Humcha | ಆನೆಗದ್ದೆ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸಂಕ್ರಾಂತಿ ಆಚರಣೆ
ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ನಮ್ಮ ಹಬ್ಬ ಹರಿದಿನಗಳು ಹಾಗೂ ಸಂಸ್ಕೃತಿ ಸಂಪ್ರದಾಯಗಳ ಮಹತ್ವ, ಆಚಾರ ವಿಚಾರಗಳನ್ನು ತಿಳಿಸಿಕೊಟ್ಟು ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು ಎಂದು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಆನೆಗದ್ದೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಟ್ಟಡ ಕಾರ್ಮಿಕರ ಸಂಘ ಹಾಗೂ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದವರು ಶಾಲೆಯ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರದಿಂದ ನಡೆಸಿದ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯವಸಾಯದ ಭೂಮಿ ವಾಣಿಜ್ಯಕರಣವಾಗಿ ಮಾರ್ಪಾಡುತ್ತಿರುವ ಜೊತೆಯಲ್ಲಿಯೇ ಸುಗ್ಗಿಯ ಸಂಭ್ರಮವು ಕಡಿಮೆಯಾಗುತ್ತಿವೆ, ಹಳ್ಳಿಗಳಲ್ಲಿ ನಡೆಯುತ್ತಿದ್ದ ಸಂಕ್ರಾಂತಿ ಹಬ್ಬ ಶಾಲಾ ಕಾಲೇಜುಗಳಲ್ಲಿ ನಡೆಸುವಂತಾಗಿದೆ ಎಂದರು.
ಮಕರ ಸಂಕ್ರಾಂತಿ ದಿನ ರೈತರು ಧಾನಸ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟಿಕೊಳ್ಳುವ ಕಾಲ, ದೇವ ಮಾನವರು ಧರೆಗೆ ಇಳಿದು ಬಂದಿದ್ದರಿಂಲೇ ದೇವ ಪುರುಷರಾದ ಜೋಗಯ್ಯ, ಗುಡ್ಡರು, ನೀಲಗಾರರು ಹಬ್ಬದ ದಿನದಂದು ಮನೆ ಮುಂದಕ್ಕೆ ಭಿಕ್ಷಕ್ಕೆ ಬರುತ್ತಾರೆ, ಎಳ್ಳು ಬೆಲ್ಲ ಒಳ್ಳೆಯ ಅಲೋಚನೆಯ ಸಂಕೇತವಾಗಿದೆ. ಸಂಸದ ಬಿ ವೈ ರಾಘವೇಂದ್ರ ರವರ ಆಶಯದಂತೆ ಸರ್ಕಾರಿ ಶಾಲೆಗಳಲ್ಲಿ ಹಬ್ಬವನ್ನು ಆಚರಿಸುತಿದ್ದೇವೆ ಎಂದರು.
ಕಟ್ಟಡ ಕಾರ್ಮಿಕರ ಸಂಘದ ಹೊಸನಗರ ಗ್ರಾಮಾಂತರ ಅಧ್ಯಕ್ಷ ಮಹಮ್ಮದ್ ಹುಸೇನ್ ಮಾತನಾಡಿ ನಮ್ಮ ದೇಶದಲ್ಲಿ ಆಚರಿಸುವ ಪ್ರತಿ ಹಬ್ಬ ಹರಿದಿನ ಆಚರಣೆ ಸಂಪ್ರದಾಯದ ಹಿಂದೆ ಅದರದ್ದೇ ಆದ ಅರ್ಥ ಇತಿಹಾಸ ವೈಜ್ಞಾನಿಕ ಕಾರಣಗಳಿವೆ. ಅವುಗಳನ್ನು ಅರಿತು ಅವುಗಳ ಆಚರಣೆ ಆಗಬೇಕು,ಶಾಲಾ ಕಾಲೇಜುಗಳಲ್ಲಿ ಕೇವಲ ಪಾಠ ಪ್ರವಚನಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಿಗೂ ಆಧ್ಯತೆ ನೀಡಬೇಕು, ಮಕ್ಕಳ ದೈಹಿಕ ಮಾನಸಿಕ ಸದೃಢತೆ ಹೆಚ್ಚಬೇಕು, ಆ ಮೂಲಕ ಅವರಲ್ಲಿ ಜ್ಞಾನಾರ್ಜನೆ ಶಕ್ತಿ ಹೆಚ್ಚಿಸಬೇಕೆಂದರು.
ಇದೇ ಸಂಧರ್ಭದಲ್ಲಿ ಆನೆಗದ್ದೆ ಶಾಲೆ ರಾಜ್ಯಮಟ್ಟದ ಪ್ರಶಸ್ತಿ ಪಡೆಯುವಲ್ಲಿ ಶ್ರಮಿಸಿದ ಶಿಕ್ಷಕರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು..ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಸಂಕ್ರಾಂತಿ ಹಬ್ಬದೂಟ ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಮಹಾದೇವ ಆಚಾರ್, ಜಿಲ್ಲಾ ಅಧ್ಯಕ್ಷರಾದ ಸಂಜಯ್ ಕುಮಾರ್ ,ರಾಘಣ್ಣ, ಜಿಲ್ಲಾ ಕಾರ್ಯದರ್ಶಿ ಆರ್ಮುಗಂ,ಎಸ್ ಡಿಎಂಸಿ ಅಧ್ಯಕ್ಷರಾದ ಸುರೇಶ್ ಎ ಆರ್ ಆನೆಗದ್ದೆ , ಸಮಿತಿಯ ರಾಘವೇಂದ್ರ ರಿಪ್ಪನ್‌ಪೇಟೆ ,ಪ್ರಭು ಮೇಸ್ತ್ರಿ ತಿರುಪತಿ,ಭಾಗ್ಯ,ಶಂಕರಾಚಾರ್, ವನಿತಾ, ಶ್ವೇತಾ , ಸ್ವಾತಿ ,ಪ್ರಭಾಕರ್ ಆಚಾರ್ ,ಪ್ರಶಾಂತ್ ಹಾಗೂ ಇತರರಿದ್ದರು.