ಜಿಲ್ಲಾ ಸುದ್ದಿ:
ಮನೆಮನೆಗಳಿಗೆ ನೀರು ಕೊಡಿ ಇಲ್ಲವಾದರೆ ನೀರಿಲ್ಲದ ಜಾಗಕ್ಕೆ ಕಳುಹಿಸಬೇಕಾಗುತ್ತೆ – ಪಿಡಿಓಗಳಿಗೆ ಎಚ್ಚರಿಕೆ ನೀಡಿದ ಶಾಸಕ ಬೇಳೂರು| beluru
ಪಿಡಿಓಗಳಿಗೆ ಎಚ್ಚರಿಕೆ ನೀಡಿದ ಶಾಸಕ ಬೇಳೂರು……….. “ಮನೆಮನೆಗಳಿಗೆ ನೀರು ಕೊಡಿ ಇಲ್ಲವಾದರೆ ನೀರಿಲ್ಲದ ಜಾಗಕ್ಕೆ ಕಳುಹಿಸಬೇಕಾಗುತ್ತೆ’’ ರಿಪ್ಪನ್‌ಪೇಟೆ;-ಜಲಜೀವನ ಮಿಷನ್ ಯೋಜನೆಯಡಿ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮಕ್ಕೆ ೪೫ ಲಕ್ಷ ರೂ ಅನುಧಾನ ಬಿಡುಗಡೆಯಾಗಿದ್ದು ಬಹುದಿನಗಳ ಬೇಡಿಕೆಯಂತೆ ಈ ಗ್ರಾಮದಲ್ಲಿನ ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುವಂತಾಗಿತು ಈ ಯೋಜನೆಯನ್ವಯ ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು. ಅವರು ಸಮೀಪದ…
ಆನಂದಪುರದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ರಾಪ್ತನೊಂದಿಗೆ ಯುವತಿಯ ಅಶ್ಲೀಲ ನೃತ್ಯ – ವೀಡಿಯೋ ವೈರಲ್ | Viral video
ಆನಂದಪುರದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ರಾಪ್ತನೊಂದಿಗೆ ಯುವತಿಯ ಅಶ್ಲೀಲ ನೃತ್ಯ – ವೀಡಿಯೋ ವೈರಲ್ | Viral video ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆದಿದೆ ಎನ್ನಲಾದ ಅಶ್ಲೀಲ ನೃತ್ಯದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಕರ್ನಾಟಕ ರತ್ನ ಡಾ ಪುನೀತ್ ರಾಜ್‍ಕುಮಾರ್ ಹೆಸರಿನ ಸಂಘಟನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಲ್ಲಿ ಅರೆಬರೆ ಬಟ್ಟೆ ತೊಟ್ಟ ಯುವತಿಯನ್ನು ಕುಣಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಅದರಲ್ಲೂ ಅಪ್ರಾಪ್ತ ಬಾಲಕನನ್ನು ಬಳಸಿಕೊಂಡು ಅಶ್ಲೀಲ ಭಂಗಿಗಳಲ್ಲಿ…
Hosanagara | ಗೋಪೂಜೆಗಾಗಿ ಇಟ್ಟಿದ್ದ ಬಂಗಾರದ ಸರ ನುಂಗಿದ ಹಸು – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ಗೋಪೂಜೆಗಾಗಿ ಇಟ್ಟಿದ್ದ ಬಂಗಾರದ ಸರ ನುಂಗಿದ ಹಸು – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಹೊಸನಗರ ಇಲ್ಲಿನ ಸಮೀಪದ ಮತ್ತಿಮನೆ ಶ್ಯಾಮ್ ಉಡುಪ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ಗೋ ಪೂಜೆಯ ದಿನ ಪೂಜೆಯ ಜೊತೆಗೆ ಇರಿಸಿದ್ದ ಬಂಗಾರದ ಸರ ಕಾಣೆಯಾಗಿತ್ತು. ಪೂಜೆ ಮುಗಿದ ನಂತರ ಬಂಗಾರದ ಸರ ಕಾಣದೆ ಇದ್ದಾಗ ಪೂಜೆ ಮಾಡಿದ ಸ್ಥಳದ ಅಕ್ಕಪಕ್ಕ ಹಾಗೂ ಕೊಟ್ಟಿಗೆಯಲ್ಲಿ ಹುಡುಕಲಾಗಿತ್ತು ಎಷ್ಟೇ ಹುಡುಕಿದರು ಸರ ಸಿಗದ ಕಾರಣ ಹಸುವೇ ಪ್ರಸಾದ ಜೊತೆಗೆ ನುಂಗಿರಬಹುದೇ ಎಂದು ಸಂಶಯ ಪಟ್ಟಿದ್ದರು….
Ripponpete | ತಮ್ಮಡಿಕೊಪ್ಪ ನಾಗಕ್ಷೇತ್ರದಲ್ಲಿ ವಿಶೇಷ ಆಶ್ಲೇಷ ಬಲಿ ಸಂಪನ್ನ – ಶಾಸಕ ಆರಗ ಜ್ಞಾನೇಂದ್ರ ಭಾಗಿ
Ripponpete | ತಮ್ಮಡಿಕೊಪ್ಪ ನಾಗಕ್ಷೇತ್ರದಲ್ಲಿ ವಿಶೇಷ ಆಶ್ಲೇಷ ಬಲಿ ಸಂಪನ್ನ – ಶಾಸಕ ಆರಗ ಜ್ಞಾನೇಂದ್ರ ಭಾಗಿ ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪದ ಶ್ರೀ ಗುರು ಕರಿಬಸವೇಶ್ವರ, ಬಾಲಸುಬ್ರಹ್ಮಣ್ಯ ನಾಗದೇವತೆ ಮತ್ತು ನಾಗ ಕ್ಷೇತ್ರದಲ್ಲಿ ಭಾನುವಾರ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಅಶ್ಲೇಷ ಬಲಿ ಕಾರ್ಯಕ್ರಮ ಸಂಪನ್ನಗೊಂಡಿತ್ತು. ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನಾಗದೇವರ ಪ್ರತಿಷ್ಟಾಪನೆ , ಉದ್ಯಾಪನ ಹೋಮ , ಕಲಾ ಹೋಮ ,ಹಾಗೂ ಲೋಕ ಕಲ್ಯಾಣಾರ್ಥವಾಗಿ ಅಶ್ಲೇಷ ಬಲಿ ಕಾರ್ಯಕ್ರಮ…
Ripponpete | ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರು
ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರು ರಿಪ್ಪನ್‌ಪೇಟೆ : ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ನಾಲ್ವರು ವಿದ್ಯಾರ್ಥಿನಿಯರು ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನ 23 ಮತ್ತು 24 ರಂದು ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಠದ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯೊಳಗಿನ ಹಾಗೂ 14 ವರ್ಷ ವಯೋಮಿತಿಯ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಮುಂದಿನ ತಿಂಗಳು ದೆಹಲಿ ಹಾಗೂ ಜಾರ್ಖಂಡ್…
ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು : ರಂಭಾಪುರಿ ಜಗದ್ಗುರುಗಳು| Malali matt
ಮಳಲಿಮಠದ ಕಾರ್ತಿಕ ದೀಪೋತ್ಸವ ಶ್ರೀಗಳ ಪಟ್ಟಾಧಿಕಾರ ರಜತ ಮಹೋತ್ಸವದಲ್ಲಿ ರಂಭಾಪುರಿ ಜಗದ್ಗುರುಗಳು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು ರಿಪ್ಪನ್‌ಪೇಟೆ;-ಮನುಷ್ಯ ಜೀವನದಲ್ಲಿ ಅರ್ಥ ಅರಿವು ಆಯುಷ್ಯ ಬಹಳ ಮುಖ್ಯ. ಗುರುವೆಂದರೆ ವ್ಯಕ್ತಿಯಲ್ಲ. ಅದೊಂದು ಮಹಾನ್ ಶಕ್ತಿ. ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಶ್ರೀ ಗುರು ಎಂದು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಸಮೀಪದ ಮಳಲಿ ಸಂಸ್ಥಾನಮಠದಲ್ಲಿ ಅಯೋಜಿಸಲಾದ ಕಾರ್ತಿಕ ದೀಪೋತ್ಸವ ಹಾಗೂ ಡಾ||ನಾಗಭೂಷಣ ಶ್ರೀಗಳವರ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭದ ದಿವ್ಯ…
ಹೊಸನಗರ ತಾಲೂಕಿನಲ್ಲಿ ನಿಲ್ಲದ ಅಕ್ರಮ ಮರಳು ಸಾಗಾಟ – ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ – ಗಿರೀಶ್ ಆಚಾರ್ |sand mafia
ಹೊಸನಗರ ತಾಲೂಕಿನಲ್ಲಿ ನಿಲ್ಲದ ಅಕ್ರಮ ಮರಳು ಸಾಗಾಟ – ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹಕ್ಕೆ ಗಿರೀಶ್ ಆಚಾರ್ ನಿರ್ಧಾರ ಹೊಸನಗರ ಹಾಗೂ ಸಾಗರ ತಾಲೂಕಿನ ಸುತ್ತಮುತ್ತಲ ಪ್ರದೇಶದಿಂದ ನಿತ್ಯವೂ ನೂರಾರು ಲೋಡ್ ಮರಳು ಅಕ್ರಮ ಸಾಗಾಟ ನಡೆಯುತ್ತಿದ್ದು ಈ ಬಗ್ಗೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಹಾಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುವುದಾಗಿ ಜನಸಂಗ್ರಾಮ ಪರಿಷತ್ ಸದಸ್ಯ ಗಿರೀಶ್ ಆಚಾರ್ ಹೇಳಿದ್ದಾರೆ. ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ತಾಲೂಕಿನಾದ್ಯಂತ…
Sagara | ಆಕಸ್ಮಿಕ ಬೆಂಕಿ: ಕೊಟ್ಟಿಗೆ, ಕಾರು ಸಂಪೂರ್ಣ ಭಸ್ಮ
Sagara | ಆಕಸ್ಮಿಕ ಬೆಂಕಿ: ಕೊಟ್ಟಿಗೆ, ಕಾರು ಸಂಪೂರ್ಣ ಭಸ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಸುಳ್ಳಳ್ಳಿ ಸಮೀಪದ ಕೊಡನವಳ್ಳಿಯಲ್ಲಿ ಗಣಪತಿ ಕೆಂಚ ನಾಯ್ಕ ಅವರ ದನದ ಕೊಟ್ಟಿಗೆಯಲ್ಲಿ ಕಾಣಿಸಿದ ಆಕಸ್ಮಿಕ ಬೆಂಕಿಯ ಕಾರಣದಿಂದ ಕೊಟ್ಟಿಗೆ, ಸಂಗ್ರಹಿಸಿದ ಒಣ ಹುಲ್ಲು ಹಾಗೂ ಓಮಿನಿ ಕಾರು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ. ಪ್ರಾಥಮಿಕ ಅಂದಾಜುಗಳ ಪ್ರಕಾರ ಸುಮಾರು ಏಳರಿಂದ ಎಂಟು ಲಕ್ಷ ರೂ.ಗಳ ನಷ್ಟ ಉಂಟಾಗಿದೆ ಎಂದು ಭಾವಿಸಲಾಗಿದೆ. ಬೆಂಕಿಯನ್ನು ನಂದಿಸಲು ಗಣಪತಿ,…
Sagara | ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿದಂಬರರಾವ್ ಜಂಬೆ ರವರನ್ನು ಅಭಿನಂದಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿದಂಬರರಾವ್ ಜಂಬೆ ರವರನ್ನು ಅಭಿನಂದಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ ಸಾಗರ : 2023 ನೇ ಸಾಲಿನ ರಾಜ್ಯೋತ್ಸವ (ರಂಗಭೂಮಿ ಕ್ಷೇತ್ರ) ಪ್ರಶಸ್ತಿಗೆ ಭಾಜನರಾದ ನಾಡಿನ ಹೆಸರಾಂತ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ರವರನ್ನು ಅವರ ಸ್ವಗೃಹದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅಭಿನಂದಿಸಿ ಸನ್ಮಾನಿಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕೆಳದಿ ಸಮೀಪದ ಅಡ್ಡೇರಿ ಗ್ರಾಮದವರಾದ ಜಂಬೆಯವರು. ಕೆಳದಿಯ ಭಾರತಿ ಕಲಾವಿದರು ಸಂಸ್ಥೆಯ “ಸಂಗ್ಯಾ-ಬಾಳ್ಯಾ” ನಾಟಕದ ಮೂಲಕ ರಂಗಭೂಮಿಯನ್ನು ಪ್ರವೇಶಿಸಿ,…
ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಜನತೆ| leopard
ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಜನತೆ| leopard ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಮ ಕಾರೆಹಳ್ಳಿ ಭಾಗದಲ್ಲಿ ಇತ್ತೀಚಿಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರ ಜನರ ನಿದ್ದೆಗೆಡಿಸಿತ್ತು. ನಾಯಿಯ ಮೇಲೂ ದಾಳಿ ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಕಾರೆಹಳ್ಳಿಯಲ್ಲಿ ಮನೆ ಮಾದರಿಯ ಬೋನಿ ನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಅದಕ್ಕೆ ವಿಶಾಲವಾದ ಬಯಲು ಅನಿಸಿಕೊಂಡೇ ಅದು ಬೇಟೆಯನ್ನು ಅರಸಿಕೊಂಡು ಬೋನಿನ ಒಳಗೆ ಮದ್ಯರಾತ್ರಿ ಪ್ರವೇಶಿಸಿತ್ತು. ಇಂದು ಬೆಳಿಗ್ಗೆ ವನ್ಯಜೀವಿ ವೈದ್ಯ…