ಜಿಲ್ಲಾ ಸುದ್ದಿ:
ಸಾಹಿತ್ಯ ಪರಿಷತ್ತಿನ ಸಂಘಟನೆಗೆ ಒತ್ತು ನೀಡಲು ತೀರ್ಮಾನ :
ಹೊಸನಗರ : ಹೊಸನಗರ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತಿನ ಸಂಘಟನೆಗೆ ಒತ್ತು ನೀಡಲು ಕಸಾಪ ತಾಲೂಕು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ತೀರ್ಮಾನಿಸಿದೆ. ಜನವರಿ 21 ನೇ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ತ.ಮ. ನರಸಿಂಹ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಈ ತೀರ್ಮಾನ ಕೈಗೊಂಡಿದೆ. ಜಿಲ್ಲಾಧ್ಯಕ್ಷ ಡಿ ಮಂಜುನಾಥ್ ರವರ ನಿರ್ದೇಶನದಂತೆ ಪರಿಷತ್ತಿನ ಸಂಘಟನೆಗೆ ಪೂರಕವಾಗಿ ಹೋಬಳಿ ಸಮಿತಿಗಳ ರಚನೆ, ಮತ್ತು ಸಂಪನ್ಮೂಲ ಕ್ರೂಢೀಕರಣ, ಹಾಗೂ ದತ್ತಿನಿಧಿ ಕಾರ್ಯಕ್ರಮ ಮತ್ತು ಸದಸ್ಯತ್ವ…
ಪ್ರಕಾಶ್ ಬಸ್ ನ ಮಾಲೀಕರ ಮೊಬೈಲ್ ಹಾಗೂ ಕಾರು ಪಟಗುಪ್ಪ ಸೇತುವೆ ಬಳಿ ಪತ್ತೆ : ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟ ಬಸ್ ಮಾಲೀಕನ ನಡೆ
ಹೊಸನಗರ ಸಮೀಪದ ಪಟಗುಪ್ಪೆ ಸೇತುವೆಯ ಬಳಿ ಸಾಗರದ ಪ್ರಕಾಶ್ ಬಸ್ ನ ಮಾಲೀಕರಾದ ಪ್ರಕಾಶ್ ರವರ ಕಾರು ಹಾಗೂ ಮೊಬೈಲ್ ಪತ್ತೆಯಾಗಿರುವುದು ಹಲವು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಸಾಗರದ ಪ್ರಕಾಶ್ ಬಸ್ ನ ಮಾಲೀಕರಾದ ಪ್ರಕಾಶ್ ರವರು ಶುಕ್ರವಾರ ಸಂಜೆಯಿಂದಲೇ ಮನೆಯಿಂದ ನಾಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಟಗುಪ್ಪ ಸೇತುವೆಯ ಬಳಿ ನೂರಾರು ಜನರು ಸೇರಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ದಳದವರು ಹಾಜರಿದ್ದು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ಹೊಸನಗರ ಪೋಲೀಸರು ಸ್ಥಳಕ್ಕಾಗಮಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಗೃಹ ಸಚಿವರ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆಯ ಫೋಟೋ ತೆಗೆದಿದ್ದಕ್ಕೆ ಪತ್ರಕರ್ತನಿಗೆ ಟಾರ್ಚರ್ : ಕಣ್ಮುಚ್ಚಿ ಕುಳಿತಿವೆ ಸಂಬಂಧಪಟ್ಟ ಇಲಾಖೆಗಳು
ತೀರ್ಥಹಳ್ಳಿಯ ಹಿರಿಯ ಪತ್ರಕರ್ತ ಲಿಯೋ ಅರೋಜರವರನ್ನು ತೀರ್ಥಹಳ್ಳಿಯ ಪ್ರತಿಷ್ಠಿತ ಸಮಾಜದ ಮುಖಂಡರೆಲ್ಲಾ ಸೇರಿ ಕುಶಾವತಿ ಸೇತುವೆ ಬಳಿ ಸುಮಾರು ನಾಲ್ಕುಗಂಟೆಯ ವರೆಗೆ ಕೂರಿಸಿಕೊಂಡು ಮಾನಸಿಕ ಹಿಂಸೆ ನೀಡಿರುವ ಘಟನೆ ನಡೆದಿದೆ. ಗೃಹ ಸಚಿವರ ಕ್ಷೇತ್ರದಲ್ಲಿ ಪತ್ರಕರ್ತನೋರ್ವನಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಜ್ಜನರ ನಾಡಾಗಿದ್ದ ತೀರ್ಥಹಳ್ಳಿ ಮರಳು ಮಾಫಿಯಾದ ಗೂಂಡಾರಾಜ್ಯವಾಗಿ ನಿರ್ಮಾಣವಾಗಿ ಬಿಟ್ಟಿತೇ ಎಂಬ ಆತಂಕ ಎದುರಾಗಿದೆ. ಯಾವುದೇ ನದಿ ಸೇತುವೆಗಳ ಕೆಳಗಡೆ ಮರಳು ತೆಗೆಯದಂತೆ ಸುಪ್ರೀಕೋರ್ಟ್ ಆದೇಶವಿದೆ. ಆದರೆ ಕುಶಾವತಿ ಸೇತುವೆ ಕೆಳಗೆ ತೀರ್ಥಹಳ್ಳಿಯ ಪ್ರತಿಷ್ಠಿತ…
ರಿಪ್ಪನ್ ಪೇಟೆ ಆಸ್ಪತ್ರೆಯ ಒತ್ತುವರಿ ಜಾಗ ತೆರವು : ಗ್ರಾಮಾಡಳಿತಕ್ಕೆ ಸಂದ ಜಯ..!!!
ರಿಪ್ಪನ್ ಪೇಟೆ : ಇಲ್ಲಿನ ಗವಟೂರಿನಲ್ಲಿ ಈ ಭಾಗದ ಬಹುದಿನಗಳ ಕನಸಿನ ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿದ್ದ ಐದು ಎಕರೆ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದನ್ನು ಇಂದು ತಾಲೂಕು ತಹಶೀಲ್ದಾರ್ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. ಮಾಜಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ರಿಪ್ಪನ್ ಪೇಟೆಯ ಸಾರ್ವಜನಿಕರ ಬೇಡಿಕೆಯಂತೆ ಗವಟೂರು ಗ್ರಾಮದಲ್ಲಿ ಸುಮಾರು 5 ಎಕರೆ ಭೂಮಿಯನ್ನು ಸಮುದಾಯ ಆಸ್ಪತ್ರೆಗಾಗಿ ಮಂಜೂರು ಮಾಡಿಸಿದ್ದರು. ಆ ಜಾಗವನ್ನು ಪೋಡಿ ದುರಸ್ಥಿಗೊಳಿಸುವ ಮುನ್ನವೇ ಇಲ್ಲಿನ ಕೆಲವು ಖಾಸಗಿ ವ್ಯಕ್ತಿಗಳು ಆ ಜಾಗವನ್ನು…
ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೊರೊನಾ ಪಾಸಿಟಿವ್ !!
ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ… ಭಾನುವಾರ ಮತ್ತು ಸೋಮವಾರ ಜ್ವರ ಹಾಗೂ ಕಫ ಇದ್ದ ಕಾರಣ ಮಂಗಳವಾರ ಕೋವಿಡ್ ಟೆಸ್ಟ್ ಮಾಡಿಸಿಲಾಗಿತ್ತು ಇವತ್ತು ವರದಿ ಬಂದಿದ್ದು ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅವರ ಸಂಪರ್ಕದಲ್ಲಿದ್ದವರು ಕೂಡಲೇ ಆರೋಗ್ಯ ತಪಾಸಣೆಗೆ ಒಳಗಾಗಿ ಹಾಗೂ ಅವರ ಆರೋಗ್ಯ ವಿಚಾರಿಸಲು ಯಾರೂ ಮನೆಯ ಬಳಿ ಬರಬಾರದೆಂದು ಅವರ ಪುತ್ರಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಡಾ !! ರಾಜನಂದಿನಿ ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಫೇಸ್ಬುಕ್ ನಲ್ಲಿ…
80 ಚೀಲ ಸೊಸೈಟಿ ಅಕ್ಕಿ ವಶ : ಒಬ್ಬನ ಬಂಧನ
ಬುದ್ಧನಗರದಲ್ಲಿ ವಾಹನ ತಪಾಸಣೆ ಮಾಡುವಾಗ ಅಕ್ರಮ ಅಕ್ಕಿ ಸಾಗಾಣಿಕೆ ಪತ್ತೆಯಾಗಿದೆ. ಬಿಪಿಎಲ್ ಕಾರ್ಡ ಹೊಂದಿದವರಿಗೆ ಉಚಿತವಾಗಿ ನೀಡುವ ಅಕ್ಕಿಗಳನ್ನ ಚೀಲದಲ್ಲಿ ತುಂಬಿಸಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಅಕ್ರಮ ಅಕ್ಕಿ ಪತ್ತೆಯಾಗಿದೆ. ಬುದ್ದನಗರದಲ್ಲಿ ಗ್ಯಾಸ್ ಪಂಪ್ ನಲ್ಲಿ ದೊಡ್ಡಪೇಟೆ ಪೊಲೀಸರು ಮತ್ತು ಆಹಾರ ನಿರೀಕ್ಷಕರು ಬ್ಯಾರಿಕೇಡ್ ನಿರ್ಮಿಸಿ ತಪಾಸಣೆ ಮಾಡುವಾಗ ಕೆಎ 15 ಎ ೪೨೬೬ ಕ್ರಮ ಸಂಖ್ಯೆಯ ವಾಹನದಲ್ಲಿ ಅಕ್ರಮ ಅಕ್ಕಿ ಪತ್ತೆಯಾಗಿದೆ. ೫೦ ಕೆಜಿಯ ಒಟ್ಟು ೮೦ ಚೀಲಗಗಳು ಪತ್ತೆಯಾಗಿದೆ. ಈ ಅಕ್ಕಿಯನ್ನ…
ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದರೂ ಆತಂಕಪಡದೇ ಶಾಲಾ ಕಾಲೇಜುಗಳನ್ನು ಮುಂದುವರೆಸುವುದು ಉತ್ತಮ: ಜಿಲ್ಲಾಧಿಕಾರಿಗಳ ಸಭೆಯಲ್ಲಿ ತಜ್ಞರ ಸಲಹೆ
ಶಿವಮೊಗ್ಗ : ಕೋವಿಡ್ ಮೂರನೇ ಅಲೆಯಲ್ಲಿ ಹಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ಆತಂಕಪಡದೇ ಶಾಲಾ ಕಾಲೇಜುಗಳನ್ನು ಎಂದಿನಂತೆ ಮುಂದುವರೆಸುವುದು ಉತ್ತಮ ಎಂದು ಗುರುವಾರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕೋವಿಡ್ ತಜ್ಞರ ಸಭೆಯಲ್ಲಿ ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದರೆ ಗಾಬರಿಗೊಳ್ಳುವ ಅಗತ್ಯವಿಲ್ಲ. ಮೂರನೇ ಅಲೆಯಲ್ಲಿ ಕೋವಿಡ್ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಕೋವಿಡ್ ಪಾಸಿಟಿವ್ ಮಕ್ಕಳನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿಸಿ ಶಾಲಾ ಕಾಲೇಜುಗಳನ್ನು…
ಇರುವಕ್ಕಿಯ ಇಂದಿರಾ ಗಾಂಧಿ ವಸತಿ ಶಾಲೆಯ 40 ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢ !! ಕಂಟೈನ್ ಮೆಂಟ್ ಝೋನ್ ಘೋಷಣೆ !!
ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಇರುವಕ್ಕಿಯ ಇಂದಿರಾ ಗಾಂಧಿ ವಸತಿ ಶಾಲೆಯ ನಲವತ್ತು ಮಕ್ಕಳಿಗೆ ಇದೀಗ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮೊನ್ನೆ ಹಲವು ವಿದ್ಯಾರ್ಥಿಗಳಿಗೆ ರೋಗದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ 80 ಮಕ್ಕಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿತ್ತು. ಇವತ್ತು ಬಂದ ವರದಿಯಲ್ಲಿ 40 ಮಕ್ಕಳಿಗೆ ಇದೀಗ ಕೋರನ ಪಾಸಿಟಿವ್ ದೃಢಪಟ್ಟಿದೆ. ಸ್ಥಳಕ್ಕೆ ಸಾಗರ ತಾಲ್ಲೂಕು ವೈದ್ಯಾಧಿಕಾರಿ ಮೋಹನ್ ರವರು ಭೇಟಿ ನೀಡಿ ಈ ವಿದ್ಯಾರ್ಥಿಗಳಿಗೆ ಬೇರೆ ರೂಮಿನ ವ್ಯವಸ್ಥೆ ಮಾಡಿದ್ದು ಹಾಗೂ ಪ್ರತಿನಿತ್ಯ ಇವರನ್ನು ನೋಡಿಕೊಳ್ಳಲು…
ರಿಪ್ಪನ್ ಪೇಟೆ ಸಮೀಪದ ಹೊಂಡಲಗದ್ದೆಯಲ್ಲಿ ಅರಣ್ಯ ಇಲಾಖೆಯ ಭರ್ಜರಿ ಭೇಟೆ : 60 ಕೆ.ಜಿ ಶ್ರೀಗಂಧ ವಶ !!!
ಹೊಸನಗರ: ಉಪ ಅರಣ್ಯ ಸಂರಕ್ಷಣಾದಿಕಾರಿ ರವೀಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ಹೊಸನಗರ ತಾಲ್ಲೂಕಿನ ಹುಂಚ ಹೋಬಳಿ ಹೊಂಡಲಗದ್ದೆ ತಿಮ್ಮಪ್ಪ ಬಿನ್ ಹೂವಪ್ಪರವರ ಮನೆಯಲ್ಲಿ ಅಕ್ರಮ ದಾಸ್ತಾನು ಮಾಡಿದ್ದ ಸುಮಾರು 60 ಕೆ.ಜಿ ಶ್ರೀಗಂಧವನ್ನು ಅರಣ್ಯ ಸಂಚಾರಿದಳ ಶಿವಮೊಗ್ಗ, ಹೊಸನಗರ ವಲಯ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿಗಳು ಇಂದು ಜಂಟಿ ಕಾರ್ಯಾಚರಣೆ ನಡೆಸಿ ಮನೆ ಜಪ್ತಿ ನಡೆಸಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಂಜಯ್, ಮಧುಕರ್ ಉಪವಲಯ ಅರಣ್ಯಾಧಿಕಾರಿಗಳಾದ ಅಶೋಕ್, ಯುವರಾಜ್,…
ಸಾಗರದ ಮಹಿಳೆಯ ಹೊಟ್ಟೆಯಲ್ಲಿತ್ತು ಬರೋಬ್ಬರಿ ಎಂಟು ಕೆ.ಜಿ ತೂಕದ ಗಡ್ಡೆ…!!!! ಯಶಸ್ವಿಯಾದ ಸಾಗರ ವೈದ್ಯರ ಶಸ್ತ್ರಚಿಕಿತ್ಸೆ
ಸಾಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಬುಧವಾರ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ನಂತರ 50 ವರ್ಷದ ಮಹಿಳೆ ಹೊಟ್ಟೆಯಲ್ಲಿದ್ದ 8 ಕೆಜಿ ತೂಕದ ಗಡ್ಡೆಯನ್ನು ಹೊರತೆಗೆದಿದ್ದಾರೆ. ಇದೊಂದು ಅಂಡಾಶಯದ ಗಡ್ಡೆಯಾಗಿದ್ದು, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ಮಹಿಳೆಯ ಸ್ಥಿತಿ ಸ್ಥಿರವಾಗಿದ್ದು,ಶಸ್ತ್ರಚಿಕಿತ್ಸೆಗೆ ಅರವಳಿಕೆ ತಜ್ಞೆ ಸುಷ್ಮಾ ಪತ್ತಾರ್,ನರ್ಸ್ ಸುವರ್ಣ,ರೋಹಿನಿ ಹಾಗೂ ಚಂದ್ರು ಸಹಕರಿಸಿದ್ದಾರೆ ಎಂದು ಇದೇ ವೇಳೆ ತಿಳಿಸಿದರು. ಮಹಿಳೆಯ ಪ್ರಾಣ ಉಳಿಸಿದ ಡಾ.ನಾಗೇಂದ್ರಪ್ಪ…