಷೇತರ ಆಭ್ಯ್ಯರ್ಥಿ  ಶಿವಕುಮಾರ್ ವಿ.ಪಾಟೀಲ್  ಇಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀಗಳನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಾಗರ ಹೊಸನಗರ ತಾಲ್ಲೂಕ್‌ ವ್ಯಾಪ್ತಿಯಲ್ಲಿ ವೀರಶೈವ ಲಿಂಗಾಯ್ತಿ ಮತದಾರರು ಹೆಚ್ಚು ಇದ್ದರೂ ಕೂಡಾ ಯಾವುದೇ ರಾಷ್ಟ್ರೀಯ ಪಕ್ಷದವರು ನಮ್ಮ ಜನಾಂಗವನ್ನು ಗುರುತಿಸದೇ ನಿರ್ಲಕ್ಷಿö್ಯಸುತ್ತಾ ಬಂದಿದ್ದು ಬರೀ ನಮ್ಮ…

Read Full News

PUC RESULT | ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆದ ಅನ್ವಿತಾ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿಸಂಸ್ಥೆಯಿಂದ ಸನ್ಮಾನ

PUC RESULT | ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆದ ಅನ್ವಿತಾ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿಸಂಸ್ಥೆಯಿಂದ ಸನ್ಮಾನ – IAS ಗುರಿ ಹೊಂದಿರುವ ಗ್ರಾಮೀಣ ಪ್ರತಿಭೆಯ ಮನದಾಳದ ಮಾತು ರಿಪ್ಪನ್ ಪೇಟೆ : ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ ಡಿ ಎನ್ ಅನ್ವಿತಾ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಿವಮೊಗ್ಗದ ವಿಕಾಸ ಪಿಯುಸಿ ಕಾಂಪೊಸಿಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಡಿ.ಎನ್….

Read Full News

ಲೋಕ ಕಲ್ಯಾಣಕ್ಕಾಗಿ ಸಂಪನ್ನಗೊಂಡ ಆಶ್ಲೇಷ ಬಲಿ ಪೂಜೆ|worship

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ತಮಡಿಕೊಪ್ಪ ಗ್ರಾಮದಲ್ಲಿ ಶ್ರೀ ಗುರು ಕರಿಬಸವೇಶ್ವರ ಬಾಲಸುಬ್ರಹ್ಮಣ್ಯ ಸ್ವಾಮಿ ಹಾಗೂ ನಾಗದೇವತೆ ನಾಗಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ  ಶಾಸಕ ಹರತಾಳು ಹಾಲಪ್ಪ ಗೆಲುವಿಗಾಗಿ ಅವರ ಪರವಾಗಿ ಶ್ರೀ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ಭಕ್ತರು ಹಾಗೂ ಗೃಹ ಸಚಿವರ ಆಪ್ತ ಸಹಾಯಕರಿಂದ ಹಾಗೂ ಹಾಲಪ್ಪ ಅಭಿಮಾನಿಗಳಿಂದ ಭಾನುವಾರ ಶ್ರೀ ಕ್ಷೇತ್ರದಲ್ಲಿ ವಿಶೇಷ ಆಶ್ಲೇಷ ಬಲಿ ಪೂಜೆ ವಿದ್ಯಾಪನ ಹೋಮ ಲಕ್ಷ್ಮಿ ಹೃದಯ ಹೋಮವು ಸಂಪನ್ನಗೊಂಡಿತು. ವೇದ…

Read Full News

ಶುದ್ದ ರಾಜಕಾರಣದ ಮಾತನಾಡುವ ತೀರ್ಥಹಳ್ಳಿಯ ಇಬ್ಬರು ಅಭ್ಯರ್ಥಿಗಳು ಚುನಾವಣೆ ಹಿಂದಿನ ದಿನ ಮತದಾರನ ಮನೆ ಬಾಗಿಲು ಬಡಿಯುವುದು ಯಾಕೆ – ಯಡೂರು ರಾಜಾರಾಂ|JDS

ಶುದ್ದ ರಾಜಕಾರಣದ ಮಾತನಾಡುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ಚುನಾವಣೆ ಹಿಂದಿನ ದಿನ ತಮ್ಮ ಕಾರ್ಯಕರ್ತರ ಮೂಲಕ ಮತದಾರನ ಮನೆ ಬಾಗಿಲು ತಟ್ಟುವುದು ಯಾಕೆ ಎಂದು  ಜೆಡಿಎಸ್ ಪಕ್ಷದ ಅಭ್ಯರ್ಥಿ ಯಡೂರು ರಾಜಾರಾಂ ಪ್ರಶ್ನೆ ಮಾಡಿದರು. ಹುಂಚಾ ಹೋಬಳಿ ವ್ಯಾಪ್ತಿಯ ಹುಂಚ, ಹೆದ್ದಾರಿಪುರ, ಕೋಡೂರು, ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿ ಕಲ್ಲೂರು ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ,ಸಚ್ಚಾರಿತ್ರ್ಯದ ನಾಟಕವಾಡುವ ಇಬ್ಬರು ರಾಷ್ಟ್ರೀಯ ಪಕ್ಷದ ರಾಜಕಾರಣಿಗಳು ಚುನಾವಣೆಯ ಹಿಂದಿನ…

Read Full News

ಪ್ರಧಾನಿ ಮೋದಿಗೆ ಗುಂಡಿಕ್ಕಿ ಎಂದಿದ್ದ ಬೇಳೂರಿಗೆ ನೀವು ಮತ ಹಾಕುತ್ತೀರಾ – ಹರತಾಳು ಹಾಲಪ್ಪ|Political-news

ರಿಪ್ಪನ್‌ಪೇಟೆ : ಕಳೆದ ಚುನಾವಣೆಯ ಸಂದರ್ಭದ ದೇಶದ ಪ್ರಧಾನಿ ಮೋದಿಯವರಿಗೆ ಗುಂಡಿಕ್ಕಿ,ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬವನ್ನು ಜೈಲಿಗೆ ಕಳುಹಿಸಿ ಎಂದಿದ್ದ ಇದೇ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಈಗ ಯಡಿಯೂರಪ್ಪನವರಂತಹ ಪುಣ್ಯಾತ್ಮ ಎಂದು ಮತದಾರರ ಮುಂದೆ ಕಣ್ಣೀರು ಹಾಕುತ್ತಾ ಹಗಲು ವೇಷ ಮಾಡುತ್ತಿದ್ದಾರೆ ಅಂತವರಿಗೆ ನೀವು ಮತ ಹಾಕುತ್ತೀರಾ ಎಂದು ಶಾಸಕ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹೇಳಿದರು. ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬಾಳೂರು-ಕೆಂಚನಾಲ-ಅರಸಾಳು-ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದೊಂದಿಗೆ ಮನೆಮನೆಗೆ ಭೇಟಿ ಸಂದರ್ಭದಲ್ಲಿ ಅರಸಾಳು ಗ್ರಾಮದಲ್ಲಿ…

Read Full News

ಮೇ 4ಕ್ಕೆ ಸಾಗರಕ್ಕೆ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್

ಮೇ 1 ರಿಂದಲೇ ಮಧ್ಯದಂಗಡಿ ಬಂದ್ ಮಾಡಿ ಅಧಿಕಾರಿಗಳ ಬದಲಾಯಿಸಿ – ಕೆ ದಿವಾಕರ್ ಮೇ 4 ಕ್ಕೆ ಸಾಗರಕ್ಕೆ ಆಮ್ ಆದ್ಮಿ ಪರ ಪ್ರಚಾರ ಸಭೆಗೆ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ರಿಪ್ಪನ್‌ಪೇಟೆ;- ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆಭ್ಯರ್ಥಿ ಹರತಾಳು ಹಾಲಪ್ಪ ಆಧಿಕಾರ ಚಲಾಯಿಸಿ ಮಧ್ಯವನ್ನು ಹಂಚುವ ಹುನ್ನಾರದಲ್ಲಿದ್ದು ಆ ಕಾರಣ ಮೇ.1 ರಂದಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮಧ್ಯಮಾರಾಟವನ್ನು ಬಂದ್ ಮಾಡುವುದು ಮತ್ತು ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ಚಕ್‌ಪೋಸ್ಟ್ಗಳಲ್ಲಿ ಯಾವುದೇ ವಾಹನವನ್ನು ತಪಾಸಣೆ…

Read Full News

ಜ್ಞಾನವು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ದಿವ್ಯಶಕ್ತಿಯಾಗಿದೆ – ಡಾ.ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ|hombuja shri

ರಿಪ್ಪನ್ ಪೇಟೆ : ಜ್ಞಾನವು ಎಲ್ಲರನ್ನೂ ಸನ್ಮಾರ್ಗಕ್ಕೆ ತೆಗೆದುಕೊಂಡು ಹೋಗುವ ದಿವ್ಯಶಕ್ತಿಯಾಗಿದೆ. ಅಜ್ಞಾನದಿಂದ, ಅಂಧಕಾರದಿಂದ ಬೆಳಕಿನ ಕಡೆಗೆ ತೆಗೆದುಕೊಂಡು ಹೋಗುವ ಶಕ್ತಿ ಜ್ಞಾನದಲ್ಲಿರುತ್ತದೆ. ಜ್ಞಾನದ ಶಕ್ತಿಯು ಪ್ರತಿಯೊಬ್ಬರಲ್ಲಿಯೂ ಕೂಡ ಸಮನಾಗಿದ್ದರೂ ಅದರ ಅಭಿವೃದ್ಧಿ ಎಲ್ಲರಲ್ಲಿಯೂ ಸಮಾನಾಗಿರುವುದಿಲ್ಲ. ಎಲ್ಲಾ ಶಿಲೆಯಲ್ಲಿಯೂ ಮೂರ್ತಿಯಾಗುವ ಅರ್ಹತೆ ಇದ್ದರೂ ಶಿಲ್ಪಿ ತನ್ನ ಕೌಶಲ್ಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸುತ್ತಾನೆಯೂ ಅಷ್ಟರ ಮಟ್ಟಿಗೆ ಅದು ರೂಪುಗೊಳುತ್ತದೆ. ಹಾಗೆಯೇ ಮನುಷ್ಯನು ತನ್ನಲ್ಲಿರುವ ಜ್ಞಾನದ ಶಕ್ತಿಯನ್ನು ರೂಪುಗೊಳಿಸಿಕೊಳ್ಳಬೇಕು ಎಂದು ಹೊಂಬುಜ ಜೈನ ಮಠದ  ಡಾ. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ…

Read Full News

ಹಳ್ಳಿ ಮಕ್ಕಳ ರಂಗ ಹಬ್ಬದ ಸಮಾರೋಪ ಹಾಗೂ ಬಸವ ಜಯಂತಿ ಸಂಭ್ರಮೋತ್ಸವ|Ripponpet

“ಹಳ್ಳಿ ಮಕ್ಕಳ ರಂಗ ಹಬ್ಬದ ಸಮಾರೋಪ ಹಾಗೂ ಬಸವ ಜಯಂತಿ ಸಂಭ್ರಮೋತ್ಸವ’’ ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಅರಿವಿಲ್ಲದಂತಾಗಿದೆ :ಡಾ. ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ. ರಿಪ್ಪನ್‌ಪೇಟೆ;- ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಹಾಗೂ  ಸಂಸ್ಕಾರ ಇಲ್ಲದಂತಾಗಿದೆ.ಇತ್ತೀಚಿನ ದಿನಗಳಲ್ಲಿ  ನಾಟಕ ರಂಗಕಲೆ ಜಾನಪದ ತತ್ವ ಪದಗಳಿಂದ ನಮ್ಮ ಕಲೆ ಸಂಸ್ಕೃತಿ ಗಳು ಜೀವಂತವಾಗಿ ಉಳಿದಿದ್ದು ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಕ್ಕಳ ರಂಗ ಹಬ್ಬ ಪ್ರೇರಕವೆಂದು ಮಳಲಿಮಠದ ಡಾ.ಗುರುನಾಗಭೂಷಣ…

Read Full News

ಸಾಗರದ ಪ್ರತಿಷ್ಠಿತ RBD ಗ್ರೂಪ್ಸ್ ನ ಮಹೇಶ್ ಮತ್ತು ಜಲೀಲ್ ನೂರಾರು ಅಭಿಮಾನಿಗಳೊಂದಿಗೆ ಕಾಂಗ್ರೆಸ್ ಸೇರ್ಪಡೆ

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ದಿನಕಳೆದಂತೆ ರಂಗೇರುತಿದ್ದು ಅಭಿವೃದ್ದಿಗಿಂತ ಪ್ರೀತಿ ವಿಶ್ವಾಸಕ್ಕೆ ನಮ್ಮ ಸಹಕಾರ ಎಂದು ಕ್ಷೇತ್ರದ ಜನ ತೀರ್ಮಾನ ಮಾಡಿದಂತೆ ಭಾಸವಾಗುತಿದ್ದು ಆ ನಿಟ್ಟಿನಲ್ಲಿ ಯುವಕ ಯುವತಿಯರಿಂದ ಹಿಡಿದ್ದು ವೃದ್ದರವರೆಗೂ ಬೇಳೂರು ಗೋಪಾಲಕೃಷ್ಣ ರವರಿಗೆ ಬೆಂಬಲ ಸೂಚಿಸುತ್ತಿರುವುದು ಎದ್ದು ಕಾಣುತ್ತಿದೆ. ಹೌದು ಸಾಗರದ ಪ್ರಖ್ಯಾತ ಉದ್ಯಮಿಗಳಾದ RBD ಡೆವಲಪರ್ಸ್ ನ  ಜಲೀಲ್ ಮತ್ತು ಮಹೇಶ್ ಇವರು ಸಾಗರ ಕ್ಷೇತ್ರದಾದ್ಯಂತ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಕ್ಷೇತ್ರದಾದ್ಯಂತ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆಯೇ ಹೊರತು ಯಾವುದೇ ಪಕ್ಷಗಳಲ್ಲಿ ಗುರುತಿಸಿಕೊಂಡವರಲ್ಲ…

Read Full News

ರಿಪ್ಪನ್‌ಪೇಟೆ : ಪದವಿ‌ ಕಾಲೇಜಿನ ಆವರಣದಲ್ಲಿ ಜೇನು ದಾಳಿ – ಹಲವು ವಿದ್ಯಾರ್ಥಿಗಳಿಗೆ ಗಾಯ|Bee attack

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಅವರಣದಲ್ಲಿ ಜೇನುನೊಣಗಳು ದಾಳಿ ಮಾಡಿದ್ದರಿಂದ ಸುಮಾರು 13 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಇಂದು ಬೆಳಿಗ್ಗೆ ಜೇನುಹುಳುಗಳು ದಾಳಿ ಮಾಡಿದ್ದರಿಂದ 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿರದಿದ್ದರೂ, ಅವರಲ್ಲಿ ಹಲವರಿಗೆ ಜೇನುನೊಣಗಳು ಕುಟುಕಿದ ಜಾಗದ ಸುತ್ತಲೂ ಭಾರಿ ಊತ ಕಂಡುಬಂದಿದೆ. ಆಗಿದ್ದೇನು? ಕಳೆದೊಂದು ತಿಂಗಳಿನಿಂದ ಕಾಲೇಜಿಗೆ…

Read Full News

ರಿಪ್ಪನ್‌ಪೇಟೆ : ಗ್ರಾಪಂ ಮಾಜಿ ಉಪಾಧ್ಯಕ್ಷೆ ಖತೀಜಾಬಿ ರೆಹಮಾನ್ ನಿಧನ|Ripponpet

ರಿಪ್ಪನ್‌ಪೇಟೆ : ಗ್ರಾಪಂ ಮಾಜಿ ಉಪಾಧ್ಯಕ್ಷೆ ಖತೀಜಾಬಿ ರೆಹಮಾನ್ ನಿಧನ ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆ ನಿವಾಸಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಖತೀಜಾಬಿ ರೆಹಮಾನ್ ವಯೋಸಹಜ ಮೃತಪಟ್ಟಿದ್ದಾರೆ. ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ದಿವಂಗತ ಡಾ.ಅಬೂಬಕರ್ ರವರ ತಾಯಿಯಾದ ಖತೀಜಾಬಿ ರೆಹಮಾನ್ 2001 ರಲ್ಲಿ ಬರುವೆ 3 ವಾರ್ಡ್ ನ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿ ಗ್ರಾಪಂ ಉಪಾಧ್ಯಕ್ಷರಾಗಿದ್ದರು.2003 ರಲ್ಲಿ ಜೆಡಿಎಸ್ ಪಕ್ಷದಿಂದ ತಾಲೂಕ್ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದರು. ಮೃತರು ಏಳು ಜನ ಪುತ್ರರು ಹಾಗೂ…

Read Full News

23 ಕೋಟಿ ಮೌಲ್ಯದ ಚಿನ್ನ ಸೀಜ್

ತರೀಕೆರೆಯಲ್ಲಿ ಚುನಾವಣಾ ಸಿಬ್ಬಂದಿ  ಭರ್ಜರಿ ಬೇಟೆಯಾಡಿದ್ದಾರೆ. ಬರೋಬ್ಬರಿ 23 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ಸೀಜ್​ ಆದ ಬಂಗಾರದ ತೂಕ 40 ಕೆ.ಜಿ.  ಚಿಕ್ಕಮಗಳೂರು ಜಿಲ್ಲೆ  ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಪೋಲಿಸ್ ಚೆಕ್ ಪೋಸ್ಟ್ ನಲ್ಲಿ ಚೆಕ್ ಪೋಸ್ಟ್ ನಲ್ಲಿ ಬರೋಬ್ಬರಿ 40 ಕೆ.ಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.   ಚಿನ್ನವನ್ನು ಕಂಟೇನರ್‌ನಲ್ಲಿ ಸಾಗಿಸಲಾಗುತ್ತಿತ್ತು.ಚೆಕ್‌ಪೋಸ್ಟ್‌ನಲ್ಲಿ ಕಂಟೇನರ್‌ ತಡೆದು ತಪಾಸಣೆ ನಡೆಸಿದಾಗ ಆಭರಣಗಳು ಸಾಗಿಸುತ್ತಿರುವುದು ಕಂಡುಬಂದಿದೆ. ಆಭರಣಗಳಿಗೆ ಪೂರಕವಾಗಿ ಯಾವುದೇ ದಾಖಲೆಗಳು ನೀಡದೇ ಹಿನ್ನೆಲೆಯಲ್ಲಿ ಅದನ್ನು ಸೀಜ್​…

Read Full News

ರಿಪ್ಪನ್ ಪೇಟೆ ಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ – ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ‌ ನೆಮ್ಮದಿ ಸಾಧ್ಯ : ಮುನೀರ್ ಸಖಾಫ಼ಿ|Ramadan

ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ  ಮುನೀರ್ ಸಖಾಫಿ ಮತ್ತು ಮುಪ್ತಿ ಇಜ್ ಹಾರ್ ಅಹಮದ್ ರವರ ನೇತೃತ್ವದಲ್ಲಿ ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ ಒಂದು ತಿಂಗಳಿನಿಂದ ಉಪವಾಸ ಹಾಗೂ ಧಾರ್ಮಿಕ ಆಚರಣೆಗಳ ವಿಧಿವಿಧಾನಗಳನ್ನು ಪಾಲಿಸಿದ ಅವರುಗಳು ಶುಕ್ರವಾರ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ  ಇಂದು…

Read Full News

PU RESULT | ಕಲಾ ವಿಭಾಗದಲ್ಲಿ ಶೇ 95% ಅಂಕ ಪಡೆದ ಮಿಸ್ಬಾ – ಆನಂದಪುರ ಪಿಯು ಕಾಲೇಜಿಗೆ ಶೇ 77% ರಷ್ಟು ಫಲಿತಾಂಶ

PUC RESULT | ಆನಂದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 77% ರಷ್ಟು ಫಲಿತಾಂಶ ಆನಂದಪುರ : ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆನಂದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇಕಡಾ 77 ರಷ್ಟು ಫಲಿತಾಂಶ ಬಂದಿದೆ. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಿಸ್ಬಾ ಶೇಕಡಾ 95% ಅಂಕ ಗಳಿಸುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 143 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 110 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಕಲಾ…

Read Full News

ಜ್ಞಾನೇಂದ್ರ ಮತ್ತು ಹಾಲಪ್ಪ ಗೆಲುವಿಗೆ ಏಪ್ರಿಲ್ 23ರ ಭಾನುವಾರ ವಿಶೇಷ ಆಶ್ಲೇಷ ಬಲಿ-ಉದ್ಯಾಪನ ಹೋಮ

ಶ್ರೀ ಕರಿಬಸವೇಶ್ವರ ಮತ್ತು ಬಾಲಸುಬ್ರಮಣ್ಯ ಸ್ವಾಮಿ ಹಾಗೂ ನಾಗದೇವತೆ ನಾಗಕ್ಷೇತ್ರದಲ್ಲಿ ಆಶ್ಲೇಷ ಬಲಿ ರಿಪ್ಪನ್‌ಪೇಟೆ : ಇಲ್ಲಿಗೆ ಸಮೀಪದ ತಮ್ಮಡಿ ಕೊಪ್ಪದ ಉಕ್ಕಡಗಾತ್ರಿ ಶ್ರೀ ಗುರು ಕರಿಬಸವೇಶ್ವರ ಹಾಗೂ ಬಾಲಸುಬ್ರಮಣ್ಯ ಸ್ವಾಮಿ ಮತ್ತು ನಾಗದೇವತೆಗಳ ದೇವಾಲಯದಲ್ಲಿ ಏಪ್ರಿಲ್ 23ರ ಭಾನುವಾರ ವಿಶೇಷ ಆಶ್ಲೇಷ ಬಲಿ ಉದ್ಯಾಪನ ಹೋಮ ಲಕ್ಷ್ಮಿ ಹೃದಯ ಹೋಮವನ್ನು ಏರ್ಪಡಿಸಲಾಗಿದೆ. ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ಹಾಗೂ ದೇವಸ್ಥಾನದ ಭಕ್ತಾದಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಇವರುಗಳು ಮುಂಬರುವ ವಿಧಾನಸಭಾ…

Read Full News

ರಿಪ್ಪನ್‌ಪೇಟೆ ಕಾಲೇಜ್‌ಗೆ ಪಿಯು ಪರೀಕ್ಷೆಯಲ್ಲಿ 81.96% ರಷ್ಟು ಫಲಿತಾಂಶ

ರಿಪ್ಪನ್‌ಪೇಟೆ ಕಾಲೇಜ್‌ಗೆ ಪಿಯು ಪರೀಕ್ಷೆಯಲ್ಲಿ ಶೇಕಡಾ 81.96 ರಷ್ಟು ಫಲಿತಾಂಶ ರಿಪ್ಪನ್‌ಪೇಟೆ : ಕಳೆದ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇಕಡಾ 81.96 ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜ್ ಪ್ರಾಚಾರ್ಯ ಎ.ಮಂಜುನಾಥ ತಿಳಿಸಿದರು. ಕಾಲೇಜಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 244 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 200 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಕಲಾ ವಿಭಾಗದಲ್ಲಿ 101 ವಿದ್ಯಾರ್ಥಿಗಳಲ್ಲಿ 80 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ…

Read Full News

ಪಿಯುಸಿ ಫಲಿತಾಂಶ ಪ್ರಕಟ : ತೀರ್ಥಹಳ್ಳಿಯ ಅನ್ವಿತಾ ರಾಜ್ಯಕ್ಕೆ ಎರಡನೇ ರ‍್ಯಾಂಕ್‌ – ಅಮೃತಾ ಕಾಲೇಜಿಗೆ 90.28% ಫಲಿತಾಂಶ

ಕರ್ನಾಟಕದಾದ್ಯಂತ ಯಶಸ್ವಿಯಾಗಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇಂದು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, 7,26,195 ವಿದ್ಯಾರ್ಥಿಗಳ ಪೈಕಿ 5 ಲಕ್ಷದ 24 ಸಾವಿರ 209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ1,34,876 ಶ್ರ( ಶೇಕಡಾ 61.22ರಷ್ಟು) ವಿದ್ಯಾರ್ಥಿ ಪಾಸ್ ಆಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 1,82,246 (ಶೇಕಡಾ 75.89ರಷ್ಟು) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ 2,07,087 (ಶೇಕಡಾ 85.71ರಷ್ಟು) ಪಾಸ್…

Read Full News

ಕಂತೆ ಕಂತೆ ಹಣ ಎಣಿಸಿದ ಸಾಗರ ನಗರಸಭೆ ಉಪಾಧ್ಯಕ್ಷ – ವೀಡಿಯೋ ವೈರಲ್| ಶಾಸಕ ಹಾಲಪ್ಪ ಆಪ್ತನ ವಿರುದ್ದ ಪ್ರಕರಣ ದಾಖಲು|sagara

ಸಾಗರ ನಗರಸಭೆ ಉಪಾಧ್ಯಕ್ಷರ ಮನೆಯಲ್ಲಿ ಹಣ ತುಂಬುತ್ತಿರುವ ವಿಡಿಯೋ ವೈರಲ್ ಆಗಿದ್ದು, ಚುನಾವಣೆ ಆಯೋಗ ಎಫ್ಐಆರ್ ದಾಖಲಿಸಿಕೊಂಡಿದೆ. ಸಾಗರ ನಗರಸಭೆ ಉಪಾಧ್ಯಕ್ಷ ಮಹೇಶ್ ವಿರುದ್ಧ ಎಪ್ಐಆರ್ ದಾಖಲಾಗಿದೆ. ಸಾಗರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರ ಆಪ್ತನಾಗಿರುವ  ಮಹೇಶ್ ಹಣವನ್ನ ಬ್ಯಾಗಿಗೆ ತುಂಬುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಗರ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ದಾನಪ್ಪ ದೂರಿನ ಅನ್ವಯ ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು  ಸಾಗರ ಠಾಣೆ ಪೋಲೀಸರು ತನಿಖೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ಮಹೇಶ್ ಬ್ಯಾಗಿಗೆ…

Read Full News

ಸಾಗರ ವಿಧಾನಸಭಾ ಚುನಾವಣೆಗೆ ಕೆಆರ್ ಎಸ್ ಪಕ್ಷದಿಂದ ಸ್ಪರ್ಧೆಗಿಳಿದ ಟಿಕ್ಕಿ ಅಬ್ಬಿ ಕಿರಣ್|election

ಸಾಗರ ವಿಧಾನಸಭಾ ಚುನಾವಣೆಗೆ ಕೆಆರ್ ಎಸ್ ಪಕ್ಷದಿಂದ ಸ್ಪರ್ಧೆಗಿಳಿದ ಟಿಕ್ಕಿ ಅಬ್ಬಿ ಕಿರಣ್ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದಲ್ಲಿ ಅಬ್ಬರದ ಪ್ರಚಾರ ಮೆರವಣಿಗೆಗಳು ನಡೆಯುತ್ತಿವೆ. ಆದರೆ ಈ ಅಬ್ಬರದ ಪ್ರಚಾರದ ಮಧ್ಯೆ ಒಬ್ಬ ಇಂಜಿನಿಯರ್ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದು, ಹಣವಂತರು- ಅಬ್ಬರದ ಪ್ರಚಾರದ ಮಧ್ಯೆ ಟೆಕ್ಕಿ (Techie) ಸರಳ ರೀತಿಯಲ್ಲಿ ಅಖಾಡಕ್ಕೆ ಇಳಿದಿದ್ದಾರೆ.  ಹೌದು ಹೊಸನಗರ ತಾಲೂಕಿನ ಮುಂಬಾರು ಗ್ರಾಪಂ ವ್ಯಾಪ್ತಿಯ ಬೇಹಳ್ಳಿ ಗ್ರಾಮದ…

Read Full News

ಶಿವಮೊಗ್ಗ, ಭದ್ರಾವತಿಯಲ್ಲಿ ಗುಡುಗು ಸಹಿತ ಮಳೆ|Rain

ಶಿವಮೊಗ್ಗ : ಬಾರಿ ಬಿಸಿಲಿನಿಂದಾಗಿ ಕಾದ ಕಾವಲಿಯಂತಾಗಿದ್ದ ಶಿವಮೊಗ್ಗ, ಭದ್ರಾವತಿಯಲ್ಲಿ ಮಳೆಯಾಗುತ್ತಿದೆ . ಗುಡುಗು ಸಹಿತ ಮಳೆ ಸುರಿಯುತ್ತಿರುವುದರಿಂದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಗಾಳಿ, ಗುಡುಗು ಸಹಿತ ಜೋರಾಗಿ ಮಳೆಯ ಸುರಿಯಲು ಆರಂಭವಾಗಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ.ಇನ್ನು ಭದ್ರಾವತಿ ಯಲ್ಲೂ ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ.  ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯಾಗುತ್ತಿದ್ದಂತೆ ಖುಷಿಯಾದರು. ದಿಢೀರ್‌ ಮಳೆಯಿಂದಾಗಿ ಜನರು ಅಂಗಡಿಗಳು,…

Read Full News

ಶಿವಮೊಗ್ಗ ನಗರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್ , ಚೆನ್ನಬಸಪ್ಪ ,ಯೋಗೀಶ್ ನಾಮಪತ್ರ ಸಲ್ಲಿಕೆ – ತ್ರಿಕೋನ ಸ್ಪರ್ಧೆಗೆ ಸಜ್ಜಾದ ಕ್ಷೇತ್ರ|election

 ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷದ ಘಟಾನುಗಟಿಗಳು ಇಂದು ನಾಮಪತ್ರ ಸಲ್ಲಿಸುವ ಮೂಲಕ ಚುನಾವಣ ಕಣ ರಂಗೇರಿದೆ.  ಕಾಂಗ್ರೆಸ್‌ನಿಂದ ಹೆಚ್.ಸಿ. ಯೋಗೀಶ್, ಬಿಜೆಪಿಯಿಂದ ಎಸ್.ಎನ್. ಚನ್ನಬಸಪ್ಪ ಹಾಗೂ ಜೆಡಿಎಸ್‌ನಿಂದ ಆಯನೂರು ಮಂಜುನಾಥ್ ಇಂದು ವಿಧಾನಸಭಾ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದರು. ಇಂದು ಮೊದಲು ಬಿಜೆಪಿಯಿಂದ ಜೆಡಿಎಸ್ ಪಕ್ಷ ಸೇರಿ ಬಿ ಫಾರಂ ಪಡೆಯಲು ಯಶಸ್ವಿಯಾದ ಆಯನೂರು ಮಂಜುನಾಥ್ ಪ್ರಥಮ ಬಾರಿಗೆ ಜಿಲ್ಲಾ ಜೆಡಿಎಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ನಂತರ ಜಿಲ್ಲಾ ಜೆಡಿಎಸ್…

Read Full News

ಆರಗ ಆಸ್ತಿ ಮೂರು ಪಟ್ಟು ಹೆಚ್ಚು – ಕಿಮ್ಮನೆ ಆಸ್ತಿಯಷ್ಟೇ ಸಾಲ|ಜಿಲ್ಲೆಯ ಪ್ರಮುಖ ಅಭ್ಯರ್ಥಿಗಳ ಆಸ್ತಿ ಎಷ್ಟಿದೆ.???? ಈ ಸುದ್ದಿ ನೋಡಿ

ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರ (Karnataka assembly election 2023)ಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಕೆಳಗಿನಂತಿದೆ. ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆರಗ ಅವರ ಆಸ್ತಿ ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಏರಿಕೆಯಾಗಿದೆ. ₹6.28 ಕೋಟಿ ಆಸ್ತಿ ಘೋಷಿಸಿದ್ದಾರೆ. 20 ಎಕರೆ ಜಮೀನು ಇದೆ, ಮೂರು ಕಾರು, ಪತ್ನಿ ಬಳಿ 250 ಗ್ರಾಂ ಚಿನ್ನವಿದೆ. ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಅವರು…

Read Full News