Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ನಾಳೆ SSLC ಫಲಿತಾಂಶ ಪ್ರಕಟ – ಕಡಿಮೆ ಅಂಕ ಅಥವಾ ಫೇಲ್ ಆಗುತ್ತೀರಿ ಎಂದನಿಸಿದರೆ ಇದನ್ನು ಒಮ್ಮೆ ಓದಿ

ನಾಳೆ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಸಕ್ತ ಸಾಲಿನ ಫಲಿತಾಂಶ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಾಳೆ ಬೆಳಗ್ಗೆ ರಾಜ್ಯದ 8 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸೋ ಫಲಿತಾಂಶ ಬಿಡುಗಡೆ ಆಗುತ್ತಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEEB) ಮಹತ್ವದ ಸುದ್ದಿಗೋಷ್ಟಿ ಕರೆದಿದೆ. ಬೆಳಗ್ಗೆ 11 ಗಂಟೆಗೆ ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ SSLC ಫಲಿತಾಂಶ ಪ್ರಕಟವಾಗಲಿದೆ….

Read Full News

ಆಯನೂರಿನಲ್ಲಿ‌ ಮೋದಿ ಹವಾ – ಕುವೆಂಪು , ಸಿಗಂಧೂರು ದೇವಿಯನ್ನು ನೆನೆದ ನಮೋ : ಮಲೆನಾಡಿನ ಮಡಿಲು ಸೌಂದರ್ಯದ ಹೊನಲು ಎಂದು ಬಣ್ಣನೆ|modi

ಆಯನೂರಿನಲ್ಲಿ ಇಂದು ಮೋದಿ ಹವಾ , ಮತಬೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೊಡಗಿದ್ದಾರೆ. ಕುವೆಂಪು, ಸಿಗಂಧೂರು ದೇವಿಯನ್ನು ನೆನೆದಂತಹ ನರೇಂದ್ರ ಮೋದಿಯವರು, ಶಿವಮೊಗ್ಗ ಜನತೆಗೆ ನಮಸ್ಕಾರ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯಲ್ಲಿ ಇಂದು ಬಿಜೆಪಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತಬೇಟೆಯಲ್ಲಿ ತೊಡಗಿದ್ದಾರೆ. ಈ ವೇಳೆ ಮಾತನಾಡಿದಂತ ಅವರು, ಇಷ್ಟೊಂದು ಜನರನ್ನು ನೋಡಿದ್ರೆ ಸಂತೋಷವಾಗುತ್ತಿದೆ. ರೋಡ್ ಶೋ ನಲ್ಲಿ ಹೂ ಮಳೆ ಸುರಿಸಿದ್ದಾರೆ. ಕರ್ನಾಟಕದಲ್ಲಿ ಎಲ್ಲಿ ಹೋದರು ಬಿಜೆಪಿಗೆ ಬೆಂಬಲ ಸಿಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ…

Read Full News

ರಿಪ್ಪನ್‌ಪೇಟೆ – ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ|accident

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗವಟೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಧರೆಗೆ ಡಿಕ್ಕಿಯಾಗಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಹೊಸನಗರದಿಂದ ಶಿವಮೊಗ್ಗಕ್ಕೆ ತೆರಳುತಿದ್ದ ಮಾರುತಿ ಬಲೆನೋ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಧರೆಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಶಿವಮೊಗ್ಗದ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಕಾರು ಚಲಾಯಿಸುತಿದ್ದರು ಎನ್ನಲಾಗುತಿದ್ದು ಅವರಿಗೆ ಪಟ್ಟಣದ ನಂದಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಗಂಭೀರ ಗಾಯಗಳಾದ ವರದಿಯಾಗಿಲ್ಲ.ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತಿದ್ದರು ಎನ್ನಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ…

Read Full News

ಹಾಲಪ್ಪನವರಿಗೆ ಬೆಂಬಲಿಸಿ ಪಕ್ಷ ದ್ರೋಹ ಮಾಡುವ ನೀಚ ವ್ಯಕ್ತಿತ್ವದ ವ್ಯಕ್ತಿ ನಾನಲ್ಲ – ಕಾಗೋಡು ತಿಮ್ಮಪ್ಪ|congress

ಹಾಲಪ್ಪನವರಿಗೆ ಬೆಂಬಲಿಸಿ ಪಕ್ಷ ದ್ರೋಹ ಮಾಡುವ ನೀಚ ವ್ಯಕ್ತಿತ್ವದ ವ್ಯಕ್ತಿ ನಾನಲ್ಲ – ಕಾಗೋಡು ತಿಮ್ಮಪ್ಪ ರಿಪ್ಪನ್‌ಪೇಟೆ : ಕಾಗೋಡು ತಿಮ್ಮಪ್ಪನವರು ನನಗೆ ಅಶೀರ್ವಾದ ಮಾಡಿ ಬಾಹ್ಯ ಬೆಂಬಲ ನೀಡಿದ್ದಾರೆಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರದು ಮೂರ್ಖತನದ ಪರಮಾವಧಿ  ಎಂದು ಹೇಳಿ ಅಂತಹ ಕೀಳು ಮಟ್ಟದ ವ್ಯಕ್ತಿತ್ವ  ನನ್ನದಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತೀವ್ರ ತರವಾಗಿ ಖಂಡಿಸಿದರು. ಹೆದ್ದಾರಿಪುರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮದವರೊಂದಿ ಮಾತನಾಡಿ ಈ ಭಾರಿಯ ಚುನಾವಣೆಯಲ್ಲಿ…

Read Full News

ನಾಳೆ ಆಯನೂರಿಗೆ ಪ್ರಧಾನಿ ಮೋದಿ – ಕಾರ್ಯಕ್ರಮಕ್ಕೆ ಸಕಲ ಸಿದ್ದತೆ|MODI

ನಾಳೆ ಶಿವಮೊಗ್ಗದ ಆಯನೂರಿಗೆ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತಿದ್ದಾರೆ. ಕಾರ್ಯಕ್ರಮಕ್ಕಾಗಿ ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪಕ್ಕದ ಸುಮಾರು 100 ಎಕರೆ ಜಾಗದಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.  ಮೇ 7ರ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ನೇರವಾಗಿ ಹೆಲಿಕಾಪ್ಟರ್‌ನಲ್ಲಿ ಆಯನೂರಿಗೆ ಆಗಮಿಸುತ್ತಿದ್ದಾರೆ. ವೇದಿಕೆಯ ಪಕ್ಕದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30 ರವರೆಗೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಮೋದಿಯವರು 50 ನಿಮಿಷಗಳ ಕಾಲ ಭಾಷಣ ಮಾಡಲಿದ್ದಾರೆ. ಇನ್ನೂ ಶಿವಮೊಗ್ಗದ ಏಳು ಕ್ಷೇತ್ರ…

Read Full News

ರಿಪ್ಪನ್‌ಪೇಟೆ – ಕ್ಯಾಂಟರ್ ಲಾರಿ ಮತ್ತು ಇನ್ನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ|accident

ಕ್ಯಾಂಟರ್ ಲಾರಿ ಹಾಗೂ ಟೊಯೋಟಾ ಇನ್ನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಸೂಡೂರು ಗೇಟ್ ಸಮೀಪದಲ್ಲಿ ನಡೆದಿದೆ. ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತಿದ್ದ ಟೊಯೋಟಾ ಇನ್ನೋವಾ ಕಾರು ಹಾಗೂ ಶಿವಮೊಗ್ಗದಿಂದ ಹೊಸನಗರಕ್ಕೆ ತೆರಳುತಿದ್ದ ಕ್ಯಾಂಟರ್ ಲಾರಿ ನಡುವೆ ಸೂಡೂರು ಗೇಟ್ ಸಮೀಪದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಘಟನೆಯಲ್ಲಿ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿರುವುದಿಲ್ಲ ಎಂದು ತಿಳಿದುಬಂದಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read Full News

ರಿಪ್ಪನ್‌ಪೇಟೆ – ಬಿಸಿಲ ಬೇಗೆಗೆ ತಂಪೆರೆದ ಮಳೆ|Rain

ರಿಪ್ಪನ್‌ಪೇಟೆ : ಬಿಸಿಲ ಧಗೆ ಪಟ್ಟಣದಲ್ಲಿ ದಿನದಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ,ಶನಿವಾರ ಮಳೆಯ ಸಿಂಚನವು ಕೊಂಚ ತಂಪನೆರೆಯಿತು. ಸಂಜೆಯಿಂದ ಪಟ್ಟಣದ ವಿವಿಧೆಡೆ ಮಳೆ ಸುರಿಯಿತು. ರಿಪ್ಪನ್‌ಪೇಟೆ ಪಟ್ಟಣ , ಅರಸಾಳು ,ಕೆಂಚನಾಲ ,ಹೆದ್ದಾರಿಪುರ ಹಾಗೂ ಚಿಕ್ಕಜೇನಿ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿಡದೇ ಮಳೆ ಸುರಿಯಿತು. ಏಕಾಏಕಿ ಸುರಿದ ಮಳೆಯಿಂದಾಗಿ, ಸಾರ್ವಜನಿಕರು ದಿಕ್ಕು ತೋಚದೆ ಪರದಾಡಿದರು. ಮಳೆಗೆ ನೆನೆಯದಂತೆ ಸಮೀಪದ ಅಂಗಡಿ, ಕಟ್ಟಡಗಳ ಬಳಿ ನಿಂತರು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ಸವಾರಿ ಮಾಡಿದ ದೃಶ್ಯ…

Read Full News

ಈ ಬಾರಿ ಯಾವುದೇ ಆಪರೇಷನ್ ಇಲ್ಲದೇ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ – ಸಂಸದ ಬಿ ವೈ ರಾಘವೇಂದ್ರ|BYR

ರಿಪ್ಪನ್‌ಪೇಟೆ : ಈ ಬಾರಿ ಯಾವುದೇ ಆಪರೇಷನ್ ಇಲ್ಲದೇ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು ಪಟ್ಟಣದಲ್ಲಿ ಮೇ 10 ರಂಧು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ಹರತಾಳು ಹಾಲಪ್ಪ ಪರ ಮತಯಾಚಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ ಈ ಬಾರಿ ಯಾವುದೇ ಗೊಂದಲವಿಲ್ಲದೇ ಬಿಜೆಪಿ ಸರ್ಕಾರ ರಚಿಸಲಿದೆ, ಯಡಿಯೂರಪ್ಪನವರ ನಕ್ಷತ್ರದಲ್ಲಿಯೇ ಬರೆದಿತ್ತು ಆಪರೇಷನ್ ನಡೆಸಿಯೇ ಸರ್ಕಾರ ರಚಿಸಬೇಕಾಗಿತ್ತು ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು…

Read Full News

ವಿಧಾನಸೌಧದಲ್ಲಿ ಬಂಗಾರಪ್ಪನವರ ಸಂತಾಪ ಸಭೆಯಲ್ಲಿ ಮಾತನಾಡದವರು ಮಾನಸ ಪುತ್ರರಾಗಲು ಹೇಗೆ ಸಾಧ್ಯ – ಹರತಾಳು ಹಾಲಪ್ಪ|Bjp

ವಿಧಾನಸೌಧದಲ್ಲಿ ಬಂಗಾರಪ್ಪನವರ ಸಂತಾಪ ಸಭೆಯಲ್ಲಿ ಮಾತನಾಡದವರು ಮಾನಸ ಪುತ್ರರಾಗಲು ಹೇಗೆ ಸಾಧ್ಯ ರಿಪ್ಪನ್‌ಪೇಟೆ;-ಸಮಾಜವಾದಿ ನೇತಾರ ವರ್ಣರಂಜಿತ ನಾಯಕ ಎಸ್.ಬಂಗಾರಪ್ಪನವರು ನಿಧನದ ಕುರಿತು ವಿಧಾನಸೌಧದಲ್ಲಿ ಅಯೋಜಿಸಲಾದ ಸಂತಾಪ ಸಭೆಯಲ್ಲಿ ಅವಕಾಶವನ್ನು ನೀಡಲಾದರೂ ಕೂಡಾ ಬಂಗಾರಪ್ಪನವರ ಬಗ್ಗೆ ಗುಣಗಾನ ಮಾಡದವರು ಮಾನಸಪುತ್ರರಾಗಲು ಹೇಗೆ ಸಾಧ್ಯವೆಂದು ಶಾಸಕ ಹರತಾಳು ಹಾಲಪ್ಪ ಹೆಸರು ಹೇಳದೆ ಪರೋಕ್ಷವಾಗಿ ವ್ಯಂಗ್ಯವಾಡಿದರು. ಪಟ್ಟಣದಲ್ಲಿ ಮೇ 10 ರಂಧು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ಹರತಾಳು ಹಾಲಪ್ಪ ಮತಯಾಚಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ ಕಳೆದ…

Read Full News

ಶಿವಮೊಗ್ಗದಲ್ಲಿ ನಡೆದ ಅಮಿತ್ ಷಾ ರೋಡ್ ಶೋ ಕಾರ್ಯಕ್ರಮದಲ್ಲಿ ಮಕ್ಕಳ ಬಳಕೆ – ದೂರು ದಾಖಲು|amith-sha-rally

ಶಿವಮೊಗ್ಗ : ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಏಪ್ರಿಲ್ 1 ರಂದು ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ರವರು ನಡೆಸಿದ ರೋಡ್ ಶೋ ನಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ. ಅಮಿತ್ ಶಾ ರವರು ರೋಡ್ ಶೋ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಿಂದ ನೆಹರು ರಸ್ತೆಯ ಮೂಲಕ ಲಕ್ಷ್ಮೀ ಟಾಕೀಸ್ ವೃತ್ತದವರೆಗೂ ರೋಡ್ ಶೋ ನಡೆಸಲಾಗಿತ್ತು. ರೋಡ್ ಶೋನಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂದು ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕಲಂ14 ಅನ್ವಯ…

Read Full News

ರಿಪ್ಪನ್‌ಪೇಟೆ – ಅಬೂಬಕರ್ ಸಾಬ್ ನಿಧನ|Rpet

ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆಯ ನಿವಾಸಿ ಅಬೂಬಕರ್ ಸಾಬ್(78) ನಿಧನರಾಗಿದ್ದಾರೆ. ಸ್ವಲ್ಪ ಕಾಲದ ಅನಾರೋಗ್ಯದಿಂದ ಬಳಲುತಿದ್ದ ಅವರು ಗುರುವಾರ ಮಧ್ಯರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರರಾದ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾ ಸದಸ್ಯ ಅಬ್ದುಲ್‌ ಖುದ್ದೂಸ್, ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಾಗರ ರಸ್ತೆಯ ಖಬರ್ ಸ್ಥಾನ್ ನಲ್ಲಿ ಜರುಗಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read Full News

ರಿಪ್ಪನ್‌ಪೇಟೆ – ಚಿಪ್ಪಿಗರ ಕೆರೆಯ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ|rpet

ರಿಪ್ಪನ್‌ಪೇಟೆ ಚಿಪ್ಪಿಗರ ಕೆರೆಯ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ  ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಚಿಪ್ಪಿಗರ ಕೆರೆ ಬಳಿಯ ಪಾರ್ಕ್ ಸಮೀಪ ಸುಮಾರು 45 ರಿಂದ 50 ವಯೋಮಾನದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪಟ್ಟಣದಲ್ಲಿ ಕಳೆದ ಕೆಲವು ವರ್ಷಗಳಿಂದ ಚಿಂದಿ ಆಯುತಿದ್ದ ಮಹಿಳೆ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ,ಸದಸ್ಯರಾದ ಆಸೀಫ಼್ ಭಾಷಾಸಾಬ್ ,ಪ್ರಕಾಶ್ ಪಾಲೇಕರ್…

Read Full News

ಮೊಟ್ಟೆ ತಿನ್ನಲು ಹೋಗಿ ಕೋಳಿ ಗೂಡಿನಲ್ಲಿಯೇ ಬಂಧಿಯಾದ ನಾಗರಹಾವು|Cobra

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ವಡಾಹೊಸಳ್ಳಿ ಗ್ರಾಮದಲ್ಲಿ ಕೋಳಿ ಮೊಟ್ಟೆಯನ್ನು ತಿನ್ನಲು ಹೋದ ನಾಗರಹಾವು ಕೋಳಿ ಗೂಡಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ವಡಾಹೊಸಳ್ಳಿ ಅಂಗನವಾಡಿ ಕಾರ್ಯಕರ್ತೆ ಸುಶೀಲ ಎಂಬುವವರ ಮನೆಯ ಕೋಳಿಗೂಡಿನಲ್ಲಿ ಮೊಟ್ಟೆ ತಿನ್ನಲು ಹೋಗಿ ನಾಗರಹಾವೊಂದು ಗೂಡಿನಲ್ಲಿ ಬಂಧಿಯಾಗಿತ್ತು, ಕೋಳಿಗೂಡಿನಲ್ಲಿ ಮೊಟ್ಟೆ ತಿಂದು ಗೂಡಿನಲ್ಲಿ ಹೆಡೆ ಬಿಚ್ಚಿ ಆಟವಾಡುತ್ತಿರುವ ನಾಗರಹಾವನ್ನು ಕಂಡ ಮನೆಯವರು ತಕ್ಷಣ ರಿಪ್ಪನ್‌ಪೇಟೆಯ ಉರಗ ತಜ್ಞ ಗಂಗಾಧರ(ಗಂಗಣ್ಣ) ರವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ಉರಗತಜ್ಞ ಗಂಗಾಧರ್ ಸ್ಥಳಕ್ಕೆ ತೆರಳಿ ಕೋಳಿ ಗೂಡಿನಲ್ಲಿ…

Read Full News

AAP | ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ – ಸಂಸ್ಥಾಪಕ ಸದಸ್ಯ ಶಹನವಾಜ್ ಹಿಂದೂಸ್ಥಾನಿ

ರಿಪ್ಪನ್‌ಪೇಟೆ : ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ನೀಡಿರುವ ಉನ್ನತಮಟ್ಟದ ಶಿಕ್ಷಣ ವ್ಯವಸ್ಥೆ,ಉಚಿತ ನೀರಿನ ವ್ಯವಸ್ಥೆ,ಉಚಿತ ವಿದ್ಯುತ್,ಆರೋಗ್ಯ ವ್ಯವಸ್ಥೆಯನ್ನು ಕರ್ನಾಟಕದ ಜನಸಾಮಾನ್ಯರು ಬಯಸುತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯ ಹಾಗೂ ಸ್ಟಾರ್ ಕ್ಯಾಂಪೇನರ್ ಶಹನವಾಜ್ ಹಿಂದೂಸ್ಥಾನಿ ಹೇಳಿದರು. ರಿಪ್ಪನ್‌ಪೇಟೆ ಪಟ್ಟಣದಲ್ಲಿ ಸಾಗರ ಕ್ಷೇತ್ರದ ಆಪ್ ಅಭ್ಯರ್ಥಿ ಕೆ ದಿವಾಕರ್ ಪರ ಮತಯಾಚನೆ ನಡೆಸಿ ಎಎಪಿ ಕಛೇರಿಯಲ್ಲಿ ಅಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಅದರಲ್ಲಿಯೂ ಕರ್ನಾಟಕದಲ್ಲಿ ಇನ್ನೂ ಹೆಚ್ಚಾಗಿದೆ ಎಂಬ ಬಗ್ಗೆ…

Read Full News

ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ – ಸಹೋದರರಿಬ್ಬರು ಸ್ಥಳದಲ್ಲಿಯೇ ಸಾವು|accident

ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಬಳಿ ನಡೆದಿದೆ. ಸಾಗರದ ರಾಮನಗರದ ವೆಲ್ಡಿಂಗ್ ಕೆಲಸಗಾರ ಸುಹೇಲ್ (27),ಸಯ್ಯದ್ ಆಫ್ರಿದ್(ಪಿಂಟು),(21) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಮದುವೆ ಕಾರ್ಯಕ್ರಮಕ್ಕೆಂದು ಉಳವಿ ಗ್ರಾಮಕ್ಕೆ ಹೋಗುತ್ತಿದ್ದಾಗ ಮಾರುತಿ ವ್ಯಾಗನಾರ್ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇಬ್ಬರು ಸಹೋದರರ ಮೃತದೇಹವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Read Full News

SAGARA|ಬೈಕ್ ಗೆ ಲಾರಿ ಡಿಕ್ಕಿ – ಮಹಿಳೆ ಸ್ಥಳದಲ್ಲಿಯೇ ಸಾವು

ಬೃಹತ್​ ಲಾರಿಯ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸಂಭವಿಸಿದೆ. ನಿನ್ನೆ ಬೆಳಗ್ಗೆ ಸಾಗರ ಪೇಟೆಯ ಐಬಿ ವೃತ್ತದ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಬೆಳಲಮಕ್ಕಿ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ನಗರದ ಷಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಬೆಳಲಮಕ್ಕಿಯ 34ವರ್ಷದ ಪದ್ಮಾ ಅವರನ್ನು ಬೈಕ್‌ನಲ್ಲಿ ಅವರ ಮೈದುನ ರಘು ಕರೆದೊಯ್ಯುತ್ತಿದ್ದಾಗ ಬೃಹತ್ ಲಾರಿ ಹಿಮ್ಮುಖವಾಗಿ ಚಲಿಸಿದಾಗ ಬೈಕ್ ಉರುಳಿದೆ. ಈ ಸಂದರ್ಭದಲ್ಲಿ ಲಾರಿಯ ಚಕ್ರ ಪದ್ಮಾ ಅವರ ಮೇಲೆ ಹರಿದು ತೀವ್ರವಾಗಿ…

Read Full News

ಕಾಂಗ್ರೆಸ್ ಪಕ್ಷ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದೆ – ರಾಹುಲ್‌ ಗಾಂಧಿ|thirthahalli

ತೀರ್ಥಹಳ್ಳಿ : ಕಾಂಗ್ರೆಸ್‌ ಕಾರ್ಯಕರ್ತರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ.ಎಲ್ಲೇ ಹೋದರೂ ಪ್ರೀತಿಯನ್ನು ಹಂಚುತ್ತಾರೆ.ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರೊಂದಿಗೆ ಬೆರೆಯುತ್ತಾರೆ. ನಾನು ಎಲ್ಲೇ ಹೋದರು ನಮ್ಮ ನಾಯಕರ ಹೆಸರನ್ನು ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದರು. ಮಂಗಳವಾರ ಪಟ್ಟಣದ ಬಾಳೇಬೈಲಿನಲ್ಲಿ ನೆಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ನೋಡಿ ಅವರು ಯಾರ ಹೆಸರನ್ನೂ ಹೇಳುವುದಿಲ್ಲ. ಹಾಗಾಗಿ ಜನರು ಯಡಿಯೂರಪ್ಪ ಅವರ ಹೆಸರನ್ನು ಏಕೆ ಹೇಳುವುದಿಲ್ಲ ಎಂದು ಕೇಳುತ್ತಿದ್ದಾರೆ….

Read Full News

ಪಿಯು ಪರೀಕ್ಷೆಯಲ್ಲಿ 96.17% ಅಂಕ ಪಡೆದ ಸರ್ಕಾರಿ‌ ಕಾಲೇಜಿನ ವಿದ್ಯಾರ್ಥಿನಿಗೆ ಜಿ ಆರ್ ಕೆ ಮೂರ್ತಿ ಟ್ರಸ್ಟ್ ವತಿಯಿಂದ ಸನ್ಮಾನ

ಪಿಯು ಪರೀಕ್ಷೆಯಲ್ಲಿ 96.17% ಅಂಕ ಪಡೆದ ಸರ್ಕಾರಿ‌ ಕಾಲೇಜಿನ ವಿದ್ಯಾರ್ಥಿನಿಗೆ ಜಿ ಆರ್ ಕೆ ಮೂರ್ತಿ ಟ್ರಸ್ಟ್ ವತಿಯಿಂದ ಸನ್ಮಾನ ರಿಪ್ಪನ್‌ಪೇಟೆ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಅಧ್ಬುತ ಸಾಧನೆ ಮಾಡಿದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕುಮಾರಿ ಜಯಶ್ರೀ ಪಿ ರವರಿಗೆ ಜಿಆರ್ ಕೆ ಮೂರ್ತಿ ಟ್ರಸ್ಟ್ ಹಾಗೂ ಪೋಸ್ಟ್ ಮ್ಯಾನ್ ಸುದ್ದಿ ಬಳದಿಂದ ಸನ್ಮಾನಿಸಿ ಗೌರವಿಸಲಾಯಿತು. ಪಟ್ಟಣದ ಶಿವಮೊಗ್ಗ ರಸ್ತೆಯ ಜಯಪ್ರಕಾಶ್ ಹೊಟೇಲ್ ಮಾಲೀಕರಾದ ಪಾಂಡುರಂಗ ಮತ್ತು…

Read Full News

ಬೇಳೂರು ಪರ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭರ್ಜರಿ ರೋಡ್ ಶೋ|election

ರಿಪ್ಪನ್‌ಪೇಟೆ : ರಾಜ್ಯ ಕಂಡ ಧೀಮಂತ ನಾಯಕ ದಿ.ಎಸ್ ಬಂಗಾರಪ್ಪಜಿಯವರ ಅಭಿಮಾನಿಗಳಿರುವ ಈ ಕ್ಷೇತ್ರದಲ್ಲಿ ಅವರೇ ಬೆಳೆಸಿದ ಗೋಪಾಲಕೃಷ್ಣ ಬೇಳೂರು ಇವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸಿ ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲಿಸುವಂತೆ ನಟ ಡಾ.ಶಿವರಾಜ್ ಕುಮಾರ್ ರವರು ಮನವಿ ಮಾಡಿದರು. ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ರವರ ಪರ ಭರ್ಜರಿ ರೋಡ್ ಶೋ ನಡೆಸಿ ನಂತರ ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಸಜ್ಜನ ವ್ಯಕ್ತಿತ್ವದ ಬೇಳೂರು ಗೋಪಾಲಕೃಷ್ಣ ರವರನ್ನು ಬೆಂಬಲಿಸಿ ವಿಧಾನಸೌದಕ್ಕೆ ಕಳಿಸಿಕೊಡಿ…

Read Full News

ತೋಟದಲ್ಲಿ ಕೆಲಸ ಮಾಡುತಿದ್ದ ರೈತನ ಮೇಲೆ ಕರಡಿ ದಾಳಿ – ಗಂಭೀರ ಗಾಯ|Bear attack

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಬಳಿಯ ಹೆನ್ನಿ ಗ್ರಾಮದಲ್ಲಿ ಕರಡಿ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ದಾಳಿಯಲ್ಲಿ ತಿಮ್ಮನಾಯ್ಕ್ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.  ಸೌದೆ ಒಟ್ಟು ಮಾಡಲು ಅಂತಾ ತೋಟಕ್ಕೆ ತೆರಳಿದ್ದ ಅವರ ಮೇಲೆ ಅಲ್ಲಿದ್ದ ಕರಡಿಯು ದಾಳಿ ನಡೆಸಿದೆ. ಏಕಾಯೇಕಿ ನಡೆದ ದಾಳಿಯಲ್ಲಿ ತಿಮ್ಮನಾಯ್ಕ್​ರಿಗೆ ತಪ್ಪಿಸಿಕೊಳ್ಳಲು ಸಹ ಆಗಲಿಲ್ಲ. ಜೋರಾಗಿ ಕಿರುಚಿಕೊಂಡಿದ್ದಾರೆ. ಈ ವೇಳೇ ಕರಡಿ ಅಲ್ಲಿಂದ ಕಾಲ್ಕಿತ್ತಿದೆ.  ಇವರ ಚೀರಾಟ ಕೇಳಿಸ್ತಿದ್ದಂತೆ, ಸ್ಥಳೀಯರು ಓಡಿ ಬಂದಿದ್ದಾರೆ. ತೀವ್ರವಾದ ಗಾಯಗಳಾಗಿದ್ದ ತಿಮ್ಮನಾಯ್ಕ್​ರನ್ನ ತಕ್ಷಣವೆ…

Read Full News

ವೈದ್ಯಕೀಯ ವಿದ್ಯಾರ್ಥಿ ನೇಣು ಬಿಗಿದುಕೊಂಡು ಸಾವು|SMG

ಶಿವಮೊಗ್ಗ : ನಗರದ ಸುಬ್ಬಯ್ಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿಯೊಬ್ಬ, ಕಾಲೇಜಿನ ವಸತಿ ನಿಲಯದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಬೊಮ್ಮಸಂದ್ರ ನಿವಾಸಿ ಅಭಯ್ ರೆಡ್ಡಿ (22) ಮೃತ ವೈದ್ಯಕೀಯ ವಿದ್ಯಾರ್ಥಿ.  ಕಾಲೇಜಿನ ಪ್ರಾಂಶುಪಾಲರಿಂದ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಗೋಡೆ ಮೇಲೆ ಡೆತ್ ನೋಟ್ ಬರೆದು ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Read Full News

130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ – ಬಿ ಎಸ್ ಯಡಿಯೂರಪ್ಪ

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಪ್ರಗತಿ ಗಣನೀಯವಾಗಿ ಹೆಚ್ಚಿದೆ. ಪ್ರತಿಯೊಂದು ಕುಟುಂಬಕ್ಕೂ ಸರಕಾರದ ಒಂದಲ್ಲ ಒಂದು ಯೋಜನೆಯ ಸವಲತ್ತು ದೊರಕಿದೆ. ಸರಕಾರದ ಯಾವುದೇ ಸವಲತ್ತು ದೊರೆಯದ ಕುಟಂಬ ಇದ್ದಲ್ಲಿ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜಕೀಯ ವಿರೋಧಿಗಳಿಗೆ ಸವಾಲು ಹಾಕಿದರು. ಅವರು ಪಟ್ಟಣದ ನೆಹರೂ ಮೈದಾನದಲ್ಲಿ ಭಾನುವಾರ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಚುನಾವಣೆಗೆ ಕೇವಲ 8 ದಿನಗಳು ಬಾಕಿ ಉಳಿದಿವೆ. ಈಗ ಎಲ್ಲವೂ ಕಾರ‍್ಯಕರ್ತರ ಮೇಲೆ…

Read Full News

ಈ ಬಾರಿಯ ಚುನಾವಣೆಯಲ್ಲಿ ಗೆಲುವು ನನ್ನದೇ : ಗೋಪಾಲಕೃಷ್ಣ ಬೇಳೂರು|beluru

ರಿಪ್ಪನ್‌ಪೇಟೆ :  ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು  ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾ ಸಂಸ್ಥಾನ  ಹಾಗೂ ರಿಪ್ಪನ್‌ಪೇಟೆಯ ಗುಡ್‌ಶಫರ್ಡ್  ಚರ್ಚ್ ಗೆ ಇಂದು ಬೆಳಗ್ಗೆ ಭೇಟಿ ನೀಡಿ ಧರ್ಮ ಗುರುಗಳ ದರ್ಶನಾಶೀರ್ವಾದ ಪಡೆದರು. ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಅಭ್ಯರ್ಥಿ ಗೋಪಾಲಕೃಷ್ಣರವರಿಗೆ ಶುಭಹಾರೈಸಿ ತಾವು ಜನರ ಸಂಕಷ್ಟವನ್ನು ಪರಿಹರಿಸುವ ಮೂಲಕ ಮತದಾರರಲ್ಲಿ ಪ್ರೀತಿ ವಿಶ್ವಾಸಗಳಿಸಿ ನಿಮಗೆ ಮುಂದೆ ಒಳ್ಳಯ ಭವಿಷ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು….

Read Full News

ರಿಪ್ಪನ್‌ಪೇಟೆ : KRS ಪಕ್ಷದ ಅಭ್ಯರ್ಥಿಗೆ ಅಗೌರವ ತೋರಿದ ಚುನಾವಣಾಧಿಕಾರಿ – ರಾಜ್ಯ ಉಪಾಧ್ಯಕ್ಷ ಕೆಂಡಾಮಂಡಲ

ರಿಪ್ಪನ್‌ಪೇಟೆ : KRS ಪಕ್ಷದ ಅಭ್ಯರ್ಥಿಗೆ ಅಗೌರವ ತೋರಿದ ಚುನಾವಣಾಧಿಕಾರಿ – ರಾಜ್ಯ ಉಪಾಧ್ಯಕ್ಷ ಕೆಂಡಾಮಂಡಲ ರಿಪ್ಪನ್‌ಪೇಟೆ : ಸಾರ್ವಜನಿಕ ಸಭೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಪ್ರಾದೇಶಿಕ ಪಕ್ಷದ ಅಭ್ಯರ್ಥಿ ಗೆ ಚುನಾವಣಾಧಿಕಾರಿ ಅಗೌರವ ತೋರಿದ ಘಟನೆ ಇಂದು ನಡೆದಿದೆ. ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಪಕ್ಷದ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಆಭ್ಯರ್ಥಿ ಅಬ್ಬಿ ಕಿರಣ್ ಬಿ.ಈ. ಪರ ಕೆ.ಆರ್.ಎಸ್.ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಹೆಚ್.ಲಿಂಗೇಗೌಡ ಬಹಿರಂಗ ಸಭೆಯ ಮೂಲಕ ಮತಯಾಚನೆ ಮಾಡುತಿದ್ದ ಸಂಧರ್ಭದಲ್ಲಿ ಸ್ಥಳೀಯ ಚುನಾವಣಾ ನೋಡಲ್ ಅಧಿಕಾರಿ…

Read Full News

ಮಾಸ್ತಿಕಟ್ಟೆ ಬಳಿ ಖಾಸಗಿ ಬಸ್ ಪಲ್ಟಿ – ಹಲವರಿಗೆ ಗಾಯ|accident

ಮಾಸ್ತಿಕಟ್ಟೆ : ಇಲ್ಲಿನ ಸಮೀಪದ ಲಕ್ಷ್ಮಿ ನರಸಿಂಹ ದೇವಸ್ಥಾನದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ದುರ್ಗಾಂಬಾ ಬಸ್ ಲಕ್ಷ್ಮಿನರಸಿಂಹ ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಬಸ್ ಅಪಘಾತದಲ್ಲಿ ಸುಮಾರು 15 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಉಡುಪಿ ಜಿಲ್ಲೆಯ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಹೊಸನಗರ 108 ಆ್ಯಂಬುಲೆನ್ಸ್…

Read Full News

ನಾಳೆ(01-05-2023) ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್|ಬೇಳೂರು ಪರ ಚುನಾವಣಾ ಪ್ರಚಾರ

ರಿಪ್ಪನ್‌ಪೇಟೆ : ದಿನಾಂಕ 0152023 ರ ಸೋಮವಾರ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ. ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬೇಳೂರು ಗೋಪಾಲಕೃಷ್ಣ ರವರ ಪರವಾಗಿ ಮತ ಯಾಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಪ್ಪನ್‌ಪೇಟೆ, ಹೊಸನಗರ,ಆನಂದಪುರ ಮತ್ತು ಸಾಗರಕ್ಕೆ ಆಗಮಿಸಲಿದ್ದಾರೆ. ಇಂದು ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ರವರ ಪರವಾಗಿ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಳೆ 10.30 ಕ್ಕೆ ಹೊಸನಗರ ,ಮಧ್ಯಾಹ…

Read Full News

ಮನೆಯ ಕೊಟ್ಟಿಗೆಯಲ್ಲಿ ಅಡಗಿ‌ ಕುಳಿತಿದ್ದ ಚಿರತೆ – ಅರಣ್ಯಾಧಿಕಾರಿಗಳಿಂದ ಯಶಸ್ವಿ ರಕ್ಷಣಾ ಕಾರ್ಯಾಚರಣೆ|leopard

ಸೊರಬ: ತಾಲೂಕಿನ ಕುಪ್ಪೆ ಗ್ರಾಮದ ಮನೆಯೊಂದರ ಕೊಟ್ಟಿಗೆಯಲ್ಲಿ ಅಡಗಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.  ಗ್ರಾಮದ ಶಿವಕುಮಾರ್ ಗೌಡ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಸೇರಿದ್ದು, ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.  ಕೂಡಲೇ ಕಾರ್ಯಪ್ರವೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.  ಚಿರತೆಗೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹಂಪೆಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.  ಕಾರ್ಯಾಚರಣೆಯಲ್ಲಿ…

Read Full News

ರಿಪ್ಪನ್‌ಪೇಟೆ – ಕಾರು ಮತ್ತು ಬಸ್ ನಡುವೆ‌ ಮುಖಾಮುಖಿ ಡಿಕ್ಕಿ|accident

ರಿಪ್ಪನ್‌ಪೇಟೆ – ಕಾರು ಮತ್ತು ಬಸ್ ನಡುವೆ‌ ಮುಖಾಮುಖಿ ಡಿಕ್ಕಿ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಿರೇಜೇನಿ ಗ್ರಾಮದಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ‌ರುವ ಘಟನೆ ನಡೆದಿದೆ. ಹೊಸನಗರದಿಂದ ರಿಪ್ಪನ್‌ಪೇಟೆಗೆ ತೆರಳುತಿದ್ದ ಭಾಗ್ಯಲಕ್ಷ್ಮಿ ಬಸ್ ಹಾಗೂ ರಿಪ್ಪನ್‌ಪೇಟೆಯಿಂದ ಹೊಸನಗರ ಕಡೆಗೆ ತೆರಳುತಿದ್ದ ಮಾರುತಿ ಆಲ್ಟೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ ನ ಬಲ ಭಾಗಕ್ಕೆ ಕಾರು ಡಿಕ್ಕಿಯಾಗಿದೆ ಎನ್ನಲಾಗುತ್ತಿದೆ. ಅಪಘಾತದಲ್ಲಿ ಯಾವುದೇ ಗಂಭೀರ ಗಾಯಗಳಾಗಿಲ್ಲ ಎನ್ನಲಾಗುತಿದ್ದು ಹೆಚ್ಚಿನ…

Read Full News

ಬಡ ಕುಟುಂಬದ ಮಹಿಳೆಯರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ|

ಹೆಣ್ಣುಮಕ್ಕಳ ಮೇಲೆ ದರ್ಪ ತೋರಿದ ಅರಣ್ಯಇಲಾಖೆ ಅಧಿಕಾರಿಗಳು ತೀರ್ಥಹಳ್ಳಿ : ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೈಮರ ಸಮೀಪದ ಸುಣ್ಣದಮನೆ ಎಂಬಲ್ಲಿ ಹೆಣ್ಣುಮಕ್ಕಳ ಮೇಲೆ ಅರಣ್ಯಇಲಾಖೆ ಅಧಿಕಾರಿಗಳು ಹಲ್ಲೆ ನೆಡೆಸಿದ್ದಲ್ಲದೆ ತೀರ ಅಮಾನವೀಯವಾಗಿ ನೆಡೆದುಕೊಂಡಿದ್ದಾರೆ. ರವಿ ನಾಯಕ್ ಎಂಬುವರು ಅಲ್ಲಿ ಡಿಮ್ಯಾಂಡ್ ದಾಖಲೆಯ ಆಧಾರದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದು ಗ್ರಾಮಪಂಚಾಯಿತಿಯಿಂದ ಡಿಮ್ಯಾಂಡ್ ಕೂಡ ಕೊಟ್ಟಿದ್ದಾರೆ. ಆದರೂ ಇಂದು ಏಕಾಏಕಿ ಮನೆಗೆ ನುಗ್ಗಿದ ಅರಣ್ಯ ಅಧಿಕಾರಿಗಳು ಮನೆಯಲ್ಲಿ ಇದ್ದವರ ಮೇಲೆ ಹಲ್ಲೆ ನೆಡೆಸಿದ್ದಾರೆ. ಸುಮಾರು 8 ಜನ ಅರಣ್ಯ ಅಧಿಕಾರಿಗಳು…

Read Full News

ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಸ್ಪತ್ರೆ ಎದುರಲ್ಲಿ ಬಿಸಾಡಿ ಹೋದ ಪತಿರಾಯ|Assault

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಸಮೀಪದ  ಕೈನಲ್ಲಿ ಎಂಬ ಗ್ರಾಮದ ಮುರುಳಿ ಎಂಬಾತ ತನ್ನ ಪತ್ನಿ ಮೇಲೆ ಹಲ್ಲೆ ನೆಡೆಸಿ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯ ಬಳಿ ಬಿಸಾಕಿ ಹೋದ ಅಮಾನವೀಯ ಘಟನೆ ಇಂದು ಸಂಜೆ ವೇಳೆ ನೆಡೆದಿದೆ. ಬೆಂಗಳೂರು ಮೂಲದ ಮುರುಳಿ ಕೈನಲ್ಲಿಯ ಮಹಿಳೆಯೊಬ್ಬರನ್ನು ಮದುವೆಯಾಗಿದ್ದನು. ನಂತರ ಇಲ್ಲೇ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಆತ ತನ್ನ ಪತ್ನಿಯ ಮೇಲೆ ಭೀಕರ ರೀತಿಯಲ್ಲಿ ಹಲ್ಲೆ ನೆಡೆಸಿ ಆಸ್ಪತ್ರೆ ಬಳಿ ಬಿಸಾಕಿ ಹೋಗಿದ್ದಾನೆ. ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

Read Full News