ಜಿಲ್ಲಾ ಸುದ್ದಿ:
ಪಿಯುಸಿ ಪಲಿತಾಂಶ 2022 : ಶಿವಮೊಗ್ಗ ಜಿಲ್ಲೆಯ ಟಾಪರ್ಸ್ ಗಳ ಪಟ್ಟಿ ಇಲ್ಲಿದೆ ನೋಡಿ
ಪಿಯುಸಿ ಪರೀಕ್ಷೆ ಫಲಿತಾಂಶ ಆನ್ ಲೈನ್ ನಲ್ಲಿ ಪ್ರಕಟವಾಗಿದ್ದು, ಶಿವಮೊಗ್ಗದಲ್ಲಿ 66.15% ಫಲಿತಾಂಶ ಬಂದಿರುವ ಬೆನ್ನಲ್ಲೇ ಜಿಲ್ಲೆಯ ಟಾಪರ್ಸ್ ಗಳ ಪಟ್ಟಿ ಪ್ರಕಟಗೊಂಡಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಒಟ್ಟು 19033 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇದರಲ್ಲಿ 12590 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅದರಂತೆ ಪ್ರತಿ ಮೂರು ವಿಭಾಗದಲ್ಲಿ 10 ಜನ ಟಾಪರ್ಸ್ ಎಂದು ಗುರುತಿಸಲಾಗಿದೆ. ಕಲಾ ವಿಬಾಗ : ವಾಣಿಜ್ಯ ವಿಭಾಗ : ವಿಜ್ಞಾನ ವಿಭಾಗ :
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಳ್ಳಿ ಮಕ್ಕಳ ಅದ್ಭುತ ಸಾಧನೆ…ವಿಜ್ಞಾನ ವಿಭಾಗದಲ್ಲಿ 586 ಅಂಕ ಪಡೆದ ವಿದ್ಯಾರ್ಥಿ
ರಿಪ್ಪನ್ ಪೇಟೆ : ಈ ಬಾರಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಳ್ಳಿಗಾಡಿನ ಪ್ರದೇಶದ ವಿದ್ಯಾರ್ಥಿಗಳು ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿಜ್ಞಾನ ವಿಭಾಗದ ವಿದ್ಯಾರ್ಥಿ ಹರ್ಷ 586 ಅಂಕಗಳನ್ನು ಪಡೆದಿದ್ದು. ಅಮೃತ ಸರಕಾರಿ ಪದವಿ ಪೂರ್ವ ಕಾಲೇಜು ಶೇಕಡ 84 ಫಲಿತಾಂಶವನ್ನು ಪಡೆದರೆ. ಸರ್ಕಾರಿ ಪದವಿ ಪೂರ್ವ ಕಾಲೇಜು ರಿಪ್ಪನ್ ಪೇಟೆ 75.37 ಫಲಿತಾಂಶ ಪಡೆದಿದೆ. ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ …
ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ……! ಪಲಿತಾಂಶ ನೋಡುವ ವೆಬ್ಸೈಟ್ ವಿವರಕ್ಕಾಗಿ ಈ ಸುದ್ದಿ ನೋಡಿ
ರಿಪ್ಪನ್ ಪೇಟೆ : ಏಪ್ರಿಲ್ 22ರಿಂದ ಆರಂಭವಾಗಿ ಮೇ 18 ರವರೆಗೆ ನಡೆದ ಪಿಯುಸಿ ಪರೀಕ್ಷೆಯ ಫಲಿತಾಂಶ ನಾಳೆ ಬೆಳಗ್ಗೆ 11 ಗಂಟೆಗೆ ಪ್ರಕಟಿಸಲಾಗುವುದು ಎಂದು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ಟ್ವೀಟ್ ಮಾಡುವ ಮೂಲಕ ಪ್ರಕಟಿಸಿದ್ದಾರೆ. ಕರ್ನಾಟಕ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ 2021- 22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಏಪ್ರಿಲ್ 22ಕ್ಕೆ ಆರಂಭವಾಗಿ ಮೇ18ಕ್ಕೆ ಮುಕ್ತಾಯವಾಗಿದ್ದು ರಾಜ್ಯದ ವಿವಿಧೆಡೆಯಲ್ಲಿ ಮೌಲ್ಯಮಾಪನ ಸುಗಮವಾಗಿ ನಡೆದಿದ್ದು. ನಾಳೆ ದ್ವಿತೀಯ ಪಿಯುಸಿ…
ಗರ್ತಿಕೆರೆಯ ಮಹಮ್ಮದ್ ಆದಿಲ್ ರವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ…
ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದ ಮಹಮ್ಮದ್ ಆದಿಲ್ ರವರಿಗೆ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ವಿಭಾಗದಲ್ಲಿ ಚಿನ್ನದ ಪದಕ ಪ್ರಶಸ್ತಿ ಲಭಿಸಿದ್ದು ಗುರುವಾರ ಶಂಕರಘಟ್ಟದ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಪ್ರಶಸ್ತಿ ನೀಡಲಾಯಿತು. ಎರಡು ವರ್ಷಗಳ ಹಿಂದೆ ನಡೆಯಬೇಕಾಗಿದ್ದ ಪ್ರಶಸ್ತಿ ಸಮಾರಂಭ ಕೋವಿಡ್ 19 ಪ್ರಯುಕ್ತ ಮುಂದೂಡಲಾಗಿದ್ದು 32 ನೇ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಮಹಮ್ಮದ್ ಆದಿಲ್ ರವರಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಮಹಮ್ಮದ್ ಆದಿಲ್ ಗರ್ತಿಕೆರೆಯ ಅಬ್ದುಲ್ ಅಜೀಜ್ ಹಾಗೂ ನಾಜಿಯಾ ಬೇಗಂ ದಂಪತಿಗಳ ಪುತ್ರನಾಗಿದ್ದು ಇವರು…
ರಿಪ್ಪನ್ಪೇಟೆ ಆರೋಗ್ಯ ಕೇಂದ್ರದಲ್ಲಿ 108 ಆಂಬುಲೆನ್ಸ್ ಸೌಲಭ್ಯವಿಲ್ಲದೆ ನರಳಾಡಿದ ಅಪಘಾತಗೊಂಡ ಗಾಯಾಳುಗಳು :
ಹೊಸನಗರ ತಾಲೂಕಿನ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂದು ಹೆಗ್ಗಳಿಕೆಯನ್ನು ಹೊಂದಿರುವ ರಿಪ್ಪನ್ ಪೇಟೆ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ 108 ಆಂಬುಲೆನ್ಸ್ ಸೌಲಭ್ಯವಿಲ್ಲದೆ ಕಳೆದ ಮೂರು ತಿಂಗಳುಗಳಾಗಿವೆ. ಈ ಬಗ್ಗೆ ಸ್ಥಳೀಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಹಲವಾರು ಬಾರಿ ಸಾರ್ವಜನಿಕರು ಮನವಿ ಸಲ್ಲಿಸಿದರೂ ಸಹ ಯಾವುದೇ ರೀತಿಯ ಸ್ಪಂದನೆಯನ್ನು ನೀಡಿರಲಿಲ್ಲ. ರಸ್ತೆ ಅಪಘಾತದಲ್ಲಿ ಬೈಕುಗಳ ಮುಖಾಮುಖಿ ಡಿಕ್ಕಿಯಿಂದ ತಂದೆ ಸ್ಥಳದಲ್ಲೇ ಮೃತಪಟ್ಟರೆ ಬದುಕುಳಿದ ಮಗನಿಗೆ…
ಸಂಸ್ಕೃತಿಯೆಡೆಗೆ ಸೌಹಾರ್ದ ನಡಿಗೆ ಪಾದಯಾತ್ರೆಗೆ ನಾದಬ್ರಹ್ಮ ಹಂಸಲೇಖ ಚಾಲನೆ :
ತೀರ್ಥಹಳ್ಳಿ : ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು. ಕುವೆಂಪು ಜನ್ಮಸ್ಥಳವಾದ ಕುಪ್ಪಳಿಯಿಂದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆಯುವ ಪಾದಯಾತ್ರೆಗೆ ಹಂಸಲೇಖ ಚಾಲನೆ ಕೊಟ್ಟರು ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಹಂಸಲೇಖ ನಮ್ಮ ನಾಡೇ ಒಂದು ಧ್ವಜ. ಇದೀಗ ನಾಡು ನುಡಿಗೆ ಅವಮಾನವಾಗುತ್ತಿದೆ. ಕನ್ನಡದ ನಡೆ ಮುರಿಯುವವರ ವಿರುದ್ಧ ನಾವು ಹೋರಾಟ ನಡೆಸಬೇಕಿದೆ. ಭಾಷೆ ವಿಷಯ ಬಂದಾಗ ನಾವು ತಮಿಳರನ್ನು ಅನುಸರಿಸಬೇಕು. ತಮಿಳರು ಭಾಷೆಗೆ…
ಪದವಿ ತರಗತಿಯಲ್ಲಿ ರ್ಯಾಂಕ್ ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಸನ್ಮಾನ :
ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಗ್ರಾಮದ ಇಬ್ಬರು ವಿದ್ಯಾರ್ಥಿನಿಯರು ಈ ಬಾರಿಯ ಕುವೆಂಪು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯಲ್ಲಿ ಅಂತಿಮ ವರ್ಷದ ಕಲಾ ವಿಭಾಗದಲ್ಲಿ ರ್ಯಾಂಕ್ ಗಳಿಸಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ರಿಪ್ಪನ್ಪೇಟೆ ಪದವಿ ಕಾಲೇಜಿಗೆ ಎರಡು ರ್ಯಾಂಕ್ ತಂದುಕೊಟ್ಟಂತಹ ಕಾವ್ಯ ಸಿ ಹಾಗೂ ಸಿಂಧು ಜೆ ರವರಿಗೆ ಕೂರಂಬಳ್ಳಿ ಗ್ರಾಮದ ಕಾವ್ಯ ಸಿ ರವರ ಸ್ವಗೃಹದಲ್ಲಿ ಇಬ್ಬರು…
ನಾಳೆ ಆಯೋಜಿಸಿರುವ ಕುಪ್ಪಳ್ಳಿಯಿಂದ – ತೀರ್ಥಹಳ್ಳಿ ಪಾದಯಾತ್ರೆ ಬಗ್ಗೆ ಕಿಮ್ಮನೆ ರತ್ನಾಕರ್ ಹೇಳಿದ್ದೇನು??? ಈ ಸುದ್ದಿ ನೋಡಿ
ಬುಧವಾರ ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಲಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವ ಮತ್ತು ರೋಹಿತ್ ಚಕ್ರತೀರ್ಥ ವಿರುದ್ಧ ಜೂ.15ರಂದು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಯಲ್ಲಿದ್ದು, ಪಠ್ಯ ಪರಿಷ್ಕರಣೆ ಕೈಬಿಟ್ಟು ಹಿಂದಿನ ಬರಗೂರು ರಾಮಚಂದ್ರಪ್ಪ ಅವರ ಪಠ್ಯವನ್ನೇ ಮುಂದುವರಿಸಬೇಕು. ಈ ಪಾದಯಾತ್ರೆ ಪಕ್ಷಾತೀತವಾಗಿ ನಡೆಯಲಿದ್ದು ಎಲ್ಲಾ ಪಕ್ಷದವರು ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಬಹುದು ಎಂದರು. ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಕುಂ.ವೀರಭದ್ರಪ್ಪ,…
ಕಿಮ್ಮನೆ ರತ್ನಾಕರ್ ನೇತ್ರತ್ವದ ಪಾದಯಾತ್ರೆಗೆ ಬೆಂಬಲ ಸೂಚಿಸಿದ ಮಂಜುನಾಥ್ ಗೌಡ :ಕಿಮ್ಮನೆ & ಆರ್ ಎಂಎಂ ಅಭಿಮಾನಿಗಳಲ್ಲಿ ಚಿಮ್ಮಿದ ಉತ್ಸಾಹ
ತೀರ್ಥಹಳ್ಳಿ : ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣೆ ಎಡವಟ್ಟುಗಳ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ನೆಡೆಯುತ್ತಿದ್ದು ಸಾಹಿತ್ಯದ ಬಗ್ಗೆ ಸರ್ಕಾರ ತೋರಿರುವ ಅಸಡ್ಡೆಯನ್ನು ಖಂಡಿಸಿ ಜೂನ್ 15 ರ ಬುಧವಾರ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ನೆಡೆಯುವ ಕುಪ್ಪಳ್ಳಿಯ ಕವಿಶೈಲದಿಂದ ಪಾದಯಾತ್ರೆಗೆ ನಾನು ಸಹ ಬೆಂಬಲ ಕೊಡುತ್ತಿದ್ದೇನೆ ಎಂದು ತಿಳಿಸಿದರು. ಪಟ್ಟಣದ ಬೆಟ್ಟಮಕ್ಕಿಯ ತಮ್ಮ ಮನೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ರಾಷ್ಟ್ರಕವಿ ಎಂದೇ ಹೆಸರುವಾಸಿಯಾಗಿರುವ ಕುವೆಂಪು ಅವರ ಗೀತೆಯನ್ನು ನಾವೆಲ್ಲರೂ ನಾಡಗೀತೆಯಾಗಿ ಒಪ್ಪಿಕೊಂಡಿದ್ದೆವೆ. ಆದರೆ ಅಧಿಕೃತ…
ಪತ್ರಕರ್ತರ ಆರೋಗ್ಯ ಚೆನ್ನಾಗಿದ್ದರೆ ಸುದ್ದಿ ಕೂಡಾ ಆರೋಗ್ಯಕರವಾಗಿರುತ್ತದೆ : ಎಸ್.ರುದ್ರೇಗೌಡ
ಶಿವಮೊಗ್ಗ ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗಾಗಿ ನಗರದ ಮೇಟ್ರೋ ಯುನೈಟೆಡ್ ಹೆಲ್ತ್ ಕೇರ್ ಆಸ್ಪತ್ರೆ ಹಾಗೂ ಹೃದಯ ಸ್ಪೆಷಾಲಿಟಿ ಕ್ಲಿನಿಕ್ ಸಹಯೋಗದೊಂದಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿಧಾನ ಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಿತ್ಯ ಒತ್ತಡದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಂತಹದೊಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ನಿಜಕ್ಕೂ ಒಳ್ಳೆಯ…