ಜನಪದ ವೈದ್ಯರತ್ನ ಮಂಗಳದ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ಇನ್ನಿಲ್ಲ…

ಜನಪದ ವೈದ್ಯರತ್ನ ಮಂಗಳದ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ಇನ್ನಿಲ್ಲ…

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಜನಪದ ವೈದ್ಯ ರತ್ನ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ನಾಲ್ಕೈದು ದಶಕಗಳಿಂದ ಪಾರಂಪರಿಕ ನಾಟಿ ವೈದ್ಯ ವೃತ್ತಿ ಯಲ್ಲಿ ಪ್ರಚಾರ ವಿಲ್ಲದೇ ಯಶಸ್ಸು ಕಂಡ ಮಂಗಳದ ಶಿವಣ್ಣ ಗೌಡರು ವಯೋಸಹಜ ಖಾಯಿಲೆಯಿಂದ ಇಂದು ಮುಂಜಾನೆ 4.45 ಕ್ಕೆ ದೈವಾಧೀನರಾಗಿದ್ದಾರೆ.

ಮಲೆನಾಡಿನ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಸಮೀಪದ ರಾಮನಸರ ಮಂಗಳ ಇಂದು ರಾಜ್ಯ ದಲ್ಲೇ ಹೆಸರು ಪಡೆದುಕೊಂಡಿದೆ. ಪಾರಂಪರಿ ನಾಟಿ ಔಷಧಿ ನೀಡುತ್ತಾ
ಸಾವಿರಾರು ಜನರ ಬದುಕಿಗೆ ಆಶಾಕಿರಣರಾಗಿದ್ದ ಮಂಗಳದ ಶಿವಣ್ಣ ಗೌಡರು. ತಮ್ಮ ಇಳಿವಯಸ್ಸಿನಲ್ಲು ಹುಮ್ಮಸ್ಸಿನಿಂದ ಸೇವೆ
ಮಾಡುತ್ತ.ಕೈಕಾಲು ಮುರಿತ ಬೆನ್ನುನೋವು ಮೂಳೆ
ನೋವುಗಳಿಗೆ ಇವರು ಔಷಧಿ ಗಳನ್ನು ನೀಡಿ ಸೈ
ಎನಿಸಿಕೊಂಡಿದ್ದಾರೆ.  ರಾಜ್ಯದ ನಾನಾ ಭಾಗಗಳಿಂದ ಜನರು ಇವರ ಚಿಕಿತ್ಸೆಗೆ ಮಾರುಹೋಗಿದ್ದರು.

ಇವರ ಮಗ ಶ್ರೀಕಾಂತ್ ಕೂಡ ನಾಟಿ ವೈದ್ಯರಾಗಿದ್ದು ಇವರ ಜೊತೆ ಸೇವೆಯಲ್ಲಿ ನೆರವಾಗುತಿದ್ದರು.

ಸಮಾಜದ ಅನೇಕ ಪ್ರತಿಷ್ಠಿತ ರು ಇವರ ಸೇವೆ ಪಡೆದುಕೊಂಡಿದ್ದಾರೆ.ಮಾಜಿ ಸಚಿವೆ ಮನೋರಮ ಮದ್ವರಾಜ್ ಪತ್ರಕರ್ತೆ ಗೌರಿ ಲಂಕೇಶ್ ಸಾಹಿತಿಗಳಾದ ಚಂದ್ರಶೇಖರ್ ಕಂಬಾರ್ ಸಚಿವರಾದ ಈಶ್ವರಪ್ಪನವರು ಹಾಗೂ ಹೊರ ರಾಜ್ಯಗಳ ಹಾಗೂ ಹೊರರಾಷ್ಟ್ರದ ಜನರು
ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಮಾಜಿ ಪ್ರದಾನಿ ಹೆಚ್ ಡಿ ದೇವೆಗೌಡರು, ಮಾಜಿ ಮುಖ್ಯ ಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರವರು ಇವರ ಸೇವೆಯನ್ನು ಮೆಚ್ಚಿದ್ದರು.

ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನಿಂದ ಜಾನಪದ ವೈದ್ಯರತ್ನ ಪ್ರಶಸ್ತಿ, ಹಿರೇಕೆರೂರು ಸ್ವಾಮಿಗಳಿಂದ ಸನ್ಮಾನ ಬಹಳಷ್ಟು ಸಂಘ ಸಂಸ್ಥೆ ಗಳ ಸನ್ಮಾನ ಪ್ರಶಸ್ತಿ ಪುರಸ್ಕಾರ ಗಳು ಇವರನ್ನು
ಹುಡುಕಿಕೊಂಡು ಬಂದಿದೆ…

ಜನಪದ ವೈದ್ಯ ಲೋಕಕ್ಕೆ ಅವಿಸ್ಮರಣೀಯ ಸೇವೆ ನೀಡಿದ್ದ ನಾಟಿ ವೈದ್ಯ ಶಿವಣ್ಣಗೌಡರು ಇನ್ನೂ ನೆನಪು ಮಾತ್ರ…

– ರಫ಼ಿ ರಿಪ್ಪನ್‌ಪೇಟೆ

Leave a Reply

Your email address will not be published. Required fields are marked *