POSTMAN NEWS

ನೈಜ ಸುದ್ದಿ ನೇರ ಬಿತ್ತರ..

Thirthahalli | ಮಾಲು ಸಮೇತ ಚುಕ್ಕೆ ಜಿಂಕೆ ಬೇಟೆಗಾರನ ಬಂಧನ

ತೀರ್ಥಹಳ್ಳಿ – ಮಾಲು ಸಹಿತ ಓರ್ವ ಚುಕ್ಕೆ ಜಿಂಕೆ ಬೇಟೆಗಾರನನ್ನು  ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ.


ತೀರ್ಥಹಳ್ಳಿ (Thirthahalli) ಉಪವಿಭಾಗದ ಮಂಡಗದ್ದೆ ವಲಯ ವ್ಯಾಪ್ತಿಯಲ್ಲಿ ಡಿ.13 ರಂದು ಕೀಗಡಿ ಗ್ರಾಮದ ಸ.ನಂ.35ರ ಪ್ರದೇಶದಲ್ಲಿ ಕಳ್ಳ ಬೇಟೆಗೆ ಸಂಬಂಧಿಸಿದಂತೆ ಒಂದು ಚುಕ್ಕೆ ಜಿಂಕೆಯ ತಲೆ, 04 ಕಾಲುಗಳು ಮತ್ತು ಮಾಂಸವನ್ನು ದಾಸ್ತಾನು ಮಾಡಿದ್ದು ಇವುಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು ಈ ಕೃತ್ಯದ ಆರೋಪಿ ತಮಿಳುನಾಡಿನ ವೆಲಂಚರಿ ಜಗನ್ನಾಥಪುರಂನ ಎಂ. ರಮೇಶ ಬಿನ್ ಮುನಿಸ್ವಾಮಿ (40) ಈತನನ್ನು ಸ್ಥಳದಲ್ಲಿಯೇ ಬಂಧಿಸಿದ್ದಾರೆ.

ಇನ್ನೂ 03 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು ಈ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರಡಿ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಡಿಎಫ್ಒ ಶಿವಶಂಕರ ಇ., ಎಸಿಎಫ್ ಪ್ರಕಾಶ್ ಹೆಚ್.ಎಸ್. ಇವರುಗಳ ಮಾರ್ಗದರ್ಶನದಲ್ಲಿ ಮಂಡಗದ್ದೆ ಆರ್.ಎಫ್.ಓ ಆದರ್ಶ ಎಂ.ಪಿ. ರವರ ನೇತೃತ್ವದಲ್ಲಿ ನಡೆದಿದ್ದು, ಉಪ ವಲಯ ಅರಣ್ಯಾಧಿಕಾರಿ ಸುಹಾಸ ಬಿ.ಆರ್, ಗಸ್ತು ಅರಣ್ಯ ಪಾಲಕರಾದ ದುರುಗಪ್ಪ, ಮಹಾದೇವ ಕಣ್ಣೂರ ಹಾಗೂ ವಾಹನ ಚಾಲಕ ನವೀನ್. ಎಸ್. ಇವರುಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.