Thirthahalli | ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ – ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ಕೇಸ್ ದಾಖಲು

Thirthahalli | ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ – ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ಕೇಸ್ ದಾಖಲು


ತೀರ್ಥಹಳ್ಳಿ : ಪಟ್ಟಣದ ಬಾಳೆಬೈಲು ಸಮೀಪದಲ್ಲಿ
ಮಾಳೂರು ಠಾಣೆಯ ಎಎಸ್‌ಐ ಕೃಷ್ಣಮೂರ್ತಿ ರವರು ಹೆದ್ದಾರಿ ಗಸ್ತುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿಗೆ ಮಾರಣಾಂತಿಕ ರಸ್ತೆ ಅಪಘಾತಗಳು ಹೆಚ್ಚಾಗಿದ್ದರಿಂದ ಅವುಗಳನ್ನು ತಡೆಯುವ ಸಲುವಾಗಿ ವಾಹನ ತಪಾಸಣೆ ಮಾಡಿ ಅನುಮಾನಸ್ಪದ ಚಾಲಕ ವ್ಯಕ್ತಿಗಳನ್ನು ಹಾಗೂ ಮದ್ಯಪಾನ ಮತ್ತಿತರೆ ಕಾನೂನು ಉಲ್ಲಂಘನೆ ಮಾಡಿದವರ ಬಗ್ಗೆ ಸೀಟ್ ಬೆಲ್ಟ್ ಹಾಕದೇ ಇರುವ ಬಗ್ಗೆ ಮಂಗಳವಾರ ಬೆಳಿಗ್ಗೆ 10-30ರ ಸಮಯದಲ್ಲಿ ಬಾಳೇಬೈಲು ನಲ್ಲಿ ಚೆಕ್ ಮಾಡುತ್ತಿದ್ದಾಗ ಒಬ್ಬರಿಗೆ ಸ್ಥಳದಲ್ಲೇ ದಂಡದ ರಶೀದಿಯನ್ನು ಬರೆಯುತ್ತಿರುವಾಗ ಖಾಸಗಿ ಚಾನಲ್ ನ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮತ್ತು ಅವರ ಕಡೆಯ ನಾಲೈದು ಜನರು ಗುಂಪು ಗೂಡಿಕೊಂಡು ಬಂದು ಸರ್ಕಾರಿ ಇಲಾಖಾ ವಾಹನಕ್ಕೆ ಅಡ್ಡಲಾಗಿ ನಿಂತು ವಾಹನ ತಪಾಸಣೆ ಮಾಡದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸರ್ಕಾರದಿಂದ ನೀಡಿದ ರಶೀದಿ ನಂತರ ಎಎಸ್‌ಐ ರವರಿಗೆ ವಾಹನ ತಪಾಸಣೆ ಮಾಡಲು ಬಿಡದೇ ಅಪಘಾತಗಳನ್ನು ತಡೆಯುವ ತಮ್ಮ ಕರ್ತವ್ಯದಿಂದ ಹಿಮ್ಮೆಟ್ಟಿಸುವ ಸಲುವಾಗಿ ಸರ್ಕಾರಿ ಕೆಲಸ ನಿರ್ವಹಿಸದಂತೆ ಅಡ್ಡಿಪಡಿಸಿ, ಪೊಲೀಸರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾ ಸಾರ್ವಜನಿಕರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ವರ್ತಿಸಿದ ಖಾಸಗಿ ಚಾನಲ್ ನ ಮತ್ತು ಅವರ ಜೊತೆಯಲ್ಲಿದ್ದ ಸಿಬ್ಬಂದಿಯವರ ಮೇಲೆ ಕಾನೂನು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *