Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ಮಹಿಳೆ ಇಂದು ಅಬಲೆಯಲ್ಲ ಅವಳು ಸಬಲೆಯಾಗಿದ್ದಾಳೆ : ಕೆಪಿಸಿಸಿ ವಕ್ತಾರೆ ಪ್ರಪುಲ್ಲಾ ಮಧುಕರ್

ಹೊಸನಗರ :- ಮಹಿಳೆ ಎಂದಿಗೂ ಅಬಲೆಯಲ್ಲ ಅವಳು ಸಬಲೆಯಾಗಿದ್ದಾಳೆ, ಸಮಾಜದಲ್ಲಿ ಅವಳಿಗೂ ಸಹಾ ಪುರುಷ ಸಮಾನತೆ ಹಕ್ಕನ್ನು ನೀಡಲು ಹಲವಾರು ವರ್ಷಗಳಿಂದ ಹೋರಾಟ ನಡೆಸಿದ ಪರಿಣಾಮವಾಗಿ ಇಂದು ಪುರುಷ ಸಮಾನಾರ್ತಕ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ  ಎಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಹಾಗೂ ಕೆ.ಪಿ.ಸಿ.ಸಿ ವಕ್ತಾರೆ ಪ್ರಪುಲ್ಲಾ ಮಧುಕರ್ ರವರು ಅಭಿಪ್ರಾಯ ಪಟ್ಟರು.  ಇಂದು ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ಡಿಜಿಟಲ್ ಮಹಿಳಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ …

Read Full News

ಹಿಜಾಬ್ ವಿಚಾರದಲ್ಲಿ ಬಿಜೆಪಿ ಎಂಎಲ್‌ಸಿ ಅರುಣ್‌ಗೆ ಜೀವ ಬೆದರಿಕೆ ಹಾಕಿದ್ದು ಮುಸ್ಲಿಂ ಯುವಕನ ಹೆಸರಲ್ಲಿ ನಕಲಿ ಪ್ರೊಫ಼ೈಲ್ ಸೃಷ್ಟಿಸಿದ್ದ ಶ್ರೀಕಾಂತ್ : ಆರೋಪಿಯ ಬಂಧನ

ಶಿವಮೊಗ್ಗ: ಬಿಜೆಪಿ ಎಂಎಲ್ ಸಿ ಡಿ. ಎಸ್. ಅರುಣ್ ಅವರಿಗೆ ಮುಸ್ಲಿಂ ವ್ಯಕ್ತಿಯ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಿದ್ದಾರೂಢ ಶ್ರೀಕಾಂತ್(31) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಅರುಣ್ ಅವರು ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಫೇಸ್ ಬುಕ್ ನಲ್ಲಿ ಮುಸ್ಲಿಂ ಯುವಕ ಮುಸ್ತಾಕ ಅಲಿ ಹೆಸರಿನಲ್ಲಿ ಬೆದರಿಕೆ…

Read Full News

ಹೊಸನಗರ ಮತ್ತು ರಿಪ್ಪನ್ ಪೇಟೆಯಲ್ಲಿ ಭಗತ್ ಸಿಂಗ್,ಸುಖದೇವ್,ರಾಜಗುರು ಅವರ ಹುತಾತ್ಮ ದಿನಾಚರಣೆ :

ಇಂದು ಮಾರ್ಚ್ 23. 1931ರ ಇದೇ ದಿನದಂದು ಭಾರತ ದೇಶದ ಮೂವರು ಮಹಾನ್ ಚೇತನಗಳಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರುಗಳು ಮೇರಾ ರಂಗ್ ದೇ ಬಸಂತಿ ಚೋಲಾ… ಎಂದು ಗುಣಗಾನ ಮಾಡುತ್ತಾ ಅತ್ಯಂತ ಸಂತೋಷದಿಂದಲೇ ಕೊರಳಿಗೆ ಹಾಕಿದ್ದ ಉರುಳನ್ನು ಚುಂಬಿಸಿ ನೇಣಿನ ಕುಣಿಕೆಗೆ ಕೊರಳನ್ನೊಡ್ಡಿದ ತ್ಯಾಗ ಮತ್ತು ಬಲಿದಾನದ ದಿನ. ಈ ಬಲಿದಾನ್ ದಿವಸ್ ಅಂಗವಾಗಿ ಹೊಸನಗರದಲ್ಲಿ ಎಬಿವಿಪಿ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.ಗಣಪತಿ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೂ ಪಂಜಿನ ಮೆರವಣಿಗೆ ಮೂಲಕ ಎಬಿವಿಪಿ ತಾಲೂಕ್ ಅಧ್ಯಕ್ಷರು ಹಾಗೂ ಸದಸ್ಯರು ದೇಶದ…

Read Full News

ರಿಪ್ಪನ್‌ಪೇಟೆಯಲ್ಲಿ ಕಾಳಸಂತೆಯಲ್ಲಿ ಪಡಿತರ ಮಾರಾಟ : ಆಟೋ ಸಮೇತ ಅಕ್ಕಿ ಹಿಡಿದ ಸಾರ್ವಜನಿಕರು

ರಿಪ್ಪನ್ ಪೇಟೆ : ಇಲ್ಲಿನ ಹಾಸ್ಟೆಲ್ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯ ಮಾಲೀಕರು ಅಕ್ರಮವಾಗಿ ಬಡವರಿಗೆ ನೀಡಬೇಕಾಗಿದ್ದ ಸರ್ಕಾರದ ಉಚಿತ ಪಡಿತರ ಸುಮಾರು ಏಳು ಕ್ವಿಂಟಾಲ್ 50 ಕೆಜಿ ಅಕ್ಕಿಯನ್ನು ಕದ್ದು ಆಟೋದಲ್ಲಿ ಅಕ್ರಮವಾಗಿ ಸಾಗಿಸುವಾಗ ಸಾರ್ವಜನಿಕರು ಶಿವಮೊಗ್ಗ ರಸ್ತೆಯ ಖಾಸಗಿ ರೈಸ್ ಮಿಲ್ ನ ಆವರಣದಲ್ಲಿ ತಡೆಹಿಡಿದು ನಿಲ್ಲಿಸಿದ ಪ್ರಸಂಗ ಇಂದು ಮಧ್ಯಾಹ್ನ ನಡೆದಿದೆ. ಇಂದು ಮದ್ಯಾಹ್ನ ಖಾಸಗಿ ಆಟೋ ಗೆ 25 ಕೆಜಿ ಪ್ರಮಾಣದಲ್ಲಿ 30 ಚೀಲ ಪಡಿತರ ಅಕ್ಕಿಯನ್ನು ತುಂಬುತ್ತಿರುವುದನ್ನು ಗಮನಿಸಿದ ವಿನಾಯಕ ನಗರದ…

Read Full News

ಸಮಾಜದ ಮಹಿಳಾ ವರ್ಗಕ್ಕೆ ಸ್ಪೂರ್ತಿಯ ಚಿಲುಮೆಯಾಗಿರುವ ಹೊಸನಗರದ ಸೀಮಾ ಕಿರಣ್ ತೆಂಡೂಲ್ಕರ್ :

ಹೊಸನಗರ, ತಾಲ್ಲೂಕಿನ ಕೊಡಚಾದ್ರಿ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷೆ ಸೀಮಾ ಶರಾವ್ ರವರ ಸಮಾಜ ಮುಖಿ ಕೆಲಸಗಳಿಗೆ ಸಾರ್ವಜನಿಕರ ಗಮನ ಸೆಳೆದಿದೆಯಲ್ಲದೇ ತಾಲ್ಲೂಕಿನ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಗಳು  ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಲಾಗಿದೆ. ಸೀಮಾ ಕಿರಣ್ ತೆಂಡೂಲ್ಕರ್ ರವರು ಹಲವು ವರ್ಷಗಳಿಂದ ಸದಸ್ಯರಾಗಿದ್ದ ಹೊಸನಗರದ ಕೊಡಚಾದ್ರಿ ಜೆಸಿಐ ಸಂಸ್ಥೆಯಲ್ಲಿ ಅಧ್ಯಕ್ಷೆಯಾಗಿ ಮೂರೇ ತಿಂಗಳಲ್ಲಿ ಸಾಮಾಜಿಕ ಕಳಕಳಿಯನ್ನು ಹೊತ್ತು ಅನೇಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೊಸನಗರ…

Read Full News

ಆನಂದಪುರ ಸಮೀಪ ಭೀಕರ ಕಾರು ಅಪಘಾತ : ಓರ್ವ ಸಾವು,ನಾಲ್ವರು ಶಿವಮೊಗ್ಗ ಮೆಗ್ಗಾನ್ ಗೆ ದಾಖಲು

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಚನ್ನಕೊಪ್ಪ ಗ್ರಾಮದಲ್ಲಿ ಮರಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆದು ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಕಾರು ಎದುರು ಭಾಗದಲ್ಲಿ ಯಾವುದೋ ಗಾಡಿ ಬಂದಿರುವ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ರಸ್ತೆಯಿಂದ ಹತ್ತು ಅಡಿ ದೂರಕ್ಕೆ ಎಸೆಯಲ್ಪಟ್ಟಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ 65…

Read Full News

ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ !!!

ಸಾಗರ ತಾಲೂಕಿನ ಬ್ರಾಹ್ಮಣ ಮಂಚಾಲೆ ಬಳಿ ಅಪರಿಚಿತ ವ್ಯಕ್ತಿಯೋರ್ವ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಬ್ರಾಹ್ಮಣ ಮಂಚಾಲೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರಭಾವತಿ ಅವರು ಬಸ್ಸಿನಿಂದ ಇಳಿದು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಕುತ್ತಿಗೆಯಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ 35 ಗ್ರಾಂ ಬಂಗಾರದ ಮಾಂಗಲ್ಯ ಸರ ಹಾಗೂ ಒಂದು ಸರ ಕಿತ್ತುಕೊಂಡು ಶಿಕ್ಷಕಿಯನ್ನು ತಳ್ಳಿ ಪರಾರಿಯಾಗಿದ್ದಾನೆ.  ಇದರಿಂದಾಗಿ ಪ್ರಭಾವತಿಯವರ ತಲೆ ಭಾಗದಲ್ಲಿ ತೀವ್ರ…

Read Full News

ರಿಪ್ಪನ್ ಪೇಟೆ ಸುತ್ತಮುತ್ತ ತಪ್ಪದ ಕಾಡಾನೆ ಉಪಟಳ : ಮತ್ತೆ ಮತ್ತೆ ದಾಳಿ ಮಾಡಿ ರೈತರನ್ನು ಕಂಗೆಡಿಸಿರುವ ಕಾಡಾನೆಗಳು

ರಿಪ್ಪನ್‌ಪೇಟೆ: ಕಳೆದ ಕೆಲವು ತಿಂಗಳುಗಳಿಂದ ಹೆದ್ದಾರಿಪುರ, ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲಭಾಗದಲ್ಲಿ ತೋಟಗಳಿಗೆ ದಾಳಿಯಿಟ್ಟು ಜನರಿಗೆ ನಿದ್ರೆಗೆಡಿಸಿದ್ದ ಕಾಡಾನೆಗಳು ಈಗ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಉಪಟಳ ನೀಡುತ್ತಿವೆ.  ಸೋಮವಾರ ರಾತ್ರಿ ನರ‍್ಲಿಗೆಯ ರೈತರೊಬ್ಬರ ಬಾಳೆ ತೋಟದಲ್ಲಿ ಪ್ರತ್ಯಕ್ಷವಾದ ಕಾಡಾನೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ವಾಹನದತ್ತ ಕಾಡಾನೆ ಧಾವಿಸಿದ್ದು, ಸಿಬ್ಬಂದಿಗಳು ಬೆದರು ಗುಂಡುಗಳನ್ನು ಹಾರಿಸುವ  ಮೂಲಕ ಆನೆಯನ್ನು ಓಡಿಸಿದ್ದಾರೆ. ಬೆದರಿಸಿರುವ ಕಾರಣದಿಂದ ಮುಂದೆ ಸಾಗಿ ಚಾಣಬೈಲು ಗ್ರಾಮದ ದಿನೇಶ್‌ರವರ ತೋಟಕ್ಕೆ…

Read Full News

ಕೆರೆಯಲ್ಲಿ ಮುಳುಗಿ ಯುವಕ ಸಾವು :

ಕೆರೆಯಲ್ಲಿ ಎತ್ತುಗಳ ಮೈತೊಳೆಯಲು ಹೋಗಿ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೊರಬ ತಾಲೂಕಿನ ತವನಂದಿ ಗ್ರಾಮದಲ್ಲಿ ಇಂದು ನಡೆದಿದೆ. ತವನಂದಿ ಗ್ರಾಮದ ಪುಟ್ಟಪ್ಪ ಅವರ ಪುತ್ರ ಮಧುಸೂಧನ (23) ಮೃತ ದುರ್ಧೈವಿ. ಗ್ರಾಮದ ದೊಡ್ಡ ಕೆರೆಯಲ್ಲಿ ಎತ್ತುಗಳ ಮೈ ತೊಳೆಯುತ್ತಿದ್ದ ಸಂದರ್ಭದಲ್ಲಿ ಎತ್ತುಗಳು ನೀರಿಗೆ ಎಳೆದಿವೆ. ಈ ವೇಳೆ ಈಜು ಬಾರದೇ ಮಧುಸೂಧನ್ ನೀರಿನಲ್ಲಿ ಮುಳುಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ತೆರಳಿ ಸ್ಥಳೀಯರ ಸಹಕಾರದೊಂದಿಗೆ ಸತತ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ…

Read Full News

ಶಾಸಕ ಹರತಾಳು ಹಾಲಪ್ಪ ವರ್ಚಸ್ಸಿಗೆ ಧಕ್ಕೆ ತರಲು ಕಾಂಗ್ರೆಸ್ ಷಡ್ಯಂತ್ರ : ರಾಜೇಂದ್ರ ಆವಿನಹಳ್ಳಿ

ಸಾಗರ: ಎಲ್‌ಬಿ ಕಾಲೇಜಿನ ಆವರಣದಲ್ಲಿ ನಡೆದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ೫೬ನೇ ಸರ್ವಸದಸ್ಯರ ಸಭೆಯಲ್ಲಿ ನಡೆದ ಗಲಾಟೆಗೂ ಶಾಸಕ ಹಾಲಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಲೇಜಿಗೆ ಜಮೀನು ನೀಡಿದ ಕುಟುಂಬದ ಎಚ್.ಎಂ.ಬಸವರಾಜ್‌ಗೌಡ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸ್ರಾಣಿ ನಡೆಸುತ್ತಿದ್ದ ಆಡಳಿತ ವಿರೋಧಿ ನಿಲುವಿನ ಬಗ್ಗೆ ನಾನು ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಪ್ರತಿಷ್ಠಾನದ ಸದಸ್ಯತ್ವದಿಂದಲೇ ವಜಾ ಮಾಡಲಾಗಿತ್ತು ಎಂದರು. ಸರ್ವಸದಸ್ಯರ ಸಭೆ ನಡೆಯುತ್ತಿದ್ದ ಮಾ. 17ರಂದು ಬೆಳಿಗ್ಗೆ ನಾನು…

Read Full News

ಕೂರಂಬಳ್ಳಿ ಗ್ರಾಮದ ಅಬಕಾರಿ ನಿರೀಕ್ಷಕ ಗಿರೀಶ್ ರವರಿಗೆ ಮಾತೃವಿಯೋಗ :

ರಿಪ್ಪನ್ ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರಂಬಳ್ಳಿ ಗ್ರಾಮದ ಸೀತಮ್ಮ(64) ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತಿ ಚೂಡಪ್ಪ ಮಕ್ಕಳಾದ ಕೆ ಸಿ ಗಿರೀಶ್ , ಅಬಕಾರಿ ನಿರೀಕ್ಷಕರು ಉಡುಪಿ. ಮತ್ತೋರ್ವ ಮಗ ಪ್ರಕಾಶ್ ಪುತ್ರಿ ಚೇತನಾ ಹಾಗೂ ಸಹೋದರ ಸಹೋದರಿಯರನ್ನು ಬಿಟ್ಟು ಅಗಲಿದ್ದಾರೆ  ಮೃತರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಕೂರಂಬಳ್ಳಿ ಗ್ರಾಮದ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.

Read Full News

ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು !!!!

ತೀರ್ಥಹಳ್ಳಿ: ತೀರ್ಥಹಳ್ಳಿಯ  ತುಂಗಾ ನದಿಯ ರಾಮ ಮಂಟಪದ ಬಳಿ ನಿನ್ನೆ ಮಧ್ಯಾಹ್ನ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದು ಇಂದು ಶವ ಪತ್ತೆಯಾಗಿದೆ. ತುಂಗಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಥಮ ಬಿಎ ವಿದ್ಯಾರ್ಥಿ ಅರಳಸುರಳಿ ಸಮೀಪದ ಬಂದ್ಯಾ ಎಂಬ ಊರಿನ ವರ್ಧನ್  (19) ಹಾಗೂ ಸೊನಲೆಯ  ಮಂಜು (20) ನೀರು ಪಾಲಾದವರು ಎಂದು ತಿಳಿದು ಬಂದಿದೆ. ನಿನ್ನೆ ಮಧ್ಯಾಹ್ನ  ಇಬ್ಬರೂ ತುಂಗ ನದಿಯಲ್ಲಿ ಈಜಲು ಹೋಗಿದ್ದರು. ನಂತರ ಅವರ  ಮೊಬೈಲ್ ಲೊಕೇಶನ್ ಮೂಲಕ ಪತ್ತೆ ಮಾಡಲಾಗಿದ್ದು ಸ್ಥಳದಲ್ಲಿ…

Read Full News

ಮೈಸೂರು ವಿವಿಯಿಂದ ಪುನೀತ್ ರಾಜ್‍ಕುಮಾರ್ ಗೆ ಗೌರವ ಡಾಕ್ಟರೇಟ್​ ಪ್ರದಾನ :

ಮೈಸೂರು ವಿಶ್ವವಿದ್ಯಾಲಯದಿಂದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​ಗೆ ಮರಣೋತ್ತರಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು, ಪುನೀತ್ ಪತ್ನಿ ಅಶ್ವಿನಿ ಅವರು ಡಾಕ್ಟರೇಟ್ ಸ್ವೀಕರಿಸಿದ್ದಾರೆ. ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಿಂದ ಪವರ್​ ಸ್ಟಾರ್ ಪುನೀತ್ ರಾಜ್‍ಕುಮಾರ್​ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘಟಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಪುನೀತ್ ಅವರ ಪತ್ನಿ ಅಶ್ವಿನಿ ಅವರು ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಮೂರು ಜನ ಸಾಧಕರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ನಟ…

Read Full News

ಆಸ್ತಿಗಾಗಿ ಹೆತ್ತ ತಾಯಿಯನ್ನೆ ಥಳಿಸಿ,ತಲೆ ಬೋಳಿಸಿ ಬೀದಿಗೆ ಎಸೆದ ಪಾಪಿ ಮಕ್ಕಳು :

ಹೆತ್ತ ತಾಯಿಯ ಆಸ್ತಿಯನ್ನು ಕಬಳಿಸಿ ಮನಸೋ ಇಚ್ಚೇ ಥಳಿಸಿ ಅಷ್ಟಕ್ಕೂ ತೃಪ್ತಿಯಾಗದ ಪಾಪಿ ಮಕ್ಕಳು ಸಾಕಿ ಸಲುಹಿದ ತಾಯಿಯ ತಲೆ ಬೋಳಿಸಿ ಎಸೆದಿರುವ ಘಟನೆ ನಡೆದಿದೆ. ಹೌದು ಇಂತಹ ದಾರುಣ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆವಿನಹಳ್ಳಿ ಎಂಬಲ್ಲಿ ನಡೆದಿದೆ. 95 ವರ್ಷದ ವೃದ್ಧೆ ಸಾವಿತ್ರಮ್ಮನವರ ಕಥೆ ಇದಾಗಿದ್ದು ಈಕೆಗೆ 4ಜನ ಮಕ್ಕಳಿರುತ್ತಾರೆ. ಹಿರಿಯ ಮಗ ಶಿವರುದ್ರಯ್ಯ ಎರಡನೇ ಮಗ ಚಂದ್ರಶೇಖರಯ್ಯ. ಮೂರನೆಯವರು ಈರಮ್ಮ ಹಾಗೂ ನಾಲ್ಕನೆಯ ಪುತ್ರ ಎ.ವಿ. ಪ್ರಕಾಶ್ ಅಲಿಯಾಸ್ ಬೂದಯ್ಯ ಅಲಿಯಾಸ್…

Read Full News

ಮೊದಲ ವರ್ಷಧಾರೆಗೆ ಈಜುಕೊಳದಂತಾದ ರಿಪ್ಪನ್ ಪೇಟೆಯ ಆಟೋ ಸ್ಟ್ಯಾಂಡ್ :

ರಿಪ್ಪನ್ ಪೇಟೆ : ಹೊಸನಗರ ತಾಲೂಕಿನಲ್ಲಿ ಅತಿ ದೊಡ್ಡ ಗ್ರಾಮಪಂಚಾಯಿತಿ ಎಂದು ಖ್ಯಾತಿ ಪಡೆದಿರುವ ರಿಪ್ಪನ್ ಪೇಟೆಯ  ವಿನಾಯಕ ವೃತ್ತದಲ್ಲಿನ  ಆಟೋ ನಿಲ್ದಾಣ  ಈ ವರ್ಷದ ಮೊದಲ ವರ್ಷಧಾರೆಗೆ ಈಜುಕೊಳದಂತಾಯಿತು.  ಕಳೆದ ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಸುಸಜ್ಜಿತ ಆಟೋ ನಿಲ್ದಾಣ ಮಳೆ ಬಂದರೆ ಸಾಕು ಈಜುಕೊಳ ದಂತಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ  ಗ್ರಾಮಾಡಳಿತಕ್ಕೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಆಟೋ ಚಾಲಕರುಗಳು ಮಾಲೀಕರು ಹಾಗೂ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು ಸಹ ನೀರು ಸರಾಗವಾಗಿ ಹರಿದಾಡುವುದಕ್ಕೆ  ಯಾವುದೇ…

Read Full News

ರಿಪ್ಪನ್ ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ವರ್ಷದ ಮೊದಲ ವರ್ಷಧಾರೆ ::

ರಿಪ್ಪನ್ ಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದು ಸಂಜೆ ಈ ವರ್ಷದ ಮೊದಲ ವರ್ಷಧಾರೆಯಿಂದ ಪ್ರಾಣಿಗಳ ಸಂಕುಲಕ್ಕೆ ಮತ್ತು ನಾಗರಿಕರಿಗೆ ಸಂತಸವಾಗಿದೆ. ಕಳೆದ 5 ತಿಂಗಳಿಂದ ಮಳೆಯಿಲ್ಲದೆ ಬೇಸತ್ತು ಹೋಗಿದ್ದ ಪ್ರಾಣಿ ಸಂಕುಲಕ್ಕೆ. ಗಿಡಮರ ಮರಗಳಿಗೆ. ಸಸ್ಯ ಜೀವಿಗಳಿಗೆ  ಹಾಗೂ ನಾಗರೀಕರಿಗೆ ಇಂದು ಸಂಜೆ ಸುರಿದ ಮಳೆಯಿಂದ  ಸಂತಸದ ಜೊತೆಗೆ ರಣ ತಾಪಕ್ಕೆ ಬೇಸತ್ತು ಹೋಗಿದ್ದ ಮನಗಳಿಗೆ ಹಾಗೂ ಜೀವಸಂಕುಲಕ್ಕೆ ತಂಪೇರದಂತಾಗಿದೆ  ಕಳೆದ 5 ತಿಂಗಳಿನಿಂದ ರಿಪ್ಪನ್ ಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಅಭಾವದಿಂದ…

Read Full News

ವಕೀಲನ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದ ಶಿಕಾರಿಪುರ ಸಿಪಿಐ ಅಮಾನತ್ತು :

ತೊಗರ್ಸಿ ಜಾತ್ರೆಯಲ್ಲಿ ವಕೀಲರಿಗೆ ವಿನಾ ಕಾರಣ ಲಾಠಿಯಲ್ಲಿ ಹಲ್ಲೆ ಮಾಡಿದ ಆರೋಪದ ಅಡಿಯಲ್ಲಿ ಶಿಕಾರಿಪುರ ಸಿಪಿಐ ಗುರುರಾಜ್ ಎನ್ ಮೈಲಾರ್ ರವರನ್ನ ಅಮಾನತುಗೊಳಿಸಿ ಆದೇಶಿಸಲಾಗಿದೆ. ದಾವಣಗೆರೆಯ ಪೂರ್ವ ವಲಯ ಪೊಲೀಸ್ ಮಹಾ ನಿರ್ದೇಶಕ ಡಾ.ಕೆ.ತ್ಯಾಗರಾಜ್ ಈ ಆದೇಶವನ್ನು ಹೊರಡಿಸಿದ್ದಾರೆ. ಮಾ.13 ರಂದು ತೊಗರ್ಸಿ ಜಾತ್ರೆಯಲ್ಲಿ ದೇವರ ದರ್ಶನಕ್ಕೆ ಬಂದ ಹಿರೇಕೆರೂರು ಹಂಸಭಾವಿ ಗ್ರಾಮದ ವಕೀಲ ಜಯದೇವ್ ಕೆರೂರು ಇವರ ಮೇಲೆ ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಲಾಠಿಯಿಂದ ಹಲ್ಲೆ ನಡೆಸಿರುತ್ತಾರೆ. ದರ್ಶನಕ್ಕೆ ಸಾಲಾಗಿ ಬರುವವರನ್ನು ಬೇಗ ಒಳಗೆ ಬಿಡಿ…

Read Full News

ಪ್ರಿಯಕರ ಉಪನ್ಯಾಸಕನ ಮದುವೆ ದಿನವೇ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ : ಮದುವೆ ಮಂಟಪದಲ್ಲೆ ವಿಷ ಕುಡಿದ ನವ ವಧು

ಶಿವಮೊಗ್ಗ: ಪ್ರಿಯಕರ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಕ್ಕೆ ಪ್ರೇಯಸಿ ಮದುವೆ ದಿನವೇ ನೇಣಿಗೆ ಶರಣಾಗಿರುವ ಘಟನೆ  ನಗರದ ಓ.ಟಿ.ರಸ್ತೆಯ‌ಲ್ಲಿ ನಡೆದಿದೆ. ರೂಪಶ್ರೀ ಮೃತ ದುರ್ದೈವಿ. ರೂಪಶ್ರೀ ಅವರು ಮುರುಳಿ ಎಂಬುವರನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಮುರುಳಿ ಬೇರೆ ಯುವತಿಯ ಜೊತೆ ಮದುವೆ ಆಗಿದ್ದರು. ಇದರಿಂದ ನೊಂದ ರೂಪಶ್ರೀ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಮುರುಳಿ ತನ್ನ ಮನೆಯವರು ನಿಶ್ಚಯಿಸಿದ್ದ ಯುವತಿಯ ಜೊತೆ ಮದುವೆ ಆಗಿದ್ದಾರೆ. ಮದುವೆ ಸಮಾರಂಭ…

Read Full News

ರಿಪ್ಪನ್ ಪೇಟೆ ಸಮೀಪ ಬೆನವಳ್ಳಿಯಲ್ಲಿ ಬೈಕ್ ಅಪಘಾತ : ಯುವಕ ಸಾವು

ರಿಪ್ಪನ್ ಪೇಟೆ ಸಮೀಪದ ಬೆನವಳ್ಳಿ ತಿರುವಿನಲ್ಲಿ ಬೈಕ್ ಅಪಘಾತವಾಗಿ  ಆಯನೂರು ಮೂಲದ ಯುವಕನೋರ್ವ ಮೃತಪಟ್ಟಿರುವ ಘಟನೆ ಇಂದು ಸಂಜೆ  ನಡೆದಿದೆ. ಆಯನೂರು ಸಮೀಪದ ಇಟ್ಟಿಗೆಹಳ್ಳಿ ನಿವಾಸಿ ಸುದರ್ಶನ್(25) ಎಂಬ ಯುವಕ ಮೃತಪಟ್ಟ ದುರ್ದೈವಿ. ರಿಪ್ಪನ್ ಪೇಟೆ ಕಡೆಯಿಂದ ಆಯನೂರು ಕಡೆಗೆ ಟಿವಿಎಸ್ ಅಪಾಚೆ ಬೈಕ್ (KA 14 EP 9884) ನಲ್ಲಿ ತೆರಳುತ್ತಿರುವಾಗ ಬೆನವಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ ಈ ಸಂಧರ್ಭದಲ್ಲಿ ಹಿಂಬದಿ ಕುಳಿತಿದ್ದ ಆಯನೂರು ಸಮೀಪದ ಇಟ್ಟಿಗೆಹಳ್ಳಿ ನಿವಾಸಿ ಸುದರ್ಶನ್ ಕೆಳಗೆ…

Read Full News

ಶಿವಮೊಗ್ಗದ ಎನ್ ಟಿ ರಸ್ತೆಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ : ಇಬ್ಬರು ಅರೆಸ್ಟ್

ಹಳೆ ದ್ವೇಷದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಮೃತಪಟ್ಟಿದ್ದಾನೆ. ಟಿಪ್ಪುನಗರ ನಿವಾಸಿ ಜಿಕೃಲ್ಲಾ ಖಾನ್ (28) ಮೃತ ವ್ಯಕ್ತಿ. ಎನ್.ಟಿ.ರಸ್ತೆಯ ಫಲಕ್ ಶಾದಿ ಮಹಲ್ ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ಫಲಕ್ ಶಾದಿ ಮಹಲ್ ಬಳಿ ಜಿಕೃಲ್ಲಾ ಖಾನ್ ಮೇಲೆ ಟ್ವಿಸ್ಟ್ ಇಮ್ರಾನ್, ಗ್ಯಾಸ್ ಇಮ್ರಾನ್, ವಸೀಮ್, ಶಹಬಾಜ್, ರುಮಾನ್, ವಸೀಮ್, ಕಾಲಾ ವಸೀಮ್ ಮತ್ತು ನಬೀಲ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಜಿಕೃಲ್ಲಾ ಖಾನ್’ನನ್ನು ಮೆಗ್ಗಾನ್…

Read Full News

ನವೆಂಬರ್‌ ಅಂತ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ : ಬಿ ವೈ ರಾಘವೇಂದ್ರ

 ರಾಜ್ಯದ ಮಧ್ಯಭಾಗದಲ್ಲಿರುವ ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಂಡು ನವೆಂಬರ್‌ ಮಾಸಾಂತ್ಯಕ್ಕೆ ಲೋಕಾರ್ಪಣೆಗೊಳಿಸಲು ಅಗತ್ಯವಿರುವ ಎಲ್ಲಾ ತಯಾರಿಗಳು ನಡೆದಿವೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಶುಕ್ರವಾರ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈ ಅವಧಿಯೊಳಗಾಗಿ ವಿಮಾನ ನಿಲ್ದಾಣಕ್ಕೆ ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ. ಅಲ್ಲದೆ ಟರ್ಮಿನಲ್‌ ಕಟ್ಟಡ ಮತ್ತಿತರ ಎಲ್ಲಾ ಸೌಲಭ್ಯಗಳೂ…

Read Full News

ಸಾಗರದ ಹೆಸರಾಂತ ದಂತ ವೈದ್ಯೆ ಡಾ| ವಿದ್ಯಾ ಪ್ರಕಾಶ್ ವಿಧಿವಶ :

ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರದ ಹೆಸರಾಂತ ದಂತ ವೈದ್ಯೆ ಸದಾ ಹಸನ್ಮುಖಿ ಶ್ರೀಮತಿ ವಿದ್ಯಾ ಪ್ರಕಾಶ್ ರವರು ಇಂದು ಸಂಜೆ ತಮ್ಮ ಸ್ವ ಗೃಹದಲ್ಲಿ  ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರ ಸಾವಿಗೆ ಸಾಗರದ ಜನಪ್ರತಿನಿದಿಗಳು ಹಾಗೂ ಮಹಾ ಜನತೆ ತೀವ್ರ ಸಂತಾಪ ಸೂಚಿಸಿದ್ದಾರೆ.  ಪಟ್ಟಣದ ಚಾಮರಾಜ ಪೇಟೆಯಲ್ಲಿ ನಗರಸಭೆ ಕಾಂಪ್ಲೆಕ್ಸ್ ಎದುರು ಪ್ರಕಾಶ್ ಕ್ಲಿನಿಕ್ ನಲ್ಲಿ ದಂತ ವೈದ್ಯೆಯಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.ಮೃತರ ಪತಿ ಪ್ರಕಾಶ್ ಕೂಡ ಇದೆ ಕ್ಲಿನಿಕ್ ನಲ್ಲಿ ಚರ್ಮ ವೈದ್ಯರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಅವರ…

Read Full News

ಅದ್ದೂರಿಯಾಗಿ ಜರುಗಿದ ಕ್ಷತ್ರಿಯ ಸಮುದಾಯದ ಮೂಲಪುರುಷ ಶ್ರೀ ವೀರ ರುದ್ರ ವನ್ನಿಕುಲ ಮಹಾರಾಜರ ಜಯಂತಿ:

ಶಿವಮೊಗ್ಗ : ಕರುನಾಡು ರಾಜ್ಯ ವನ್ನಿಯಕುಲ ಕ್ಷತ್ರೀಯ ಮಹಾಸಭಾದ ರಾಜ್ಯ ಸಂಘದ ವತಿಯಿಂದ ಶುಕ್ರವಾರ ಎಂ ಆರ್ ಎಸ್ ಸರ್ಕಲ್ ನ ಇಂಜಿನಿಯರ್ ಸಭಾಂಗಣದಲ್ಲಿ  ವನ್ನಿಕುಲ ಕ್ಷತ್ರೀಯ ಸಮುದಾಯದ ಮೂಲಪುರುಷ ಶ್ರೀ ವೀರರುದ್ರ ವನ್ನಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ  ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ಕೆ ನಂದಕುಮಾರ್ ಗೌಂಡರ್ ಮಾತನಾಡಿ ಇಲ್ಲಿಯವರೆಗೂ ನಮ್ಮ ಸಮುದಾಯದವರು ಜಯಂತಿ ಆಚರಣೆಯನ್ನು ಮಾಡುತ್ತಿರಲಿಲ್ಲ ಆದರೆ ಕರುನಾಡು ರಾಜ್ಯ ವನ್ನಿಯಕುಲ ಕ್ಷತ್ರೀಯ ಮಹಾಸಭಾ ಉದಯದ ನಂತರ ಈ ಆಚರಣೆಯನ್ನು ಕಳೆದ ವರ್ಷದಿಂದ…

Read Full News

ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಬೇಟಿ ರದ್ದು : ಅದೇ ದಿನ ಮುಖ್ಯಮಂತ್ರಿ ಬೊಮ್ಮಾಯಿ ಆಗಮನ

ಜಿಲ್ಲೆಯ ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ರದ್ದಾಗಿದೆ. ಶಿವಮೊಗ್ಗ ಸಮೀಪದ ಹೊಳಲೂರು ಗ್ರಾಪಂನಲ್ಲಿ ಪಂಚಾಯತ್‌ರಾಜ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 24 ರಂದು ಆಗಮಿಸಬೇಕಿತ್ತು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಹಿರಿಯ ಅಧಿಕಾರಿಗಳು ಕೂಡ ಸಿದ್ಧತೆ ಪರಿಶೀಲನೆ ನಡೆಸಿದ್ದರು. ಆದರೆ ಪ್ರಧಾನಿ ಅವರು ಅಂದು ಭೇಟಿ ಕೊಡುವ ಕಾರ್ಯಕ್ರಮ ರದ್ದಾಗಿದೆ. ಪಂಚಾಯತ್‌ ರಾಜ್‌ ದಿನವಾದ ಹಿನ್ನೆಲೆಯಲ್ಲಿ ಆ ದಿನ ಪ್ರಧಾನಿಯವರು ಪಂಚಾಯತ್‌ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲು…

Read Full News

ಖಾಸಗಿ ಬಸ್ ಪಲ್ಟಿಯಾಗಿ ಐವರ ಧಾರುಣ ಸಾವು,35ಕ್ಕೂ ಹೆಚ್ಚು ಮಂದಿಗೆ ಗಾಯ : ಘಟನೆಯ ಬಗ್ಗೆ ಅಘಾತ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಜನರಿಂದ ತುಂಬಿದ್ದ ಖಾಸಗಿ ಚಾಲಕನ ನಿಯಂತ್ರಣ ಮೀರಿ ರಸ್ತೆಯಲ್ಲಿ ಉರುಳಿ ಬಿದ್ದ ಪರಿಣಾಮ ಕನಿಷ್ಠ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಬಸ್ಸಿನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಬೆಳಗ್ಗೆ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿ ಸಹಿತ ಇತರ ಕೆಲಸಗಳಿಗೆ ತೆರಳುವ ಜನ ಕೂಡಾ ಇದೇ ಬಸ್ಸನ್ನು ಅವಲಂಬಿಸಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಮಾರ್ಗದಲ್ಲಿ ಜನರ…

Read Full News

ಆನೆಗಳ ಉಪಟಳ ನಿಯಂತ್ರಣಕ್ಕೆ ಕ್ರಮ : ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ಸಮೀಪದ ಶಿಂಗನಬಿದರೆ, ತಳಲೆ, ಕೀಗಡಿ ಮತ್ತು ಮಂಡಗದ್ದೆ ಗ್ರಾಮಗಳ ಸುತ್ತಮುತ್ತಲಿನ ತೋಟಗಳಲ್ಲಿ ಆನೆಗಳ ಹಾವಳಿಯಿಂದಾಗಿ ರೈತರು ಬೆಳೆದ ಅಡಿಕೆ ಗಿಡಗಳು ಹಾನಿಗೊಳಗಾಗಿದ್ದು, ಅದರ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗಜ್ಞಾನೇಂದ್ರ ಅವರು ಹೇಳಿದರು. ಅವರು ಇಂದು ಆನೆಗಳಿಂದ ಹಾನಿಗೊಳಗಾದ ಕೀಗಡಿ ಗ್ರಾಮದ ರೈತರ ತೋಟಕ್ಕೆ ಅರಣ್ಯಾಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅವರು, ಈಗಾಗಲೇ ಆನೆಗಳನ್ನು ಅರಣ್ಯಕ್ಕೆ ಹಿಂದಿರುಗಿಸಲು ಅರಣ್ಯಾಧಿಕಾರಿಗಳು ಕಳೆದ ೨ವಾರಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ. ಈ…

Read Full News

ಹೊಸನಗರದ ದಕ್ಷ ಪಿಎಸ್ ಐ ರಾಜೇಂದ್ರನಾಯ್ಕ್ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ:

ಹೊಸನಗರ :- ತಾಲ್ಲೂಕಿನಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಗೆ‌ ಹೆಸರಾಗಿರುವ ಪಿ.ಎಸ್.ಐ ರಾಜೇಂದ್ರನಾಯ್ಕ್ ರವರನ್ನು ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು ಎಂದು ಸಾರ್ವಜನಿಕರಿಂದ ತಾಲ್ಲೂಕು ದಂಡಾಧಿಕಾರಿ (ತಹಶಿಲ್ದಾರ್) ಮೂಲಕ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಾರ್ವಜನಿಕರಿಂದ ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ರವರಿಗೆ ಸಲ್ಲಿಸಿದ ಮನವಿಯಲ್ಲಿ ತಾಲ್ಲೂಕಿನಾಧ್ಯಂತ ಮರಳು ಮಾಫಿಯವಾಗಲಿ, ಡ್ರಕ್ಸ್ ಮಾಫಿಯಾ, ಹೆಣ್ಣುಮಕ್ಕಳಿಗೆ ಕೆಲಸದ ಆಮಿಷ ತೋರಿಸಿ ಅನೈತಿಕ ಸಂಬಂಧಗಳಿಗೆ ಬಳಸುವಂತಹಾ ಕ್ರೂರಿಗಳಿಗೆ, ಕಲ್ಲು ಕೋರೆ, ಗಾಂಜಾ ಸೇರಿದಂತೆ ವಿವಿಧ ರೀತಿಯ ಕಳ್ಳ ದಂದೆಯಲ್ಲಿ ತೊಡಗಿದವರಿಗೆ…

Read Full News

ಅದ್ದೂರಿಯಾಗಿ ನಡೆಯಿತು ರಿಪ್ಪನ್ ಪೇಟೆಯ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಠಾವರ್ಧಂತಿ ಮಹೋತ್ಸವ

ರಿಪ್ಪನ್‍ಪೇಟೆ:-ಇಲ್ಲಿನ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ  19ನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವವು ಸುಸಂಪನ್ನ ಗೊಂಡಿತು.  ಹರತಾಳು ರಾಘವೇಂದ್ರಸ್ವಾಮಿ ಮಠದ ಪ್ರಧಾನ ಅರ್ಚಕರು ಮತ್ತು ದೇವಸ್ಥಾನದ ಅರ್ಚಕ ವೃಂದದವರಿಂದ ಇಂದು ಬೆಳಗ್ಗೆ ನಾಗದೇವರ ಸನ್ನಿಧಿಯಲ್ಲಿ ಕಲಾ ಹೋಮ ನವಕಪ್ರದಾನ ಕಳಸ ಕಲಶಾಭಿಷೇಕ ಆದಿವಾಸ ಹೋಮ ಪವಮಾನ ಅಭಿಷೇಕ ಆಶ್ಲೇಷ ಬಲಿ ಹಾಗೂ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾ ಹೋಮ ಕಲಶಾಭಿಷೇಕ ಮಹಾಪೂಜೆ ತೀರ್ಥಪ್ರಸಾದ ವಿನಿಯೋಗ ಜರುಗಿತು. ಈ ಸಂದರ್ಭದಲ್ಲಿ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಟಾಪನೆಗೂ ಮೊದಲು…

Read Full News

25ಕ್ಕೂ ಅಧಿಕ ಗೋವುಗಳಿಗೆ ವಿಷವಿಕ್ಕಿ ಹತ್ಯೆಗೈದ ಯಡೂರಿನ ನಟೋರಿಯಸ್ ಗೋಹಂತಕ…….!!!!!!?

ಹೊಸನಗರ ತಾಲ್ಲೂಕಿನ ಯಡೂರು ಗ್ರಾಮದಲ್ಲಿ ನಟೋರಿಯಸ್ ಗೋಹಂತಕನೊಬ್ಬ ಗೋವುಗಳನ್ನು ವಿಷವುಣಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಲಸಿನ ಹಣ್ಣಿನ ಒಳಗೆ ವಿಷ ಹಾಕಿ ಅಮಾಯಕ ಮೂಕಪ್ರಾಣಿಗಳನ್ನು ಹತ್ಯೆ ಮಾಡಿರುವ ದಾರುಣ್ಯ ಘಟನೆ ಮಲೆನಾಡಿನ ಯಡೂರು ಗ್ರಾಪಂ ವ್ಯಾಪ್ತಿಯ ಸುಳುಕೋಡು ಗ್ರಾಮದಲ್ಲಿ ನಡೆದಿದೆ. ಜಾನುವಾರು ನುಗ್ಗಿದೆ ಎಂದು ತೋಟದ ಮಾಲೀಕನೊಬ್ಬ ನಮ್ಮ ಜಾನುವಾರಿಗೆ ವಿಷ ಹಾಕಿದ್ದಾರೆ  ಎಂಬುದಾಗಿ ಜಾನುವಾರು ಮಾಲೀಕರಾದ ಯಡೂರು ಗ್ರಾಮದ ಲತಾ ಎಂಬುವವರು  ಆರೋಪಿಸಿದ್ದಾರೆ. ಈಗಾಗಲೇ ನಾಲ್ಕೈದು ದನಗಳು  ಸಾವನ್ನಪ್ಪಿದ್ದು  ಕೆಲವು 2ದಿನಗಳಿಂದ ವಿಷ ಉಂಡು…

Read Full News

ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ :

ಹೊಸನಗರ: ಕೋಡೂರು, ಹುಂಚ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಅವ್ಯವ್ಯಸ್ಥೆಯಿಂದಾಗಿ ರೈತರ ಬೆಳೆಗಳು ಒಣಗುವಂತಾಗಿದೆ ಮತ್ತು ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅಡಚಣೆಯಾಗಿದೆ ಎಂದು ಆರೋಪಿಸಿ ಇಂದು ಕೋಡೂರು, ಹುಂಚ ವ್ಯಾಪ್ತಿಯ ರೈತರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕಲಗೋಡು ರತ್ನಾಕರ ಮತ್ತು ತಾ.ಪಂ.ಮಾಜಿ ಸದಸ್ಯ ಚಂದ್ರಮೌಳಿಗೌಡ ನೇತೃತ್ವದಲ್ಲಿ ಹೊಸನಗರದ ಮೆಸ್ಕಾಂ ಕಛೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್ ರೈತರ ಸಮಸ್ಯೆಗೆ ಮೆಸ್ಕಾಂ ಇಲಾಖೆ ಸ್ಪಂದಿಸಿ…

Read Full News