January 11, 2026

ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಮೊಬೈಲ್ ನಲ್ಲಿ ಚಿತ್ರಿಕರಿಸಿ ಹರಿಬಿಟ್ಟಿದ್ದ ಆರೋಪಿಗಳ ಬಂಧನ

ಕಾಲೇಜು ಮುಗಿಸಿ ಮನೆಗೆ ಹೊರಟ್ಟಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರ ನಡೆಸಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ವಾಟ್ಸಾಪ್‌ನಲ್ಲಿ ಹರಿಬಿಟ್ಟಿದ್ದ ಆರೋಪಿಗಳನ್ನು ಹೊಸನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯು ಜ.15 ರಂದು ಮಧ್ಯಾಹ್ನ ತನ್ನ ಗ್ರಾಮಕ್ಕೆ ಹೋಗಲು ಹೊಸನಗರ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ, ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬರುತ್ತಿದ್ದ ಸಮಯದಲ್ಲಿ ಪರಿಚಯವಾಗಿದ್ದ ಸಂತೋಷ ಮತ್ತು ಸುನಿಲ್ ಇಬ್ಬರು ಬಾಲಕಿಯನ್ನು ಕರೆದು ‘ನಾವು ಕೂಡ ನಿಮ್ಮ ಗ್ರಾಮದ ಕಡೆಗೆ ಹೋಗುತ್ತೇವೆ ನಮ್ಮ ಜೊತೆ ಕಾರಿನಲ್ಲಿ ಬಾ’ ಎಂದು ಆಕೆಯನ್ನು ಪುಸಲಾಯಿಸಿ ಕಾರಿನಲ್ಲಿ ಸುನಿಲ್ ಎಂಬಾತನ ರೂಂ ಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿಕೊಂಡಿದ್ದಾರೆ.

ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುತ್ತಾರೆ ಹಾಗೂ ಪುನಃ ಕರೆದಾಗ ಬಾಲಕಿಯು ನಿರಾಕರಿಸಿದ್ದರಿಂದ ವಿಡಿಯೋವನ್ನು ರಾಘವೇಂದ್ರ, ಸಚಿನ್ ಮತ್ತು ಸುಬ್ಬು ಎಂಬುವವರ ಮೊಬೈಲ್ ಗಳಿಗೆ ಕಳುಹಿಸಿರುತ್ತಾರೆಂದು ಇಂದು ನೊಂದ ಬಾಲಕಿಯು ನೀಡಿದ ಹೇಳಿಕೆ ದೂರಿನ ಮೇರೆಗೆ ಕಲಂ 363, 376(2)(f), 506 R/w 34 IPC ಮತ್ತು ಕಲಂ 04 POCSO ಹಾಗೂ 66(e), 67(b) IT ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಹೊಸನಗರ ಮತ್ತು ಸಿಬ್ಬಂದಿಗಳ ತಂಡವು ತನಿಖೆ ಕೈಗೊಂಡು ಆರೋಪಿಗಳಾದ ಹೊಸನಗರ ತಾಲೂಕಿನ ಸಂತೋಷ (24) ಮತ್ತು ಸುನಿಲ್ (26) ಇವರನ್ನು ಬಂಧಿಸಿದ್ದಾರೆ.

About The Author

Leave a Reply

Your email address will not be published. Required fields are marked *