Headlines

Ripponpete | ಪಡಿತರ ವಿತರಣೆಯಲ್ಲಿ ಲೋಪ – ಬಾಳೂರು ನ್ಯಾಯಬೆಲೆ ಅಂಗಡಿಗೆ ಜಿಲ್ಲಾ ಆಹಾರ ಇಲಾಖೆ ಆಧಿಕಾರಿ ದಿಡೀರ್ ಭೇಟಿ – ಪರಿಶೀಲನೆ

ಬಾಳೂರು ನ್ಯಾಯಬೆಲೆ ಅಂಗಡಿಗೆ ಜಿಲ್ಲಾ ಆಹಾರ ಇಲಾಖೆ ಆಧಿಕಾರಿ ದಿಡೀರ್ ಭೇಟಿ – ಪರಿಶೀಲನೆ 
ರಿಪ್ಪನ್‌ಪೇಟೆ;-ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಲುಗುಡ್ಡೆ(ಬಾಳೂರು) ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದ ಪಡಿತರ ವಿತರಣೆಯಲ್ಲಿ ದಲಿತ ಮಹಿಳಾ ಫಲಾನುಭವಿಗೆ ಅನ್ನ ಅಂತ್ಯೋದಯ ಅಕ್ಕಿ ವಿತರಣೆಯಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಂದು ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕ ಅವಿನ್ ಅರ್ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ವಂಚಿತ ದಲಿತ ಮಹಿಳೆಗೆ ಸೂಕ್ತ ಪರಿಹಾರ ಕೊಡಿಸಿ ನ್ಯಾಯಬೆಲೆ ಅಂಗಡಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ವಿವರಿಸಿದರು.

ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಮಾತಾ ಮಹಿಳಾ ವಿವಿದ್ದೋದ್ದೇಶ ಸಂಘದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಬಾಳೂರು ಗ್ರಾಮದ ಹಾಲುಗುಡ್ಡೆ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕರದ ಅನ್ನ ಅಂತ್ಯೋದಯ ಫಲಾನುಭವಿ ದಲಿತ ಮಹಿಳಾ ಪಡಿತರದಾರರಿಗೆ ಅಕ್ಕಿ ವಿತರಣೆಯಲ್ಲಿ ಸಾಕಷ್ಟು ವಂಚನೆ ನಡೆಸಿರುವುದರ ಬಗ್ಗೆ ಈಗಾಗಲೇ ನಮ್ಮ ಇಲಾಖೆಯ ತಾಲ್ಲೂಕ್ ಆಧಿಕಾರಿಗಳು ವರದಿ ನೀಡಿದ್ದರು ವರದಿಯನ್ನಾದರಿಸಿ ಇಂದು ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರೊಂದಿಗೆ ಮಹಿಳೆಗೆ ಪರಿಹಾರವನ್ನು ಕೊಡಿಸಲಾಗಿದೆ.ಹಾಗೆಯೇ ರಿಪ್ಪನ್‌ಪೇಟೆ ಕೃಷಿ ಸೇವಾ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ಬಗ್ಗೆ ಸಾಕಷ್ಟು ಸಾರ್ವಜನಿಕರ ದೂರು ಬಂದಿದ್ದು ಆದನ್ನು ಪರಿಶೀಲನೆ ನಡೆಸಲಾಗಿ ಸುಮಾರು 85 ಕ್ವಿಂಟಾಲ್‌ಗೂ ಆಧಿಕ  ಅಕ್ಕಿ ದಾಸ್ತಾನು ಮಳಿಗೆಯಲ್ಲಿ  ದಾಸ್ತಾನು ಕಡಿಮೆ ತೋರಿಸುತ್ತಿದ್ದು  ಏನಾಗಿದೆ ಎಂಬ ಕುರಿತು ಅಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದರು.

ಮಾದ್ಯಮದವರು ಪಡಿತರದಾರರಿಗೆ ತೊಂದರೆಯಾಗುತ್ತದೆಂಬ ಪ್ರಶ್ನೆಗೆ ಉತ್ತರಿಸಿ ನಾವು ಯಾವುದೇ ಪಡಿತರದಾರರಿಗೂ ಅನ್ಯಾಯವಾಗದಂತೆ  ಅಕ್ಕಪಕ್ಕದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ನೀಡಲಾಗಿದ್ದು ಫಲಾನುಭವಿಗಳು ಪಡಿತರದಿಂದ ವಂಚಿತರಾಗದಂತೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಅಹಾರ ಇಲಾಖೆಯ ಉಪನಿರ್ದೇಶಕ ಅವಿನ್ ಆರ್. ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕ್ ಅಹಾರ ಇಲಾಖೆಯ ಸಹಾಯಕ ನಿರೀಕ್ಷಕ ನಾಗರಾಜ್‌ ಭಟ್ ಇಲ್ಲಿನ ರಿಪ್ಪನ್‌ಪೇಟೆಯ ಕೃಷಿ ಸೇವಾ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಬಂದರೆ ಯಾವಾಗಲು ಬಾಗಿಲು ಹಾಕಿಕೊಂಡು ಅಲ್ಲಿದ್ದೇನೆ ಇಲ್ಲಿದ್ದೇನೆ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆಂದು ವಿವರಿಸಿದರು.



  
  

Leave a Reply

Your email address will not be published. Required fields are marked *