ಹೊಸನಗರ:- ಪ್ರಕಾಶ್ ಟ್ರಾವೆಲ್ಸ್ ನ ಮಾಲೀಕರಾದ ಪ್ರಕಾಶ್ ಕಳೆದ ಮೂರು ದಿನಗಳಿಂದ ಕಾಣೆಯಾಗಿರುವುದು ಟ್ರಾವೆಲ್ಸ್ ನ ಕಾರ್ಮಿಕರಲ್ಲಿ ಅನುಮಾನಗಳ ಹುತ್ತ ಬೆಳೆದಿದೆ ಅಲ್ಲದೇ ನುಂಗಲಾರದ ತುತ್ತಾಗಿದ್ದು, ಇಂದು ಪಟ್ಟಣದ ಪೋಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದರ ಮೂಲಕ ಮಾಲೀಕರನ್ನು ಕೂಡಲೇ ಹುಡುಕಿ ಕೊಡುವಂತೆ ಮನವಿ ಮಾಡಿದರು.
ತಮ್ಮ ಕುಟುಂಬದ ಸದಸ್ಯರು ಸೇರಿದಂತೆ ಸುಮಾರು ಎರಡು ಸಾವಿಕ್ಕೂ ಹೆಚ್ಚು ಜನರಿಗೆ ಅನ್ನದಾತರಾದ ಟ್ರಾವೆಲ್ಸ್ ನ ಮಾಲೀಕರನ್ನು ಕೂಡಲೇ ಪತ್ತೆ ಹಚ್ಚಿಕೊಡಬೇಕೆಂದು ಪ್ರಕಾಶ್ ಟ್ರಾವೆಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕ, ನಿರ್ವಾಹಕ ಮತ್ತು ಏಜೆಂಟರು ಸೇರಿದಂತೆ500 ಕ್ಕೂ ಹೆಚ್ಚು ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರು ನಮ್ಮ ದೇವರ ಸತ್ಯ ನಮಗೆ ತಿಳಿದಿದೆ, ನಮಗೆ ಅನ್ನ ನೀಡುವ ಧಣಿಗಳು ಸಾಲ ಮಾಡಿಕೊಂಡು ಅತ್ಮ ಹತ್ಯೆ ಮಾಡಿ ಕೊಳ್ಳುವಂತಹ ಮನಸ್ಥಿತಿ ಉಳ್ಳವರಲ್ಲಾ. ಅವರು ಕಾಣೆಯಾಗಿರುವುದು ನಮಗೆ ಆತಂಕ ಉಂಟುಮಾಡಿದೆ, ಅವರಿಲ್ಲದೇ ನಾವು ಅನಾಥರಾಗಿದ್ದೇವೆ ಎಂದು ಪ್ರತಿಭಟನಾ ನಿರತರು ತಿಳಿಸಿದ್ದಾರೆ.
ವರದಿ : ಪುಷ್ಪಾ ಹೊಸನಗರ