Hosanagara | ಪೋಷಕರು ಉಪನ್ಯಾಸಕರೊಂದಿಗೆ ಕೈಜೋಡಿಸಿದರೆ ವಿದ್ಯಾರ್ಥಿಗಳನ್ನು ಜಗತ್ತಿನ ಆಸ್ತಿಯನ್ನಾಗಿಸಬಹುದು – ಡಾ. ಕೆ ಉಮೇಶ್
ಹೊಸನಗರ : ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಕೇವಲ ಪ್ರಾಧ್ಯಾಪಕರಾದ ನಾವುಗಳು ಮಾತ್ರ ಪ್ರಯತ್ನ ಪಟ್ಟರೆ ಸಾಲದು ಪೋಷಕರಾದ ನೀವುಗಳು ನಮ್ಮೊಂದಿಗೆ ಕೈ ಜೋಡಿಸಿದರೆ ನಿಮ್ಮ ಮಕ್ಕಳನ್ನೆಲ್ಲಾ ಜಗತ್ತಿನ ಆಸ್ತಿಯನ್ನಾಗಿ ಮಾಡಬಹುದು ಎಂದು ಪ್ರಾಂಶುಪಾಲ ಡಾ.ಕೆ.ಉಮೇಶ್ ಅಭಿಪ್ರಾಯಪಟ್ಟರು.
ಮೂರುವರೆ ದಶಕದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೋಷಕರು ಮತ್ತು ಪ್ರಾಧ್ಯಾಪಕರ ಸಭೆ ನೆಡೆಯಿತು.ಪೋಷಕರ ಸಂಘದ ಸಂಚಾಲಕರಾದ ಡಾ.ಕೆ.ಶ್ರೀಪತಿ ಹಳಗುಂದ ಮಾತನಾಡಿ ನಿಮ್ಮ ಮಕ್ಕಳು ಓದುತ್ತಿರುವ ವಿದ್ಯಾಸಂಸ್ಥೆಯೊಂದಿಗೆ ಸದಾ ನಿಕಟವಾದ ಸಂಪರ್ಕ ಇಟ್ಟುಕೊಂಡು ಸಲಹೆ,ಸೂಚನೆಗಳನ್ನು ನೀಡಿ ಎಂದರು.
ಸಭೆಯಲ್ಲಿ ಪ್ರೊ ರವಿ,ಪ್ರೊ ದೊಡ್ಡಯ್ಯ, ಪ್ರೊ,ಪ್ರತಿಮಾ,ಪ್ರೊ ಲೋಕೇಶಪ್ಪ, ಇದ್ದರು.ಕಾಲೇಜಿನ ಸರ್ವತೋಮುಖ ಬೆಳವಣೆಗಾಗಿ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಜಯನಗರದ ಧರ್ಮರಾವ್,ಉಪಾಧ್ಯಕ್ಷರಾಗಿ ಶ್ರೀಮತಿ ಪ್ರಮೀಳಾ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಆಚಾರ್,ಕಾರ್ಯದರ್ಶಿಯಾಗಿವಾಣಿ ಶುಭಕರ್ ಮತ್ತು ವಿಶ್ವನಾಥ್,ಸಹ ಕಾರ್ಯದರ್ಶಿಯಾಗಿ,ಶ್ರೀಮತಿ ಸಾವಿತ್ರಿ ಮತ್ತು ಬಸವರಾಜ್, ಹಾಗೂ ಖಜಾಂಚಿಯಾಗಿ ಶ್ರೀಮತಿ ಸುವರ್ಣ ಆಯ್ಕೆಯಾದರು.
ಕುಮಾರಿ ವಿಭಾ ಪ್ರಾರ್ಥಿಸಿದರು ಪ್ರೊ ಪ್ರತಿಮಾ ವಂದಿಸಿದರು