ಜಿಲ್ಲಾ ಸುದ್ದಿ:
ರಾಜ್ಯ ಸರ್ಕಾರದ ಡಾ. ಚಿಕ್ಕಕೊಮಾರಿ ಗೌಡ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ | Kalagodu rathnakar
ರಾಜ್ಯ ಸರ್ಕಾರದ ಡಾ. ಚಿಕ್ಕಕೊಮಾರಿ ಗೌಡ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ರಿಪ್ಪನ್‌ಪೇಟೆ : ಕರ್ನಾಟಕ ಪಂಚಾಯತ್‌ರಾಜ್ ಪರಿಷತ್‌ನಿಂದ ನೀಡಲಾಗುವ ಡಾ.ಚಿಕ್ಕ ಕೊಮಾರಿಗೌಡ ದತ್ತಿ ಪ್ರಶಸ್ತಿಗೆ ಶಿವಮೊಗ್ಗ ಜಿಪಂ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಆಯ್ಕೆಯಾಗಿದ್ದಾರೆ. 2021-22ನೇ ಸಾಲಿನ ಪ್ರಶಸ್ತಿ ಇದಾಗಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವವರಿಗೆ ನೀಡುವ ಪ್ರಶಸ್ತಿ ಇದಾಗಿದೆ. ಜಿಪಂ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು…
ತೀರ್ಥಹಳ್ಳಿಯಲ್ಲಿ ಮಾನಸಿಕ ವ್ಯಕ್ತಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ! ನಿಮಾನ್ಸ್ ಆಸ್ಪತ್ರೆಗೆ ರವಾನೆ !! | Thirthahalli
ತೀರ್ಥಹಳ್ಳಿಯಲ್ಲಿ ಮಾನಸಿಕ ವ್ಯಕ್ತಿಯ ಹುಚ್ಚಾಟ ! ನಿಮಾನ್ಸ್ ಆಸ್ಪತ್ರೆಗೆ ರವಾನೆ! ತೀರ್ಥಹಳ್ಳಿ: ಪಟ್ಟಣದಲ್ಲಿ ಹುಚ್ಚನೊಬ್ಬ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಹುಚ್ಚಾಟ ಮೆರೆಯುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯ ಪ್ರಮುಖರು, ಪೊಲೀಸ್ ಇಲಾಖೆ ನೆರವಿನೊಂದಿಗೆ ಆತನನ್ನು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆತ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಕಿರಿಕಿರಿ ಮಾಡುತ್ತಿದ್ದಾನೆ. ಇದರಿಂದ ಪಟ್ಟಣದಲ್ಲಿ ಓಡಾಡಲು ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆ ಮಧ್ಯ ನಿಂತು ಕೂಗಾಡುತ್ತಾ ಇನ್ನು ಯುವತಿಯರಿಗೆ ಕೂಡ ಕೀಟಲೆ ನೀಡುತ್ತಿದ್ದು, ಇದರಿಂದ ಯುವತಿಯರಿಗೆ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಈತನ ಅಸಭ್ಯ…
RIPPONPET | ಅಪರಾಧ ತಡೆ ಮಾಸಾಚರಣೆ -ಜಾಗೃತಿಗಾಗಿ ಬೈಕ್ ರ್‍ಯಾಲಿ – ಡಿವೈಎಸ್ಪಿ ಭಾಗಿ
RIPPONPET | ಅಪರಾಧ ತಡೆ ಮಾಸಾಚರಣೆ -ಜಾಗೃತಿಗಾಗಿ ಬೈಕ್ ರ್‍ಯಾಲಿ – ಡಿವೈಎಸ್ಪಿ ಭಾಗಿ ರಿಪ್ಪನ್‌ಪೇಟೆ : ವಾಹನ ಚಲಾಯಿಸುವ ವೇಳೆ ರಸ್ತೆ ಸುರಕ್ಷತೆಯ ನಿಯಮವನ್ನು ಪಾಲಿಸದೆ ಇರುವುದು ನಿಮಗೆ ನೀವೇ ದ್ರೋಹ ಮಾಡಿದ ಹಾಗೆ. ರಸ್ತೆ ಸುರಕ್ಷತೆಯ ಬಗ್ಗೆ ಯುವಜನತೆ ಪಾಲಿಸದೆ ಇರುವುದರಿಂದ ಹೆಚ್ಚಿನ ವಾಹನ ಅಪಘಾತಗಳಾಗಿ ಸಾವು ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ವಾಹನ ಚಲಾಯಿಸವವರು ಜಾಗರೂಕರಾಗಬೇಕು ಎಂದು ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ಹೇಳಿದರು. ಪಟ್ಟಣದಲ್ಲಿ ರಸ್ತೆ ಸುರಕ್ಷತೆ ಹಾಗೂ…
Hosanagara | ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ: ಶ್ರೀಗಂಧದ ತುಂಡುಗಳ ಸಹಿತ ನಾಲ್ವರ ಬಂಧನ
ನಗರ ವಲಯ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ: ಶ್ರೀಗಂಧದ ತುಂಡುಗಳ ಸಹಿತ ನಾಲ್ವರು ಆರೋಪಿಗಳ ಬಂಧನ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ವಲಯ ವ್ಯಾಪ್ತಿಯ ಹುಂಚ ಹೋಬಳಿ ತೊಗರೆ ಗ್ರಾಮದ ಸರ್ವೆ ನಂಬರ್ 97ರ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಡಿತಲೆ ಮಾಡಿ ಸಾಗಾಣಿಕೆಗೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿ,ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ನಿವಣೆ ವಾಸಿ ಪರಮೇಶ್ವರಪ್ಪ, ಮಾಣಿ ಗ್ರಾಮದ ಎಂ ಕೆ ಹರೀಶ, ನಾಗರ ಕೊಡುಗೆ…
Humcha | ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎರಡು ತಿಂಗಳಿಂದ ನಾಪತ್ತೆ – ಲಾಕರ್ ಗಳ ಬೀಗ ಒಡೆದ ಅಧಿಕಾರಿಗಳು
ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎರಡು ತಿಂಗಳಿಂದ ನಾಪತ್ತೆ – ಲಾಕರ್ ಗಳ ಬೀಗ ಒಡೆದ ಅಧಿಕಾರಿಗಳು ರಿಪ್ಪನ್‌ಪೇಟೆ : ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ನಾಪತ್ತೆಯಾಗಿದ್ದು ಈ ಹಿನ್ನಲೆಯಲ್ಲಿ ಅಧಿಕಾರಿಗಳು ಸಂಘಕ್ಕೆ ಸಂಬಂದಿಸಿದ ಲಾಕರ್ ಬೀಗ ಒಡೆದು ಪರಿಶೀಲನೆ ನಡೆಸಿರುವ ಘಟನೆ ನಡೆದಿದೆ. ಕಳೆದ ಎರಡು ತಿಂಗಳಿಂದ ಕಾರ್ಯದರ್ಶಿ ಸಂತೋಷ್ ಕೃಷ್ಣನಾಯ್ಕ್ ಕಛೇರಿಗೆ ಹಾಜರಾಗದೇ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಅಡಳಿತ ಮಂಡಳಿಯವರು ಸಾಗರ ಸಹಕಾರ ಸಂಘಗಳ ಸಹಾಯಕ ನಿಂಬಂಧಕರಿಗೆ…
ಕಾಡಾನೆ ದಾಳಿ – ನಿರ್ಲಕ್ಷ್ಯ ವಹಿಸಿದ ಅರಣ್ಯಾಧಿಕಾರಿಗಳಿಗೆ ಘೆರಾವ್ ಹಾಕಿದ ಗ್ರಾಮಸ್ಥರು | smg
ಕಾಡಾನೆ ದಾಳಿ – ನಿರ್ಲಕ್ಷ್ಯ ವಹಿಸಿದ ಅರಣ್ಯಾಧಿಕಾರಿಗಳಿಗೆ ಘೆರಾವ್ ಹಾಕಿದ ಗ್ರಾಮಸ್ಥರು ಶಿವಮೊಗ್ಗ : ಕಾಡಾನೆಗಳು ದಾಳಿ ನಡೆಸಿದರು ಸ್ಥಳಕ್ಕೆ ಮಧ್ಯರಾತ್ರಿ ತಡವಾಗಿ ಬಂದ ಅರಣ್ಯಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದ ಘಟನೆ ಉಂಬ್ಳೆಬೈಲಿನಲ್ಲಿ ನಡೆದಿದೆ. ಕಳೆದ ರಾತ್ರಿ ಉಂಬ್ಳೆಬೈಲಿನ ಗ್ರಾಮದ ಒಳಗೆ ನುಗ್ಗಿ ದಾಳಿ ನಡೆಸಿದ್ದ ಕಾಡಾನೆ ಗ್ರಾಮದ ಮನೆಗಳಿಗೆ, ಕೊಟ್ಟಿಗೆ ಹಾಗೂ ತೋಟಗಳಿಗೆ ಹಾನಿ ಮಾಡಿದೆ ಹಲವು ಬಾರಿ ಈ ರೀತಿ ಕಾಡಾನೆ ದಾಳಿ ನಡೆಸಿದ್ದರು ಅರಣ್ಯಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ ಎನ್ನುವುದು ಗ್ರಾಮಸ್ಥರ…
Sagara | ಉಸ್ತುವಾರಿ ಸಚಿವ ಮಧುಬಂಗಾರಪ್ಪ ವಿರುದ್ದ ಸಾಗರ ಪತ್ರಕರ್ತರಿಂದ ಪ್ರತಿಭಟನೆ
Sagara | ಉಸ್ತುವಾರಿ ಸಚಿವ ಮಧುಬಂಗಾರಪ್ಪ ವಿರುದ್ದ ಸಾಗರ ಪತ್ರಕರ್ತರಿಂದ ಪ್ರತಿಭಟನೆ ಸಾಗರ : ಪತ್ರಕರ್ತರ ಆತ್ಮಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡಿದ ವಾರ್ತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರವರ ನಡೆಯನ್ನು ಖಂಡಿಸಿ ಸಾಗರದ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ಉಪ ವಿಭಾಗಾಧಿಕಾರಿಗಳ ಕಛೇರಿಯ ಎದುರು ಪತ್ರಕರ್ತರು ಕಪು ಬಟ್ಟೆ ಕಟ್ಟಿಕೊಂಡು ಸಚಿವರು ಹಾಗೂ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಡಿ. ಒಂದರಂದು ಜಿಲ್ಲಾ…
Thirthahalli | ಸೆಮಿಫೈನಲ್ ನಲ್ಲಿ ಗೆದ್ದಿದ್ದೇವೆ, ಖಂಡಿತವಾಗಿ ಫೈನಲ್ ಮೋದಿಯದ್ದೆ – ಆರಗ ಜ್ಞಾನೇಂದ್ರ
ಸೆಮಿಫೈನಲ್ ನಲ್ಲಿ ಗೆದ್ದಿದ್ದೇವೆ, ಖಂಡಿತವಾಗಿ ಫೈನಲ್ ಮೋದಿಯದ್ದೆ – ಆರಗ ಜ್ಞಾನೇಂದ್ರ ತೀರ್ಥಹಳ್ಳಿ : ಇಂದು ಬಿಜೆಪಿ ಕಾರ್ಯಕರ್ತರ ಪಾಲಿಗೆ ಸಂಭ್ರಮದ ದಿನ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅತ್ಯುತ್ತಮ ಲೀಡ್ ನಲ್ಲಿ ಇದೆ. ಇಂಡಿಯನ್ ಅಲೆಯನ್ಸ್ ನೆಲ ಕಚ್ಚುತ್ತಿದೆ. ಗ್ಯಾರೆಂಟಿ ನೀಡಿದರು ಜನ ಒಪ್ಪದೇ ಕಾಂಗ್ರೆಸ್ ಗೆ ತಪರಾಕಿ ಹೊಡೆದಿದ್ದಾರೆ ಎಂದು ಮಾಜಿ ಗೃಹಸಚಿವ, ಶಾಸಕರಾದ ಆರಗ ಜ್ಞಾನೇಂದ್ರ ಹೇಳಿದರು. ಭಾನುವಾರ ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯ ಬಿಜೆಪಿ ಪರವಾಗಿ …
MENs DAY | ಹೊಸನಗರದಲ್ಲಿ ಪುರುಷ ದಿನಾಚರಣೆ ಸಂಭ್ರಮ
ಹೊಸನಗರದಲ್ಲಿ ಪ್ರಪ್ರಥಮವಾಗಿ ಕ್ರೈಸ್ತ ಯುವತಿ ಮಂಡಳಿಯವರಿಂದ ಪುರುಷ ದಿನಾಚರಣೆ ಸಂಭ್ರಮ ಹೊಸನಗರ : ಪಟ್ಟಣದ ಸಂತ ಅಂತೋನಿ ದೇವಾಲಯದ ಸಭಾಂಗಣದಲ್ಲಿ ಇಂದು ಕ್ರೈಸ್ತ ಯುವತಿ ಸಂಘದವರು ಹೊಸನಗರದಲ್ಲಿ ಪ್ರಪ್ರಥಮವಾಗಿ ಪುರುಷರ ದಿನಾಚರಣೆಯನ್ನು ಆಚರಿಸಿದರು ಸಮಾರಂಭವನ್ನು ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳಾದ ರೆ ಫಾ ಸೈಮನ್ ಹೊರಟರವರು ದೀಪ ಬೆಳಗಿ ಉದ್ಘಾಟಿಸಿ ಪುರುಷರ ತ್ಯಾಗ ಮನೋಭಾವ ಬೆಲೆಕಟ್ಟಲಾಗದಂತಹ ಆಸ್ತಿಯಾಗಿದ್ದಾರೆ.ಪುರುಷರು ಸಂಬಂಧ ಭಾವನೆಗಳ ಮೂಲಕ ಆದರ್ಶ ಪ್ರಾಯರಾಗಿ ಸದೃಢ ಕುಟುಂಬ ರೂಪಿಸಿಕೊಂಡು ಉತ್ತಮ ಜೀವನ ನಡೆಸುವಂತೆ ಕರೆ ನೀಡಿದರು…
Ripponpete | ವಿನಾಯಕನಗರದಲ್ಲಿ ಅಯ್ಯಪ್ಪ ಸ್ವಾಮಿ ಪೂಜಾ ಉತ್ಸವ
ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ 27ನೇ ವರ್ಷದ ಅಯ್ಯಪ್ಪ ಸ್ವಾಮಿ ಯಾತ್ರೆಯ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಉತ್ಸವ ಕಾರ್ಯಕ್ರಮ 03-12-23 ರ ಭಾನುವಾರದಂದು ನಡೆಯಲಿದೆ. ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯನ್ನು ತೀರ್ಥೇಶ್ ಗುರುಸ್ವಾಮಿ, ರಮೇಶ್ ಗುರುಸ್ವಾಮಿ ಮತ್ತು ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿಸಲಾಗುವುದು. ಅಂದು ಬೆಳಗ್ಗೆ 8ಕ್ಕೆ ಗಣಪತಿ ಪೂಜೆ , 08-30 ಕ್ಕೆ ಸುಬ್ರಹ್ಮಣ್ಯ ಪೂಜೆ , 09 ಕ್ಕೆ ಇರುಮುಡಿ…