ಪೊಲೀಸರ ಭರ್ಜರಿ ಕಾರ್ಯಾಚರಣೆ – ಬೈಕ್ ಕಳ್ಳರ ಬಂಧನ : 5.80 ಲಕ್ಷ ರೂ.ಮೌಲ್ಯದ 16 ಬೈಕ್ ವಶಕ್ಕೆ

ಪೊಲೀಸರ ಭರ್ಜರಿ ಕಾರ್ಯಾಚರಣೆ – ಬೈಕ್ ಕಳ್ಳರ ಬಂಧನ : 5ಲಕ್ಷ 80 ಸಾವಿರ ರೂ.ಮೌಲ್ಯದ 16 ಬೈಕ್ ವಶಕ್ಕೆ


ಭದ್ರಾವತಿ : ನಗರದ ವಿವಿಧ ಬಡಾವಣೆಗಳಲ್ಲಿ ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 5 ಲಕ್ಷ 80 ಸಾವಿರ ರೂ.ಮೌಲ್ಯದ ವಿವಿಧ ಕಂಪನಿಯ 16 ಬೈಕ್ ವಶಪಡಿಸಿಕೊಳ್ಳಲಾಗಿದೆ.

ಭದ್ರಾವತಿ ಉಪವಿಭಾಗದಲ್ಲಿ ಬೈಕ್ ಕಳ್ಳತನ ಮಾಡುತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ 16 ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.

ಬೈಕ್ ಕಳ್ಳತನ ಮಾಡುತಿದ್ದ ಅರೋಪಿಗಳಾದ ಅಬ್ದುಲ್ ಕರೀಂ ಭದ್ರಾವತಿ , ಅರ್ಷಿಲ್ ಪಾಷಾ ಭದ್ರಾವತಿ , ಮತ್ತು ಪ್ರಭು ರಾಗಿಗುಡ್ಡ ಅನ್ನು ಬಂಧಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಉಪವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ ಸ್ವತ್ತು ಕಳುವು ಮತ್ತು ವಾಹನ ಕಳವು ಪ್ರಕರಣಗಳ ಆರೋಪಿಗಳ ಮತ್ತು ಮಾಲು ಪತ್ತೆಗಾಗಿ ಮಿಥುನ್ ಕುಮಾರ್ ಜಿ ಕೆ, ಐಪಿಎಸ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನೀಲ್ ಕುಮಾರ್ ಭೂಮರಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ ನಾಗರಾಜ್ ಪೊಲೀಸ್ ಉಪಾಧೀಕ್ಷರು ಭದ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ  ಶ್ರೀಶೈಲ್ ಕುಮಾರ್ ಸಿಪಿಐ ನಗರ ವೃತ್ತ, ಜಗದೀಶ ಸೋಮನಾಳ ಪಿಐ ಗ್ರಾಮಾಂತರ ಪೊಲೀಸ್‌ ಠಾಣೆ, ನಾಗಮ್ಮ ಪಿಐ ಪೇಪರ್ ಟೌನ್ ಠಾಣೆ, ಲಕ್ಷ್ಮಿಪತಿ ಪಿಐ ಹೊಳೆಹೊನ್ನೂರು ಪೊಲೀಸ್ ಠಾಣೆ ರವರ ನೇತೃತ್ವದಲಿ ಸುರೇಶ ಪಿ.ಎಸ್.ಐ ಹೊಳೆಹೊನ್ನೂರು, ರಮೇಶ ಪಿ.ಎಸ್.ಐ ನ್ಯೂ ಟೌನ್ ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆಯ ಚಂದ್ರಶೇಖರ್ ಎ ಎಸ್ ಐ, ನ್ಯೂಟೌನ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನವೀನ್, ಹಳೇನಗರ ಪೊಲೀಸ್ ಠಾಣೆಯ ಸಿಬ್ಬಂದಿ ಚನ್ನಕೇಶವ, ಪೇಪರ್‌ ಟೌನ್ ಪೊಲೀಸ್‌ ಠಾಣೆಯ ನಾಗರಾಜ್, ಹೊಸಮನೆ ಪೊಲೀಸ್ ಠಾಣೆಯ ಸಿಪಿಸಿ ಆದರ್ಶ್ ಶೆಟ್ಟಿ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಸದರಿ ತಂಡವು ದಿನಾಂಕ: 16-12-2023 ರಂದು ನ್ಯೂ ಟೌನ್ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 209/2023 ಕಲಂ 379 ಐ.ಪಿ.ಸಿ ಪ್ರಕರಣದಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಬ್ದುಲ್ ಕರೀಂ @ ಕರೀಂ @ ಮುನ್ನಾ ಭದ್ರಾವತಿ 2) ಅರ್ಷೀಲ್ ಪಾಷಾ ಯಾನೆ ಹರ್ಷೀಲ್ ಭದ್ರಾವತಿ ರನ್ನು ವಶಕ್ಕೆ ಪಡೆದುಕೊಂಡು ಸದರಿ 02 ಜನ ಆರೋಪಿಗಳಿ೦ದ ನ್ಯೂಟೌನ್ ಪೊಲೀಸ್ ಠಾಣೆಗೆ ಸೇರಿದ 07 ಮೋಟಾರ್ ಬೈಕ್, ತರೀಕೆರೆ ಪೊಲೀಸ್ ಠಾಣೆಗೆ ಸೇರಿದ 1 ಬೈಕ್, ದೊಡ್ಡಪೇಟೆ ಪೊಲೀಸ್ ಠಾಣೆಗೆ ಸೇರಿದ 1 ಬೈಕ್, ಪೇಪರ್ ಟೌನ್ ಪೊಲೀಸ್ ಠಾಣೆಗೆ ಸೇರಿದ 01 ಬೈಕ್ ಮತ್ತು ,ಹೊಸಮನೆ ಪೊಲೀಸ್ ಠಾಣೆಗೆ ಸೇರಿದ 02 ಮೋಟಾರ್ ಬೈಕ್ ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ 02 ಬೈಕ್ ಗಳನ್ನು ಎಲ್ಲಾ ಸೇರಿ ಒಟ್ಟು 14 ಬೈಕುಗಳನ್ನು ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ: 376/2023 ಕಲಂ 379 ಐಪಿಸಿ ಪ್ರಕರಣದಲ್ಲಿ ಪ್ರಭು @ ಕೋಳಿ ರಾಗಿಗುಡ್ಡ, ಈತನನ್ನು ದಸ್ತಗಿರಿ ಮಾಡಿದ್ದು ಈತನಿಂದ ಹೊಳೆ ಹೊನ್ನೂರು ಪೊಲೀಸ್ ಠಾಣೆಗೆ ಸೇರಿದ 01 ಬೈಕನ್ನು ಮತ್ತು ಕೋಟೆ ಪೊಲೀಸ್ ಠಾಣೆಗೆ ಸೇರಿದ 01 ಬೈಕನ್ನು ಅಮಾನತ್ತು ಪಡಿಸಿಕೊಂಡಿದ್ದು ಒಟ್ಟು 03 ಜನ ಆರೋಪಿಗಳಿಂದ ಸುಮಾರು 5,80,000/- ರೂ ಬೆಲೆ ಬಾಳುವ 16 ಬೈಕುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ, ಸಿಬ್ಬಂದಿಗಳ ಉತ್ತಮವಾದ ಕರ್ತವ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಷಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *