Accident | ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ಸಾಗಿಸುತಿದ್ದ ಮಹೀಂದ್ರಾ ಬೊಲೆರೋ ಪಿಕಪ್ ಪಲ್ಟಿ – ಮೂವರು ಸಾವು
ಶಿವಮೊಗ್ಗ(Shivamogga) ಜಿಲ್ಲೆಯ ಹೊಳೆಹೊನ್ನೂರು ಪಟ್ಟಣದಲ್ಲಿ ಭೀಕರ ಅಪಘಾತ ಸಂಭವಿಸಿ ಭದ್ರಾವತಿ ತಾಲ್ಲೂಕಿನ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಡಿಕೆ ಸಾಗಿಸುತಿದ್ದ ಮಹೀಂದ್ರಾ ಬೊಲೆರೋ ಪಿಕಪ್ ವಾಹನ ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ.
ಭದ್ರಾವತಿ ತಾಲೂಕಿನ ಚಂದನಕೆರೆಯ ಮಂಜುನಾಥ (40), ನಾಗರಾಜ್ (42), ಗೌತಮ್ (19) ಮೃತ ದುರ್ದೈವಿಗಳಾಗಿದ್ದಾರೆ. ಇವರು ಚಂದನಕರೆಯಿಂದ ಶಿಕಾರಿಪುರ ತಾಲೂಕು ಅರಿಶಿಣಗೆರೆಗೆ ತೆರಳಿದ್ರು. ಅಲ್ಲಿನ ತೋಟವೊಂದರಲ್ಲಿ ಅಡಕೆ ಕೊಯ್ಲು ಮುಗಿಸಿಕೊಂಡ ವಾಪಸ್ ಬರುವಾಗ ಘಟನೆ ಸಂಭವಿಸಿದೆ.
ಸವಳಂಗ ಮಾರ್ಗವಾಗಿ ಚಂದನಕೆರೆಗೆ ಬರುತ್ತಿದ್ದಾಗ ಚಿನ್ನಿಕಟ್ಟೆ ಜೋಗದ ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಟನೆಯಲ್ಲಿ ಸುರೇಶ್, ಗಣೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಲ್ಟಿಯಾದ ರಭಸಕ್ಕೆ ಬೊಲೆರೋ ಪಿಕಪ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.