ರಿಪ್ಪನ್ ಪೇಟೆ : ಇಲ್ಲಿನ ಗವಟೂರಿನಲ್ಲಿ ಈ ಭಾಗದ ಬಹುದಿನಗಳ ಕನಸಿನ ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿದ್ದ ಐದು ಎಕರೆ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದನ್ನು ಇಂದು ತಾಲೂಕು ತಹಶೀಲ್ದಾರ್ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.
ಮಾಜಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ರಿಪ್ಪನ್ ಪೇಟೆಯ ಸಾರ್ವಜನಿಕರ ಬೇಡಿಕೆಯಂತೆ ಗವಟೂರು ಗ್ರಾಮದಲ್ಲಿ ಸುಮಾರು 5 ಎಕರೆ ಭೂಮಿಯನ್ನು ಸಮುದಾಯ ಆಸ್ಪತ್ರೆಗಾಗಿ ಮಂಜೂರು ಮಾಡಿಸಿದ್ದರು. ಆ ಜಾಗವನ್ನು ಪೋಡಿ ದುರಸ್ಥಿಗೊಳಿಸುವ ಮುನ್ನವೇ ಇಲ್ಲಿನ ಕೆಲವು ಖಾಸಗಿ ವ್ಯಕ್ತಿಗಳು ಆ ಜಾಗವನ್ನು ಒತ್ತುವರಿ ಮಾಡಿ ಬೇಲಿ ಹಾಕುವ ಹುನ್ನಾರದಲ್ಲಿ ತೊಡಗಿಕೊಂಡಿದ್ದರು.ಈ ಬಗ್ಗೆ ಗ್ರಾಮಾಡಳಿತ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಒತ್ತುವರಿದಾರರು ಪರಿಗಣಿಸಿರಲಿಲ್ಲ.
ಈ ಬಗ್ಗೆ ರಿಪ್ಪನ್ ಪೇಟೆ ಗ್ರಾಮಾಡಳಿತ ತಾಲೂಕು ಆಡಳಿತಕ್ಕೆ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಇಂದು ತಹಶೀಲ್ದಾರ್ ವಿ ಎಸ್ ರಾಜೀವ್ ಸಮ್ಮುಖದಲ್ಲಿ ಒತ್ತುವರಿದಾರರನ್ನು ತೆರವುಗೊಳಿಸಲಾಯಿತು.
ಒತ್ತುವರಿ ಸಮಯದಲ್ಲಿ ಒತ್ತುವರಿದಾರರಿಂದ ಭಾರಿ ಹೈಡ್ರಾಮ ನಡೆಯಿತು.ಈ ಸಂಧರ್ಭದಲ್ಲಿ ತಹಶೀಲ್ದಾರ್ ವಿ ಎಸ್ ರಾಜೀವ್ ಗರಂ ಆಗಿ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದರು.
ಒಟ್ಟಾರೆಯಾಗಿ ಸಮುದಾಯ ಆಸ್ಪತ್ರೆಗೆ ಮೀಸಲಿದ್ದ ಜಾಗವನ್ನು ತೆರವುಗೊಳಿಸುವಲ್ಲಿ ಸಂಪೂರ್ಣ ಗ್ರಾಮಾಡಳಿತ ಸ್ಥಳದಲ್ಲಿಯೇ ಹಾಜರಿದ್ದು ಒತ್ತುವರಿಯನ್ನು ತೆರವುಗೊಳಿಸಿವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಉಪತಹಶೀಲ್ದಾರ್ ಹುಚ್ಚರಾಯಪ್ಪ,ಪಿಡಿಓ ಜಿ.ಚಂದ್ರಶೇಖರ್, ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮಲೆಕ್ಕಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಹಾಗೂ ಪಂಚಾಯ್ತಿ ಸದಸ್ಯರಾದ ಜಿ.ಡಿ.ಮಲ್ಲಿಕಾರ್ಜುನ, ಅಸಿಫ್, ಸುಧೀಂದ್ರ ಪೂಜಾರಿ, ಗಣಪತಿ, ವೇದಾವತಿ, ವನಮಾಲ, ವಿನೋಧ, ಎನ್.ಚಂದ್ರೇಶ್, ದೀಪಾ, ಆರ್.ಎಲ್.ನಿರೂಪ್, ಪ್ರಕಾಶ ಪಾಲೇಕರ್, ಸುಂದರೇಶ್, ಪಿ.ರಮೇಶ್, ಡಿ.ಈ.ಮಧುಸೂದನ್, ಅನುಪಮ ರಾಕೇಶ್, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಇನ್ನಿತರರು ಹಾಜರಿದ್ದರು.
ಒತ್ತುವರಿ ತೆರವುಗೊಳಿಸುವ ಸಂಪೂರ್ಣ ವೀಡಿಯೋ 👇👇👇