ಕ್ರೈಂ ಸುದ್ದಿ:
ಆಗುಂಬೆ ಘಾಟಿಯಲ್ಲಿ ಶಾಲಾ ಮಕ್ಕಳಿದ್ದ ಸ್ಕೂಲ್ ಬಸ್ ಅಪಘಾತ|accident
ಆಗುಂಬೆ ಘಾಟಿಯಲ್ಲಿ ಶಾಲಾ ಮಕ್ಕಳಿದ್ದ ಸ್ಕೂಲ್ ಬಸ್ ಅಪಘಾತ ತೀರ್ಥಹಳ್ಳಿ: ಬೆಂಗಳೂರಿಂದ ಪ್ರವಾಸ ಬಂದಿದ್ದ ಶಾಲಾ ವಾಹನವೊಂದು ಶೃಂಗೇರಿಯಿಂದ ಕೊಲ್ಲೂರು ಹೋಗುವಾಗ ಆಗುಂಬೆ ಘಾಟಿಯ ಮೊದಲ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾದ ಘಟನೆ ಸಂಭವಿಸಿದೆ. ಆಗುಂಬೆ ಘಾಟಿಯ ಸೂರ್ಯಾಸ್ತಮಾನ ಜಾಗದ ಸಮೀಪ ಮೊದಲ ತಿರುವಲ್ಲಿ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಘಾಟಿ ಕೆಳಗೆ ಬೀಳುವ ಹಂತಕ್ಕೆ ಹೋಗಿದೆ.ಅತೀ ವೇಗದ ಕಾರಣ ನಿಯಂತ್ರಣ ತಪ್ಪಿದ್ದು ಸ್ಕೂಲ್ ಬಸ್ ನಲ್ಲಿ ಶಾಲಾ ಮಕ್ಕಳು ಸೇರಿದಂತೆ 30 ಜನರು ಇದ್ದರು…
ಅಕ್ರಮ ಮರಳು ತುಂಬಿಸಿ ಮೇಲೆ ಎಂ ಸ್ಯಾಂಡ್ ಲೇಪನ – ಟ್ರ್ಯಾಕ್ಟರ್ ವಶಕ್ಕೆ.!!!|sand mafia
ಶಿವಮೊಗ್ಗ – ಮರಳಿನ ಮೇಲೆ ಎಂ ಸ್ಯಾಂಡ್ ಲೇಪನ ಮಾಡಿ ಕಟ್ಟಡದ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೊಮ್ಮನಕಟ್ಟೆ ಜಿ ಬ್ಲಾಕ್ ನಲ್ಲಿ ನಡೆದಿದೆ. ಮರಳಿನ ರಾಯಲ್ಟಿ(royalty) ವಿಚಾರದಲ್ಲಿ ಟ್ರ್ಯಾಕ್ಟರ್ ನಲ್ಲಿ ಮರಳಿನ ಮೇಲೆ ಎಂ ಸ್ಯಾಂಡ್ ಲೇಪನ ಮಾಡಲಾಗಿತ್ತು. ಲಾರಿಯ ರಾಯಲ್ಟಿ ಪಡೆದಿದ್ದ ಸ್ಥಳೀಯರೊಬ್ಬರು ಟ್ರ್ಯಾಕ್ಟರ್ ನಲ್ಲಿ ಮರಳು ತುಂಬಿ ಅದರ ಮೈಮೇಲೆ ಎಂಸ್ಯಾಂಡ್ ಮುಚ್ಚಿದ್ದಾರೆ ಎಂದು ಬೊಮ್ಮನ್ ಕಟ್ಟೆಯ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು…
ರಿಪ್ಪನ್ಪೇಟೆ – ಓಮಿನಿ ಕಾರಿಗೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಅಪ್ಪಳಿಸಿದ ಎರ್ಟಿಗಾ ಕಾರು – ಸರಣಿ ಅಪಘಾತ|accident
ಓಮಿನಿ ಕಾರಿಗೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಅಪ್ಪಳಿಸಿದ ಕಾರು ರಿಪ್ಪನ್ಪೇಟೆ ; ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ರಿಪ್ಪನ್ಪೇಟೆ – ಹೊಸನಗರ ರಾಜ್ಯ ಹೆದ್ದಾರಿ ಕೋಡೂರಿನಲ್ಲಿ ನಡೆದಿದೆ. ರಿಪ್ಪನ್ಪೇಟೆ ಕಡೆಯಿಂದ ಹೊಸನಗರದ ಕಡೆ ಚಲಿಸುತ್ತಿದ್ದ ಮಾರುತಿ ಎರ್ಟಿಗಾ ಕಾರು (KA15 N 8342) ದಿಢೀರನೆ ರಸ್ತೆಗೆ ಅಡ್ಡ ಬಂದ ಮಾರುತಿ ಓಮ್ನಿ ವಾಹನಕ್ಕೆ ಗುದ್ದಿದ ಪರಿಣಾಮ ಎರ್ಟಿಗಾ ಕಾರಿನ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ…
ಅಪ್ಪ-ಅಮ್ಮನಿಲ್ಲದ ಕೊರಗು – ಬೇಸತ್ತ ಯುವಕ ನೇಣಿಗೆ ಶರಣು|bdvt
ಅಪ್ಪ-ಅಮ್ಮನಿಲ್ಲದ ಕೊರಗು – ಬೇಸತ್ತ ಯುವಕ ನೇಣಿಗೆ ಶರಣು ತಂದೆ ತಾಯಿಯಿಲ್ಲದ ಕೊರಗಿನಿಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಯುವಕ ವೀರೇಶ್ (21) ಅಡಕೆ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇವೆಂದ್ರಪ್ಪ ಎಂಂಬುವವರ ಅಡಕೆ ತೋಟದ ಅಂಚಿನಲ್ಲಿರುವ ಮಾವಿನ ಮರಕ್ಕೆ ಒಂದು ಬಿಳಿ ಪಂಚೆಯನ್ನು ಕುತ್ತಿಗೆಗೆ ಬಿಗಿದುಕೊಂಡು ಮೃತ ಪಟ್ಟಿದ್ದು, ವೀರೇಶನು ತಂದೆ-ತಾಯಿ ಇಲ್ಲದ ಕೊರಗಿನಿಂದ ಜಿಗುಪ್ಪೆಗೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಪೊಲೀಸ್…
ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ – ಒಂಬತ್ತು ಮಂದಿಗೆ ಗಾಯ|accident
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಹಲವರಿಗೆ ಗಾಯ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಬಳಿಯಲ್ಲಿ ನಿನ್ನೆ ರಾತ್ರಿ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾಗಿದೆ. ನಡೆದಿದ್ದೇನು..?? ಖಾಸಗಿ ಬಸ್ ಸಾಗರ ತಾಲ್ಲೂಕಿನಿಂದ ಬೆಂಗಳೂರಿಗೆ ಹೊರಟಿತ್ತು. ಆನಂದಪುರದ ಬಳಿಯಲ್ಲಿ ಸಿಗುವ ಐಗಿನಬೈಲ್ ಟರ್ನಿಂಗ್ನಲ್ಲಿ ಬಸ್ ಪಲ್ಟಿಯಾಗಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಒಂದು ಕಡೆಗೆ ಉರುಳಿದೆ. ರಾತ್ರಿ ಸುಮಾರು 12 ಗಂಟೆಯ ಹೊತ್ತಿಗೆ ಈ ಘಟನೆ ಸಂಭವಿಸಿದೆ. ಬಸ್…
ಪಾದಚಾರಿಯ ಮೇಲೆ ಹರಿದು ಲೈಟ್ ಕಂಬಕ್ಕೆ ಡಿಕ್ಕಿಯಾದ ಬೈಕ್ – ಇಬ್ಬರು ಸಾವು|accident
ಪಾದಚಾರಿಯ ಮೇಲೆ ಹರಿದು ಲೈಟ್ ಕಂಬಕ್ಕೆ ಡಿಕ್ಕಿಯಾದ ಬೈಕ್ – ಇಬ್ಬರು ಸಾವು ಬೈಕ್ ಅಪಘಾತವೊಂದರಲ್ಲಿ ಪಾದಚಾರಿ ಹಾಗೂ ಬೈಕ್ ಸವಾರ ಇಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆ ಗ್ರಾಮಾಂತರ ವ್ಯಾಪ್ತಿಯ ಸುತ್ತುಕೋಟೆಯಲ್ಲಿ ನಡೆದಿದೆ. ಅಪಘಾತದಲ್ಲಿ ಹನುಮಮಂತಪ್ಪ ಹಾಗೂ ಮೇಘರಾಜ್ ಎಂಬವರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಹೊನ್ನಾಪುರದ ಮೇಘರಾಜ್ ಎಂಬವರು ಶಿವಮೊಗ್ಗ, ಆಯನೂರು , ಕುಂಸಿ ಚೋರಡಿ ಮಾರ್ಗವಾಗಿ ಶಿರಾಳಕೊಪ್ಪದ ಮಂಚಿಕೊಪ್ಪಕ್ಕೆ ಹೋಗುತ್ತಿದ್ದರು. ಈ ವೇಳೆ ಸುತ್ತುಕೋಟೆಯಲ್ಲಿ ಬಳಿ ಹನುಮಂತಪ್ಪ ಎಂಬವರು ನಡೆದುಕೊಂಡು ಬರುತ್ತಿದ್ದರು. ರಾತ್ರಿ ಕತ್ತಲಲ್ಲಿ ಮೇಘರಾಜ್ ಬೈಕ್ ಹನುಮಂತಪ್ಪರವರಿಗೆ ಡಿಕ್ಕಿ ಹೊಡೆದಿದೆ….
ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಶವ ಪತ್ತೆ|Thirthahalli
ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಶವ ಪತ್ತೆ ತೀರ್ಥಹಳ್ಳಿ : ಪಟ್ಟಣದ ಜಯಚಾಮರಾಜೇಂದ್ರ ಸೇತುವೆಯ ಕೆಳಭಾಗದ ತುಂಗಾ ನದಿಯ ನೀರಿನಲ್ಲಿ ಗುರುವಾರ ವ್ಯಕ್ತಿಯೋರ್ವನ ಶವ ಒಂದು ಪತ್ತೆಯಾಗಿದೆ. ದೇವರಾಜ್ 48 ವರ್ಷ ಮೃತಪಟ್ಟ ವ್ಯಕ್ತಿ. ಈತ ಪ್ರತಿದಿನ ಬೆಳಗ್ಗೆ ಮನೆ ಮನೆಗೆ ಹಾಲು ಹಾಕುತ್ತಿದ್ದ. ಕಳೆದ 2-3 ದಿನಗಳಿಂದ ಕಾಣೆಯಾಗಿದ್ದು ಕುಟುಂಬಸ್ಥರು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈತ ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಈತ ಪಟ್ಟಣದಲ್ಲಿ ದೇವು ಎಂದೇ ಚಿರಪರಿಚಿತರಾಗಿದ್ದರು. ಇತನ ಸಾವಿಗೆ ನಿಖರವಾದ ಕಾರಣ…
ಕುಮುಟಾದ ಬಾಡ ಬೀಚ್ ನಲ್ಲಿ ಶಿವಮೊಗ್ಗದ ಗುಪ್ತ ಆಟೋಮೊಬೈಲ್ ನ ಪ್ರಶಾಂತ್ ಗುಪ್ತ ಸಾವು|kumuta
ಕುಮುಟಾದ ಬಾಡ ಬೀಚ್ ನಲ್ಲಿ ಶಿವಮೊಗ್ಗದ ಗುಪ್ತ ಆಟೋಮೊಬೈಲ್ ನ ಪ್ರಶಾಂತ್ ಗುಪ್ತ ಸಾವು ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಪ್ರವಾಸಕ್ಕೆಂದು ಕುಮಟಾಕ್ಕೆ ತೆರಳಿದ್ದವರು, ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ನಗರದ ರಾಯಲ್ ಆರ್ಕಿಡ್ ಹಿಂಭಾಗದಲ್ಲಿರುವ ಗುಪ್ತಾ ಆಟೋಮೊಬೈಲ್ ನ ಪಾಲುದಾರರಾದ ಪ್ರಶಾಂತ್ ಗುಪ್ತ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಶಿವಮೊಗ್ಗದಿಂದ ಇವರು 11 ಜನರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಆಯುಧ ಪೂಜೆಯ ದಿನ ಕುಮಟಾದ ಬಾಡ ಕಡಲ ತೀರದಲ್ಲಿ ಸಮುದ್ರಕ್ಕೆ ಇಳಿದಿದ್ಧಾರೆ. ಈ ವೇಳೆ ಸಮುದ್ರದ ಅಲೆಗಳಿಗೆ…
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೈಡ್ – ಆವರಣದಲ್ಲಿ ಪತ್ತೆಯಾಯ್ತು ಮೊಬೈಲ್,ಬೀಡಿ ಬೆಂಕಿಪೊಟ್ಟಣ|raid
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ವಿಶೇಷ ಅತಿಥ್ಯ ಮುಂದುವರೆದಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆ ವಿಧಿಸಿ ಸಮಾಜದಲ್ಲಿ ಸುಧಾರಿತ ವ್ಯಕ್ತಿಗಳಾಗಿ ಹೊರಗೆ ಬರಲಿ ಎಂಬ ಕಲ್ಪನೆ ಕಲ್ಪನೆಯಾಗಿ ಉಳಿದಿದೆ. ಸುಧಾರಿತ ವ್ಯಕ್ತಿಗಳಾಗುವ ಕ್ರಿಮಿನಲ್ ಗಳಿಗೆ ಜೈಲಿನಲ್ಲಿ ಮೊಬೈಲು, ಬೀಡಿಗಳು, ಗಾಂಜಾಗಳು ಸಪ್ಲೆ ಆಗುತ್ತಿವೆ ಎಂದರೆ ಅಚ್ಚರಿ ಪಡುವಂತಾಗಿದೆ. ಜೈಲು ಸಿಬ್ಬಂದಿಗಳೇ ಅಪರಾಧಿಗಳ ಜೊತೆ ಕೈ ಜೋಡಿಸುತ್ತಿದ್ದಾರಾ ಎಂಬ ಅನುಮಾನ ಹೆಚ್ಚಾಗಿದೆ. ಈ ಅನುಮಾನಕ್ಕೆ ಈ ಎಫ್ಐಆರ್ ಪುಷ್ಠಿ ನೀಡುತ್ತಿದೆ. ಅ. 21 ರಂದು ಕೇಂದ್ರ ಕಾರಾಗೃಹದಲ್ಲಿ ತುಂಗ…
ಮಾಸ್ತಿಕಟ್ಟೆ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ|accident
ಮಾಸ್ತಿಕಟ್ಟೆ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಸನಗರ: ಮಧ್ಯರಾತ್ರಿ 16 ಚಕ್ರದ ಲಾರಿಯೊಂದು ಪಲ್ಟಿಯಾದ ಘಟನೆ ಹೊಸನಗರ ತಾಲೂಕು ಯಡೂರಲ್ಲಿ ಶನಿವಾರ ತಡ ರಾತ್ರಿ ನಡೆದಿದೆ. ಶನಿವಾರ ರಾತ್ರಿ 12 ಗಂಟೆಯ ಸುಮಾರಿಗೆ ಯಡೂರು ಸಮೀಪದ ಮೈನ್ ಸರ್ಕಲ್ ಬಳಿ 16 ಚಕ್ರ ಟಿಂಬರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು ಚಾಲಕರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ತಕ್ಷಣ ಸಮಯ ಪ್ರಜ್ಞೆ ಮೆರೆದು ಲಾರಿಯಲ್ಲಿದ್ದವರಿಗೆ ಸಹಾಯ ಮಾಡಿ ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ…