ಜಿಲ್ಲಾ ಸುದ್ದಿ:
ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ನಿರಾಶಾದಾಯಕ : ಅರ್ ಎ ಚಾಬುಸಾಬ್
ರಿಪ್ಪನ್ ಪೇಟೆ : ಕೇಂದ್ರ ಸರ್ಕಾರದ ಈ ವರ್ಷದ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಬಡವರ ಮತ್ತು ಮಧ್ಯಮ ವರ್ಗದವರ ನಿರೀಕ್ಷೆಯನ್ನು ಹುಸಿ ಯನ್ನಾಗಿ ಮಾಡಿದೆ ಎಂದು ರಾಜ್ಯ ಜ್ಯಾತ್ಯಾತೀತ ಜನತಾದಳದ ಮಾಜಿ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕಿನಿಂದ ಎರಡು ವರ್ಷಗಳಿಂದ ಲಕ್ಷಾಂತರ ಮಂದಿ ಸತ್ತಿದ್ದಾರೆ, ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ, ಜನರಿಗೆ ಏನಾದ್ರೂ ಕೊಡುಗೆ ಸಿಗುತ್ತೆ ಎಂಬ ನಿರೀಕ್ಷೆಯಿತ್ತು, ಆದರೆ ಈ ಬಜೆಟ್ ಬಡವರ, ಜನಸಾಮಾನ್ಯರ ಪರ…
ಮರಳು ಲಾರಿ ಮಾಲೀಕರಿಂದ ಶಾಸಕ ಹರತಾಳು ಹಾಲಪ್ಪರವರಿಗೆ ಕಮಿಷನ್ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ: ಬೇಳೂರು ಗೋಪಾಲಕೃಷ್ಣ
ಹೊಸನಗರ: ಹೊಸನಗರ-ಸಾಗರ ಕ್ಷೇತ್ರದ ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪನವರು ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ, ತಾಕತ್ತಿದ್ದರೆ ಹಾಲಪ್ಪನವರು ಕಮೀಷನ್ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಹೊಸನಗರ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣರವರು ಸವಾಲು ಹಾಕಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ತಾವು ಪ್ರಾಮಾಣಿಕರು ಮರಳು ಮಾಧ್ಯಮದವರಿಂದ…
ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮೊದಲ ಆದ್ಯತೆ : ಗೃಹ ಸಚಿವ ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಯೆ ಬಿಜೆಪಿ ಸರಕಾರಗಳ ಮೊದಲ ಆದ್ಯತೆಯಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು . ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಯಳಗಲ್ಲು ಗ್ರಾಮದಲ್ಲಿ ಸುಮಾರು 26.50 ಕೋಟಿ ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಶಂಕುಸ್ಥಾಪನೆ ಮತ್ತು ಕೋಡೂರು ಗ್ರಾಮದ ಸ.ನಂ.14ರಲ್ಲಿ ಪಿಕಪ್ ಚಾನಲ್ ಕಾಮಗಾರಿ ಶ್ರೀ ಶಂಕರೇಶ್ವರ ದೇವಸ್ಥಾನದ ರಸ್ತೆ, ಹಳೇಕೋಟೆ ರಸ್ತೆ ಮರು ಡಾಂಬರಿಕರಣ…
ಸೊರಬ ಪುರಸಭೆ ಅಧಿಕಾರ ಬಿಜೆಪಿ ತೆಕ್ಕೆಗೆ : ಅಧ್ಯಕ್ಷರಾಗಿ ಈರೇಶ್ ಮೇಸ್ತ್ರಿ ಆಯ್ಕೆ
ಸೊರಬ: ಭಾರಿ ಕುತೂಹಲ ಮೂಡಿಸಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ವೀರೇಶ್ ಮೇಸ್ತ್ರಿ ಅಧ್ಯಕ್ಷರಾಗಿ ಆಯ್ಕೆಯಾದರು. ಶುಕ್ರವಾರ ನಡೆದ ಅಧ್ಯಕ್ಷರ ಚುನಾವಣೆಗೆ ಬಿಜೆಪಿಯಿಂದ ವೀರೇಶ್ ಮೇಸ್ತ್ರಿ, ಕಾಂಗ್ರೆಸ್‌ನಿಂದ ಸುಲ್ತಾನಾ ಬೇಗಂ ನಾಮಪತ್ರ ಸಲ್ಲಿಸಿದ್ದರು. ವೀರೇಶ್ ಮೇಸ್ತ್ರಿ 8 ಮತಗಳನ್ನು ಹಾಗೂ ಕಾಂಗ್ರೆಸ್‌ನ ಸುಲ್ತಾನಾ ಬೇಗಂ 4 ಮತಗಳನ್ನು ಪಡೆದರು. ಅಧ್ಯಕ್ಷರಾಗಿದ್ದ ಎಂ.ಡಿ. ಉಮೇಶ್ ವಿರುದ್ಧ ಸ್ವಪಕ್ಷದ ಸದಸ್ಯರೇ ಸೆ.27ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಇದರಿಂದ ಚುನಾವಣೆ ನಡೆಯಿತು. ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ…
ಮಲೆನಾಡಿಗರ ನಿದ್ರೆಗೆಡಿಸಿರುವ ಮಂಗನ ಖಾಯಿಲೆ :ಇಂದು ಜಿಲ್ಲೆಯಲ್ಲಿ ಎರಡನೇ ಪ್ರಕರಣ ದಾಖಲು
ಆಯನೂರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಲ್ಲಿ ಮಂಗನಕಾಯಿಲೆ (ಕೆಎಫ್‌ಡಿ) ಪತ್ತೆಯಾಗಿದೆ. ಇದೇ ತಿಂಗಳಲ್ಲಿ ಕಂಡುಬಂದ ಎರಡನೇ ಪ್ರಕರಣ ಇದಾಗಿದೆ. ಶಾಲೆಯ ಶಿಕ್ಷಕ ರಾಘವೇಂದ್ರ ಅವರಲ್ಲಿ ಸೋಂಕು ಪತ್ತೆಯಾಗಿದ್ದು, ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಒಂದು ವಾರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೌದು, ಮಲೆನಾಡಿಗರನ್ನು ಈ ಪರಿ ನಿದ್ದೆಗೆಡುವಂತೆ ಮಾಡಿದೆ ಮಂಗನ ಕಾಯಿಲೆ. ಕ್ಯಾಸನೂರ್ ಡಿಸೀಸ್ ಎಂದೂ ಕರೆಯಲ್ಪಡುವ ಮಂಗನ ಕಾಯಿಲೆ ಈಗಾಗಲೇ ಜಿಲ್ಲೆಯಲ್ಲಿ ಇಬ್ಬರಲ್ಲಿ ಆವರಿಸಿದೆ. ಏನಿದು ಮಂಗನ ಕಾಯಿಲೆ? ಮಂಗನ ಕಾಯಿಲೆ ಕೆ ಎಫ್…
ಜಾಗದ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಮೊಬೈಲ್ ಟವರ್ ಏರಿದ ವ್ಯಕ್ತಿ : ಮನವೊಲಿಸಿ ಕೆಳಗಿಳಿಸುವಲ್ಲಿ ಪಿಎಸ್ ಐ ಶಿವಾನಂದ ಕೋಳಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿ :
ಖಾಸಗಿ ವ್ಯಕ್ತಿಗಳು ತನ್ನ ಮನೆಯನ್ನು ನೆಲಸಮಗೊಳಿಸಿ ಅನ್ಯಾಯ ಎಸಗಿದ್ದಾರೆ ಹಾಗೂ ಈ ಬಗ್ಗೆ ಯಾರು ಸೂಕ್ತ ರೀತಿಯಲ್ಲಿ ನ್ಯಾಯ ದೊಕಿಸಿಕೊಟ್ಟಿಲ್ಲ ಎಂದು ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತ ಪ್ರಸಂಗ ಹೊಸನಗರ ತಾಲೂಕಿನ ಕೋಡೂರು ಗ್ರಾಮದಲ್ಲಿ ನಡೆಯಿತು. ಹೊಸನಗರ ತಾಲೂಕು ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡೂರಿನ ಶಾಂತಪುರ ವಾಸಿ ಕೃಷ್ಣಮೂರ್ತಿ ಅಲಿಯಾಸ್ ಮೀಸೆ ಕೃಷ್ಣ ಬಿನ್ ಹುಚ್ಚನಾಯ್ಕ (47) ಎಂಬಾತನು ಗ್ರಾಮ ಪಂಚಾಯಿತಿ ಎದುರುಗಡೆ ಇರುವ ಏರ್ ಟೆಲ್ ಟವರ್ ನ ಸುಮಾರು 150 ಅಡಿಗಳಷ್ಟು…
ಕರುಣೆಯಿಲ್ಲದ ಗ್ರಾಮಾಡಳಿತ : 25 ವರ್ಷಗಳಿಂದ ಆಶ್ರಯ ಮನೆಗಾಗಿ ಬಡ ಮಹಿಳೆಯೊಬ್ಬರ ಅಲೆದಾಟ
ಗ್ರಾಮೀಣ ಭಾಗದ ಬಡ ಜನತೆ ಹಾಗೂ ನಿರ್ಗತಿಕರು ತಮ್ಮ ಸ್ವಂತ ವಾಸದ ಮನೆಯಲ್ಲಿ ಬದುಕಲಿ ಎಂಬ ಸದುದ್ದೇಶದಿಂದ ಸರಕಾರ ಆಶ್ರಯ ಯೋಜನೆ ಜಾರಿಗೊಳಿಸಿದ್ದರು ಸಹ ಗ್ರಾಮಾಡಳಿತ ನಿರ್ಲಕ್ಷದಿಂದ ಆಶ್ರಯ ಮನೆಗಾಗಿ ಕಳೆದ 25 ವರ್ಷಗಳಿಂದ ಮಹಿಳೆಯೊಬ್ಬರಿಗೆ ಅಲೆದಾಡಿಸುತ್ತಿದೆ. ಹುಂಚ ಹೋಬಳಿಯ ಅಳಲೆ ಕೊಪ್ಪ ಗ್ರಾಮದ ಮಹಿಳೆ ಇಂದಿರಾ ಎಂಬುವರು ಸಾವಿರಾರು ಬಾರಿ ಗ್ರಾಮಪಂಚಾಯತಿಗೆ ಅಲೆದರು ಸಹ ಅಲ್ಲಿನ ಗ್ರಾಮಾಡಳಿತ ಇದುವರೆಗೂ ಬಡ ಮಹಿಳೆಯ ಮೇಲೆ ಯಾಕೋ ಕರುಣೆಯನ್ನು ತೋರಿಸಿಲ್ಲ. ಸರ್ಕಾರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಗ್ರಾಮಾಡಳಿತದ ಜವಾಬ್ದಾರಿ…
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಹೆಚ್ಚು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ 9 ಕಾಲೇಜು 4 ಶಾಲೆಗಳಿಗೆ ನಾಳೆ ರಜೆ ಘೋಷಣೆ
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಹೆಚ್ಚಳದ ಹಿನ್ನಲೆಯಲ್ಲಿ ನಾಳೆ ಜಿಲ್ಲೆಯ ಒಂಬತ್ತು ಕಾಲೇಜುಗಳು ಹಾಗೂ ನಾಲ್ಕು ಶಾಲೆಗಳಿ ರಜೆ ಘೋಷಿಸಲಾಗಿದೆ. ಮಕ್ಕಳಲ್ಲಿ ಕೊರೋನ ಹೆಚ್ಚಳವಾದರೆ ಕ್ಲಸ್ಟರ್ ರೀತಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊರೋನ ಪ್ರಗತಿ ಪರಿಶೀಲನ ಸಭೆಯಲ್ಲಿ ಸಚಿವ ಈಶ್ವರಪ್ಪ ಇಂದು ಸಂಜೆ ಯಾವ ಯಾವ ಶಾಲೆಗಳು ನಾಳೆ ರಜೆ ಘೋಷಿಸಲಿವೆ ಎಂದು ತಿಳಿಸಿದ್ದರು. ಅದರಂತೆ ರಾಗಿಗುಡ್ಡದ ಅಂಬೇಡ್ಕರ್ ವಸತಿ ಶಾಲೆ, ಮುರಾರ್ಜಿ ಶಾಲೆ, ಮುರಾರ್ಜಿ ಕಾಲೇಜು, ತೀರ್ಥಹಳ್ಳಿಯ ಬಸವಾನಿ,…
ಅನ್ನದಾತ ಮಾಲೀಕನನ್ನು ಹುಡುಕಿಕೊಡುವಂತೆ ಆಗ್ರಹಿಸಿ ಪ್ರಕಾಶ್ ಟ್ರಾವೆಲ್ಸ್ ಕಾರ್ಮಿಕರಿಂದ ಹೊಸನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ :
ಹೊಸನಗರ:- ಪ್ರಕಾಶ್ ಟ್ರಾವೆಲ್ಸ್ ನ ಮಾಲೀಕರಾದ ಪ್ರಕಾಶ್ ಕಳೆದ ಮೂರು ದಿನಗಳಿಂದ ಕಾಣೆಯಾಗಿರುವುದು ಟ್ರಾವೆಲ್ಸ್ ನ ಕಾರ್ಮಿಕರಲ್ಲಿ ಅನುಮಾನಗಳ ಹುತ್ತ ಬೆಳೆದಿದೆ ಅಲ್ಲದೇ ನುಂಗಲಾರದ ತುತ್ತಾಗಿದ್ದು, ಇಂದು ಪಟ್ಟಣದ ಪೋಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದರ ಮೂಲಕ ಮಾಲೀಕರನ್ನು ಕೂಡಲೇ ಹುಡುಕಿ ಕೊಡುವಂತೆ ಮನವಿ ಮಾಡಿದರು. ತಮ್ಮ ಕುಟುಂಬದ ಸದಸ್ಯರು ಸೇರಿದಂತೆ ಸುಮಾರು ಎರಡು ಸಾವಿಕ್ಕೂ ಹೆಚ್ಚು ಜನರಿಗೆ ಅನ್ನದಾತರಾದ ಟ್ರಾವೆಲ್ಸ್ ನ ಮಾಲೀಕರನ್ನು ಕೂಡಲೇ ಪತ್ತೆ ಹಚ್ಚಿಕೊಡಬೇಕೆಂದು ಪ್ರಕಾಶ್ ಟ್ರಾವೆಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕ,…
ಆಯಾ ತಪ್ಪಿ ಬಿದ್ದು ಐದು ವರ್ಷದ ಮಗು ಸಾವು : ವಿಧಿಯ ಕ್ರೂರತನಕ್ಕೆ ಬಲಿಯಾದ ಪುಟ್ಟ ಕಂದಮ್ಮ
ಸಾಗರ : ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಯಾ ತಪ್ಪಿ ಬಿದ್ದು ಐದು ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದಲ್ಲಿ ಶನಿವಾರ ಸಂಜೆ ನಡೆದಿದೆ. ಶನಿವಾರ ಸಂಜೆ ಸುಮಾರು 5-00 ಗಂಟೆಯ ಸುಮಾರಿಗೆ ಸಾಗರ ನಗರಸಭೆ ವ್ಯಾಪ್ತಿಯ ಅಣಲೇಕೊಪ್ಪದಲ್ಲಿ ವಾಸವಾಗಿದ್ದ ಮೂರ್ತಿಹಾಗೂ ರಾಜೇಶ್ವರಿ ದಂಪತಿಯ ಎರಡನೆ ಮಗು ಆಟವಾಡುವಾಗ ಆಯಾ ತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕ್ರಿಶಾ (5) ಮೃತಳಾದ ದುರ್ದೈವಿ. ಮೂರ್ತಿಹಾಗೂ ರಾಜೇಶ್ವರಿ ದಂಪತಿಗಳುಮೂಲತಃ ಸಾಗರ ತಾಲೂಕಿನ ಹೆಗ್ಗೋಡು ಗ್ರಾ.ಪಂ ವ್ಯಾಪ್ತಿಯ ಹೈತೂರಿನ ಕ್ವಾಗೇರಿರವರಗಿದ್ದಾರೆ. ಮೂರ್ತಿ…