ನಗ್ನ ವೀಡಿಯೋ ಲೀಕ್ ಮಾಡುವುದಾಗಿ ಮಹಿಳೆಗೆ ಬೆದರಿಕೆ – ಕಾರು ಚಾಲಕನ ಮೇಲೆ ದಾಖಲಾಯ್ತು ಕೇಸ್ | BDVT

ನಗ್ನ ವೀಡಿಯೋ ಲೀಕ್ ಮಾಡುವುದಾಗಿ ಮಹಿಳೆಗೆ ಬೆದರಿಕೆ – ಕಾರು ಚಾಲಕನ ಮೇಲೆ ದಾಖಲಾಯ್ತು ಕೇಸ್ | BDVT


ಮಹಿಳೆಯೊಂದಿಗೆ ಸಲುಗೆ ಬೆಳೆಸಿ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗ ಆಕೆಯ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಕಾರು ಚಾಲಕನ ವಿರುದ್ಧ  ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಭದ್ರಾವತಿಯ ನಿವಾಸಿಯೊಬ್ಬರು ದೂರು ನೀಡಿದ್ದು ಶಿವಮೊಗ್ಗದ ವ್ಯಕ್ತಿ ವಿರುದ್ಧ ಕೇಸ್ ದಾಖಲಾಗಿದೆ.  ಕಳೆದ ವರ್ಷ ಮಹಿಳೆಯ ಕುಟುಂಬದವರು ದೇವಸ್ಥಾನಕ್ಕೆ ಹೋಗುವ ಸಲುವಾಗಿ ಕಾರೊಂದನ್ನ ಬಾಡಿಗೆ ಪಡೆದಿದ್ದರಂತೆ. ಆನಂತರ ಕಾರಿನ ಚಾಲಕ ಪರಿಚಯವಾಗಿ ಮಹಿಳೆಯ ಜೊತೆ ವಿಡಿಯೋ ಕಾಲ್ ಚಾಟ್​ ನಡೆದಿದೆ. 

ಈ ಮಧ್ಯೆ ಮಹಿಳೆಯ ವಿಡಿಯೋ ಕಾಲ್​ನ ನಗ್ನ ವಿಡಿಯೋ ಇಟ್ಟುಕೊಂಡು ಕಾರು ಚಾಲಕ 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಲ್ಲದೆ ವಿಡಿಯೋವನ್ನ ಆಕೆಯ ಪತಿಗೆ ಕಳುಹಿಸಿದ್ದನಂತೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ನಿವಾಸಿ ಶಿವಮೊಗ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೇ ನಡೆಸ್ತಿದ್ದಾರೆ. 

Leave a Reply

Your email address will not be published. Required fields are marked *